ರಂಗಭೂಮಿ ಅಂದರೆ ಪ್ರದರ್ಶಕ ಕಲೆಗಳಾದ ನಾಟಕ, ಸಂಗೀತ, ನ್ರತ್ಯ ಮತ್ತು ಚಿತ್ರಕಲೆ ಅಂತಾ ಭಾವಿಸಿ ಇಲ್ಲಿ ಅನುಭವದ ಆಧಾರದ ಮೇಲೆ ಸಂಕ್ಷಿಪ್ತ ಸೂತ್ರಗಳಲ್ಲಿ ಹೇಳಲು ಪ್ರಯತ್ನಿಸಿಲಾ ಗಿದೆ. ಹೀಗೆ ಮಾಡಿದರೆ ಯಶಸ್ಸು ಸಿಕ್ಕುಬಿಡುತ್ತ ದಾ ಅಂತ ಮುಗ್ಧವಾಗಿಯೋ, ಕೊಂಕಿನಿಂದಲೋ ಕಾಲೆಳೆಯುವ ಇರಾದೆಯೊಂದಿಗೆನೋ ಪ್ರಶ್ನೆ ಕೇಳಬಹುದು. ಯಶಸ್ಸು ಅನ್ನುವದು ಏನು ಅಂತ ಭಾವಿಸಿರುತ್ತಾರೋ ಅದರಮೇಲೆ ಅವಲಂಬಿಸಿ ರುತ್ತದೆ. ಯಾವದೇ ಯಶಸ್ಸು ಸುಲಭ ಸೂತ್ರಗಳ ಲ್ಲಿ ಸಿಲುಕಿಕೊಂಡಿರುವದಿಲ್ಲ. ಅದು ಯಾವಾಗ ಲೂ ಎಲ್ಲ ಅಂಶಗಳನ್ನು ಹಿಡಿದಿಟ್ಟುಕೊಂಡಿರುವ ಕಂಸಗಳ ಹೊರಗೆ ಇರುವ ಗುಣಕದ ಮೇಲೆ ನಿಂತಿರುತ್ತದೆ. ಗುಣಕ ಅನ್ನುವದು ಆದೃಷ್ಟ. ಅದು ಶೂನ್ಯವಾದರೆ ಕಂಸದಲ್ಲಿ ಎನಿದ್ದರೇನು, ಇರದಿದ್ದ ರೇನು? ಈ ಅದೃಷ್ಟಾ ಅನ್ನೋದನ್ನು ಹೆಚ್ಚಿಸಲು ಒಂದಿಷ್ಟು ಪ್ರಯತ್ನ ಬೇಕಾಗುತ್ತದೆ. ಮೊದಲು ಕಂಸದೊಳಗೆ ಏನೇನು ವ್ಯಕ್ತಿಗತ ಗುಣ, ಪ್ರತಿಭೆ ಬೇಕು ಅನ್ನೋದರಕಡೆ ಲಕ್ಷ್ಯ ಹಾಯಿಸೋಣ. ಇದು ಸಹಾ ಯಶಸ್ಸು ಅಂತ ಪ್ರತಿ ಕಲಾವಿದ ಯಾವುದನ್ನ ಭಾವಿಸಿರುತ್ತಾನೆ ಅನ್ನೋದರ ಮೇಲೆ ನಿಂತಿರುತ್ತದೆ.

ನಿರ್ವಹಣೆ ಶಾಸ್ತ್ರದಲ್ಲಿ ಅಭ್ರಹ್ಮ್ ಮಾಸ್ಲೋ ಸಿದ್ಧಾಂತದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿ ಎರಡು ಅವಶ್ಯಕತೆಗಳಿಂದ ನಿಯಂತ್ರಿಸಲ್ಪಡುತ್ತಾನೆ. ಅವು ಯಾವವೆಂದರೆ ಕೇಳಸ್ತರದ ಆವಶ್ಯಕತೆಗಳು ಮತ್ತು ಮೇಲಸ್ತರದ ಅವಶ್ಯಕತೆಗಳು ಅಂತ.

ಕೆಳಸ್ತರದ ಅವಶ್ಯಕತೆಗಳು ಅಂದರೆ ಆಹಾರ, ಬಟ್ಟೆ ಆಸರೆ (ಸೂರು) ಹಸಿವು, ರಕ್ಷಣೆ, ಸೈಕಲ್, ಸ್ಕೂಟರ್ ಕಾರು, ಸೆಕ್ಸ್, ಮಲಮೂತ್ರ ವಿಸರ್ಜನೆ ಇತ್ಯಾದಿ.ಹಾಗೆಯೇ ಅದರಲ್ಲಿ ಇನ್ನು ಮೇಲಸ್ತರದ ಅವಶ್ಯಕತೆಗಳು ಎಂದರೆ ಜನ ಮನ್ನಣೆ, ಸಮಾಜ ದಲ್ಲಿ ಗುರುತಿಸುವಿಕೆ ಪ್ರತಿಷ್ಟೆ, ಪರೋಪಕಾರಿ ಆಗುವದು, ಪ್ರತಿಫಲಾಪಕ್ಷೆ ಇಲ್ಲದೆ ಕಾರ್ಯಮಾ ಡುವದು, ಕಲಾವಿದರಿಗಷ್ಟೇ ಅಲ್ಲ ಇದು ಎಲ್ಲರಿಗು ಅನ್ವಯವಾಗುತ್ತದೆ. ಪ್ರತಿವ್ಯಕ್ತಿಯ ಕೆಲಸಕಾರ್ಯ ಕಲಾಪ ಯಾವಾಗಲೂ ಕೆಳಸ್ತರದ ಅಥವಾ ಮೇಲಸ್ಥರದ ಅವಶ್ಯಕತೆ ಪೂರೈಸುವದೇ ಆಗಿರು ತ್ತವೆ. ಜೀವನಾ, ಬದುಕು ಅಂತ ನಾವೇನು ಅನ್ನುತ್ತೆವೆಯೋ ಅದೆಲ್ಲ ಈ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವದೇ ಆಗಿರುತ್ತದೆ. ಅದು ಯಾವ ದೇ ವ್ಯಕ್ತಿಗೆ ಬೇರೆಬೇರೆ ವಯಸ್ಸಿನಲ್ಲಿ ಬೇರೆ ಬೇರೆ ಆಗಿರುತ್ತದೆ. ಹೀಗಾಗಿ ಪ್ರತಿ ಕಲಾವಿದ ತಾನು ಈ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ದಿಕ್ಕಿನಲ್ಲಿ ಎಲ್ಲಿದ್ದಾನೆ ಅಂತ ತಿಳಿದುಕೊಂಡು ಅಲ್ಲಿಂದ ಮುಂದೆ ಹೇಗೆ ಪ್ರಗತಿ ಹೊಂದುತ್ತಾನೆ ಅನ್ನೋದು ಮುಖ್ಯ.
ಈ ಪ್ರಗತಿ ಅನ್ನೋದು ಯಶಸ್ಸಿನಲ್ಲಿ ಹಂತ ಹಂತ ವಾಗಿ ಯಾವ ವಯಸ್ಸಿನಲ್ಲಿ ಏನಾಗಬೇಕೋ ಅದಾಗುತ್ತ ಹೋಗಲು ಬೇಕಾಗುವ ಒಳದಾರಿಗಳ ನ್ನು ಹುಡುಕಿಕೊಳ್ಳುವ ತಂತ್ರ ಅಥವಾ ಸೂತ್ರ (ನೀವು ಏನಂತಾದರೂ ಕರೆಯಿರಿ). ಅದಕ್ಕೂ ಮುಂಚೆ ಯಶಸ್ಸು ಅನ್ನುವದರ ಅರ್ಥ ಮತ್ತು ಅದರ ಅಳತೆಗೋಲುಗಳ ಬಗ್ಗೆ ತಿಳಿದುಕೊಳ್ಳ ಬೇಕಾದುದು ಅವಶ್ಯಕ.

ದುಡ್ಡು ಮಾಡುವದು, ಸ್ವಂತಮನೆ ಮಾಡುವದು, ಆದಾಯಕರ ರಿಟರ್ನ ತುಂಬುವದಾ,ಸ್ವಂತ ಕಾರು ಸ್ಕೂಟರ್ ಹೊಂದುವದಾ ದುಡ್ಡು ಅಂದರೆ ಪ್ರತಿ ತಿಂಗಳು ವೆಚ್ಚ ಹೋಗಿ ಸಿಕ್ಕಾಪಟ್ಟೆ ಹಣ ಕೂಡಿಡು ವದಾ ಮಡದಿ ಮಕ್ಕಳನ್ನು ಹೊಂದುವದಾ, ಜನ ನಿಮ್ಮ ಯಶಸ್ಸಿನ ಬಗ್ಗೆ, ಕೆಲಸದ ಬಗ್ಗೆ ಒಳ್ಳೆಯದು ಮಾತನಾಡುತ್ತಿದ್ದರೆ, ಮಾದ್ಯಮಗಳೆಲ್ಲ ನಿಮ್ಮ ಕೆಲಸದ ಬಗ್ಗೆ ಹಾಡಿಹೊಗಳುವದಾ ನಿಮಗಾಗುವ ಸನ್ಮಾನ, ಮಾನಮರ್ಯಾದಾಗಳಾ, ವಿದೇಶ ಪ್ರಯಾಣಗಳಾ, ಹೀಗೇ ವಿಚಾರ ಮಾಡುತ್ತಾ ಇದ್ದರೆ ಪ್ರತಿ ಕಲಾವಿದ ತಾನು ಈ ಬೇಕುಗಳ ಏಣಿಯಲ್ಲಿ ಎಲ್ಲಿದ್ದೇನೆ ಅಂತ ತಿಳಿದುಕೊಂಡು ಮುಂದೆ ಇನ್ನೂ ಏನೇನು ಸಾಧಿಸುವದಿದೆ ಅಂತ ಗುರುತಿಸಿಕೊಂಡು ಮುಂದೆ ಸಾಗುವದು. ಆದರೆ ಪ್ರತಿಯೊಬ್ಬ ಕಲಾವಿದ ತನ್ನ ಪ್ರತಿಭಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸು ವುದು ಅಷ್ಟೇಮುಖ್ಯ. ಯಾವದೋ ಒಂದು ಹಳೆ ಯ ಯಶಸ್ಸಿನ ಮೇಲೆ ಕನಸು ಕಾಣುತ್ತಾ, ಎಲ್ಲ ಪ್ರಗತಿಗಳ ಮೇಲೆ ಆಶೆಪಡುತ್ತಾ, ತನಗೆ ಅದು ಬೇಕು, ಇದು ಬೇಕು ಅನ್ನುತ್ತಾ ವೃಥಾಕಾಲ ಕ್ಷೇಪ ಮಾಡುವದು ಯಶಸ್ಸಿನ ದಾರಿ ಅಲ್ಲ. ಹಳೆಯ ಅಲ್ಬಮ್ಮಿನ ಚಿತ್ರ ನೋಡುತ್ತಾ, ನೆನಪುಗಳ ನವೀ ಕರಿಸುತ್ತ, ಅದನ್ನೇ ಮೆಲಕು ಹಾಕುತ್ತ ಇರುವದು ಸಹ ಭೂಷಣವಲ್ಲ.

ಹಾಗಾದರೆ ಯಶಸ್ಸು ಅನ್ನುವದನ್ನು ಕಲಾವಿದ ಪಡೆಯಬೇಕಾದರೆ ಏನು ಮಾಡಬೇಕು ಅಂದರೆ:
- ನಿರಂತರ ಶಿಕ್ಷಣ , ತರಬೇತಿ,ಮತ್ತು ಅನುಭವ ಪಡೆಯುವದಕ್ಕೆ ಸದಾ ಸಿದ್ಧನಿರು ವದು. ಸದಾ ಓದು, ಬರೆಯುವಿಕೆ, ತನ್ನ ಕಲಾ ಕ್ಷೇತ್ರದಲ್ಲಿ ಏನಾದರೂ ಮಾಡುತ್ತಾ ಚಿಂತನಶೀಲ, ಕ್ರಿಯಾಶೀಲವಾಗಿರಬೇಕು.
- ದುಡ್ಡೇ ದೊಡ್ಡಪ್ಪನಾದರೂ ಸಹ ದುಡ್ಡೇ ಮೊದಲು ದುಡ್ಡೇ ಅಂತಿಮ ಅಂತ ದುಡ್ಡಿಗೆ ಹತ್ತಿಕೊಳ್ಳದೆ ಕ್ರಿಯಾತನಿರಂತರ ಶಿಕ್ಷಣ, ತರಬೇತಿ,ಮತ್ತು ಅನುಭವ ಪಡೆಯುವದಕ್ಕೆ ಸದಾ ಸಿದ್ಧನಿರುವದು.
- ಸೂಕ್ಷ್ಮತೆ ರೂಢಿಸಿಕೊಂಡಾಗ ಅವರ ಅವರ ಪ್ರತಿಭೆಗೆ ಅನುಗುಣವಾಗಿ ದುಡ್ಡು ಮುಂದೆ ಬರುವದು, ಅದು ಬರುವಾಗ ಇಳಿಜಾರು, ಕಾಲುವೆಗಳನ್ನು, ನಿಲ್ಲಿಸುವ ಒಡ್ಡುಗಳನ್ನು ಕಲಾವಿದರೆ ಕಟ್ಟಿಕೊಳ್ಳುವದುಅನಿವಾರ್ಯ.
- ಪ್ರತಿ ಕಲಾವಿದ ತನ್ನದೇ ಆದ ಪರ್ಯಾಯ ಜೀವನೋಪಾಯದ ದಾರಿಗಳನ್ನು ಹುಡುಕಿ ಕೊಳ್ಳಬೇಕು, ಯಾಕೆಂದರೆ ಕೇವಲ ಒಂದೇ ಮಾರ್ಗ ಇಟ್ಟುಕೊಂಡರೆ ಜೀವನದ ಕೆಳಸ್ತರ ಅವಶ್ಯಕತೆಗಳನ್ನು ಕನಿಷ್ಠ ಹೊಂದುವಷ್ಟಾ ದರೂ ಇರುವದು ಅವಶ್ಯ. ಇಲ್ಲಾ ತನಗೆ ಗೊತ್ತಿರುವದು ಒಂದೇ ಅಂದರೆ ಆ ಒಂದರ ಲ್ಲಿಯೇ, ಏನೇ ಬರಲಿ ಮುಂದೆ ಸಾಗುವ ಉತ್ಕಟ ಮನೋಬಲ ರೂಢಿಸಿಕೊಳ್ಳುವದು ಅಷ್ಟೇ ಅನಿವಾರ್ಯ. ಮರುಭೂಮಿಯಲ್ಲಿ ಯೂ ಸಂಗೀತವಿರುತ್ತದೆ ಮತ್ತು ನಾಯಿಟ್ ಕ್ಲಬ್ಬುಗಳಲ್ಲಿ ಸಹ ಸಂಗೀತವಿರುತ್ತದೆ ಅನ್ನೋದು ಮರಿಬಾರದು.
- ಎಲ್ಲಿಂದ ಆರಂಭಿಸಿದ್ದೀರಿ,ಎಲ್ಲಿದ್ದೀರಿ,ಎಲ್ಲಿಗೆ ಹೋಗುವ ತವಕ, ಇಚ್ಛೆ ಇದೆ ಅನ್ನುವುದರ ಮೇಲೆ ಯಶಸ್ಸಿನಹಾದಿಗಳು ರೂಪುಗೊಳ್ಳು ತ್ತವೆ. ಅಲ್ಲಲ್ಲಿ ಒಬ್ಬ ಯೋಗ್ಯ ಮಾರ್ಗದರ್ಶ ಕನನ್ನು ಹುಡುಕಿಕೊಳ್ಳುವುದು ಅವಶ್ಯಕ. ಗುರಿ ಮತ್ತು ಗುರು ಎರಡೂ ಬೇಕು.
- ನಿಮ್ಮ ನಿಮ್ಮ ಸಾಥಿಗಳು, ಸಹನಟ ವರ್ಗ, ಮಾಡೆಲ್ಲುಗಳು, ನಿಮ್ಮ ಟೋಟಲ್ ಕಂಪನಿ ಒಳ್ಳೆಯದಿರಬೇಕು. ಕಲಾವಿದರ ವ್ಯಕ್ತಿತ್ವವು ರೂಪುಗೊಳ್ಳುವದೇ ಸುತ್ತಲಿನ ಪ್ರತಿಭಾವಂ ತ ಒರಗೆಯವರಿಂದ, ಹಿರಿಯರಿಂದ ಗೆಳೆಯ ರಿಂದ, ಮಾದ್ಯಮದವರಿಂದ. ಅದಕ್ಕಾಗಿ ನೀವೇ ಆಯ್ಕೆ ಮಾಡಿಕೊಳ್ಳುವದು. ಉತ್ತಮ ನಟ ನಟಿಯರು ಇದ್ದರೆ ಉತ್ತಮ ನಿರ್ದೇಶಕ ಹುಟ್ಟಿಕೊಳ್ಳುತ್ತಾನೆ, ಆದರೆ ಉತ್ತಮ ನಿರ್ದೇಶಕ ಉತ್ತಮ ನಟ ನಟಿ ಯರನ್ನು ಹುಟ್ಟಿಸುತ್ತಾನೆ ಅನ್ನುವದು ಗ್ಯಾರಂಟಿ ಅಲ್ಲ.
- ಶ್ರೇಷ್ಠ ಅನುಕರಣೆ, ಶ್ರೇಷ್ಠ ಗಮನಿಕೆ, ಶ್ರೇಷ್ಠ ಸೃಜನಶೀಲತೆ,ಶ್ರೇಷ್ಠ ಸಮಯ ಪ್ರಜ್ಞೆ, ಶ್ರೇಷ್ಠ ಕಂಪನಿ ಎಲ್ಲವನ್ನೂ ಸಕಾರಾತ್ಮಕವಾಗಿ ಬದಲಿಸಿಬಿಡುತ್ತದೆ. ಇದು ಎಲ್ಲಕಲಾ ಕ್ಷೇತ್ರದ ಕಲಾವಿದರಿಗೆ ಅನ್ವಯವಾಗುವಂಥದು.
- ಯಾವದೇ ಕೆಟ್ಟ ಚಟಗಳಿಗೆ ದಾಸನಾಗದೆ ಅವುಗಳನ್ನೆಲ್ಲ ನಿಯಂತ್ರಣದಲ್ಲಿ ಇಟ್ಟುಕೊಂ ಡಿರುವದು ಮುಖ್ಯ. ಅನುಭವದ ಪ್ರಕಾರ ಕಲಾವಿದರಿಗೂ ಕೆಟ್ಟ ಚಟಗಳಿಗೂ ಸ್ನೇಹ ಬಹಳ ಬೇಗ ಮತ್ತು ಘಾಡವಾಗಿರುತ್ತವೆ. ತನ್ನ ಸಾಮರ್ಥ, ಪ್ರತಿಭೆಗಿಂತ ಹೆಚ್ಚು ದುಡ್ಡು ಬೇಡುವದು ಸಹ ಕೆಟ್ಟ ಚಟವೇ ದುಡ್ಡು ತೆಗೆದುಕೊಂಡು ಪ್ರಾಮಾಣಿಕತೆ ಇಟ್ಟುಕೊ ಳ್ಳುವದು ಅಷ್ಟೇ ಮುಖ್ಯ. ಅದು ನಂಬಿಗೆ, ವಿಶ್ವಾಸಗಳನ್ನು ಗಳಿಸುತ್ತದೆ.
- ಎಲ್ಲ ಮಾಧ್ಯಮದವರ ಜತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳುವದು.
- ಅಭಿಮಾನಿಗಳು, ಅಭಿಮಾನಿ ಸಂಸ್ಥೆಗಳ ಜತೆ ಜಗಳವಾಡದೆ ಉತ್ತಮ ಸಂಬಂಧ ಇಟ್ಟುಕೊಳ್ಳುವದು.
- ನಿಮ್ಮ ಪರಿಚಯ , ಸಂಪರ್ಕಜಾಲಗಳನ್ನು ಯಾವಾಗಲೂ ಅಪಡೆಟ್ ಮಾಡಿಟ್ಟುಕೊ ಳ್ಳುವದು.
- ಬಂದ ಆದಾಯದಲ್ಲಿ ಕಡ್ಡಾಯವಾಗಿ ಉಳಿತಾಯ ಮಾಡುವದು ಅದು ಯಾವದೇ ರೂಪದಲ್ಲಿ ಇರಬಹುದು)
- ಆರೋಗ್ಯವನ್ನು ಸುಸ್ಥಿರವಾಗಿ ಇಟ್ಟುಕೊಂ ಡು ನಿರಂತರ ಸಾಧನೆಯಲ್ಲಿ (ತಾಲೀಮುಗಳು) ಇರುವದು.
- ಹೊಸತನದ, ಸೃಜನಶೀಲತೆ ಎಲ್ಲವನ್ನೂ ಹುಡುಕಾಟಗಳನ್ನು, ಪ್ರಯತ್ನಗಳನ್ನು ಯಾವಾಗಲೂ ಜೀವಂತವಾಗಿ ಇಟ್ಟುಕೊಳ್ಳು ವದು.
- ಎಲ್ಲವನ್ನು ದುಡ್ಡಿನಿಂದ ನೋಡಬೇಡಿ. ಮತ್ತು ಇತರ ಕಲಾವಿದರು ಮತ್ತು ಅವರ ಗಳಿಕೆ ಅಂತಸ್ತು ಬಗ್ಗೆ ವಿಚಾರ ದಯವಿಟ್ಟು ಮಾಡಬೇಡಿ. ಮಾವಿನಗಿಡದ ಹೂಗಳು ಪರಾಗ ಸ್ಪರ್ಶ ಪಡೆದೇ ಗಿಡ ತುಂಬ ಹಣ್ಣಾ ಗುತ್ತವೆ ಅನ್ನೋದು ನೆನಪಿನಲ್ಲಿರಲಿ.
- ಸರ್ಕಾರದ ಎಲ್ಲ ಯೋಜನೆಗಳ ಮೇಲೆ ಕಣ್ಣೀರಲಿ. ನಿಮ್ಮ ನಿಮ್ಮ ಅರ್ಹತೆ,ಪ್ರತಿಭೆ, ಜಾತಿ, ಗುರು ಬೆಂಬಲ, ನಿಮ್ಮ ವೈಯಕ್ತಿಕ ಸ್ನೇಹಜಾಲಗಳನ್ನು ನಿಮ್ಮ ಏಳಿಗೆಗಾಗಿ ಬಳಸಿಕೊಳ್ಳಿ.

ಅರವಿಂದ ಕುಲಕರ್ಣಿ,
ರಂಗಭೂಮಿ ಚಿಂತಕರು,ಧಾರವಾಡ