ಕಾರ್ಗಿಲ್ ಕಣಿವೆಯ
ಕತ್ತಲಲ್ಲಿ
ಮೈಕೊರೆಯುವ
ಚಳಿಯಲ್ಲಿ
ಸುಂಯ್ ಎಂದು ಸೀಳಿ
ಬರುವ ಶೆಲ್ ದಾಳಿಗೆ
ನಡುಗಬೇಕು ಎಂಥವರ
ಎದೆ ಗುಂಡಿಗೆ
ಬಂದೂಕು ಹಿಡಿದ ಕೈ
ಬೆರಳುಗಳು
ಸಿದ್ದವಾಗಿವೆ ವೈರಿಗಳ
ಎದೆ ಸೀಳಲು
ವೈರಿಗಳ ಸರ-ಸರ
ಸಪ್ಪಳಕೆ
ಗರ್ಜಿಸಿತು ಸೈನಿಕರ
ತುಪಾಕಿ
ಉರುಳಿದವು ಶತ್ರುಗಳ
ಹೆಣಗಳು ಧರೆಗೆ
ವಿಮೊಚನೆ ಸಿಕ್ಕಿತು
ಕಾರ್ಗಿಲ್ ಭೂಮಿಗೆ
ದೇಶ ನಮಿಸಿತ್ತು ಎಲ್ಲ
ವೀರ ಯೋಧರಿಗೆ
ಹೆಮ್ಮೆಯ ನಮ್ಮ ಭಾರತಾಂಭೆಯ
ಪುತ್ರರಿಗೆ

ಕಿರಣ.ಯಲಿಗಾರ
ಮುನವಳ್ಳಿ 591117
ತಾ:ಸವದತ್ತಿ  ಜಿ: ಬೆಳಗಾವಿ