ಹಲವು ವರ್ಷಗಳ ಹಿಂದೆ ಒಂದೂರಿನಲ್ಲಿ ಒಬ್ಬ ಅಂಬಿಗನ ಕುಟುಂಬವಿತ್ತು. ಆ ಊರಿನಲ್ಲಿ ಅವನ ಕುಟುಂಬ ಮಾತ್ರ ದೋಣಿ ನಡೆಸುವ ಕಾರ್ಯ ಮಾಡುತ್ತಿತ್ತು. ವಿಶಾಲ ಹರಿವಿನ ನದಿಯನ್ನು ದಾಟಿ ಪೇಟೆಗೆ ಹೋಗಬೇಕೆಂದರೆಎಲ್ಲರೂ ಮುಖ ಮಾಡುವುದು ಅಂಬಿಗನ ಮನೆಯತ್ತಲೇ ಆಗಿತ್ತು. ಆ ಕುಟುಂಬದ ಮೂರು ನಾಲ್ಕುಅಂಬಿಗರು ಸದಾ ಊರಜನರ ಸೇವೆ ಮಾಡುತ್ತಾ, ಜನರು ನೀಡಿದ ಹಣದಿಂದ ಜೀವನ ನಡೆಸುತ್ತಿದ್ದರು.

ಹೀಗೆ ದಿನಗಳು ಸಾಗುತ್ತಿದ್ದಾಗ, ಅಂಬಿಗರ ಪೈಕಿ ಒಬ್ಬ ಹುಡುಗನಿಗೆ, ತಮ್ಮಿಂದಲೇ ಈ ಊರಿನಲ್ಲಿ ಆಮದು ರಪ್ತುಗಳು ನಡೆಯುವುದು. ಜನಸಂಚಾ ರ, ಜನಜೀವನ ಸುಲಭವಾಗಿರುವುದು.. ಎನ್ನುವ ಅಹಂಕಾರ ಮೂಡಿತು. ಆತ ಮನೆಯವರೆಲ್ಲರ ತಲೆಯಲ್ಲಿ ಇದೇ ವಿಷ ಬೀಜವನ್ನು ಬಿತ್ತಿದ. ಆಗ ಅವರೆಲ್ಲರೂ ಊರಿನಲ್ಲಿ ಪಂಚಾಯ್ತಿ ಕರೆದು ನಾವು ದೋಣಿ ನಡೆಸಬೇಕೆಂದರೆ ನಮಗೆ ಚಿನ್ನದ ಲೇಪನದ ದೋಣಿ ತಯಾರಿಸಿ ಕೊಡಬೇಕು. ಇಲ್ಲ ವಾದಲ್ಲಿ ನಾವು ದೋಣಿ ನಡೆಸುವುದಿಲ್ಲ ಎಂದು ಹಠ ಹಿಡಿದರು. “ಅಮೂಲ್ಯವಾದ ಚಿನ್ನದ ಲೇಪ ನದ ದೋಣಿ ತಯಾರಿಸಿ ನೀರಿಗಿಳಿಸುವುದು ತರವಲ್ಲ, ಕಳ್ಳರು ಕದಿಯಬಹುದು, ಸುರಕ್ಷಿತವೂ ಅಲ್ಲ”.. ಎಂದು ಹಿರಿಯರು ಎಷ್ಟೇ ಬುದ್ಧಿ ಹೇಳಿದರೂ ಅಂಬಿಗರು ಹಠ ಬಿಡಲಿಲ್ಲ. ಬೇರೆ ದಾರಿಯೇ ಕಾಣದೇ ಚಿನ್ನದ ಲೇಪನದ ದೋಣಿ ತಯಾರಿಸಿ ಕೊಡಲಾಯಿತು. ಅಂಬಿಗರು ಗತ್ತಿ ನಿಂದ ಚಿನ್ನದದೋಣಿ ನಡೆಸತೊಡಗಿದರು.ಒಂದು ದಿನ ವಿಪರೀತ ಮಳೆ ಸುರಿದು ವಿಪರೀತ ಪ್ರವಾಹ ಉಂಟಾಗಿ ದಡದಲ್ಲಿ ಕಟ್ಟಿದ್ದ ದೋಣಿ ಊರವರ ಕಣ್ಣಮುಂದೆಯೇ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು.

ಅಷ್ಟಾದರೂ ಬುದ್ದಿ ಕಲಿಯದ. ಅಂಬಿಗರ ಹುಡುಗ’ ಈ ಸಲ ಚಿನ್ನದ ಹುಟ್ಟಗಳನ್ನಾದರೂ ಮಾಡಿಸಿಕೊಡಿ’ ಎಂದಾಗ ಊರವರ ಸಿಟ್ಟು ನೆತ್ತಿಗೇರಿತ್ತು. ಆಗ ಆ ಊರಿನ ಯುವಕರಿಬ್ಬರು ಮುಂದೆ ಬಂದು “ಇವರ ಅಹಂ ಬುದ್ದಿ ಗೊತ್ತಾದ ಮೇಲೆ ಜಾಗೃತರಾದ ನಾವು ದೋಣಿ ತಯಾರಿಸು ವುದನ್ನು, ಹುಟ್ಟು ಹಾಕುವುದನ್ನು ಕಲಿತಿದ್ದೇವೆ. ಬನ್ನಿ ನಾವೇ ದೋಣಿ ನಡೆಸುತ್ತೇವೆ ..” ಎಂದು ಮುಂದೆ ಬಂದರು.ಆಗ ಊರವರು ಹರುಷದಿಂದ ಅವರ ದೋಣಿಯಲ್ಲಿ ಸಂಚರಿಸತೊಡಗಿದರು.
ಅಷ್ಟೇ ಅಲ್ಲದೇ ಆ ಹುಡುಗರು ಎಲ್ಲರಿಗೂ ದೋಣಿ ತಯಾರಿಸುವ, ನಡೆಸುವ ತರಬೇತಿ ನೀಡಿದರು. ಊರವರು ಅಂಬಿಗರ ಮನೆಯ ಕಡೆ ಹಾಯಲಿಲ್ಲ. ಇತ್ತ ಅಂಬಿಗ ವೃತ್ತಿ ಬಿಟ್ಟು ಬೇರೆನೂ ಮಾಡಲು ಬರದ ಅಂಬಿಗರು ಪೆಚ್ಚಾಗಿ ಊರು ಬಿಟ್ಟು ತೆರಳಬೇಕಾಯಿತು.

ಮಕ್ಕಳೇ.. ಸೂರ್ಯ, ಚಂದ್ರ, ಭೂಮಿ ಇವೆಲ್ಲ ತಾನೊಂದೇ ಜಗಕೆ ಆಧಾರ ಎಂಬ ಅಹಂ ತೋರಿಸಿ, ಒಂದು ದಿನವೂ ತಮ್ಮ ಕೆಲಸವನ್ನು ನಿಲ್ಲಿಸಿಲ್ಲ. ಪಂಚಭೂತಗಳು ಸದಾಕಾಲ ತಮ್ಮ ಕರ್ತವ್ಯ ಮೆರೆಯುತ್ತಲೇ ಇವೆ. ನಾವು ನಮ್ಮಿಂದ ಲೇ ಎಲ್ಲ ಎನ್ನುವುದನ್ನು ಅಳಿಸೋಣ. ಎಲ್ಲರಿದ್ದರೆ ನಾವು ಎಂಬುದನ್ನು ಮರೆಯದಿರೋಣ.
✍️ರೇಖಾ ಭಟ್, ಹೊನ್ನಗದ್ದೆ
ಸೂರ್ಯ ಚಂದ್ರ ರಂತೆ ಬಾಳುವಂತಾಗಬೇಕು…ನೈಸ್
LikeLike
ಚೆನ್ನಾಗಿದೆ ನೀತಿ ಪಾಠ
LikeLiked by 1 person