ಮೊಳೆಯುತಿದೆ ಮೊಳೆಯುತಿದೆ
ಹೊಸ ಚಿಗುರೊಡೆಯುತಿದೆ
ಚೈತನ್ಯ ಚಿಲುಮೆಯಾಯಿತು
ಕರೋನಾ ಕೊಳೆ ತೊಳೆಯುತಿದೆ
ಹೊಸಜೀವನಕೆ ಹಾದಿಯಾಗುತಿದೆ

ಕರೋನಾದ ಬೇವು ಸಿಹಿಯಾಗಿ
ಸಾವು ನೋವೆಲ್ಲಾ ಮರೆಯಾಗಿ
ಮನದುಂಬ ನಗೆಯಲೆಯಾಗಿ
ವಾಸ್ತವದ ನಿಜವು ಅರಿವಾಗಿ
ನಾಳೆಯ ನಂಬಿಕೆಯ ಕನಸಾಗಿ
ಹಿಗ್ಗದೆ ಕುಗ್ಗದೆ ಸಮಚಿತ್ತವಾಗಿ

ನಮ್ಮಯ ದಿಟ್ಟತನದ ನಡೆ
ಜೀವ ಅರಣ್ಯ ರಕ್ಷಣೆಯ ಕಡೆ
ನಡೆಸೋಣ ಬದುಕನು ಶಾಂತ
ಇರಲಿ ಎಲ್ಲರಲಿ ಸರಳ ಮತ
ಹಣವೆಂಬ ಭ್ರಮೆಯ ತೊರೆ
ಕ್ರಿಯಾಶೀಲ ಪ್ರಾರ್ಥನೆ ಪೊರೆ

ನಾವು ಎಂದೂ ಮೆರೆಯದೆ
ಪ್ರೀತಿ ಪ್ರೇಮ ಹಂಚುತೆಲ್ಲೆಡೆ
ಶುಭಶಕುನ ಆವರಿಸಲೆಲ್ಲೆಡೆ
ನಂಬಿಕೆ ಅನುಸರಿಸಲೆಲ್ಲೆಡೆ
ಒಗ್ಗಟ್ಟನ್ನೇ ತೋರುತಲೆಲ್ಲೆಡೆ
ದಿಟ್ಟ ಹೆಜ್ಜೆಯಲಿ ಸಾಗುತ ಸಾಗುತ….

✍️ಚೇತನಾ ಫ ಕಿರೇಸೂರ
ಶ್ರೀರಾಮನಗರ, ಧಾರವಾಡ.