ಗರಬಡಿದ ಗಮಾರರಿಗೇನು ಗೊತ್ತು
ಚಿಗುರೊಡೆವ ಚಂದದಾ ಗಮ್ಮತ್ತು
ಬೆಳೆಸುವಾ ಎಲ್ಲರೂ ಎಳೆಸಸಿ ನೆಟ್ಟು
ಬಲಿತಾಗ ಹಾಕದಿರು ಕೊಡಲಿಪೆಟ್ಟು
ಜೀವಿಸಲು ಜೀವದುಸಿರು ನಮಗಿತ್ತು
ಪಶು-ಪಕ್ಷಿಗೆ ನೆಲೆಯಾಗಿ ನೆರಳನಿತ್ತು
ಬಿಸಿಲನುಂಡು,ತಂಪು ತಂಗಾಳಿಯಿತ್ತು
ಇರುವ ಸಸ್ಯಸಂಕುಲವನು ಕಾಪಿಟ್ಟು
ಹಿತವಾಗಿರೋಣ ಇಲ್ಲಸಲ್ಲದ್ದು ಬಿಟ್ಟು
ಅಭಿವೃದ್ಧಿ ಎಲ್ಲಿದೆ ಪರಿಸರವೃದ್ಧಿ ಬಿಟ್ಟು
ಇರಬೇಕಾದೀತು ಸಿಲಿಂಡರ್ ಬೆನ್ನಿಗಿಟ್ಟು….

ಶಿವಾನಂದ ನಾಗೂರ,
ಶಿಕ್ಷಕರು,ಧಾರವಾಡ.