ನಾವು ನಮ್ಮ ಜೀವಿತದಲ್ಲಿ ಅಕಾಲಿಕವಾಗಿ, ಅಕ ಸ್ಮಾತ್ತಾಗಿ ಹಲ್ಲುಗಳನ್ನು ಕಳೆದುಕೊಳ್ಳಬಹುದು. ಹಲ್ಲು ಮುರಿದಲ್ಲಿ, ಹುಳುಕಾದಲ್ಲಿ, ಕೊಳೆತು ಹೋದಲ್ಲಿ, ನೋವನ್ನು ತಂದಲ್ಲಿ ನಾವು ಸುಲಭ ವಾಗಿ ಒಂದೋಎರಡೋ ಹಲ್ಲನ್ನುಕೀಳಿಸಿಕೊಂಡು ಬಿಡುತ್ತೇವೆ. ಸದ್ಯಕ್ಕೆ ನೋವಿನಿಂದ ಪಾರಾದರೆ ಸಾಕು ಎನ್ನುವುದೇ ಮುಖ್ಯವಾಗುತ್ತದೆ. ಇನ್ನು ಕೆಲವೊಮ್ಮೆ ದಂತವೈದ್ಯರುಗಳೇ ಈ ಹಲ್ಲನ್ನು ಉಳಿಸಲು ಸಾಧ್ಯವಿಲ್ಲವೆಂದು ಹೇಳಿಬಿಡುತ್ತಾರೆ.

ನಕ್ಕರೆ ಕಾಣುವ ಮುಂದಿನ ಹಲ್ಲಾದರೆ, ಹಲ್ಲನ್ನು ಕಳೆದುಕೊಂಡ ಕ್ಷಣದಿಂದಲೇ ನಾವು ಬಾಯಿ ಬಿಡಲು, ನಗಲು ಹಿಂತೆಗೆಯುತ್ತೇವೆ. ತಕ್ಷಣವೇ ಕೃತಕ ಹಲ್ಲಿನ ಮೊರೆ ಹೋಗುತ್ತೇವೆ. ದವಡೆಯ ಹಲ್ಲಾದರೆ ಆ ಹಲ್ಲಿದ್ದ ಬಾಯಿಯ ಭಾಗದಲ್ಲಿ ಅಗೆಯುವುದನ್ನೇ ನಿಲ್ಲಿಸಿಬಿಡುತ್ತೇವೆ. ಹಲ್ಲು ಕಳೆ ದುಕೊಂಡ ಖಾಲಿ ಜಾಗವನ್ನು ಇನ್ನೊಂದು ಕೃತಕ ಹಲ್ಲಿನ ಮೂಲಕ ತುಂಬದಿದ್ದರೆ, ಆ ಸಂದಿನಿಂದ ಮಾತಾಡುವಾಗೆಲ್ಲ ಟುಸ್ಸ-ಪುಸ್ಸೆಂದು ಗಾಳಿ ಹೋಗುತ್ತ ವಿಚಿತ್ರ ಸಂಕೋಚವನ್ನು ಸೃಷ್ಟಿಸುತ್ತದೆ. ಅಕ್ಕಪಕ್ಕದ ಹಲ್ಲುಗಳು ಈಖಾಲಿ ಜಾಗಕ್ಕೆ ಸರಿದು ನಮ್ಮ ಹಲ್ಲುಗಳ ಜೋಡಣೆಯಲ್ಲಿ ಏರುಪೇರಾಗ ಬಹುದು.
ಕಳೆದುಕೊಂಡ ಹಲ್ಲನ್ನು ಮತ್ತೆ ಪಡೆಯಲು ಇಂದಿ ನ ಕಾಲದಲ್ಲಿ ಸಾದ್ಯವಿದೆ. ಹಲ್ಲಿನಂತೆಯೇ ಬಿಗಿ ಯಾಗಿ ದವಡೆಯಲ್ಲಿ ಬೇರಿಳಿಸಿ, ಗಟ್ಟಿ ಪದಾರ್ಥ ಗಳನ್ನು ಅಗಿಯಬಲ್ಲ, ಕೃತಕ ಹಲ್ಲಾದರೂ, ನಿಜ ವಾದ ಹಲ್ಲಿನಂತೆಯೇಕೆಲಸಮಾಡಬಲ್ಲ ಡೆಂಟಲ್ ಇಂಪ್ಲಾಂಟ್ ಗಳು ಬಹುತೇಕ ನಮ್ಮ ಪ್ರಕೃತಿದತ್ತ ಹಲ್ಲುಗಳಿಗೆ ಸರಿಸಮನಾಗಿ ಕೆಲಸ ಮಾಡಬಲ್ಲವು. ವಸಡಿನ ಖಾಯಿಲೆಗಳಿಗೆ ತುತ್ತಾಗದಿದ್ದರೆ, ನಮ್ಮ ಹಲ್ಲಿನಂತೆಯೇ ಬದುಕಿಡೀ ನಮಗೆ ಪ್ರಯೋಜನ ಕಾರಿಯಾಗಬಲ್ಲವು.

ಹಲ್ಲುಗಳನ್ನು ನಾವು ಹಲವಾರು ಕಾರಣಗಳಿಗೆ ಕಳೆದುಕೊಳ್ಳುತ್ತೇವೆ. ಮುಗ್ಗರಿಸಿ ಬಿದ್ದು ಹಲ್ಲುಗಳು ಮುರಿಯಬಹುದು, ಆಟೋಟಗಳಲ್ಲಿ, ಹೊಡೆದಾ ಟಗಳಲ್ಲಿ, ಅಪಘಾತಗಳಲ್ಲಿ ಹಲ್ಲುಗಳನ್ನು ಕಳೆ ದುಕೊಳ್ಳಬಹುದು. ಹಲ್ಲನ್ನು ತೆಗೆಸಿಕೊಳ್ಳುವ ಸಾಮಾನ್ಯ ಕಾರಣವೆಂದರೆ ಹುಳುಕು ಹಲ್ಲಿನ ನೋವಿಂದ ಪಾರಾಗಲು ಹುಳುಕಾದ ಹಲ್ಲಿನ ಸುತ್ತ ಮುತ್ತಲಿನ ವಸಡು ಮತ್ತು ಇತರೆ ಹಲ್ಲುಗಳ ಆರೋಗ್ಯ ಚೆನ್ನಾಗಿದ್ದರೂ, ಆ ಒಂದು ಹಲ್ಲು ಅಥವಾ ಒಂದೆರಡು ಹಲ್ಲುಗಳು ಸೋಂಕಿನ ಕಾರಣ ಆ ಭಾಗದ ಎಲ್ಲ ಹಲ್ಲುಗಳು ಪ್ರಯೋಜನ ಕ್ಕೆ ಬರದಂತೆ ಆಗಬಹುದು. ಹುಳುಕಾದ ಹಲ್ಲುಗ ಳು ಮುಂದುವರೆದ ಅಂತಿಮ ಹಂತದಲ್ಲಿ ಅಪಾರ ನೋವನ್ನು ಕೊಡುತ್ತವೆ. ಇಂತಹ ಸಂದರ್ಭಗಳಲ್ಲಿ ಹಲ್ಲನ್ನು ಅಕಾಲಿಕವಾಗಿ ಕೀಳಿಸಿಕೊಳ್ಳಬಹುದು. ಈ ಎಲ್ಲ ಸಂಧರ್ಭಗಳಲ್ಲಿ ಡೆಂಟಲ್ ಇಂಪ್ಲಾಂಟ್ ಹಲ್ಲನ್ನು ಮರಳಿಪಡೆಯುವ ದಾರಿಯಾಗಬ ಲ್ಲದು.

ಎಲ್ಲಕ್ಕಿಂತ ಹೆಚ್ಚಾಗಿ ನಾವು ಹಲ್ಲನ್ನುಕಳೆದುಕೊಳ್ಳು ವುದು ವಸಡಿನ ಖಾಯಿಲೆಗಳ ಕಾರಣ. ಇಂತಹ ಸಂಧರ್ಭದಲ್ಲಿ ಇದೇ ಡೆಂಟಲ್ ಇಂಪ್ಲಾಂಟ್ ನ್ನು ನಾವು ಹಾಕಿಸಿಕೊಳ್ಳಬಹುದಾದರೂ ಜಾಗ್ರತೆ ವಹಿ ಸಬೇಕು.ಯಾಕೆಂದರೆ, ದೇವರುಕೊಟ್ಟ ಹಲ್ಲುಗಳ ನ್ನೇ ಬೇರು ಸಮೇತ ಅಲ್ಲಾಡಿಸಿ, ನೋವು ಕೊಟ್ಟು ಹಾಳುಮಾಡುವ ಬ್ಯಾಕ್ಟೀರಿಯಾಗಳು ಡೆಂಟಲ್ ಇಂಪ್ಲಾಂಟ್ ಗಳಿಗೂ ಹಾನಿಯನ್ನು ತರಬಲ್ಲವು. ಬ್ಯಾಕ್ಟಿರಿಯಾಗಳು ನಮ್ಮ ವಸಡು ಮತ್ತು ಇತರೆ ಹಲ್ಲುಗಳ ಮೇಲೆ ವಾಸಮಾಡಿಕೊಂಡಿರುತ್ತವೆ. ಈ ಕಾರಣ ಇಡೀ ಬಾಯಿಯ ಮತ್ತು ವಸಡಿನಆರೋ ಗ್ಯವನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಆ ನಂತರ ಕೃತಕಹಲ್ಲುಗಳನ್ನು ಇಂಪ್ಲಾಂಟ್ ಮಾಡಿಸಿ ಕೊಳ್ಳುವ ಮೂಲಕ ಪಡೆಯಲು ಸಾದ್ಯವಾಗುತ್ತದೆ ಇಲ್ಲದಿದ್ದಲ್ಲಿ ವಸಡಿನ ಖಾಯಿಲೆ ತರುವ ಅವೇ ಬ್ಯಾಕ್ಟೀರಿಯಾಗಳು ಡೆಂಟಲ್ ಇಂಪ್ಲಾಂಟ್ ನ್ನು ಕೂಡ ಸೋಂಕಿಗೆ ತುತ್ತುಮಾಡುತ್ತವೆ. ಅಪಾರ ನೋವುಕೊಟ್ಟು ಅವುಗಳು ಕೂಡ ಬಿದ್ದು ಹೋಗು ವಂತೆ ಮಾಡುತ್ತವೆ.ಡೆಂಟಲ್ ಇಂಪ್ಲಾಂಟ್ ಹಾಕಿಸಿ ಕೊಳ್ಳುವ ಮೊದಲು ನಿಮ್ಮ ದಂತ ವೈದ್ಯರ ಬಳಿ ನಿಮಗೆ ವಸಡಿನ ಖಾಯಿಲೆಯಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಿ.
ಡೆಂಟಲ್ ಇಂಪ್ಲಾಂಟ್ ಎಂದರೇನು?

ಸ್ವೀಡನ್ನಿನ ಪೆರ್- ಇನ್ಗ್ವರ್- ಬ್ರೇನೆಮಾರ್ಕ್ ಎನ್ನುವ ಮೂಳೆ ವೈದ್ಯನೊಬ್ಬ ಮುರಿದ ಮೂಳೆ ಗಳು ಹೇಗೆ ಮತ್ತೆ ಕೂಡಿಕೊಂಡು ವಾಸಿಯಾಗು ತ್ತವೆ ಎಂಬ ವಿಚಾರದ ಬಗ್ಗೆ ಅಧ್ಯಯನವನ್ನು ಮಾಡುತ್ತಿದ್ದ. 1960 ರಲ್ಲಿ ಆತ ಟೈಟೇನಿಯಂ ಎನ್ನುವ ಲೋಹದಸುತ್ತ ಮೂಳೆ ಬೆಳೆಯಬಲ್ಲದು ಮತ್ತು ಟೈಟೇನಿಯಂ ದೇಹದಲ್ಲಿ ಯಾವುದೇ ಹಾನಿ ಮಾಡದೆ ಇರಬಲ್ಲದು ಎಂಬುದನ್ನು ಕಂಡು ಹಿಡಿದ.ಮುಂದಿನ 18ವರ್ಷಗಳ ಕಾಲ ಈತ ಇದೇ ವಿಚಾರವಾಗಿ ಹಲವಾರು ಪ್ರಯೋಗಗಳನ್ನು ಮಾಡಿದ ಹಾಗೂ ಎಲ್ಲರೆದುರು ತನ್ನ ಅಧ್ಯಯನ ಗಳನ್ನುಮಂಡಿಸಿದ. 1978 ರಲ್ಲಿ ಆತ ದವಡೆಯ ಮೂಳೆಗಳು ಕೂಡ ಈ ಟೈಟೇನಿಯಂ ಲೋಹದ ಕೃತಕ ಜೋಡ ಣೆ ಗಳನ್ನು ಸ್ವೀಕರಿಸಬಲ್ಲುದೆಂದೂ ಅದರ ಮೇಲೆ ಕೃತಕ ಹಲ್ಲುಗಳನ್ನು ಜೋಡಿಸಬ ಹುದೆಂದು ಜಗತ್ತಿಗೆ ಧೃಡಪಡಿಸಿದ. ತನ್ನ ಪ್ರತಿಪಾ ದನೆ ಮತ್ತು ಆವಿಷ್ಕಾರ ಎಲ್ಲ ಜನರಿಗೆ ತಲುಪು ವಂತೆ ಡೆಂಟಲ್ ಇಂಪ್ಲಾಟ್ ಗಳೆಂಬ ಕೃತಕದಂತ ಜೋಡಣೆಯ ವ್ಯವಸ್ಠೆಯನ್ನು ಮಾರುಕಟ್ಟೆಗೆ ತಂದ.
ಕಳೆದ 40ವರ್ಷಗಳಲ್ಲಿ ಪ್ರಪಂಚದಾದ್ಯಂತ ಈತನ ಹೆಸರಿನಲ್ಲಿ ಪೇಟೆನ್ಸಿ ಇರುವ ಈ ದಂತ ಜೋಡನೆ ಗಳನ್ನು ಮಿಲಿಯನ್ನುಗಳ ಲೆಕ್ಕದಲ್ಲಿ ಜೋಡಿಸಲಾ ಗಿದೆ. ಹಲವರಲ್ಲಿ ನಲವತ್ತು ವರ್ಷಗಳಾದರೂ ಈ ಜೋಡಣೆಗಳು ಭರ್ಜರಿಯಾಗಿ ಕೆಲಸ ಮಾಡುತ್ತಿ ವೆ.ಸರಿಯಾದ ವ್ಯಕ್ತಿಯಲ್ಲಿ, ಸರಿಯಾದ ರೀತಿಯ ಲ್ಲಿ ಇವನ್ನು ಸಣ್ಣ ಬಾಯಿಯ ಶಸ್ತ್ರ ಚಿಕಿತ್ಸೆಯ ಮೂಲಕ ಅಳವಡಿಸಿದಲ್ಲಿ ಪ್ರತಿಶತ 95-98% ಯಶಸ್ವಿಯಾಗುವ ಈ ಚಿಕಿತ್ಸೆ ಈಗ ಬಹಳ ಜನಪ್ರಿ ಯವಾಗುತ್ತಿದೆ.
ಡೆಂಟಲ್ ಇಂಪ್ಲಾಂಟ್ ಚಿಕಿತ್ಸೆಯನ್ನು ಹೇಗೆ ಮಾಡಲಾಗುತ್ತದೆ?

ಯಾವುದೋ ಒಂದು ಹಲ್ಲನ್ನು ಅಕಸ್ಮಿಕ ಕಳೆದು ಕೊಂಡಿರೆಂದುಕೊಳ್ಳಿ. ಕಾರಣಗಳನ್ನು ಆಧರಿಸಿ ಆ ಜಾಗವನ್ನು ತುಂಬಲು ತಕ್ಷಣ ಅಥವಾ ಹಲವು ತಿಂಗಳುಗಳ ನಂತರ ಸಾಧ್ಯವಿದೆ. ಅಧ್ಯಯನಗಳ ಪ್ರಕಾರ ಹಲ್ಲಿನ ಸೋಂಕು ಬಹುಕಾಲ ಕಾಡಿದ್ದು ನಂತರ ಆ ಹಲ್ಲನ್ನು ತೆಗೆಸಿಕೊಂಡಿದ್ದಲ್ಲಿ,ಆ ಹಲ್ಲಿನ ಜಾಗವನ್ನು ಮೊದಲು ಚೆನ್ನಾಗಿ ಶುಚಿಗೊಳಿಸಿ, ಸಹಜವಾಗಿಯೇ ಮಾಯಲು ಬಿಡಬೇಕು. ಆರು ತಿಂಗಳ ಕಾಲ ಕಾದಲ್ಲಿ ಹಲ್ಲಿನ ಬೇರಿದ್ದ ಜಾಗದಲ್ಲಿ ಮತ್ತೆ ದವಡೆಯ ಮೂಳೆ ತುಂಬಿಕೊಳ್ಳುತ್ತದೆ. ನಂತರ ಬಾಯಿಗೆ ದಂತ ವೈದ್ಯರು ಕೊಡುವ ಅರಿವಳಿಕೆಯನ್ನು ಕೊಟ್ಟು ಈ ರೀತಿ ಬೆಳೆದ ಹೊಸ ಮೂಳೆಯನ್ನು ವಿಶೇಷ ಉಪಕರಣಗ ಳನ್ನು ಬಳಸಿ ಕೊರೆದು,ಡೆಂಟಲ್ ಇಂಪ್ಲಾಂಟ್ ನ್ನು ಕೂಡಿಸಲಾಗುತ್ತದೆ.ಒಳಗೆ ಟೊಳ್ಳಿರುವ ಡೆಂಟಲ್ ಇಂಪ್ಲಾಂಟ್ ನ್ನು ಸಣ್ಣ ಸ್ಕ್ರೂ ಇರುವ ಮುಚ್ಚಳ ಬಳಸಿ ಮುಚ್ಚಲಾಗುತ್ತದೆ. ಮತ್ತೆ ಸುಮಾರು 6 ತಿಂಗಳುಗಳ ಕಾಲ ಇದು ಮೂಳೆಯ ಜೊತೆ ಕೂಡಿ ಬೆಳೆಯಲು ಅವಕಾಶವನ್ನು ನೀಡಲಾಗುತ್ತದೆ. ಈ ಕಾಲದಲ್ಲಿ ಟೈಟೇನಿಯಂ ಲೋಹದ ಡೆಂಟಲ್ ಇಂಪ್ಲಾಂಟ್ ಸುತ್ತ ಮೂಳೆ ಬೆಳೆದು ದವಡೆಯ ಮೂಳೆಯ ಜೊತೆ ಡೆಂಟಲ್ ಇಂಪ್ಲಾಂಟ್ ಕೂಡಿ ಕೊಳ್ಳುತ್ತದೆ.ನಂತರ ನಿಮ್ಮ ದಂತ ವೈದ್ಯರು ಇದರ ಮೇಲೆ ಹಲ್ಲನ್ನು ಜೋಡಿಸುತ್ತಾರೆ.
ಅವಶ್ಯಕತೆಯಿರುವ ರೋಗಿಗಳಲ್ಲಿ ಈ ಚಿಕಿತ್ಸೆಯ ಬಗ್ಗೆ ಕಾಡುವ ಮೊದಲ ಆತಂಕ ಎಂದರೆ ಈ ಚಿಕಿತ್ಸೆಯಿಂದ ನೋವಾಗುತ್ತದೆಯೇ ಎಂಬುದು. ಯಾಕೆಂದರೆ ರೋಗಿಗಳು ಎಚ್ಚರವಿರುವಂತೆಯೇ ವಸಡನ್ನು ಕತ್ತರಿಸಿ, ಮುಖದ ಮೂಳೆಯನ್ನು ಕೊರೆದು ಒಂದು ದಪ್ಪ ಮೊಳೆಯಂತದ್ದನ್ನು ಜೋಡಿಸುತ್ತೇವೆ ಎಂದರೆ ಎಲ್ಲರ ಕಲ್ಪನೆಯಲ್ಲಿ ಇದು ಬಹಳ ಯಾತನೆಯ ಚಿಕಿತ್ಸೆ ಎಂಬಗುಮಾನಿ ಬರಬಹುದು. ಆದರೆ ನಿಜವಾಗಿ ಇದು ಒಂದು ಹಲ್ಲನ್ನು ಕೀಳಿಸಿಕೊಳ್ಳುವುದಕ್ಕಿಂತ ಅತಿ ಕಡಿಮೆ ನೋವಿನ ಚಿಕಿತ್ಸೆ. ಅರಿವಳಿಕೆಯ ಪ್ರಭಾವ ಇಳಿದ ನಂತರವೂ ಬಹಳ ಕಡಿಮೆ ಮತ್ತು ಕೇವಲ ಒಂದೆ ರಡು ದಿನಗಳ ಕಾಲ ಮಾತ್ರ ಅಲ್ಪ-ಸ್ವಲ್ಪ ನೋವಿ ರುವ ಸರಳ ಚಿಕಿತ್ಸೆ. ಮರುದಿನವೇ ನಾವು ದೈನಂ ದಿನ ಎಲ್ಲ ಕೆಲಸಗಳನ್ನು ಎಂದಿನಂತೆ ಮಾಡಬ ಹುದು. ಮುಂದಿನ ಘಟ್ಟಗಳ ಚಿಕಿತ್ಸೆಯಕಾಲದಲ್ಲಿ ಯಾವುದೇ ನೋವಿರುವುದಿಲ್ಲ.

ಭಾರತದ ಹಲವೆಡೆ ಧಿಡೀರ್ ಹಣ ಗಳಿಸುವ ಆಸೆ ಯಿಂದ ಹಲವು ದಂತವೈದ್ಯರು ಈ ಚಿಕಿತ್ಸೆಯನ್ನು ಹಲ್ಲು ಕಿತ್ತ ತಕ್ಷಣವೇ ಮಾಡಿ ಒಂದೆರಡು ದಿನಗಳ ಲ್ಲಿಯೇ ಅದರ ಮೇಲೆ ಹಲ್ಲನ್ನು ಜೋಡಿಸುವ ಪರಿಪಾಟವನ್ನು ಬೆಳೆಸಿಕೊಂಡಿದ್ದಾರೆ.ಇಂಪ್ಲಾಂಟ್ ಹಾಕುವ ಮುನ್ನ ಹಲ್ಲನ್ನು ಕೀಳಿಸಿಕೊಳ್ಳಲು ಕಾರ ಣವಾದ ಸೋಂಕು ಪ್ರತಿಶತ ಹೋಗುವವರೆಗೆ ಕಾಯುವುದು ಒಳ್ಳೆಯ ಪರಿಪಾಟ. ಜೊತೆಗೆ ದಿಡೀರ್ ಹಾಕಿದ ಇಂತಹ ಇಂಪ್ಲಾಂಟ್ ಮೇಲೆ ಅಗೆದಾಗಲೂ ಆಗುವ ಸಣ್ಣ ಮೈಕ್ರೋ ಚಲನೆ ಗಳು ಇಂಪ್ಲಾಂಟ್ ಮೂಳೆಯೊಂದಿಗೆ ಕೂಡಿ ಬೆಳೆಯಗೊಡದೆ ಕ್ರಮೇಣ ಡೆಂಟಲ್ ಇಂಪ್ಲಾಂಟ್ ಯಶಸ್ವಿಯಾಗದೇ ಇರಬಹುದು. ಹಾಗಾಗಿ ನೆನಪಿಡಿ ’ತಾಳಿದವನು ಬಾಳಿಯಾನು’ಎಂಬಂತೆ ಇದು ನಿಧಾನವಾಗಿ ಆಗುವ ಚಿಕಿತ್ಸೆ, ಧಿಡೀರ್ ಚಿಕಿತ್ಸೆಯ ಆಮಿಷಕ್ಕೆ ಒಳಗಾಗಬೇಡಿ.
ಹಲ್ಲು ಒಂದಾಗಲೀ, ಹಲವೇ ಆಗಲಿ ಅಥವಾ ಎಲ್ಲ ಹಲ್ಲುಗಳೇ ಉದುರಿರಲಿ ಈ ಚಿಕಿತ್ಸೆಯಿಂದ ನೀವು ಮತ್ತೆ ಸಹಜವಾದಂತ ಹೊರಗೆ ತೆಗೆಯುವ ಅವಶ್ಯಕತೆಯಿರದ,ಸ್ಥಿರವಾದ ಹಲ್ಲುಗಳನ್ನು ಪಡೆ ಯಬಹುದು.
ಎಲ್ಲ ಹಲ್ಲುಗಳನ್ನು ಕಳೆದುಕೊಂಡವರಿಗೂ ಡೆಂಟಲ್ ಇಂಪ್ಲಾಂಟ್ ಗಳಿಂದ ಪ್ರಯೋಜನವಾಗುತ್ತದೆ.

ಡೆಂಟಲ್ ಇಂಪ್ಲಾಂಟ್ ಗಳ ಆವಿಷ್ಕಾರಕ್ಕಿಂತ ಮೊದಲು, ಪ್ರತಿದಿನ ಬಾಯಿಂದ ತೆಗೆದು ಹೊರ ಗಿಡಬೇಕಾದ ಕೃತಕದಂತ ಪಂಕ್ತಿಗಳು ಹೆಚ್ಚು ಬಳಕೆ ಯಲ್ಲಿದ್ದವು. ಹಲ್ಲನ್ನು ಕಳೆದುಕೊಂಡ ನಂತರ ಆ ಜಾಗದಲ್ಲಿ ನಮ್ಮ ದವಡೆಯ ಮೂಳೆಗಳು ಸವೆಯುತ್ತವೆ.ಈ ಕಾರಣ ಕೃತಕದಂತ ಪಂಕ್ತಿಗಳು ವಸಡಿನ ಸಿಂಬೆಯ ಮೇಲೆ ಸರಿಯಾಗಿ ಕೂರದೆ, ಅಲ್ಲಾಡುವುದು, ಸಡಿಲವಾಗುವುದು, ಬಾಯಿಂದ ಹೊರಗೆ ಬರುವುದು ಇತ್ಯಾದಿ ಮುಜುಗರಗಳಿಗೆ ಜನರು ತುತ್ತಾಗುತ್ತಾರೆ. ಇವರು ಯಾವುದೇ ಗಟ್ಟಿ ಅಥವಾ ಅಂಟುವ ಪದಾರ್ಥ ಗಳನ್ನು ಕಚ್ಚಿ ತಿನ್ನು ವುದು ಸಾಧ್ಯವಾಗದಿರಬಹುದು. ಆದರೆ, ಇವೇ ಕೃತಕ ದಂತಪಂಕ್ತಿಗಳನ್ನು ಡೆಂಟಲ್ ಇಂಪ್ಲಾಂಟ್ ಗಳ ಮೂಲಕ ವಸಡುಗಳಿಗೆ ಬಿಗಿಯಾಗಿ ಕಚ್ಚು ವಂತೆ ಕೂಡಿಸಬಹುದು, ಬೇಕು ಎಂದಾಗ ತೆಗೆದಿಡಲೂಬಹುದು. ಬಹಳಷ್ಟು ಡೆಂಟಲ್ ಇಂಪ್ಲಾಂಟಗಳನ್ನು ಹಾಕಿದರೆ ತೆಗೆಯುವ ಅವಶ್ಯ ಕತೆಯೇ ಇರದಂಥಹ ‘ಇಂಪ್ಲಾಂಟ್ ಗಳನ್ನು ಆಧರಿಸಿದ ಹಲ್ಲಿನ ಸೆಟ್ಟನ್ನು’ ಮಾಡಿಸಿಕೊಳ್ಳಬ ಹುದು.
ಎಲ್ಲ ಚಿಕಿತ್ಸೆಗಳಂತೆಯೇ ಡೆಂಟಲ್ ಇಂಪ್ಲಾಂಟ್ ಚಿಕಿತ್ಸೆಯಲ್ಲಿಯೂ ಕೆಲವು ನ್ಯೂನತೆಗಳಿವೆ.

ಮೊದಲಿಗೆ ಇದು ಬಹು ದುಬಾರೀ ಚಿಕಿತ್ಸೆ. ಭಾರತ ದಲ್ಲಿ ಒಂದು ಡೆಂಟಲ್ ಇಂಪ್ಲಾಂಟ್ ಗೆ 5000ರೂ ಗಳಿಂದ ಹಿಡಿದು ಲಕ್ಷಗಳವರೆಗೂ ಫೀಸು ಕೇಳುವ ದಂತ ವೈದ್ಯರಿದ್ದಾರೆ. ಇವತ್ತು ಮಾರುಕಟ್ಟೆಯಲ್ಲಿ ನೂರಾರು ಡೆಂಟಲ್ ಇಂಪ್ಲಾಂಟ್ ಕಂಪೆನಿಗಳಿವೆ. ಪ್ರಸಿದ್ದವಾಗಿರುವ ಐದು ಬ್ರಾಂಡುಗಳು ಅತಿ ದುಬಾರಿ ವೆಚ್ಚದವು. ಜೊತೆಗೆ ತೀರ ಇತ್ತೀಚೆಗೆ ಮಾರುಕಟ್ಟೆಗೆ ಬಂದು ತಮ್ಮ ಯಶಸ್ಸನ್ನು ಇನ್ನೂ ಪ್ರಮಾಣಪಡಿಸಿಲ್ಲದ ನೂರಾರು ಕಂಪನಿಗಳಿವೆ. ಹೊಚ್ಚ ಹೊಸ, ಕಡಿಮೆ ಬೆಲೆಯ ಇಂಪ್ಲಾಂಟ್ ಕಂಪನಿಗಳು ಕಡಿಮೆಬೆಲೆಗೆ ಡೆಂಟಲ್ ಇಂಪ್ಲಾಂಟ ಗಳನ್ನು ದಂತ ವೈದ್ಯರಿಗೆ ಮಾರುವುದು ಮತ್ತೊಂ ದು ಕಾರಣ. ಎಲ್ಲಕ್ಕಿಂತ ಮುಖ್ಯ ಕಾರಣ ಭಾರತ ದಲ್ಲಿ ಯಾವುದೇ ಚಿಕಿತ್ಸೆಗೆ ಇಂತಿಷ್ಟೇ ಅಂತಹ ಚಿಕಿತ್ಸೆಯ ಫೀಸನ್ನು ನಿಗಧಿಗೊಳಿಸಿಲ್ಲದಿರುವುದು. ಆಯಾ ದಂತವೈದ್ಯರ ನಿಪುಣತೆ ಮತ್ತು ಖ್ಯಾತಿಯ ನ್ನೂ ಇದು ಅವಲಂಬಿಸಿರುತ್ತದೆ. ಹಲವು ಕಡೆ ವಿಚಾರಿಸಿ ವ್ಯತ್ಯಾಸವೇನೆಂದು ತಿಳಿದುಕೊಂಡು, ಯಾವ ಬಗೆಯ ಗ್ಯಾರಂಟಿಗಳನ್ನು ನೀಡುತ್ತಾರೆ ಎಂದು ಅರಿತುಕೊಂಡು ಚಿಕಿತ್ಸೆ ಮಾಡಿಸಿಕೊಳ್ಳು ವುದು ಉತ್ತಮ.
ಎಲ್ಲರಿಗೂ ಇದು ಹೊಂದಾಣಿಕೆಯಾಗುವ ಚಿಕಿತ್ಸೆ ಯಲ್ಲ.ವಸಡಿನ ಖಾಯಿಲೆಯಿರುವವರಿಗೆ,ಧೂಮ ಪಾನ ಮಾಡುವವರಿಗೆ,ಅತಿ ಮದ್ಯ ಸೇವಿಸುವವ ರಲ್ಲಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವ ರಿಗೆ, ಅತೀವ ವೈದ್ಯಕೀಯ ಸಮಸ್ಯೆಗಳಿಂದ ಬಳಲುವವರಿಗೆ, ಬಾಯಿಯ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದವರಲ್ಲಿ ಈ ಚಿಕಿತ್ಸೆ ಹೆಚ್ಚು ಕಾಲ ಯಶಸ್ವಿಯಾಗದಿರಬಹುದು.
ದವಡೆಯ ಮೂಳೆಗಳು ಅತಿಯಾಗಿ ಈಗಾಗಲೇ ಸವೆದು ಹೋಗಿರುವವರಲ್ಲಿ ಈ ಚಿಕಿತ್ಸೆ ಸಾಧ್ಯವಾ ಗದಿರಬಹುದು.ಮೂಳೆಯ ಅಭಾವದ ಪ್ರಮಾಣ ಕಡಿಮೆಯಿದ್ದಲ್ಲಿ ಮೂಳೆಯನ್ನು ಕಸಿ ಮಾಡಿ ಇಂತಹವರಿಗೆ ಸುಲಭವಾಗಿ ಚಿಕಿತ್ಸೆ ಮಾಡಬಹು ದು. ಮೂಳೆಯ ಅಭಾವ ಅತಿ ಜಾಸ್ತಿಯಿದ್ದಲ್ಲಿ ಡೆಂಟಲ್ ಇಂಪ್ಲಾಂಟ್ ಚಿಕಿತ್ಸೆ ಸಾದ್ಯವಾಗುವು ದಿಲ್ಲ.

ಆದರೆ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿಯಿ ರುವವರು ಅಕಸ್ಮಿಕವಾಗಿ ಹಲ್ಲನ್ನು/ಹಲ್ಲುಗಳನ್ನು ಕಳೆದುಕೊಂಡಿದ್ದು ಅವುಗಳ ಮಹತ್ವವನ್ನು ಅರಿ ತು ಎರಡನೇ ಬಾರಿಗೆ ಹಲ್ಲುಗಳನ್ನು ಹೊಂದಲು ಬಯಸಿ ಅದಕ್ಕಾಗಿ ಹಣ ಖರ್ಚು ಮಾಡಲು ತಯಾರಿದ್ದರೆ ಅಂತವರಿಗೆ ಈ ಡೆಂಟಲ್ ಇಂಪ್ಲಾಂ ಟ್ ಚಿಕಿತ್ಸೆ ವರದಾನವಾಗಬಲ್ಲದು. ಹೆಚ್ಚು ಹೆಚ್ಚು ಜನರು ಈ ಚಿಕಿತ್ಸೆಯನ್ನು ಮಾಡಿಸಿ ಕೊಂಡಂತೆಲ್ಲ ಚಿಕಿತ್ಸೆಯ ಮುಖ ಬೆಲೆ ಕೂಡ ಕಡಿಮೆಯಾಗುತ್ತ ಹೋಗುತ್ತದೆ.ಇನ್ನಿತರ ಬಗೆಯ ಕೃತಕ ಹಲ್ಲುಗಳಿಗೆ ಹೊಂದಾಣಿಕೆಯಾಗದಿದ್ದವರಿಗೆ ಈ ಚಿಕಿತ್ಸೆಯು ಮತ್ತೊಂದು ಅವಕಾಶವನ್ನು ಕಲ್ಪಿಸಬಲ್ಲುದು.
ಡಾ.ಪ್ರೇಮಲತ ಬಿ.
ದಂತ ವೈದ್ಯರು
ಲಂಡನ್, ಇಂಗ್ಲೆಂಡ್