ಕಡಲಾಚೆ ಮುಗಿಲ ಮುಳ ಮುಳಗಿ ತೇಲಿ
ನೀಲಿ ನೀಲ ಮೋಡ ಬಾನ,
ಮೋಡ ಮೋಡ ಗೂಡು ಗುಡುಗುಡುಗಿ ಸಿಡಿಲ, ಮರಿಯಾಚೆ ತನನನನನ

ಕಾಮನಬಿಲ್ಲು ಬಿಗಿದಪ್ಪಿ ನಿನ್ನ
ತಂಪೆರಗಿ ತನನನನನ
ಹೂಬಿಸಿಲಿನಲ್ಲಿ ತುಂತುರು  ಹನಿಯ
ನೆಲ ನೆಲವ ಹಸಿಯ ತನನ,

ಅಲೆ ಅಲೆಯ ಮೇಲೆ ಮಿರಮಿರನೆ ಮಿನುಗಿ
ಒಳ ಒಳಗೆ ಹೊಯ್ಯ ತನನ
ಸ್ವಾತಿಮುತ್ತು ಮಳೆ ಹನಿ ಹನಿಯ ಜಾರಿ
ಒಡಲಾಳ ಸೇರಿ ತನನನ

ಕಪ್ಪೆ ಚಿಪ್ಪಿನೊಳಗೆ ಜೀವಭಾವ ತುಂಬಿ,           ಮುತ್ತು ಮಳೆಯ ತನನ ತನನ,
ಬೆಳ್ಳಿಚುಕ್ಕೆಯಂತೆ  ಫಳಫಳನೆ   ಹೊಳೆದು   ಚಂದಚೆಂದ ಬಾಳ ತನನನ

       ✍️ ಶ್ರೀಧರ ಗಸ್ತಿ.
ಶಿಕ್ಷಕರು, ಧಾರವಾಡ