ಸುಮಾರು ನಾಲ್ವತ್ತು ವರ್ಷಗಳಿಗಿಂತ ಹೆಚ್ಚು ಅನು ಭವ ನಟ, ನಿರ್ದೇಶನ ಮತ್ತು ತಂಡ ಮುನ್ನಡೆಸಿ ಕೊಂಡು ಹೋಗುವ ಕಾರ್ಯಗಳನ್ನ ಮಾಡಬೇ ಕಾಗಿಯೋ, ಅನಿವಾರ್ಯವಾಗಿಯೋ ಮಾಡುತ್ತ  ಹವ್ಯಾಸಿ ರಂಗಭೂಮಿಯಲ್ಲಿ ಕಳೆದ ನಾಲ್ಕುದಶಕ ಗಳಿಂದ ಆಗುತ್ತಿರುವ ರಾಷ್ಟ್ರ, ರಾಜ್ಯ, ಮತ್ತು ನಮ್ಮದೇ ಆದ ಉತ್ತರ ಕರ್ನಾಟಕದ ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳ ಸನ್ನಿವೇಶಗಳನ್ನು ನೋಡುತ್ತ ಇರುವಾಗ ವಿಷಾದದ ಛಾಯೆ ಬೇಡ ವೆಂದರೂ  ನಮ್ಮೆಲ್ಲರ ಮೇಲೆ ಬೀಳುತ್ತದೆ. ವಿಷಾ ದದ ಅರ್ಥ, ಮೂಲ, ಕಾರಣ, ನಿವಾರಣೆ, ಮತ್ತು  ಭವಿತವ್ಯದ ಸವಾಲುಗಳು ಬಗ್ಗೆ ವಿಚಾರಗಳು ಪ್ರಾಮಾಣಿಕ ದುಡಿಯುವವರಿಗೆ ನಿರ್ವಹಣೆ, ಸಂಘಟನೆಯ ಅಡ್ಡಿ, ಆತಂಕಗಳು ಮೇಲಿಂದ ಮೇಲೆ ಎದುರಾಗುತ್ತವೆ. ಜೀವನವೇ ಒಂದು ದೊಡ್ದ ನಾಟಕವಾಗಿದ್ದರೂ ಕೂಡಾ ಹೆಚ್ಚು ಜನ ಸಾಹಿತಿಗಳು ನಾಟಕ ಬರೆಯಲು ಮುಂದೆ ಬರುವ ದಿಲ್ಲ. ಅದಕ್ಕೆ ಕೆಲವು ಮುಖ್ಯ ಕಾರಣಗಳೆಂದರೆ  ನಾಟಕ ಮುದ್ರಿತ ಅಥವಾ  ಮಾತಿನಲ್ಲಿ ನಾಟಕ ವಾಗುವದಿಲ್ಲ.

ಅದು ಪ್ರದರ್ಶನ ಕಂಡಾಗಲೇ ಅದರ ಯಶಸ್ಸು. ಬರೀ ಸಾಹಿತ್ಯ ಕೃತಿ ಆಗದೆ ರಂಗವೇದಿಕೆ,ನಟ, ನಟಿ, ವಾದ್ಯ, ಸಂಗೀತ,ದೀಪ ವಿನ್ಯಾಸ, ಪ್ರಸಾಧನ ಮತ್ತು ಪ್ರೇಕ್ಷಕರ ಪ್ರದರ್ಶನ ಸ್ವೀಕಾರವಾದಾಗ ಮಾತ್ರ ಅದಕ್ಕೊಂದು ಸಾರ್ಥಕತೆಯ ಬದುಕು,  ಒಂದು ಸಾಹಿತ್ಯ ಕೃತಿ ನಿಜವಾಗಲೂ ಸಾರ್ಥಕವಾ ಗುವದು ಪ್ರದರ್ಶನವಾದಾಗ. ಆದರೆ ಪ್ರದರ್ಶನ ಅನ್ನುವದು ಒಬ್ಬ ಲೇಖಕನಿಂದ ಆಗುವುದಿಲ್ಲ.

ಅದಕ್ಕೆ ನಟ,ನಟಿ, ಸಂಗೀತ,ಪರಿಕರ, ರಂಗಸಜ್ಜಿಕೆ, ಮೇಕಪ್, ನಿರ್ದೇಶಕ, ನಿಯಮಿತವಾದ ಅಧ್ಯಯ ನ,ತಾಲೀಮ ಅದಕ್ಕೆ ಸ್ಥಳ, ರಂಗಮಂದಿರ ಗೊತ್ತು ಮಾಡುವದು, ಪ್ರಚಾರ, ಆಕರ್ಷಣೆ ತಂತ್ರಗಳು, ಟಿಕೇಟು ಮಾರಾಟ, ಪ್ರಾಯೋಜಕತ್ವ, ಫೋಟೋ ಗ್ರಾಫಿ ವಿಡಿಯೋ ಇತ್ಯಾದಿ  ಇವೆಲ್ಲವೂ. ವ್ಯವಸ್ಥೆ ಸರಿಯಾಗಿ ನಡೆಯಬೇಕು ಅಂದರೆ  ಇಲ್ಲಿಯೂ ಸಹ  ಒಂದು ಕ್ರಿಟಿಕಲ್ ಪಾತ್ರ ಮೆಥಡ್ ಬೇಕು. ಅಂದರೆ  ಸರಳ ಶಬ್ದಗಳಲ್ಲಿ ಹೇಳುವುದಾದರೆ ಮುಂಚೆಯೇ ವ್ಯವಸ್ಥಿತವಾದ ಚಟುವಟಿಕೆಗಳು ಎಲ್ಲವೂ ನಿರ್ಧಾರವಾಗಿದ್ದರೆ ಯಾವುದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂಬ ಅಂದಾ ಜು ಗಣನೆ ಮಾಡಿ,ಯಾವು ಯಾವುದನ್ನು ಸಮಾನಾಂ ತರವಾಗಿ ಮಾಡುತ್ತಗುರಿಮುಟ್ಟುವುದೇ ಮಹತ್ವದ ಮಾರ್ಗ. ಇದನ್ನು ಚಿತ್ರದಲ್ಲಿ ಕೂಡ ತೋರಿಸಬಹು ದು. ಇನ್ನು ಸೃಜನಶೀಲತೆಯ ಬಗ್ಗೆ ಹೇಳುವದಾ ದರೆ ಹೊಸದನ್ನು ಮಾಡುವ ಹುಚ್ಚು ಗೀಳು,ತಿಂಡಿ, ಏನನ್ನಾದರೂ ಕರೆಯಿರಿ ಅದು ಬೇರೇನೇ.

ಅದನ್ನು ಈಕ್ರಿಟಿಕಲ್ ಪಾತ್ ವಿಧಾನದಲ್ಲಿ ಮಾಡ ಲು ಕಠಿಣ, ಸಾಧ್ಯವೇ ಇಲ್ಲ ಎನ್ನಬಹುದು. ಇಂಥ ದನ್ನು ಮಾಡಲು ಸರಿಯಾದ ಮಾನವಸಂಪನ್ಮೂ ಲ ಬೇಕಾಗುತ್ತದೆ.ಒಬ್ಬ ವ್ಯಕ್ತಿಗಿಂತ ಇಬ್ಬರು ಅಥವ ಅದಕ್ಕಿಂತಲೂ ಹೆಚ್ಚುಜನ ಅಥವಾ ವ್ಯಕ್ತಿಗಳಿದ್ದರೆ ಅದು ತಂಡ, ಸಂಘ, ಸಂಸ್ಥೆ ಆಗುತ್ತದೆ.

ಇವಾವಕ್ಕೂ ಕಟ್ಟಡ ಬೇಕು ಅಂತಿಲ್ಲ. ಸಮಾನ ಆಸಕ್ತಿ, ಸಮಾನ ಮನಸ್ಕ,‌ ಸಾಮಾನ್ಯ ಉದ್ದೇಶ, ಗುರಿ ಹೊಂದಿದ್ದರೆ ಅದೊಂದು  ಸಂಸ್ಥೆ ಅಂತಾ, ಕಾನೂನು ಪ್ರಕಾರ ನೋಂದಣಿ ಆಗಿರಬಹುದು ಅಥವಾ ಆಗಿರಲಿಕ್ಕಿಲ್ಲ. ಏನೇ ಇದ್ದರೂ  ಗುರಿ ಉದ್ದೇಶಗಳ ಸ್ಪಷ್ಟತೆ ಇರಬೇಕು. ಮುಂದೆ ಹೇಗೆ ಅಭಿವೃದ್ಧಿ ಹೊಂದಬೇಕು ಅನ್ನುವ ದ್ರಷ್ಟಿಕೋನ ಇರಬೇಕು. ಅದಕ್ಕೇನಾದರೂ ಸದಸ್ಯತ್ವ ಪ್ರಕಾರ ನಿಯಮಾವಳಿಗಳು ಇದ್ದರೆ ಅವೆಲ್ಲವುಗಳೇ ಲಿಖಿತವಾಗಿ, ಅಥವಾ ಅಲಿಖಿತವಾಗಿ ಇರುವದು ಒಳ್ಳೆಯದು. ಇದಕ್ಕಿಂತ ಹೆಚ್ಚಾಗಿ ಹಣಕಾಸಿನ ಪಾರದರ್ಶಕತೆ ಇಡುವದಕ್ಕಾಗಿ ನಿಯಮಿತವಾಗಿ ಲೆಕ್ಕಪತ್ರ ತಪಾಸಣೆ ಮತ್ತು ಅದನ್ನು ಎಲ್ಲರಿಗೂ ನೋಡಲು   ಮತ್ತು ಚರ್ಚಿಸಲು ಅನುವು ಮಾಡಿ ಕೊಡುವದು.   ನಾವೆಲ್ಲ ಮಾಡೋದನ್ನ ಯಾಕೆ ತೋರಿಸಬೇಕು ಅನ್ನೋ ಪ್ರಶ್ನೆ ಬೇರೆ. ಅನುಭವದ ಆಧಾರದ ಮೇಲೆ ಹೇಳುವದಾದರೆ  ಯಾವದೇ ನಾಟಕ ತಂಡದಲ್ಲಿ ಭಿನ್ನಾಭಿಪ್ರಾಯ, ವೈಮನಸ್ಸು ಗಳು ಬಂದರೆ ಅದರ ಕಾರಣಗಳನ್ನು  ಹೀಗೆ ಪಟ್ಟಿ ಮಾಡಬಹುದು:

1. ಹಣಕಾಸು ನಿರ್ವಹಣೆ ಮತ್ತು ಖರ್ಚು -ವೆಚ್ಚಗ ಳಲ್ಲಿ ಅಪಾರದರ್ಶಕತೆ (ಲಂಚ, ಪಾನಗೋಷ್ಠಿಗಳ ಪರಿಗಣಿಸಲು ಬಾರದು,  ಅವು ಸುಳ್ಳು ಲೆಕ್ಕ ಬರಿ ಯುವದಕ್ಕೆ ಪ್ರೇರಣೆ ನೀಡುತ್ತವೆ. ಎಲ್ಲ ನಾಟಕದ ಹೆಸರಿನಲ್ಲಿ ನಡೆಯುತ್ತದೆ).

2.ಎಲ್ಲ ಚರ್ಚೆಗಳು, ನಿರ್ಧಾರಗಳು ಯಾರು ಮಂಡಿಸಿದರು ಯಾರು ಅನುಮೋದಿಸಿದರು  ಮತ್ತು ಪ್ರಸ್ತಾವನೆ ವಿವರ ಎಲ್ಲವೂ ಲಿಖಿತವಾಗಿ ಇದ್ದರೆ ಒಳ್ಳೆಯದು. ಈಗ ವಾಟ್ಸಾಪ್  ಈ ಮೇಲ್ ಮೂಲಕವೂ ಮಾಡಬಹುದಾಗಿದೆ.

3. ನಿಯಮಿತವಾಗಿ ಸದಸ್ಯರು ಆಗಲಿ ಆಡಳಿತ ಮಂಡಳಿ ಆಗಲಿ ಭೇಟಿಯಾಗುತ್ತಿರಬೇಕು.

4. ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಅವರುಗಳಲ್ಲಿ conflict of interest ಅಂದರೆ ಅವರ ಅವರ ವಿಶಿಷ್ಟ ಹಿತಾಸಕ್ತಿಗಳ ಸಂಘರ್ಷವಿರಬಾರದು.

5.ಒಂದು ಸಂಘಟನೆಯಲ್ಲಿ ಎಲ್ಲ ತರಹದ ವ್ಯಕ್ತಿ ಗಳು ಅವರ ಅವರ ಶಕ್ತಿ, ಸಾಮರ್ಥ್ಯ, ದೌರ್ಬಲ್ಯ ಮತ್ತು ಅವಕಾಶವಾದಿತ್ವಗಳನ್ನು ವಿಧವಿಧವಾಗಿ ಹೊಂದಿರುತ್ತಾರೆ. ನಿಜವಾದ ಧುರಿಣತ್ವ ಹೊರ ಹೊಮ್ಮುವುದೇ ಇಂಥವರನ್ನು ಸಂಭಾಳಿಸಿಕೊಂ ಡು ಹೋಗುವದರಲ್ಲಿ.

6. ಒಂದು ನಾಟಕ  ಮಾಡೋದಕ್ಕೆ ಒಂದು ತಂಡ ಅಥವಾ ಸಂಸ್ಥೆಗೆ ಇಷ್ಟೆಲ್ಲಾ ಬೇಕಾ ಅನ್ನೋ ಪ್ರಶ್ನೆ ಯೇ ನಾಟಕ ಬರೆಯುವರಿಗೆ, ಮಾಡುವವರಿಗೆ. ಇವೆಲ್ಲಾ ಯಾಕೆ? ಬೇಡವೇ ಬೇಡಾ ಅನ್ನಿಸಿದರೆ ಆಶ್ಚರ್ಯವಿಲ್ಲ. ಯಾಕೆ ಹೀಗೆ? ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತದೆಯೋ ಅಥವಾ ಇಲ್ಲವೋ, ಸಂಘಟನೆ ಅನ್ನೋದು ಅನಿವಾರ್ಯ ಆಗಿಬಿಡು ತ್ತದೆ, ಯಾಕೆಂದರೆ ನಾಟ್ಯದ ಹುಟ್ಟೇ ಹಾಗೆ ಇದೆ!ಬ್ರಹ್ಮ, ಭರತ, ನಾಲ್ಕು ವೇದ, ಭರತನ ನೂರು ಮಕ್ಕಳು, ಸುರರು, ಅಸುರರು ಹೀಗೆ ಪಟ್ಟಿ ಬೆಳೆ ಯುತ್ತದೆ. 

7. ಸಂಘಟನೆ ನಾಟಕದ ಬಗ್ಗೆ ಚಿಂತನೆಗಾಗಿ, ಮಾಡೋದಕ್ಕೆ, ನೋಡೋದಕ್ಕೆ, ಪ್ರೇಕ್ಷಕರು ಬರು ವಂತೆ ಮಾಡಲು, ಪ್ರೇಕ್ಷಕರನ್ನು ತಯಾರು ಮಾಡ ಲು,ಮಾಡಿದ್ದೆಲ್ಲ ಒಳ್ಳೆಯದು,ನೋಡುವಂಥಹದೇ ಅಂತ ಬಿಂಬಿಸಲು, ಪ್ರಚಾರ ಮಾಡೋದಕ್ಕೆ ಎಲ್ಲ ದಕ್ಕೂ ಬೇಕು.

8.ನಾಟಕದ ಮರು ಪ್ರಯೋಗಗಳನ್ನು ಎಲ್ಲೆಲ್ಲಿ ಮಾಡಿಸುವದು, ಎಷ್ಟೆಷ್ಟು ಗೌರವ ಧನ, ಹೇಗೆ ಹೇಗೆ ಅಂತ ಗುರುತಿಸುವದಕ್ಕೆ ಸಂಘಟನೆ ಬೇಕು.

9.ಒಂದು ನಾಟಕ ತಯಾರು ಮಾಡಲು, ಉಪಕ ರಣ ಖರೀದಿಸಲು, ನಿರ್ದೇಶಕರ ಮತ್ತು ತಾರಾಗ ಣಕ್ಕೆ ಕೂಲಿ/ ವೇತನ ನೀಡಲು ಆರ್ಥಿಕ ಸಂಪ ನ್ಮೂಲ ಕ್ರೋಢೀಕರಣ ಮಾಡಿಕೊಳ್ಳಲು ಹುಡುಕಿ ಅದಕ್ಕೆ ತಕ್ಕಂತೆ ಯೋಜನೆಯನ್ನು ರೂಪಿಸಿ, ಅದನ್ನು ಪಡೆಯಲು ಪ್ರಯತ್ನಿಸುವದು.

10.ಪ್ರಾಯೋಜಕತ್ವ,  ದಾನಿಗಳ ಹುಡುಕಾಟ ಮತ್ತು ಅವರ ಆಸಕ್ತಿಗಳು  ಈಡೇರುವಂತೆ ನೋಡಿಕೊಳ್ಳುವದು.

ಮೇಲೆ ಕಾಣಿಸಿದ ಎಲ್ಲ ಹತ್ತು ಅಂಶಗಳು ಸಾಮಾ ನ್ಯವಾಗಿ ಎಲ್ಲ ನಾಟಕ ತಂಡ, ಸಂಸ್ಥೆಗಳಿಗೆ ಅನ್ವ ಯವಾಗುತ್ತವೆ.  ಇನ್ನೂ ಸರ್ಕಾರದಿಂದ ನಡೆಯು ತ್ತಿರುವ ರಂಗಾಯಣದಂತಹ ಸಂಸ್ಥೆಗಳ  ಕ್ರಿಯಾ ಶೀಲತೆ ಮತ್ತು ನಿರ್ವಹಣೆ   ಇನ್ನೂ ಬೇರೆ ಬೇರೆ ಸವಾಲುಗಳು ಇರುತ್ತವೆ. ಸರ್ಕಾರ ಎಲ್ಲೆಲ್ಲಿ ಧನ ವೆಚ್ಚ ಅಥವಾ ಸಹಾಯ ಮಾಡುತ್ತದೆಯೋ  ಅಲ್ಲಲ್ಲಿ ಅದರದೇ ಆದ ಬಡಾಯಿ,ಲಡಾಯಿಗಳು ಮಾಮೂಲು.. ಇಂತಹ ಸನ್ನಿವೇಶಗಳಲ್ಲಿ ಎಂಥಹ ಪ್ರತಿಭಾವಂತನಿಗೂ testing timesತಂದೊಡ್ಡು ತ್ತವೆ.  ಒಳ್ಳೆಯ ನಟಿ,ನಟ, ಒಳ್ಳೆಯ ಹಾಡುಗಾರ ಹೀಗೆ ಎಲ್ಲ ಪ್ರತಿಭೆಗಳು ಸಹ ಆಡಳಿತದಲ್ಲಿ ಕರಗಿ ಹೋಗುತ್ತವೆ.

ಉತ್ತಮ ನಟ -ನಟಿ ಏನೇ ಇದ್ದರೂ ಅವರು ನಿಧಾನವಾಗಿ ಅವರಿಗೆ ಸಿಕ್ಕ ಸ್ಥಾನ,ಮಾನ ಉಳಿಸಿ ಕೊಳ್ಳುವ ಅಥವಾ ಅವರ ಜನಪ್ರಿಯತೆ, ಅವರ ಮಾತಿನ ವೈಖರಿಗೋ, ಅಥವಾ ಅವರ ಸ್ನೇಹ ಜಾಲದಿಂದಲೋ ಆರ್ಥಿಕ ಸಂಪನ್ಮೂಲ ಹಾಗೂ ಪ್ರಾಯೋಜಕತ್ವ ದೊರೆಯುತ್ತಹೋದಂತೆ ನಟ ನಿಧಾನವಾಗಿ ಸೈಡ್ ವಿಂಗ್ ಗೆ ಸರಿಯುತ್ತ ಅಥವಾ ದೂಕಿಸಿಕೊಳ್ಳುತ್ತ ಹೋಗಿ ಭ್ರಮೆ ಮತ್ತು ವಾಸ್ತವಗಳ ಅಡಕೋತ್ತಿನಲ್ಲಿ ಅಡಕೆ ಆಗಿ ಅಸ್ತಿತ್ವ ಕಳೆದುಕೊಂಡಾಗ ಅದು ರಂಗಭೂಮಿಯಲ್ಲಿ ನಟ ನೊಬ್ಬನ ಕೊಲೆಯೋ ಅಥವಾ ಆತ್ಮಹತ್ಯೆಯೋ ಅಥವಾ ಪ್ರತಿಭೆಯ ತಲೆಗಿರುವ ಬೆಲೆಯ ಡಿ ಮೋನಟಾಯ್ ಜೇಶನ್ನೋ ಹೇಳಲು ಆಗುವು ದಿಲ್ಲ.

(ಸಶೇಷ….)            

         ಅರವಿಂದ ಕುಲಕರ್ಣಿ    
ರಂಗಭೂಮಿ ಚಿಂತಕರು,ಧಾರವಾಡ