ಹೇ ಮನುಜ ಎಷ್ಟು ಕ್ರೂರಿ ನೀನು
ನೀನು ಸ್ವಾರ್ಥಿ ಅಹಂಕಾರಿ ರಾಕ್ಷಸ
ರಾಕ್ಷಸ ಪ್ರವೃತ್ತಿ ಬಿಡು ಮನುಜ
ಮನುಜ ಮಾನವೀಯತೆಯಲಿ ವರ್ತಿಸು
ವರ್ತಿಸು ದೇವನಂತೆ ವಿನಯತೆಯಲಿ ಬದುಕು
ಬದುಕು ಮೂರೇ ದಿನದ ಸಂತೆ
ಸಂತೆ ಮುಗಿಸಿ ಹೋಗಲೇ ಬೇಕಿದೆ
ಬೇಕಿದೆ ಮನಕೆ ಶಾಂತಿ ನೆಮ್ಮದಿ
ನೆಮ್ಮದಿ ಹುಡುಕಿದರೆ ಸಿಗದು ಬಾಳಲಿ
ಬಾಳಲಿ ಸಹನೆ ಸೌಹಾರ್ದತೆ ಇದ್ದರೆ ಸಾಕು
ಸಾಕು ನಾ ನೀ ಎಂಬ ಬಿಗುಮಾಣ
ಬಿಗುಮಾಣದಲಿರೆ ಜೀವನ ನಿರರ್ಥಕ
ನಿರರ್ಥಕ ಮಾನವೀಯತೆ ಮರೆತ  ಜೀವನ
ಜೀವನ ಪ್ರಕೃತಿ ಕೊಟ್ಟ ಭಿಕ್ಷೆ
ಭಿಕ್ಷೆಯ ಮೇಲೆ ಅಧಿಕಾರ ಬೇಡ
ಬೇಡ ದುರಾಸೆಯ ದುರುಳತನ
ದುರುಳತನದಿಂದ ನಾಶವೀಲೋಕ ಅರಿತುಕೊ
ಅರಿತುಕೊಂಡು ಬಾಳು ಹೇ ಮನುಜ

ಶ್ರೀಮತಿ.ಜ್ಯೋತಿ.ಸಿಕೋಟಗಿ       ಶಿಕ್ಷಕಿ,ಸ.ಮಾ.ಪ್ರಾ.ಶಾಲೆ ತಲ್ಲೂರ