ಉಳಿವ ಕಾಳಗದ ಛಲದಲಿ ನುಡಿ ಮನವೆ
ಅಳಿವುಳಿವಿನ ಸಾಲೋಕ್ಯದಲಿ ನುಡಿ ಮನವೆ

ಸರಪಳಿಯ ಸಂಸಾರ ಸಾದರಿಸಿ ಬೆಳೆಯುವಲಿ
ಪರಸ್ಪರರ ಮಾನಾಭಿಮಾನದಲಿ ನುಡಿ ಮನವೆ

ಬಳಸುವ ಬೆಳೆಸುವ ತನುಮನದ ನಡೆಯಲಿ
ಬಳಸಿಯು ಉಳಿಸುವ ಧ್ಯಾನದಲಿ ನುಡಿ ಮನವೆ

ಸಗ್ಗದ ಬಾಳಿದು ಮೇಲು ಕೀಳು ತೊಡೆಯುತಲಿ
ಎಲ್ಲರೊಳಗೊಂದಾ ಭರದಲಿ ನುಡಿ ಮನವೆ

ಶಾರು ತಾನಾದ ಹಸಿರುಳಿದ ಕಾನನ ಬದುಕಿನಲಿ
ಉಸಿರು ತಾನಾಗಿಹ ಪ್ರಾಣದಲಿ ನುಡಿ ಮನವೆ…

ಶಾಲಿನಿ ರುದ್ರಮುನಿ, ಹುಬ್ಬಳ್ಳಿ