ಸುರಿಯುವುದನು
ಸಾಕುಮಾಡಲು
ಹೇಳಿಬಿಡು ಅರುಣ
ಹಠತೊಟ್ಟಿಹ ವರುಣ
ಆದರೆ ಆವರಿಸಿಹ
ಭುವಿಯ ಬಿಡದಿರಲಿ
ಕೊಚ್ಚಿ ಒಯ್ಯಲಿ ಒಮ್ಮೆ
ಮನುಜನ ಮನದಲಿಹ
ಎಲ್ಲವೂ ತನ್ನದೆಂಬ
ದುಷ್ಟ ತುಮುಲವನು…
ದೇವನಿತ್ತ ಭಿಕ್ಷೆಯು
ಈ ಭುವಿಯು,ಜೀವವು
ಇದನರಿಯದ ಎಲ್ಲರನೂ
ಕರೆದೊಯ್ದು, ಕೈಬಿಡಲಿ
ನಂಬಿದ ಶಿಷ್ಟ ಭಕ್ತರನು…
ಮುದುಡಿ ಮುದ್ದೆಯಾಗಿಹ
ಜನಜೀವಕೆ ಮುದನೀಡಲು
ಅರುಣೋದಯ ಅರಳಲಿ
ವಸುಂಧರೆಯ ಕಣ್ಣೀರನು
ಒಂದೊಮ್ಮೆ ಒರೆಸಿಬಿಡಲಿ….

   ✍️ಶಿವಾನಂದ ನಾಗೂರ, ಶಿಕ್ಷಕರು  
ಧಾರವಾಡ