ಸಂಬಂಧಗಳು ದೂರವಾಗುವ ಮೊದಲು ಯೋಚಿಸು ಇನ್ನೊಬ್ಬರ ಮನ ನೋಯಿಸದಂತೆ ಜೀವಿಸು.

ನಿನ್ನ ಮನದ ಭಾವ ತಾಳಕೆ
ಎಲ್ಲರು ಕುಣಿಯುತಲಿರಲೆಂದು ನಿರೀಕ್ಷಿಸದಿರು

ಮಂಗನಂತೆ ಹುಚ್ಚರಾಟ ಮಾಡುತ
ಜೊತೆಗಿದ್ದವರನು ದೂರ ಮಾಡಿ ಒಂಟಿಯಾಗದಿರು.

ತಪ್ಪೆಸಗಿ ಕೊರಗಿ ಸೊರಗಿದರೆ ಸೊಬಗಿಲ್ಲ
ಮುಂದೆ ತಪ್ಪಾಗದಂತೆ ಒಳ್ಳೆಯ ಒಡನಾಟವಿರಲಿ

ಬಂಗಾರದಂತ ಬಂಧಗಳನು ಕಳ್ಕೊಂಡು ಪರಿತಪಿಸದಿರು
ಜೊತೆಯಿರುವಾಗಲೇ ಜೋಪಾನವಿರಲಿ.

       ✍🏻ಶಿವಾನಂದ ಉಳ್ಳಿಗೇರಿ.
ಶಿಕ್ಷಕರು,ಉಡಿಕೇರಿ
ತಾ:ಬೈಲಹೊಂಗಲ ಜಿ:ಬೆಳಗಾವಿ