ವಿಮರ್ಶಕ ಡಾ.ರಾಮಚಂದ್ರಶುಕ್ಲ ಅವರ ಪ್ರಕಾರ ಆದಿಕಾಲ ಅಂದರೆ (ವೀರಗಾಥಾ ಮತ್ತು ಶೃಂಗಾರ ಕಾಲ) ಈ ಕಾಲದಲ್ಲಿ ವೀರ ರಸ, ಶೃಂಗಾರ ರಸ ಮತ್ತು ಭಕ್ತಿ ಸಾಹಿತ್ಯ ಕೃತಿಗಳು ರಚಿತಗೊಂಡರೂ ಕೂಡ ವೀರರಸವುಳ್ಳ ಕಾವ್ಯ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಚಿತಗೊಂಡಿದ್ದರಿಂದ ಈಕಾಲವನ್ನ ವೀರಗಾಥಾಕಾಲ ಎಂದು ಕರೆಯಲಾಯಿತು.

ಭಕ್ತಿಕಾಲವನ್ನು ಎರಡು ಭಾಗಗಳಲ್ಲಿ ಪರಿಗಣಿಸ ಲಾಗಿದೆ.

1)ನಿರ್ಗುಣವಾದಿ 2) ಸಗುಣವಾದಿ.

ನಿರ್ಗುಣವಾದಿ ಪಂಗಡದಲ್ಲಿ ಮತ್ತೆ ಎರಡು ವಿಭಾಗಗಳು.

1) ಜ್ಞಾನಾಶ್ರಯಿ ಶಾಖಾ (ಕಬೀರ ದಾಸ)
2) ಪ್ರೇಮಾಶ್ರಯಿ ಶಾಖಾ (ಸೂಫಿ ಕವಿಗಳು)

ಸಗುಣವಾದದಲ್ಲಿ ಎರಡು ಪ್ರಕಾರಗಳು.

1) ರಾಮೋಪಾಸಕ ( ತುಲಸಿದಾಸ )
2) ಕೃಷ್ಣೋಪಾಸಕ (ಸೂರದಾಸ)

ಆದಿಕಾಲ ಸಾಹಿತ್ಯವನ್ನು ಅಪಭ್ರಂಶ ಕಾಲ ಮತ್ತು ವೀರಗಾಥಾಕಾಲ ಸಾಹಿತ್ಯ ಅಂದರೆ ಮಹಾರಾಜಾ ಭೋಜರ ಸಮಯ ಎನ್ನಬಹುದು. ಇದೆ ಸಮ ಯದಲ್ಲಿ ಸಿದ್ಧ ಸಾಹಿತ್ಯ ,ಜೈನ ಸಾಹಿತ್ಯ ರಚನೆಗಳೆ ನ್ನದೆ ಧಾರ್ಮಿಕ ರಚನೆಗಳೆಂದು ಪರಿಗಣಿಸಲಾಯಿ ತು. ಸಿದ್ಧ ಸಾಹಿತ್ಯದ ವಾಮಾಚಾರಿಗಳು ಜನರನ್ನು ಆಕರ್ಷಿಸಲು ಜನ ಭಾಷೆಯಲ್ಲಿ ಕವಿತೆ ರಚಿಸುತ್ತಾ ರೆಂದು ಜನರು ಅವರನ್ನು ನಂಬಲಿಲ್ಲ. ಈಶ್ವರನ್ನು ನಿರ್ಗುಣ ಮತ್ತು ನಿರಾಕಾರ ಎಂದು ಈ ಪಂಗಡದ ವರು ಭಾವಿಸಿದ್ಧರು. ವೇದ, ಪೂಜಾ -ಪಾಠಗಳ ಖಂಡನೆ ಮಾಡಿದರು. ಇವರಲ್ಲಿ ಸರಹಪಾ, ಶವರಣ, ಲುಯಿಪಾ ಮುಂತಾದವರು ಪ್ರಮುಖ ರು. ಸಿದ್ಧ ಸಾಹಿತ್ಯ ಹಿಂದಿ ಸಾಹಿತ್ಯದ ಆದಿಧಾರ. ಸಿದ್ಧ ಸಾಹಿತ್ಯದ ಕೆಲವು ವಿಚಾರಗಳು ಸಂತಕವಿ ಕಬೀರದಾಸರನ್ನು ಪ್ರಭಾವಗೊಳಿಸಿತು.

ನಾಥ ಸಾಹಿತ್ಯ;

ಹತ್ತನೇಯ ಶತಮಾನದಲ್ಲಿ ವಜ್ರಯಾನಿ ಸಿದ್ಧರ ವಾಮಾಚಾರವನ್ನು ವಿರೋಧಿಸುವ ಹೊಸ ಸಂಪ್ರ ದಾಯ ನೇಪಾಲದ ತರಯಿಯಲ್ಲಿ ಹುಟ್ಟಿಕೊಂ ಡಿತು. ಅದೇ ನಾಥ ಸಂಪ್ರದಾಯ. ಇವರ ಆರಾಧ್ಯ. ದೇವರು ಶಿವ. ಶಿವನನ್ನೆ ಆದಿನಾಥ ಎಂದು ನಂಬಿದರು. ಮತ್ಸೇಂದ್ರನಾಥ ಇವರ ಪ್ರವರ್ತಕ. ಜಲಂಧರ,ಗೋರಖನಾಥರು ಇವರೆಲ್ಲ ನಾಥ ಸಾಹಿತ್ಯದ ಪ್ರಮುಖ ಸಾಧುಗಳು. ಇವರು ರುದ್ರಾಲಿಯನ್ನು ಬಾರಿಸುತ್ತಿದ್ದರು. ಜೀವಾತ್ಮ ಮತ್ತು ಪರಮಾತ್ಮ ಈ ಎರಡರ ಅದ್ವೈತದಲ್ಲಿ ನಂಬಿಕೆ ಇವರಿಗಿತ್ತು. ಹಠಯೋಗದ ಮೇಲೆ ಇವರಿಗೆ ಅಪಾರವಾದ ಹಿಡಿತ.ಗೋರಖನಾಥರು 40 ಹಿಂದಿ ಪುಸ್ತಕಗಳನ್ನು ರಚಿಸಿದ್ದಾರೆ. ಇವರ ‘ಸಧುಕ್ಕಡಿ ಭಾಷೆ’ ಯನ್ನೇ ಕಬೀರದಾಸರು ಅನುಕರಣೆ ಮಾಡಿದರು.

ಜೈನ ಸಾಹಿತ್ಯ

ಜೈನಾಚಾರ್ಯರು ತಮ್ಮ ಧರ್ಮ ಪ್ರಚಾರಕ್ಕಾಗಿ ಅಪಭ್ರಂಶ ಭಾಷೆಯಲ್ಲಿ ಅನೇಕ ಗ್ರಂಥ ರಚಿಸಿ ದರು.ಜೈನಾಚಾರ್ಯ ಹೇಮಚಂದ್ರರು ‘ಶಬ್ದಾನು ಶಾಸನ’ ಎನ್ನುವ ವ್ಯಾಕರಣ ಗ್ರಂಥ ರಚಿಸಿದರು. ಇದರಲ್ಲಿ ಹಿಂದಿ ಶಬ್ದಗಳು ಕಂಡುಬಂದಿವೆ ಎಂದು ಭಾಷಾತಜ್ಞರು ತಿಳಿಸಿದ್ದಾರೆ. ಸ್ವಯಂಭುದೇವರು ಬರೆದ ನಾಲ್ಕು ಕೃತಿಗಳು ದೊರೆತಿವೆ. ಮಹಾಕವಿ ಪುಷ್ಯದಂತ, ಧನಪಾಲಮುನಿ, ಚಂದ್ರಮುನಿ ಮುಂತಾದವರು. ಕವಿಸಾರಂಗಧರ ಹಮ್ಮೀರ ರಾಸೋ ಎನ್ನುವ ವೀರ ರಸಪೂರ್ಣ ಕಾವ್ಯ ರಚಿಸಿದರು.

ವೀರಗಾಥಾಕಾಲ-

ಈ ಕಾಲದಲ್ಲಿ ಅಪಭ್ರಂಶ ಹಾಗೂ ದೇಶ ಭಾಷೆ ಎರಡು ಪ್ರಕಾರದ ಕೃತಿಗಳು ದೊರೆತಿವೆ. ದೇಶ ಭಾಷೆಯಲ್ಲಿ ಖುಮಾನ ರಾಸೊ, ಬೀಸಲ ದೇವ ರಾಸೊ, ಪೃಥ್ವಿರಾಜ ರಾಸೊ, ಚಂದ್ರ ಪ್ರಕಾಶ, ಜಯಮಯಂಕ, ಚಸ ಚಂದ್ರಿಕಾ, ಪರಮಾಲ ರಾಸೊ (ಆಲ್ಹಾ ಮೂಲರೂಪ), ಖುಸ್ರೊರನ ಪಹೇಲಿ, ಹಮ್ಮೀರರಾಸೊ,ವಿಜಯಪಾಲ ರಾಸೊ ವಿದ್ಯಾಪತಿಯ ಕೀರ್ತಿ ಲತಾ, ಕೀರ್ತಿ ಪತಾಕಾ ಪದಾವಲಿ.

ಸಾಹಿತ್ಯದ ಮೇಲೆ ರಾಜನೀತಿಯ ಪ್ರಭಾವ ಆಗಾಧವಾಗಿ ಬೀರಿತು. ಭಾರತೀಯ ರಾಜರುಗಳ ಮೇಲೆ ವಿದೇಶಿ ಮುಸಲ್ಮಾನರು ಆಕ್ರಮಣ ಮಾಡತೋಡಗಿದರು. ದಿಲ್ಲಿ ಕನ್ನೋಜ,ಅಜಮೇರ ಮುಂತಾದ ರಾಜ್ಯಗಳು ಉತ್ತಮ ಪ್ರಗತಿಯಲ್ಲಿದ್ದ ವು. ಈ ಪ್ರಾಂತಗಳ ಭಾಷೆ ಪುಸ್ತಕೀಯ ಭಾಷೆ ಯಾಗಿತ್ತು ಮತ್ತು ಅದೇ ಭಾಷೆ ‘ಕಾವ್ಯ ಭಾಷೆ’ ಯಾಯಿತು. ಏಳನೇಯ ಶತಮಾನದ ಅಂತಿಮ ಸಾಮ್ರಾಟ ಹರ್ಷವರ್ಧನರ ಅಂತ್ಯದ ನಂತರ ರಾಜ್ಯಗಳಲ್ಲಿ ಅರಾಜಕತೆ ಉಂಟಾಯಿತು. ಸಣ್ಣ -ಪುಟ್ಟ ರಾಜರುಗಳು ಆಗಾಗ ತಮ್ಮ-ತಮ್ಮಲ್ಲೆ ಯುದ್ಧ ಮಾಡಿಕೊಳ್ಳುತ್ತಿದ್ದರು. ರಾಜವಾಡೆಗಳು ಅಸುರಕ್ಷಿತವಾದವು. ಈ ಸಂದರ್ಭದಲ್ಲಿ ಕವಿಗಳು ಸುಮ್ಮನೆ ಕೂಡದೆ ಅವರನ್ನು ಎಚ್ಚರಿಸಲು ಕವಿ ಗಳು ವೀರರಸ ಉಂಟು ಮಾಡುವ ಕಾವ್ಯ ರಚಿಸ ತೊಡಗಿದರು. ಈ ಕಾಲದ ಮತ್ತೊಂದು ವಿಶೇಷತೆ ವೀರ ರಸದೊಂದಿಗೆ ಶೃಂಗಾರ ರಸ ಕವಿತೆಗಳು ಉದ್ಭವವಾದದ್ದು. ಅದ್ಭುತ,ವೀರ, ಕರುಣೆ,ರೌದ್ರ, ವಿಭಿತ್ಸ, ರಸಗಳು ಕಾವ್ಯದಲ್ಲಿ ಕಂಡುಬರುವುವು.
ಕೆಲವು ಸಮಯಗಳಲ್ಲಿ ಕವಿಗಳು ಒಂದು ಕೈ ಯಲ್ಲಿ ಲೇಖನಿ, ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದು ಯುದ್ಧ ಮಾಡಿ ತಮ್ಮ ಸಮ್ರಾಟನನ್ನು ರಕ್ಷಿಸಿ ತಮ್ಮ ಸ್ವಾಮಿನಿಷ್ಠೆ ತೋರಿಸಿದರು.

ಪೃಥ್ವಿರಾಜ ರಾಸೊ

ಚಂದ ಬರದಾಯಿ ಬರೆದ ಪೃಥ್ವಿರಾಜ ರಾಸೊ ಈ ಕಾಲದ ಸರ್ವಶ್ರೇಷ್ಠ ಗ್ರಂಥ.ಚಂದ ಬರದಾಯಿ ಮತ್ತು ಪೃಥ್ವಿರಾಜ ಇವರಿಬ್ಬರ ಜನನ-ಮರಣ ಒಟ್ಟಿಗೆ ಆಯಿತೆಂದು ಹೇಳಲಾಗುತ್ತದೆ.ಗಜನೀಯ ಬಾದಶಾಹ ಶಹಾಬುದ್ದೀನ ಗೋರಿ ಪೃಥ್ವಿರಾಜ ನನ್ನು ಬಂಧಿಸಿ ಘಜನಿಗೆ ಕರೆದುಕೊಂಡು ಹೋದನು. ಇದನ್ನು ತಿಳಿದ ಚಂದಬರದಾಯಿ ಕೂಡ ಅಲ್ಲಿಗೆ ಹೋದನು. ಶಹಾಬಿದ್ದೀನ್ ಪೃಥ್ವಿ ರಾಜನ ಕಣ್ಣುಕಿತ್ತು ಹಿಂಸೆ ಚಿತ್ರಹಿಂಸೆ ಮಾಡತೊ ಡಗಿದನು. ಅಲ್ಲಿಗೆ ಹೋದ ಚಂದ ಬರದಾಯೀ ಕವಿತೆ ಬರೆದು ಅದರ ಮೂಲಕ ಪೃಥ್ವಿರಾಜನನ್ನು ಎಚ್ಚರಿಸಿದಾಗ ಪೃಥ್ವಿರಾಜನು ಶಬ್ದಭೇದಿ ಬಾಣ ಬಿಟ್ಟು ಗೋರಿಯನ್ನು ಹೊಡೆದು ಹಾಕಿದನು.

ನಂತರ ಇಬ್ಬರು ಪರಸ್ಪರ ವಧೆಮಾಡಿಕೊಂಡು ಒಟ್ಟಿಗೆ ಸಾವನ್ನಪ್ಪಿದರೆಂದು ತಿಳಿದಾಗ ಮನ ಮಿಡಿ ಯುವುದು.ಘಜನಿಗೆ ಹೋಗುವ ಮೊದಲು ಚಂದ ಬರದಾಯಿಯ ಮಗ ಜಲ್ಹಣನು ತನ್ನ ತಂದೆ ಅರ್ಧ ಬರೆದ ಪೃಥ್ವಿರಾಜ ರಾಸೊ ಪುಸ್ತಕವನ್ನು ಪೂರ್ಣಮಾಡಿದನೆಂದು ಹೇಳಲಾಗಿದೆ. ಪೃಥ್ವಿರಾಜ ರಾಸೊ ಹಿಂದಿಯ ಮೊದಲ ಮಹಾ ಕಾವ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಂದ ಬರದಾಯಿ

ಇಲ್ಲಿ ನಿಮಗಾಗಿ ನಾನೊಂದು ಸ್ವಾರಸ್ಯಕರ ವಿಷಯ ಹೇಳುವೆ, ಅದುವೆ ರಾಣಿ ಪದ್ಮಾವತಿಯ ಕಥೆ-ವ್ಯಥೆ.

ಪದ್ಮಾವತ್ (ಪದ್ಮಾವತಿ)

ಮಲ್ಲಿಕ ಮುಹ್ಮದ ಜಾಯಸಿ ಆ ಕಾಲದ  ಮಹಾ ಕವಿ, ಇವನು  ಪದ್ಮಾವತ್ ಎನ್ನುವ ಹೆಸರಿನ ರೋಮಾಂಚಕಾರಿ ಪ್ರೇಮ ಮಹಾಕಾವ್ಯವನ್ನು ಬರೆದಿದ್ದು ಆಡು ಭಾಷೆ ಅವಧಿಯಲ್ಲಿ. ಜಾಯಸಿ ಮಹಾಕಾವ್ಯವನ್ನು  ಚೌಪಾಯಿ ಮತ್ತು ದೋಹಾ ಶೈಲಿಯಲ್ಲಿ ಬರೆದಿರುವನು. ಸುಮಾರು ಇದರಲ್ಲಿ 653ದೋಹಾಗಳಿವೆ.ಬಪ್ಪಾ ರಾವಲ್ ರ ವಂಶದ ಕೊನೆಯ ಶಾಸಕ ರಾವಲ್ ರತ್ನಸಿಂಹ. ಇವರು ರಾವಲ್ ಸಮರಸಿಂಹರ ಪುತ್ರ.13 ನೇ ಶತಮಾನ ದಲ್ಲಿ ಚಿತ್ತೋಡದಲ್ಲಿ ಆಳಿದರೆಂದು ಹೇಳಲಾಗಿದೆ. ಹಿಂದಿಯ ಈ ಮಹಾಕಾವ್ಯದಲ್ಲಿ ರಾಜ ರತನ ಸೇನರೆಂದು ಇವರು ಪ್ರಖ್ಯಾತ. ಇದೇ ಸಮಯ ದಲ್ಲಿ ಅಲ್ಲಾವುದ್ಧೀನ್ ಖಿಲ್ಜಿ ಚಿತ್ತೋಡ ರಾಜ್ಯದ ಮೇಲೆ ಆಕ್ರಮಣ ಮಾಡಿದ.ಅಪ್ರತಿಮರೂಪವತಿ  ರಾಣಿ ಪದ್ಮಾವತಿ ಮತ್ತು ಚಿತ್ತೋಡಿನ ಸಂಪತ್ತು ಅವನ ಕಣ್ಣು ಕುಕ್ಕಿತು.

ಸತತ ಆರು ತಿಂಗಳಗಳ ಕಾಲ ಯುದ್ಧವನ್ನು ಮಾಡಿದರೂ ಪದ್ಮಾವತಿ ಅಲ್ಲಾವುದ್ಧೀನ್ ಗೆ  ದಕ್ಕಲಿಲ್ಲ.ರತನಸೇನರ ಹತ್ಯೆಯ ವಿಷಯ ತಿಳಿದು ರಾಣಿ ತನ್ನ ಅನ್ಯಸಖಿಯರ ಜೊತೆಗೆ ಜೋಹರ (ಸತಿ) ವ್ರತಗೈದು  ಉರಿಯುವ ಅಗ್ನಿಯಲ್ಲಿ ಆತ್ಮಾರ್ಪಣೆ ಮಾಡಿಕೊಂಡಿದ್ದುತುಂಬ ದು:ಖದ ಹಾಗೂ ವೇದನೆಯ ಇತಿಹಾಸ.ಹೀಗೆ ರತನಸೇನರ ಪರಿವಾರ ಸಂಪೂರ್ಣ ನಾಶವಾದದ್ದಲ್ಲದೆ ಈ ಯುದ್ಧದಿಂದಾಗಿ ರಾಜಪೂತರಿಗೆ ಸಾಕಷ್ಟು ನಷ್ಟ, ತೊಂದರೆಯಾಯಿತೆಂದು ಭಾರತದಇತಿಹಾಸದಲ್ಲಿ ಹೇಳಲಾಗಿದೆ.

  ಹೀರಾಮನ್ ಕಥೆ

ರಾಜಸ್ಥಾನದ ಜಾನಪದ ಸಾಹಿತ್ಯದಲ್ಲಿ ಪದ್ಮಾವತಿ ಹಾಗೂ ಅವಳು ಸಾಕಿದ್ದ ಅವಳ ಅತಿ ಮೆಚ್ಚಿನ ಹೀರಾಮನ್ ಎಂಬ ಗಿಳಿಯ ಕಥೆ ಇದೆ. ಇದನ್ನು ಆಧರಿಸಿಯೇ ಮಲಿಕ್ ಮುಹ್ಮದ ಜಾಯಸಿ ಕೂಡ ತನ್ನ ಪದ್ಮಾವತ್ ಕೃತಿಯಲ್ಲಿ ಹೀರಾಮನ್ ಗಿಳಿಯನ್ನು ಉಲ್ಲೇಖಿಸಿದ್ದಾನೆ. ರಾಜಸ್ಥಾನದ ಜಾನಪದ ಸಾಹಿತ್ಯದಲ್ಲಿ ಕಂಡುಬರುವ ರಾಣಿ ಪದ್ಮಾವತಿಯ ಹೀರಾಮನ್ ಗಿಳಿಯ ಕಥೆ ಹೀಗಿದೆ:

ಸಿಂಹಲ ದ್ವೀಪದ ರಾಜಾ  (ಶ್ರೀಲಂಕಾ) ಗಂಧರ್ವ ಸೇನನ ಮಗಳು ರಾಜಕುಮಾರಿ ಪದ್ಮಾವತಿ  ಅದ್ಭುತ ಸೌಂದರ್ಯವತಿ, ಒಂದು ಗೀಳಿಯನ್ನು ಸಾಕಿದ್ದಳು. ಅದನ್ನು ಹೀರಾಮನ್ ಎಂದು ಪ್ರೀತಿ ಯಿಂದ  ಕರೆಯುತ್ತಿದ್ದಳು.ಹೀಗಿರುವಾಗ ಒಂದು ದಿನ ಪದ್ಮಾವತಿ ಇರದ ಸಮಯ, ಬೆಕ್ಕೊಂದು ಹೀರಾಮನ್ (ಗಿಳಿ) ಮೇಲೆರಗಿತು.ಆಗ ಅದರಿಂದ ತಪ್ಪಿಸಿಕೊಳ್ಳಲು ಹೀರಾಮನ್ ಅಲ್ಲಿಂದ ದೂರ ಹಾರಿಹೋಗಬೇಕಾಯಿತು.ಪಯಣದ ದಾರಿಯಲಿ ಬೇಟೆಗಾರನೊಬ್ಬನ ಬಲೆಗೆ ಹೀರಾಮನ್ ಗಿಳಿ ಸಿಕ್ಕಿಬಿತ್ತು.ಮುಂದೆ ಬ್ರಾಹ್ಮಣನೊಬ್ಬ ಹೀರಾಮನ್ ನನ್ನು (ಗಿಳಿಯನ್ನು) ಇಷ್ಟಪಟ್ಟು ಬೇಟೆಗಾರನಿಗೆ ದುಡ್ಡು  ಕೊಟ್ಟು  ಕೊಂಡುಕೊಂಡ.  ಮುಂದೆ ಸ್ವಲ್ಪ ದಿನಗಳ ನಂತರ ಬ್ರಾಹ್ಮಣ ಹೀರಾಮನ್ ನನ್ನು ಚಿತ್ತೋಡ ರಾಜಾ ರತನಸೇನರಿಗೆ ಮಾರಾಟ ಮಾಡಿದ.  ‌ಹೀರಾಮನ್ ರಾಜಾ ರತನ ಸೇನರಿಗೆ ಒಂದುದಿನ ‌ ಸಿಂಹಳ ದ್ವೀಪದ ರಾಜಕುಮಾರಿ ಪದ್ಮಾವತಿಯ  ಅಪ್ರತಿಮ ರೂಪವನ್ನು ವರ್ಣನೆ ಮಾಡಿತು.ಪದ್ಮಾವತಿಯನ್ನು ಪಡೆಯುವಹಂಬಲ ಅತಿಯಾಗಿ ರಾಜಾರತನ ಸೇನರು ಯೋಗಿಯಾಗಿ ವೇಷತೊಟ್ಟು  ಹೋರಟರು. ಹೀರಾಮನ್ ನ ಸಹಾಯದಿಂದ ಏಳು ವನಗಳು ಮತ್ತು ಏಳು ಸಮುದ್ರಗಳನ್ನು ದಾಟಿ ಸಿಂಹಳ ದ್ವೀಪ ಮುಟ್ಟಿ ದರು.ಅಲ್ಲಿ ರತನಸೇನರು ಹೀರಾಮನ್ ಮೂಲಕ ತಮ್ಮ ಪ್ರೇಮ ಕೋರಿಕೆಯನ್ನು ರಾಜಕುಮಾರಿ ಪದ್ಮಾವತಿಗೆ  ಕಳುಹಿಸಿದರು. ರಾಜನನ್ನು ಭೇಟಿ ಯಾಗಲು ಸ್ವತಃ ರಾಜಕುಮಾರಿ ಒಂದು ದೇವಾಲ ಯಕ್ಕೆ ಬಂದಳು. ರಾಜಕುಮಾರಿಯ ಅನುಪಮ ಸೌಂದರ್ಯಕ್ಕೆ ರಾಜಾ ಮೂರ್ಛೆ ಹೋದರು. ಏನುಮಾಡಬೇಕೆಂದು ತೋಚದೆ ರಾಜಕುಮಾರಿ ಚಂದನದಿಂದ ರಾಜನ ಎದೆಯ ಮೇಲೆ  “ತನ್ನನ್ನು ಪಡೆಯಬೇಕಾದರೆ ಏಳುಸುತ್ತಿನ ಕೋಟೆ ಏರಿ ಬರಬೇಕೆಂದು ಬರೆದು ರಾಜನನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು.ರಾಜಾ ರತನಸೇನರು ಎಚ್ಚರವಾದ ಕೂಡಲೆ ಹೀರಾಮನ್ ಸಹಾಯ ದಿಂದ ಏಳು ಸುತ್ತಿನ ಕೋಟೆ ಏರಿ ರಾಜಕುಮಾರಿ ಇರುವ ಕೋಟೆ ತಲುಪಿದರು. ಈ ಸುದ್ದಿಯನ್ನು    ತಿಳಿದ  ಸಿಂಹಳ  ರಾಜಾ ಗಂಧರ್ವಸೇನರು ರತನ ಸೇನರನ್ನು   ಶೂಲಕ್ಕೇರಿಸಲು     ಆದೇಶಿಸಿದಾಗ ಹೀರಾಮನ್ ಮಧ್ಯೆ  ಪ್ರವೇಶಿಸಿ,  ಎಲ್ಲ  ವಿಷಯ ತಿಳಿಸಿ, ರತನಸೇನರನ್ನು ತೊಂದರೆಯಿಂದ ಕಾಪಾ ಡಿತು. 

ರತನ ಸೇನರು  ಚಿತ್ತೋಡದ  ರಾಜಪೂತ ದೊರೆ ಎಂದು ತಿಳಿದ ಸಿಂಹಳದರಾಜಾ ಸಂತಸಗೊಂಡು ತಮ್ಮ ಮಗಳು ರಾಜಕುಮಾರಿಯ ಪದ್ಮಾವತಿಯ ವಿವಾಹವನ್ನು ರತನಸೇನರ ಜೊತೆ ಮಾಡಿದರು.

ರಾಜಾ ರತನಸೇನರಿಗೆ ಈ ಮೋದಲೆ ವಿವಾಹವಾ ಗಿತ್ತು.ಮಹಾರಾಣಿ ನಾಗಮತಿ  12 ವರುಷ ಕಾಲ ಪತಿಯ ವಿರಹದಲ್ಲಿ ಬೆಂದುಹೋಗಿದ್ದರು. ಒಂದು ದಿನ ಒಂದು ಪಕ್ಷಿಯ ಸಹಾಯದಿಂದ ತಮ್ಮ ಅಳಲನ್ನು ಮಹಾರಾಣಿ ನಾಗಮತಿ ಮಹಾರಾಜ ರತನಸೇನರಿಗೆ ತಲುಪಿಸಿದರು. ರತನಸೇನರಿಗೆ ತಮ್ಮ ತಪ್ಪಿನ ಅರಿವಾಗಿ ರಾಣಿ ಪದ್ಮಾವತಿಯನ್ನು ಕರೆದುಕೊಂಡು ಚಿತ್ತೋಡಕ್ಕೆ ಬಂದರು. ಹೀಗೆ ಕೆಲವು ಕಾಲ ಸುಖದಿಂದಿರಲು,  ರಾಜಾ ರತನ ಸೇನರು ಒಂದು ದಿನ  ತಮ್ಮ ಆಸ್ಥಾನದಲ್ಲಿದ್ದ ರಾಘವನ್ ಎಂಬುವನನ್ನು ಸುಳ್ಳು ಹೇಳಿದ್ದಕ್ಕಾಗಿ ರಾಜ್ಯದಿಂದ ಹೋರಹಾಕಿದರು.ದ್ವೇಷದ  ಕಿಚ್ಚನ್ನು ರಾಘವನ್ ಹಚ್ಚಿಯೆ ಬಿಟ್ಟನು. ಅಲ್ಲಾವುದ್ದೀನ್ ಆಸ್ಥಾನ ಸೇರಿ ಅವನ ಸೇವೆ ಮಾಡುತ್ತ ಒಂದು ದಿನ  ಅಲ್ಲಾವುದ್ಧೀನ್ ಗೆ ರಾಣಿ ಪದ್ಮಾವತಿಯ ಸೌಂದರ್ಯದ ವರ್ಣನೆ ಮಾಡಿದನು ರಾಘವ. ಇದನ್ನು ಕೇಳಿದ ಅಲ್ಲಾವುದ್ಧೀನ್ ಖಿಲ್ಜಿ  ಚಿತ್ತೋಡ ದ ಮೇಲೆ ಆಕ್ರಮಣ ಮಾಡಿದನಾದರೂ ರಾಣಿ ಪದ್ಮಾವತಿಯನ್ನಾಗಲಿ ಚಿತ್ತೋಡದ ಎಲ್ಲಾ ಸಂಪ ತ್ತನ್ನಾಗಲಿ ಪಡೆಯಲಾಗಲಿಲ್ಲ.ರಾಜಾ ರತನಸೇನ ಈಯುದ್ಧದಲ್ಲಿ ವೀರಮರಣ ಹೊಂದಿದರು.

ರಾಣಿ ಪದ್ಮಾವತಿ ತನ್ನ ಸಖಿಯರೊಂದಿಗೆ ಸೇರಿ ಜೋಹರ (ಸತಿ) ವ್ರತಗೈದು ಅಗ್ನಿಯಲ್ಲಿ ಆತ್ಮಾರ್ಪಣೆ ಮಾಡಿಕೊಂಡರು. ಈ. ಕಥೆಯ ವ್ಯಥೆ ಓದುಗರ-ಕೇಳುಗರ ಮನಮಿಡಿಯುವುದು.

ಫುಟಕಲ್ ರಚನೆಗಳು

ಅಮೀರ ಖುಸರೆ ಮತ್ತು ವಿದ್ಯಾಪತಿ ಫುಟಕಲ್ ರಚನೆಯ ಕವಿಗಳು. ಅಮೀರ ಖುಸರೊ ದಿಲ್ಲಿಯ ರಾಜರುಗಳಿಗೆ ಹಿಂದಿ ಕಲಿಸಲು ಪ್ರಯತ್ನಿಸಿದನು. ಹಿಂದು ಮುಸಲ್ಮಾನ ಎಕತೆಯ ಸರ್ವ ಪ್ರಥಮ ಸಮರ್ಥ ಕವಿ ಎಂದು ಪ್ರಶಂಸಿಲಾಗಿದೆ. ಪಹೇಲಿ, ಮುಕರಿ, ಗಜ಼ಲ್ ಮುಂತಾದ ಸಾಹಿತ್ಯ ಸೃಜನ ಮಾಡಿದ ಹೆಗ್ಗಳಿಕೆ ಪಡೆದ ಅಮೀರ ಖುಸರೊ.

ವಿದ್ಯಾಪತಿ

ವಿದ್ಯಾಪತಿಯು ಬಿಹಾರದ ದರಭಂಗ ಜಿಲ್ಲೆಯ ವಿಸಪಿ ಹಳ್ಳಿಯಲ್ಲಿ ಜನಿಸಿದ.ಮೇಥಿಲಿ ಕೋಕಿಲ ಎನ್ನುವ ಹೆಸರಿನಿಂದ ಹೆಸರುವಾಸಿಯಾದ. ಕವಿ ವಿದ್ಯಾಪತಿ. ಅನೇಕ ಕೃತಿಗಳನ್ನು ರಚಿಸಿದರು.

ಮುಸಲ್ಮಾನ ಆಕ್ರಮಣ ಅತಿಯಾದಾಗ ಕವಿಗಳು ನಿರಾಶ್ರಿತರಾದರು. ಆ ಸಂದರ್ಭದಲ್ಲಿ ಸಾಧುಸಂತ ರು ಅವರಿಗೆ ಆಶ್ರಯ ನೀಡಿದರು. ಇದರಿಂದ ಕವಿಗಳ ಮನಸ್ಥಿತಿ ಬದಲಾಗಿ, ಅವರು ತಮ್ಮ ಸಾಹಿತ್ಯದಲ್ಲಿ, ವೀರ ರಸ ,ಶೃಂಗಾರ ರಸ ಕವಿತೆಗಳ ಬದಲು ಭಗವಂತನ್ನು ಆರಾಧಿಸುವ. ಭಕ್ತಿ ಕವಿತೆ ಗಳನ್ನು ರಚಿಸತೊಡಗಿದರು.ವಿದೇಶಿ ಮುಸಲ್ಮಾನ ರಾಜರ ಅತ್ಯಾಚಾರ ತಾಳಲಾರದೆ ದೇವರ ಮೊರೆ ಹೋದ ಕವಿಗಳು ಮತ್ತು ಸಾಧು-ಸಂತರು ಭಕ್ತಿ ಆಂದೋಲನ ಪ್ರಾರಂಭಿಸಿದರು.

ಶಂಕರಾಚಾರ್ಯರು

ಭಕ್ತಿ ಆಂದೋಲನದಲ್ಲಿ ದಕ್ಷಿಣ ಭಾರತದ ಸಂತ ರಾದ ರಾಮಾನುಜಾಚಾರ್ಯ, ಮಧ್ವಾಚಾರ್ಯ, ನಿಂಬಾಚಾರ್ಯ ಮತ್ತು ಶಂಕರಾಚಾರ್ಯರು ಅತಿ ಪ್ರಮುಖರು. ಇದೆ ಸಮಯದಲ್ಲಿ ಉತ್ತರ ಭಾರತ ದಲ್ಲಿ ಕೂಡ ಭಕ್ತಿ ಕಾಲ ಆರಂಭಗೊಂಡಿತು.ರಾಮ ಮತ್ತು ಕೃಷ್ಣ ಭಕ್ತಿಯ ಎರಡು ಪಂಥಗಳು ಹುಟ್ಟಿ ಕೊಂಡವು.ಉತ್ತರ ಭಾರತದಲ್ಲಿ ಸಗುಣ ಧಾರಾ– ಇದರಲ್ಲಿ ರಾಮ ಭಕ್ತಿ ಶಾಖಾ ಮತ್ತು ಕೃಷ್ಣ ಭಕ್ತಿ ಶಾಖಾ ಎಂದು ಎರಡು ಪಂಗಡಗಳಾದವು. ಭಕ್ತಿ ಕಾಲದ ಇನ್ನೊಂದು ಭಾಗ ನಿರ್ಗುಣ ಭಕ್ತಿಧಾರಾ – ಇದರಲ್ಲಿ ಜ್ಞಾನಾಶ್ರಯಿ ಶಾಖಾ ಮತ್ತು ಪ್ರೇಮಾ ಶ್ರಯಿ ಶಾಖಾ ಎಂಬ ಎರಡು ಭಕ್ತಿ ಸಮೂಹಗಳು ಹುಟ್ಟಿಕೊಂಡವು.

ನಿರ್ಗುಣಧಾರಾ ಶಾಖಾ ಸಾಹಿತ್ಯ

ಗುರು ನಾನಕ

ಸಿದ್ಧ ಮತ್ತು ನಾಥ ಪಂಥಿಯರ ಸಾಧನಾ ಪದ್ಧತಿ ಗಳು ಯಾವಾಗ ಅವ್ಯವಹಾರಿಕ ಮತ್ತು ಜಟೀಲ ವಾದವೊ ಆಗ ಜನರಿಂದ ಉತ್ತಮ ವಿಚಾರಗಳ ಸಂಗ್ರಹ ಮಾಡಿಕೊಂಡು ಇವುಗಳ ಆಧಾರದ ಮೇಲೆ ಕಬೀರದಾಸರು ಒಂದು ಹೊಸ ಧರ್ಮ ಹುಟ್ಟುಹಾಕಿದರು.ಅದುವೆ ಜ್ಞಾನಮಾರ್ಗಿ ಅಥವ ಜ್ನಾನಾಶ್ರಯಿ ಶಾಖಾ ಸಾಹಿತ್ಯ. ಇದನ್ನು ಸಂತ ಕಾವ್ಯವೆಂದು ಕೂಡಾ ಕರೆಯಲಾಗಿದೆ. ಕಬೀರ ದಾಸರ ಜೊತೆಗೆ ದಾದೂ,ಸುಂದರದಾಸ,ರೈದಾಸ, ಗುರು ನಾನಕ, ದಯಾಬಾಯಿ ಮುಂತಾದವರು ಜ್ಞಾನ ಸಾಧನೆಯ ಮೂಲಕ ನಿರಾಕಾರ ಈಶ್ವರನ ಉಪಾಸನೆ ಮಾಡಿ ಮೋಕ್ಷ ಪಡೆದುಕೊಳ್ಳುವ ನಂಬಿಕೆ ಇಟ್ಟುಕೊಂಡಿದ್ದರು. ಈ ಕಾಲದ ಸಂತರು ಅಕ್ಖಡ್ ಅಂದರೆ ನಿರ್ಭಯ, ಯಾರ ಮಾತನ್ನೂ ಕೇಳದವರಾಗಿದ್ದರು.ಪರಿಶುದ್ಧ ಮಾನವಿಯತೆಯ ಪ್ರೇಮಿಯಾಗಿದ್ದರೆಂದರೆ ತಪ್ಪಾಗಲಿಕ್ಕಿಲ್ಲ. ಈ ಕಾಲ ದ ಸಂತರ ಭಾಷೆ ಸಧುಕ್ಖಡಿ ಭಾಷೆ ಅಥವಾ ಖಿಚಡಿ ಭಾಷೆ (ಸಾಧುಗಳ ಭಾಷೆ, ಬ್ರಜ,ಅವಧಿ, ಖಡಿಬೋಲಿ ಮತ್ತು ರಾಜಸ್ಥಾನಿ ಮುಂತಾದ ಭಾಷೆಗಳ ಮಿಶ್ರಣ).

ಶ್ರೀದುರ್ಗಾ(ಸರೋಜ ಮೇಟಿ),ಹುಬ್ಬಳ್ಳಿ