ದೇನಪ್ಪ ಮತ್ತು ದಾನಮ್ಮ ಎನ್ನುವ ದಂಪತಿಗಳು ಕಾಡಿನ ಸಮೀಪದ ಒಂದು ಹಳ್ಳಿಯಲ್ಲಿ ವಾಸವಿ ದ್ದರು. ಅವರಿಗೆ ಇಬ್ಬರು ಮಕ್ಕಳು ಸೋನು ಹೆಸರಿನ ಮಗಳು, ಸೀನು ಎಂಬ ಹೆಸರಿನ ಮಗ.. ಒಂದುದಿನ ಮಕ್ಕಳು ಮಣ್ಣಿನಲ್ಲಿ ಆಡುತ್ತಿದ್ದಾಗ ಮಣ್ಣಿನೊಳಗೆ ಏನೋ ಸಣ್ಣ ದ್ವನಿಯಲ್ಲಿ ಚೀರಿ ಕೊಂಡಂತೆ ಕೇಳಿಸಿತು. ಸೋನು ಮಣ್ಣನ್ನು ಸರಿಸಿ ನೋಡಿದಾಗ ಅಲ್ಲೊಂದು ಅಡಿಕೆ ಗಾತ್ರದ ಕೆಂಪು ಹುಳವಿತ್ತು. ಮಕ್ಕಳಿಗೆ ಆಶ್ಚರ್ಯ ಮತ್ತು ಭಯ ವಾಯಿತು.ಸೀನು ಹುಳವನ್ನು ಕೊಲ್ಲಲು ಕಲ್ಲೊಂ ದನ್ನು ಎತ್ತಿಕೊಂಡಾಗ ಹುಳ ಚೀರಿಕೊಳ್ಳುತ್ತಾ “ನನ್ನನ್ನು ಕೊಲ್ಲಬೇಡಿ, ದಯವಿಟ್ಟು ನನ್ನ ಮಾತು ಕೇಳಿ ” ಎಂದು ಬೇಡಿಕೊಂಡಿತು. ಆಗ ಸೋನು ಕರುಣೆಯಿಂದ ಸೀನನನ್ನು ತಡೆದು,ಆ ಹುಳವನ್ನು ತನ್ನ ಅಂಗೈಲಿ ಇಟ್ಟುಕೊಂಡಳು. ಆಗ ಕೆಂಪು ಹುಳ ಮಾತಿಗಿಳಿಯಿತು.

ನಾನು ದೇವ ಲೋಕದ ದೇವತೆ. ನಾನು ಗಿಡಗ ಳಿಗೆ ಬೆಂಕಿಯಿಟ್ಟ ಪರಿಣಾಮವಾಗಿ ದೇವರ ಶಾಪಕ್ಕೆ ಗುರಿಯಾಗಿ ಹುಳವಾದೆ. ಶಾಪ ವಿಮೋ ಚನೆಗಾಗಿ ಬೇಡಿಕೊಂಡಾಗ ‘ಗಿಡನೆಡುವ ಒಳ್ಳೆಯ ಮನಸ್ಸಿನ ಹುಡುಗರು ನಿನ್ನನ್ನು ಮೂರು ಬೆಟ್ಟದಾ ಚೆಯ ‘ಮುಕ್ತಿ’ ಸರೋವರದ ಸ್ನಾನ ಮಾಡಿಸಿದರೆ ನೀನು ಮೊದಲಿನಂತೆ ಆಗುತ್ತಿಯಾ’ ಎಂದು ಹೇಳಿ ಹೋದರು. “ನೀವಿಬ್ಬರು ಗಿಡ ನೆಟ್ಟು ಬೆಳೆಸುವ ಮಕ್ಕಳು.ದಯವಿಟ್ಟು ನನಗೆ ಸಹಾಯ ಮಾಡುವಿ ರಾ ..”?ಎಂದು ಕೇಳಿತು. ಸೀನ, ಸೋನು ಇಬ್ಬರು ಒಪ್ಪಿಕೊಂಡರು. ಅಪ್ಪ ಅಮ್ಮನ ಬಳಿ ನಡೆದ ಸಂಗತಿಯನ್ನು ವಿವರಿಸಿ,ಅನುಮತಿ ಪಡೆದುಬುತ್ತಿ ಕಟ್ಟಿಕೊಂಡು ‘ಮುಕ್ತಿ’ ಸರೋವರದತ್ತ ಹೊರಟೇ ಬಿಟ್ಟರು.

ಕೆಂಪು ಹುಳವು ಪಟಪಟ ಮಾತನಾಡುತ್ತ ದಾರಿ ತೋರಿಸಿತು. ಅವರು ಮೊದಲನೆ ಬೆಟ್ಟ ಏರಲಾ ರಂಭಿಸಿದಾಗ ನೂರಾರು ಕಟ್ಟಿರುವೆಗಳ ಸಾಲು ಇವರತ್ತ ಧಾವಿಸಿ ಬರಲಾರಂಭಿಸಿತು. ಆಗ ಕೆಂಪು ಹುಳವು ‘ಅವು ಬರ್ತಾ ಇರೋದು ನನ್ನ ಪರಿಮಳ ದ ಜಾಡು ಹಿಡಿದು ನನ್ನ ತಿನ್ನಲಿಕ್ಕೆಂದು. ಇಲ್ಲೆ ಬಂಡೆಯ ಮೇಲೆ ದೊಡ್ಡ ಜೇನು ಗಡಿಗೆಯಿದೆ. ಅದನ್ನು ಚೆಲ್ಲಿದರೆ ಇರುವೆಗಳೆಲ್ಲ ಅತ್ತ ಓಡುತ್ತವೆ.’ ಎಂದಿತು. ಆಗ ಸೀನ ತಡಮಾಡದೇ ಕಷ್ಟಪಟ್ಟು ಬಂಡೆಯೇರಿ ಜೇನು ತುಂಬಿದ್ದ ಮಡಿಕೆಯನ್ನು ಕೆಳಕ್ಕೆಸೆದ.ಜೇನು ಹರಿಯಲಾರಂಭಿಸಿದಾಗ ಎಲ್ಲಾ ಇರುವೆಗಳು ಅತ್ತ ಓಡಿದವು. ಮಕ್ಕಳು ಆರಾಮ ವಾಗಿ ಬೆಟ್ಟ ಏರಿದರು.

ಎರಡನೆಯ ಬೆಟ್ಟ ಏರುತ್ತಿದ್ದಂತೆಯೇ ಮರದ ಮೇಲಿಂದ ಸಾವಿರಾರು ಹಕ್ಕಿಗಳು ಇವರತ್ತ ಹಾರಿ ಬಂದು ಕಿರ್ರೆಂದು ಕೂಗಿದವು.ಒಂದುಹಕ್ಕಿ ಸೋನು ವಿನ ಬುಜದ ಮೇಲೆ ಕುಳಿತ ಕೆಂಪು ಹುಳವನ್ನು ಕುಕ್ಕಿ ತಿನ್ನಲೆತ್ನಿಸಿತು. ಸೋನು ಭಯಗೊಂಡರೂ ತೋರಗೊಡದೆ ತನ್ನ ಚೀಲದಲ್ಲಿದ್ದ ಕನ್ನಡಿಯನ್ನು ಹಕ್ಕಿಗಳಿಗೆ ಎದುರಾಗಿ ಹಿಡಿದಾಗ ಜಾದೂ ಮಾಡಿ ದಂತೆ ಎಲ್ಲಾ ಹಕ್ಕಿಗಳು ದೂರ ಹಾರಿಹೋದವು.

ಮೂರನೆಯ ಬೆಟ್ಟ ಏರಬೇಕೆಂದು ಬಂದಾಗ ಆ ಬೆಟ್ಟ ಧಗಧಗನೇ ಉರಿಯುತ್ತಿತ್ತು. ಉರಿಯುವ ಬೆಟ್ಟವನ್ನು ಹತ್ತುವುದು ಹೇಗೆ..? ಎಂದಾಗ ಕೆಂಪು ಹುಳ ಹೇಳಿತು.’ಈ ಬೆಟ್ಟ ದಿನದಲ್ಲಿ ಒಂದು ತಾಸು ಮಾತ್ರ ಶಾಂತವಾಗುತ್ತದೆ. ಆ ಸಮಯಕ್ಕೆ ಕಾದು ನಾವು ಬೆಟ್ಟ ಹತ್ತಬೇಕು’ ಎಂದಿತು. ಸೋನು ಸೀನ ಇಬ್ಬರು ತಂದ ಬುತ್ತಿಯನ್ನು ತಿಂದು ಬೆಟ್ಟವನ್ನೇ ನೋಡುತ್ತಾ ಕುಳಿತರು. ಸ್ವಲ್ಪ ಹೊತ್ತಿನ ಬಳಿಕ ಬೆಟ್ಟದಲ್ಲಿ ಉರಿ ನಿಂತಿತು.ಲಘುಬಗೆಯಿಂದ ಬೆಟ್ಟ ಏರಿದರು. ಒಂದು ತಾಸು ಮುಗಿಯುವುದರೊಳಗೆ ಬೆಟ್ಟದ ಮತ್ತೊಂದು ದಿಕ್ಕಿನಲ್ಲಿ ಇಳಿದರು. ಆಗ ಅವರಿಗೆ ‘ಮುಕ್ತಿ’ ಸರೋವರ ಕಾಣಿಸಿತು. ಮಕ್ಕಳಿ ಬ್ಬರು ನೀರಲ್ಲಿ ಮಿಂದರು.ಅವರ ದಣಿವು ಮಾಯ ವಾಯಿತು.

ಕೆಂಪುಹುಳದ ಮೇಲೆ ಬೊಗಸೆನೀರು ಹಾಕಿದಾಗ ಹುಳದ ಬದಲು ಸುಂದರ ಗಂಧರ್ವ ಕಾಣಿಸಿದ. ಶಾಪವಿಮೋಚನೆ ಮಾಡಿದ ಮಕ್ಕಳಿಗೆ ಧನ್ಯವಾದ ಹೇಳಿ ನಿಮ್ಮ ಬದುಕು ಸಮೃದ್ಧವಾಗಲೆಂದು ಹರ ಸಿದ. ಮಕ್ಕಳಿಬ್ಬರು ನೀರಲ್ಲಿ ಮಿಂದರು. ಅವರ ದಣಿವು ಮಾಯವಾದಾಗ ವಾಪಾಸು ಹೊರಡಲು ಅಣಿಯಾದಾಗ ಗಂಧರ್ವ ಅವರನ್ನು ಸುಂದರ ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿ ಕಳುಹಿಸಿದ. ಮಕ್ಕಳಿಬ್ಬರು ಹರುಷದಿಂದ ಮನೆ ತಲುಪಿ ಎಲ್ಲ ಕಥೆ ತಂದೆ ತಾಯಿಗೆ ಹೇಳಿ, ಮತ್ತೆ ಗಿಡ ನೆಡಲು ತೆರಳಿದರು.

ರೇಖಾ ಭಟ್, ಹೊನ್ನಗದ್ದೆ
Chennagide. Sundara kathana
LikeLiked by 1 person