ಸುರಿಯುತ್ತಿರುವ ಮಳೆಯಲಿ ಕಾಗದಿಂದ ಮಾಡಿ ದ ದೋಣಿಯನ್ನು ತೇಲಿ ಬಿಟ್ಟು ಸಂಭ್ರಮಿಸಿದ ಕ್ಷಣಗಳನ್ನು ನೆನೆದರೆ ಬಾಲ್ಯ ಮತ್ತೆ ಬರಬೇಕಿತ್ತು ಅನ್ನಿಸದೆ ಇರದು. ಕೆಲಸದ ಒತ್ತಡದಲ್ಲಿ ಸರಿ ಯಾಗಿ ಊಟವನ್ನುಮಾಡದೆ ಗಡಬಡಿಸಿ ಓಡುವ ದುಡಿಮೆಯ ನೆನೆದಾಗೊಮ್ಮೆ ಎಷ್ಟು ಬೇಗ ದೊಡ್ಡ ವರಾದಿವಿ?ಎಂಬ ಚಿಂತೆ.ನಮ್ಮಕಂಕುಳಲ್ಲಿ ಅಪ್ಪಾ, ಅಮ್ಮಾ ಎಂದು ಕರೆಗೆ ಪುನಃ ಬಾಲ್ಯ ಮರುಕಳಿಸಿ ದಂತೆ. ಮಕ್ಕಳ ತುಂಟಾಟದನಗುವಿನಲ್ಲಿ ನಮ್ಮೆಲ್ಲ ಲ್ನೋವುಗಳು ಮರೆತು ಅವರಾಡಿಸಿದಂತೆ ನಾವು ಬಾಗುವುದು ಏನೋ ಮನಸ್ಸಿಗೆ ಹಿತಾನುಭವ.

ಹಲೋ ನೀವು ಸ್ನೇಹಾನ “parents” ಎಂಬ ಪೋನ್ ಕರೆಗೆ ದೌಡಾಯಿಸಿ ಹೌದರಿ,ಏನಾಯಿತು ನಮ್ಮ ಮಗಳಿಗೆ? ಎಂದು ಗಾಬರಿಯಿಂದ ಕೇಳಿದೆ. ಮಕ್ಕಳ ಶಾಲೆಯಿಂದ ಕರೆ ಬಂದರೆ ಭಯ ತಾನೆ, ನನ್ನ ಆತಂಕ ಗಮನಿಸಿ ನೀವು ಗಾಬರಿಯಾಗುವು ದು ಬೇಡ.ನಿಮ್ಮ ಮಗಳಿಂದ ನಾವು ಗಾಬರಿಯಾ ಗಿದ್ದೆವೆ.ಶಾಲೆಗೆ ಈಗ ಬರಲು ಸಾಧ್ಯವೇ? ಏನಾತ ಪ್ಪಾ? ಇವಳೇನು ಮಾಡಿದಳೋ ಎಂಬ ದುಗುಡ ಹೊತ್ತು ಶಾಲೆಗೆ ಹೋದೆ. ಅಲ್ಲಿ ನನ್ನ ಬರುವಿಕೆಗೆ ಕಾದಂತಿತ್ತು. ಎಲ್ಲಿ ನನ್ನ ಮಗಳು?ಕೇಳಿದೆ. ನೋಡಿ ಮೇಡಂ ನಿಮ್ಮ ಮಗಳು ಸೃಷ್ಟಿರುವ ಅವಾಂತರ, ಎಲ್ಲ ಮಕ್ಕಳನ್ನು ಹೆದರಿಸಿ ಹೊರಹಾಕಿ ತಾನೊ ಬ್ಬಳೆ ಕ್ಲಾಸ್ ನಲ್ಲಿ ಕುಳಿತಿದ್ದಾಳೆ. ನನಗೆ ಆಶ್ಚರ್ಯ! ಅದು ಹೇಗೆ ಸಾಧ್ಯ? ಆ ಪುಟ್ಟ ಮಗು ಇಷ್ಟೊಂದು ರಂಪ ಮಾಡಲು ಸಾಧ್ಯವಿಲ್ಲ.

ಆದರೂ ಕುತೂಹಲ ತಾಳದೆ ಗಾಬರಿಯಿಂದ ಕ್ಲಾಸ್ ಹೊರಗೆ ನಿಂತ ಪುಟ್ಟ ಪುಟ್ಟ ಮಕ್ಕಳನ್ನು ನೋಡುತ್ತ ತರಗತಿ ಪ್ರವೇಶಿಸಿದೆ. ನನ್ನ ನೋಡಿದ ತಕ್ಷಣ ಮಗಳು ಅಮ್ಮಾ ಎಂದು ಓಡಿಬಂದು ಅಪ್ಪಿ ಕೊಂಡ ಮಗಳ ಬೆನ್ನ ಸವರುತ್ತ,ಕಣ್ಣೀರ ಒರೆಸುತ್ತ ಯಾಕೋ ಮಗಾ ಹೀಗೇಕೆ ಮಾಡಿದಿ? ಎಂದಾಗ, ಅಮ್ಮಾ, ನಾನು ದಿನಾ ಕುಂದ್ರುವ ಜಾಗದಾಗ ಬೇರೆಯವರು ಕುಂತಿದ್ರು. ನನ್ನ ಜಾಗಾ ಬಿಡು ಅಂದೆ. ಅದಕ ಅವರು ನನ್ನ ಚೇರನ ಎತ್ತಿ ಬಿಸಾ ಕಿದ್ರು. ನನ್ನ ದೂಡಿದ್ರು ಎಲ್ಲರೂ ನನ್ನ ನೋಡಿ ನಗತಿದ್ರು. ನನಗ ಸಿಟ್ಟ ಬಂತು ಅದಕ; ಅದ ಚೇರ ಎತ್ತಿ ಗುರಾಯಿಸಿದೆ, ಅಷ್ಟ ಎಲ್ಲರೂ ಹೊರಗ ಓಡಿದ್ರು.

ನನ್ನ ಜಾಗದಾಗ ಕುಂತಿನಿ. ಮಿಸ್ ಬಂದು ನನಗ ಬೈದರು ನಾನು ಜಾಗಾ ಬಿಟ್ಟು ಏಳಲಿಲ್ಲ.ಪಟಪಟ ಎಂದು ಮುಗ್ದ ಭಾಷೆಯಲಿ ನುಡಿವ ಮಗಳ ಕಂಡು ಅಬ್ಬಾ! ಮಗಳು ಇಷ್ಟು ಖಡಕ್ ಅದಾಳ ಅನ್ನಿಸಿತು. ಹೇಳುತ್ತ ಅಳುವ ಅವಳ ಕಣ್ಣೀರ ಒರೆಸುತ್ತ ಸಮಾಧಾನಪಡಿಸಿದೆ. ಮಕ್ಕಳಿಗೆ ಸರಿ ತಪ್ಪುಗಳ ಮನವರಿಕೆ ಮಾಡಿ ಪುನಃ ಶೇಕ್ ಹ್ಯಾಂಡ್ಸ ಕೊಡಿಸಿ ಫ್ರೆಂಡ್ಸ್ ಆಗಿರುವಂತೆ ಮನ ವೊಲಿಸಿ ಹೊರ ಬಂದೆ. ಮೇಲ್ನೋಟಕ್ಕೆ ವಿಚಿತ್ರವೆ ನಿಸಿದರೂ, ಮಗುವಿನ ಮನಸ್ಸು ಎಲ್ಲವನ್ನು ಗ್ರಹಿಸುತ್ತದೆ ಎಂಬುದನ್ನು ಮನವರಿಕೆ ಮಾಡಿಕೊ ಳ್ಳುವುದು ಅನಿವಾರ್ಯ.

ಸಕಾರಾತ್ಮಕ ಚಟುವಟಿಕೆಗಳನ್ನು ಮಗುವಿನ ಮನದಲ್ಲಿ ಬಿತ್ತುವವರು ನಾವುಗಳು ಮನ ಬಂದಂತೆ ಬೆಳೆಯಲು ಬಿಡದೆ ಸರಿಯಾದ ಸಂಸ್ಕಾರಯುತ ಚೌಕಟ್ಟನ್ನು ನೀಡಿ ಸಂಸ್ಕೃತಿಗಳ ಗೌರವಿಸುವ, ಶಿಷ್ಟಾಚಾರ, ಕಲಿಸುವುದು ಪ್ರತಿ ಮನೆಯಿಂದ ನಡೆದಾಗ ಮಾತ್ರ ಸಮಾಜದ ಆತಂಕ ದೂರಾಗಲು ಸಾಧ್ಯ.
ಅನ್ಯಾಯದ ವಿರುದ್ಧ ಸಿಡಿದೇಳುವ ಹಾಗೂ ಅವಮಾನ, ಅಪಮಾನಗಳಿಗೆ ತಲೆಬಾಗುವುದರ ಬದಲು ಅದನು ಎದುರಿಸುವ ಗುಣ ಚಿಗುರೊಡೆ ಯುತ್ತಿರುವುದಕ್ಕೆ ಮೆಚ್ಚುವಂತಹ ಸಂಗತಿ. ಪ್ರತಿ ಮಗುವಿನಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳು; ಒಂದೇ ನಾಣ್ಯದ ಎರಡು ಮುಖಗಳಿ ದ್ದಂತೆ ಬೆರೆತಿರುತ್ತವೆ. ಎಷ್ಟೋ ಮಕ್ಕಳು ಹೇಳಿದ ಪ್ರತಿಮಾತಿಗೂ ನಕಾರಾತ್ಮಕ ಉತ್ತರ ನೀಡುತ್ತಾರೆ. ಕೆಲವು ಮಕ್ಕಳು ಮಾತ್ರ ಶಿರಸಾವಹಿಸಿಕೊಂಡು ಶ್ರದ್ಧೆಯಿಂದ ಮಾಡುತ್ತಾರೆ. ನಮಗಾಗ ಮಾತು ಕೇಳುವ ಮಕ್ಕಳ ಬಗ್ಗೆ ಕರುಣೆ, ಸಹಾನುಭೂತಿ, ಪ್ರೇಮ ಉಕ್ಕುತ್ತದೆ. ಆದರೆ ಮಾತು ಕೇಳದ ಮಕ್ಕಳ ಬಗ್ಗೆ ಅಸಹನೆ,ಅಸಮಾಧಾನದ ಜೊತೆಗೆ, ದ್ವಂದ್ವಗಳು ಉಂಟಾಗಿ ಆ ಮಗುವಿನ ಮನಃ ಪರಿ ವರ್ತನೆ ಹೇಗೆ ಮಾಡಬೇಕೆನ್ನುವ ಗೋಜಿಗೆ ಹೋಗದೆ ಅವರಷ್ಟಕ್ಕೆ ಅವರನ್ನು ಬಿಟ್ಟಿದ್ದೆ ಆದರೆ ಮುಂದೊಂದು ದಿನ ಆ ಮಗು ಸಮಾಜಘಾತುಕ ನಾಗಲು ಪ್ರೇರಣೆ ನೀಡಿದಂತೆ.
ಸರ್ವಜ್ಞನ ವಚನದಂತೆ:
ಅಂತರವನರಿವಲಿ | ಎಂತಾದರಿರಲಕ್ಕು | ದಂತಿಸೂಕರನು ಸರಿಯೆಂಬ ಠಾವಿನಲಿ ಎಂದಿರುವುದಕ್ಕು ಸರ್ವಜ್ಞ ||

ಒಬ್ಬ ವ್ಯಕ್ತಿಯನ್ನು ಸಜ್ಜನ-ದುರ್ಜನ,ಸತ್ಯವಂತ- ಅಸತ್ಯವಂತ, ಹೇಡಿ-ವೀರ ಈ ಎರಡರಲ್ಲಿರುವ ಅಂತರವನ್ನು ತಿಳಿದವನ ಹತ್ತಿರ ಇರಬಹುದು ಆದರೆ ದಂತಿಯೂ,(ಆನೆ) ಸೂಕರ (ಹಂದಿಯೂ) ಎರಡೂ ಒಂದೇ ಎನ್ನುವವನ (ಠಾವು) ಹತ್ತಿರ ಹೇಗೆ ಇರಲು ಸಾಧ್ಯ? ಅಂತಹ ಸ್ಥಳವನ್ನು ನೀನು ಮೊದಲು ಬಿಡು, ನಿನಗೆ ಗೌರವ ಸಿಗುವ ಸ್ಥಳದಲ್ಲಿ ನೀನಿರು. ಮಕ್ಕಳಿಗೆ ಗೌರವ ಸಂಪಾದನೆ ಹೇಗೆ ಮಾಡಬೇಕೆಂಬುದನ್ನು ಕಲಿಸುವುದು ಬಹು ಮುಖ್ಯ. ಸತ್ಯ ಯಾವತ್ತಿದ್ದರೂ ಸತ್ಯವೇ, ಅದನ್ನು ಆದಷ್ಟೂ ಸ್ವೀಕರಿಸಬೇಕು.
ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ
ತುಂಬಾ ಚೆನ್ನಾಗಿದೆ ಲೇಖನ. ಇದೇ ರೀತಿ ಲೇಖನ ಗಳು ಇನ್ನೂ ಹೆಚ್ಚು ಹೆಚ್ಚು ಮೂಡಿಬರಲಿ 🌹🌹🌹🌹👌🙏
LikeLiked by 1 person
💥Upauktha lekhana idarindha makkalige tumbha sukthvagide.super👌👌👌👌👌👌👌👌👌👌👌👌👌👌👌👌👌👌👌💥
LikeLike
Marmikavagide hagu tumbane chennagide
LikeLiked by 1 person
Makkalige sukthavada lekhana❤ super 👌👌👌👌👌👌👌👌👌👌👌👌
LikeLiked by 1 person
ಸಂಸ್ಕಾರ ಕಲಿಸಿದ್ದನ್ನು ಮಕ್ಕಳು ಪಾಲಿಸಿದರೆ ತಂದೆ ತಾಯಿ ಖುಷಿ ಪಟ್ಟಷ್ಟು ಇನ್ನಾರೂ ಪಡೋದಿಲ್ಲ. ಸೂಕ್ತವಾದ ಲೇಖನ.ತುಂಬಾ ಚೆನ್ನಾಗಿದೆ.
ನಿನ್ನ ಲೇಖನಿಯಿಂದ ಇದೇ ರೀತಿ ಬರವಣಿಗೆ ಮೂಡಿ ಬರಲಿ.
LikeLiked by 1 person