ದೇವಾಲಯಗಳ ವಾಸ್ತು ಅಧ್ಯಯನದಲ್ಲಿ ಲಭ್ಯ ವಿರುವ ದೇವಾಲಯಗಳಲ್ಲಿ ಬಾದಾಮಿ ಚಾಲು ಕ್ಯರ ದೇವಾಲಯಗಳು ಪ್ರಮುಖವಾದದ್ದು. ಪಟ್ಟದಕಲ್ಲಿನ ದೇವಾಲಯಗಳು ತುಂಬಿದ ಕೊಡ ದಂತೆ ಇದ್ದರೆ ಐಹೊಳೆಯ ದೇವಾಲಯಗಳು ಅವರ ಪ್ರಯೋಗಶೀಲತೆಗೆ ಹಿಡಿದ ಕನ್ನಡಿ. ಇಲ್ಲಿನ ಹಲವು ದೇವಾಲಯದ ಹಲವು ಅಯಾ ಮಗಳನ್ನೇ ತೆರೆದೆಡುತ್ತದೆ. ಇಲ್ಲಿರುವ ನೂರಕ್ಕೂ ಅಧಿಕ ದೇವಾಲಯಗಳಲ್ಲಿ ಆಯ್ದ ಪ್ರಮುಖ ದೇವಾಲಯಗಳ ಪರಿಚಯ.

ಗೌಡರ ದೇವಾಲಯ :

ಕರ್ನಾಟಕದ ಆರಂಭಿಕ ದೇವಾಲಯಗಳಲ್ಲಿ ಒಂದು ಎಂದೇ ಗುರುತಿಸುಕೊಳ್ಳುವ ಈ ದೇವಾಲ ಯ ಅಧ್ಯಯನದ ಹಿನ್ನೆಲೆಯಲ್ಲಿ ಪ್ರಮುಖವಾದ ದ್ದು. ಸುಮಾರು ಐದನೇ ಶತಮಾನದ ಈ ದೇವಾ ಲಯವನ್ನು ಭಗವತಿ ದೇವಾಲಯವೆಂದು ಕರೆ ಯಲಾಗಿದೆ. ದೇವಾಲಯದಲ್ಲಿ ನಡುವೆ ಗರ್ಭ ಗುಡಿ ಇದ್ದು, ಅದರ ಸುತ್ತಲೂ ಪ್ರದಕ್ಷಿಣಾ ಪಥ ಇದೆ. ಗರ್ಭಗುಡಿಯಲ್ಲಿ ದುರ್ಗಾಭಗವತಿ ಮೂರ್ತಿ ಇದ್ದ ಕಾರಣ ಆ ಹೆಸರು ಬಂದಿದ್ದು, ನಂತರ ಸ್ಥಳೀಯ ಕಾರಣದಿಂದ ಗೌಡರ ದೇವಾಲಯ ಎಂದು ಕರೆಯಲ್ಪಟ್ಟಿದೆ. ಗರ್ಭಗುಡಿಯ ಬಾಗಿಲು ವಾಡದ ಗರುಡನ ಕೆತ್ತೆನೆ ಸುಂದರವಾಗಿದೆ.  ಇನ್ನು ದೇವಾಲಯದಲ್ಲಿ ಹದಿನಾರು ಕಂಭಗಳಿದ್ದು ಇಳಿ ಜಾರಿನ ಛಾವಣಿ ಇದೆ. ಇದರ ಮೇಲೆ ಚಿಕ್ಕ ರಚನೆ ಇದೆ.

ಲಾಡಖಾನ್ ದೇವಾಲಯ :

ಸುಮಾರು ಐದನೇ ಶತಮಾನದಲ್ಲಿ ನಿರ್ಮಾಣ ವಾದ ಈ ದೇವಾಲಯ ಇನ್ನೊಂದು ಪುರಾತನ ದೇವಾಲಯ.ದೇವಾಲಯ ಗರ್ಭಗುಡಿ, ನವರಂಗ ಹಾಗು ಮುಖಮಂಟಪ ಹೊಂದಿದೆ. ಗರ್ಭಗುಡಿ ಯಲ್ಲಿ ಶಿವಲಿಂಗವಿದ್ದು, ಮುಂದೆ ಬೃಹತ್ ನಂದಿ ಇದೆ. ಇನ್ನು ಗರ್ಭಗುಡಿಯ ಸುತ್ತಲೂ ಇರುವ ವಿಷ್ಣು, ಸೂರ್ಯ ಹಾಗು ಅರ್ಧನಾರೀಶ್ವರನ ಕೆತ್ತೆನೆ ಇದೆ. ಇನ್ನು ಮುಖಮಂಟಪ ಸುಮಾರು ಹದಿನಾರು ಕಂಭಗಳಿಂದು ಕೂಡಿದ್ದು ಜಾಲಂದ್ರ ಗಳು ಕಲಾತ್ಮಕವಾಗಿದೆ. ಇನ್ನು ಮುಖಮಂಟಪ ದಲ್ಲಿ ನಾಲ್ಕು ಕಂಭಗಳಿದ್ದು ಇಲ್ಲಿನ ಅಲ್ಲಿಂದ ರಚನೆಯ ನ್ನು ಗಮನಸಿಬೇಕು. ಮುಖಮಂಟಪ ದಲ್ಲಿ ಕಕ್ಷಾಸನವಿದ್ದು ಹೊರಭಾಗದಲ್ಲಿನ ಗಂಗಾ, ಯಮುನ ಮುಂತಾದ ಕೆತ್ತೆನೆಗಳಿವೆ. ಇನ್ನು ದೇವಾ ಲಯಕ್ಕೆ ಮಳೆ ಜಾರುವಂತೆ ಇಳಿಜಾರು ಚಾವಣಿ ಇದ್ದು, ಇದರ ಮೇಲೆ ಸಾಮಾನ್ಯವಾಗಿ ಜೈನ ದೇವಾಲಯಗಳಲ್ಲಿ ಕಾಣಸಿಗುವ ಚಿಕ್ಕದಾದ ಮತ್ತೊಂದು ಗರ್ಭಗುಡಿ ಇದೆ. ಇದಕ್ಕೆ ಹೋಗಲು ಏಣಿ ಇದ್ದು, ಇಲ್ಲಿ ಸೂರ್ಯನಮೂರ್ತಿ ಇತ್ತು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.  ಇನ್ನು ಇಲ್ಲಿ ಲಾಡಖಾನ್ ಎಂಬುವನು ವಾಸವಾಗಿದ್ದ ಕಾರಣ ಅವನ ಹೆಸರೇ ಬಂದಿದೆ.    

ದುರ್ಗಾ ದೇವಾಲಯ :

ವಿನ್ಯಾಸದ ಹಿನ್ನೆಲೆಯಲ್ಲಿ ಪ್ರಮುಖವಾದ ದೇವಾಲಯ ಇದು. ಗಜಪುಷ್ಟಾಕರದ ತಲ ವಿನ್ಯಾಸ ಹೊಂದಿರುವ ಈ ದೇವಾಲಯ ಬೌದ್ದ ಚೈತ್ಯಾಲಯದ ಮಾದರಿಯಲ್ಲಿದೆ. ಸುಮಾರು ಕ್ರಿ ಶ 742 ರಲ್ಲಿ ನಿರ್ಮಾಣವಾದ ಈ   ದೇವಾಲಯ ಗರ್ಭಗುಡಿ, ಪ್ರದಕ್ಶಿಣ ಪಥಾ, ಸಭಾಮಂಟಪ ಹಾಗು ಮುಖಮಂಟಪ ಹೊಂದಿದ್ದು ರೇಖನಾಗರ ಶೈಲಿಯ ಶಿಖರವನ್ನು ಹೊಂದಿದೆ. ದುರ್ಗ (ಬೆಟ್ಟ) ಸಮೀಪದಲ್ಲಿ ಇರುವ ಕಾರಣ ಈ ಹೆಸರು ಬಂದಿ ರಬಹುದು ಎಂಬ ಅಭಿಪ್ರಾಯವಿದೆ. ಗರ್ಭಗುಡಿ ಯ ಬಾಗಿಲುವಾಡದ ಕೆತ್ತೆನೆ ಹಾಗು ಇಲ್ಲಿನ ಗರುಡಪಟ್ಟಿಕೆ ಇದು ವಿಷ್ಣು ದೇವಾಲಯ. ಎನ್ನು ವುದಕ್ಕೆ ಕುರುಹು. ಪ್ರದಕ್ಶಿಣ ಪಥದಲ್ಲಿನ ಕಂಭ ಗಳಲ್ಲಿನ ಸೂಕ್ಷ್ಮ ಕೆತ್ತೆನೆಗಳು ಅದ್ಭುತ. ಇನ್ನು ಇಲ್ಲಿನ ಕೊಷ್ಟಕದಲ್ಲಿ ಕಾಣಬರುವ ಬೃಹತ್ ಶಿಲ್ಪಗಳ ಕೆತ್ತೆನೆ ಈ ದೇವಾಲಯದ. ಮೇರು. ಇಲ್ಲಿನ ನರಸಿಂಹ, ವರಾಹ, ಮಹಿಷಾಸುರಮ ರ್ದಿನಿ, ಹರಿಹರ ಬಾದಾಮಿ ಚಾಲುಕ್ಯರ ಅದ್ಭುತ ಕೆತ್ತೆನೆಗಳಲ್ಲಿ ಒಂದು.

ಹುಚ್ಚಮಲ್ಲಿ ದೇವಾಲಯ :

ಸುಮಾರಿ 8 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ಕಾರ್ತಿಕೇಯ ದೇವಾಲಯ ವೆಂದು ದಾಖಲಾಗಿದೆ. ದೇವಾಲಯ ಗರ್ಭಗುಡಿ, ಅಂತರಾಳ, ಪ್ರದಕ್ಷಿಣ ಪಥಾ, ಸಭಾಮಂಟಪ ಹಾಗು ಮುಖಮಂಟಪ ಹೊಂದಿದ್ದು,ರೇಖನಾಗರ ಶೈಲಿಯನ್ನ ಹೊಂದಿದೆ. ಇಲ್ಲಿ ವಿಜಯಾದಿತ್ಯನ ಶಾಸನವಿದ್ದು ಗರ್ಭಗುಡಿಯ ಬಾಗಿಲುವಾಡದ ಲ್ಲಿನ ಗರುಡನ ಕೆತ್ತೆನೆ ಇದೆ. ಇನ್ನು ಮುಖ ಮಂಟಪದ ವಿತಾನದಲ್ಲಿನ ಕಮಲ, ಇಂದ್ರ, ಬ್ರಹ್ಮ, ವಿಷ್ಣು ವಾಹನ ಸಮೇತವಾಗಿರುವುದನ್ನು ನೋಡಬಹುದು. ದೇವಾಲಯದಲ್ಲಿನ ಕಾರ್ತಿಕೇ ಯನ ಸುಂದರ ಕೆತ್ತೆನೆ ಇದ್ದು, ನವಿಲನ ಮೇಲೆ ಕುಳಿತು ಸಂಹಾರ ಭಂಗಿಯಲ್ಲಿನ ಕೆತ್ತೆನೆ ಅದ್ಭುತ.    

ಕೊಂತಿ ದೇವಾಲಯದ ಸಮೂಹ :

ಇಲ್ಲಿ ಮೂರು ದೇವಾಲಯಗಳಿದ್ದು ಮೊದಲ ದೇವಾಲಯ ಚತುರ್ರಸ ಮಾದರಿಯ ಗರ್ಭಗುಡಿ ಇದ್ದು ಇಲ್ಲಿನ ಗಜಸಂಹಾಸುರ, ನರಸಿಂಹ, ನಟ ರಾಜ ಹಾಗು ವಿತಾನದಲ್ಲಿನ ಬ್ರಹ್ಮ, ಉಮಾಮ ಹೇಶ್ವರ ಹಾಗು ಅನಂತಶಯನ ಮೂರ್ತಿ ಕಲಾ ತ್ಮಕವಾಗಿದೆ. ಇನ್ನು ಇದಕ್ಕೆ ಹೊಂದಿಕೊಂಡಂತೆ ಎರಡನೆಯ ದೇವಾಲಯವಿದ್ದು ಎರಡನ್ನುಮುಖ ಮಂಟಪ ಜೋಡಿಸಿದೆ. ಇನ್ನು ಗರ್ಭಗುಡಿಯ ದ್ವಾರದ ಬಳಿಯ ಗಣಪತಿ, ಮಹಿಷಾಸುರ ಮರ್ಧಿ ನಿ ಹಾಗು ವಿತಾನದಲ್ಲಿನ ಅಷ್ಟದಿಕ್ಪಾಲಕರ ಕೆತ್ತೆನೆ ಇದೆ. ಇನ್ನು ಮೂರನೆಯ ದೇವಾಲಯದಲ್ಲಿನ ವರಾಹ ಕೆತ್ತೆನೆ ಇದೆ. ಇನ್ನು ಮೂರು ದೇವಾಲಯ ಕ್ಕೆ ಪ್ರದಕ್ಷಿಣ ಪಥವಿಲ್ಲ. ಗರ್ಭಗುಡಿ ಹಾಗು ಮಂಟ ಪ ಭಾಗಗಳನ್ನು ಹೊಂದಿದ್ದು ಅಂತರಾಳದ ಭಾಗ ವಿಲ್ಲ.

ರಾವಳಘಡಿ ಗುಹಾಂತರ ದೇವಾಲಯ :

ಐಹೊಳೆಯಲ್ಲಿನ ಕಾಣಬರುವ ಸುಂದರ ಗುಹಾಂ ತರ ದೇವಾಲಯ ಸುಮಾರು 7 ನೇಯ ಶತಮಾನ ದಲ್ಲಿ ನಿರ್ಮಾಣವಾಗಿದ್ದು, ಗರ್ಭಗುಡಿಯಲ್ಲಿ ಶಿವ ಲಿಂಗವಿದ್ದು ಇಲ್ಲಿ ಅದ್ಭುತವಾದ ಮಹಿಷಾಸುರ ಮರ್ಧಿನಿ, ವರಾಹ ಶಿಲ್ಪ ಅದ್ಭುತವಾಗಿದೆ. ಹಾಗೆ ಯೆ ಇಲ್ಲಿನ ನಟರಾಜ ಹಾಗು ಗಂಗಾಧರನ ಶಿಲ್ಪ ಸಹ ನೋಡಲೇ ಬೇಕಾದ ಶಿಲ್ಪ.

ಮೇಗುತಿ ಜಿನಾಲಯ :

ಇಲ್ಲಿನ ಮತ್ತೊಂದು ಸುಂದರ ದೇವಾಲಯವಿದು.  ಸುಮಾರು ಏಳನೆಯ ಶತಮಾನದಲ್ಲಿ ನಿರ್ಮಾಣ ವಾದ ಈ ದೇವಾಲಯ ಗರ್ಭಗುಡಿ, ಪ್ರದಕ್ಷಿಣ ಪಥ ಸುಖನಾಸಿ ಹಾಗು ಮಂಟಪವಿದ್ದು ನಂತರ ಕಾಲದಲ್ಲಿ ಮುಖಮಂಟಪ ಸೇರ್ಪಡೆಯಾಗಿದೆ. ಇನ್ನು ಇಲ್ಲಿ ಮಹಾವೀರ ತೀರ್ಥಂಕರನ ಮೂರ್ತಿ ಇದ್ದು  ಡ್ರಾವಿಡ ಶೈಲಿಯ ಪ್ರಾಚೀನ ದೇವಾಲಯ ಕ್ಕೆ ಉತ್ತಮ ಉದಾಹರಣೆ. ಇನ್ನು ಗರ್ಭಗುಡಿಯ ಮೇಲೆ ಇನ್ನೊಂದು ಗರ್ಭಗುಡಿ ಇದ್ದು ನಂತರದ ಸೇರ್ಪಡೆ.  ಇಲ್ಲಿನ ಮುಖಮಂಟಪ ವಿಸ್ತಾರವಾಗಿ ದ್ದು ಐಹೊಳೆ ದೇವಾಲಯಗಳಲ್ಲಿ ದೊಡ್ಡದು.

ಶ್ರೀನಿವಾಸ ಮೂರ್ತಿ ಎನ್. ಎಸ್.ಬೆಂಗಳೂರು