ಹಿನ್ನೆಲೆ :ಸ್ವಾತಂತ್ರಕ್ಕೆ ಮೊದಲು ಮತ್ತು ನಂತರ, ಸ್ವತಂತ್ರ ಭಾರತದ ಮೊದಲ ವರ್ಷಗಳಲ್ಲಿ ಅದೂ 80ರ ತನಕ ವಿದ್ಯಾ ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಗಳ ತೊಟ್ಟಿಲುಗಳಾಗಿದ್ದವು. ಆಡಳಿತ ವರ್ಗ ಶಿಕ್ಷಕರು ಪ್ರಾಧ್ಯಾಪಕರು ಎಲ್ಲರೂ ಸಾಂಸ್ಕೃತಿಕ ತೊಟ್ಟಿಲಗಳನ್ನು ದೇಶಪ್ರೇಮ ಅಭಿಮಾನ, ಭವ್ಯ ಭಾರತದ ನಿರ್ಮಾಣದ ಶಿಶುಗಳನ್ನ ಜೋಗಳು ಹಾಡಿ ಮಮತೆ ಪ್ರೀತಿಯಿಂದ ಪೋಷಿಸುತ್ತಿದ್ದರು. ಕಾನ್ವೆಂಟ್ ಶಿಕ್ಷಣದ, ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ಹೆಚ್ಚುತ್ತಿರುವ ರಾಜಕೀಯ ಕಬಂದ ಬಾಹುಗಳ ಹಿಡಿತ , ಆಂಗ್ಲರಿಂದ ಸಾಲಪಡೆದು ಬರೀ ಬಡ್ಡಿ ನೀಡುತ್ತಿರುವ ಬಾಬುಶಾಹಿ, ಬದಲಾಗುತ್ತಿರುವ ಎಲ್ಲ ಮಟ್ಟದ ಭೋದಕವರ್ಗದ ಮನೋಸ್ಥಿತಿ, ಧರ್ಮ, ಜಾತಿಗಳ ವೈಚಾರಿಕ ತಾಕಲಾಟಗಳು ಮತ್ತು ಮತ ಪಡೆಯುವ ಹಪಾಹಪಿತನದ ಹುನ್ನಾರಗಳು ಭಾಷೆ, ಪ್ರಾದೇಶಿಕ ಅಸಮತೋಲನ, ಎಲ್ಲದರ ಋಣಾತ್ಮಕ ಪ್ರಭಾವಗಳು ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಸವೆಸುತ್ತ ಸಾವಕಾಶವಾಗಿ ಸಾಂಸ್ಕೃತಿಕ ಅಡಿಪಾಯವನ್ನೇ ಅಲುಗಾಡಿಸತಾ ಇವೆ. ಈ ಸ್ಥಿತಿ ವಿದ್ಯಾ ಸಂಸ್ಥೆಗಳ ಇಡಿಯಾದ ಆವರಣದ ವಾತಾವರಣವನ್ನು ಕ್ಯಾನ್ಸರ ಹಾಗೆ ಪಸರಿಸುತ್ತ ಸಮಾಜದ ಇತರ ಭಾಗಗಳಿಗೆ ಹಬ್ಬುತ್ತ ಎಲ್ಲ ಹಂತಗಳನ್ನು ದಾಟಿ ತಿರುಗಿ ಮೊದಲ ಸ್ಥಿತಿಗೆ ಬಾರದ ಘಟ್ಟ ಮುಟ್ಟುತ್ತಿದೆ. ಇದು ತನ್ನದೇ ಆದ ಸಾಂಸ್ಕೃತಿಕ ಅರಾಜಕತೆ ಮುಟ್ಟಿ ಭ್ರಾಮಕ ಸಾಂಸ್ಕೃತಿಕ ವೈವಿಧ್ಯತೆಯನ್ನ ತಲುಪಿ ಈಗ ನಾವು ಯಾವಾದನ್ನ ಜ್ಯಾತ್ಯಾತೀತತೆ ಅನ್ನುತ್ತೇವೆಯೋ ಆ ಮನೋಸ್ಥಿತಿಗೆ ಗೊತ್ತಿಲ್ಲದೆಯೇ ಬಂದು ತಲುಪುತ್ತೇವೆ.
ಪ್ರಸ್ತಾವನೆ:-
ಶಾಲಾ ಕಾಲೇಜು ರಂಗಭೂಮಿ ಅನ್ನುವದು ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡ ವೇದಿಕೆ. ಇವು ವಿದ್ಯಾರ್ಥಿ ಮತ್ತು ಬೋಧಕವರ್ಗ ದವರಲ್ಲಿ ಪ್ರಾಚಾರ್ಯ ಮತ್ತು ಆಡಳಿತ ವರ್ಗದ ಸಹಕಾರದಲ್ಲಿ ನಾಟಕ, ಪ್ರಹಸನ, ಎಲ್ಲ ಪ್ರಕಾರದ ಸಂಗೀತ, ಎಲ್ಲ ಪ್ರಕಾರದ ನೃತ್ಯ, ಶಿಲ್ಪ ಕಲೆ, ಚಲನ ಚಿತ್ರ, ಛಾಯಾಗ್ರಹಣ ಮತ್ತು ಯಾವದೇ ಪ್ರದರ್ಶಕ ಕಲೆಗಳ ಬಗ್ಗೆ ಸಂವೇದನಶೀಲತೆ, ಪ್ರತಿಭಾ ಅನ್ವೇಷಣೆ, ಉದ್ದಿಪನೆ ಮಾಡುತ್ತಲೇ ಸಾಹಿತ್ಯ, ಜನಪರ ಕಲೆಗಳನ್ನ ಸಾಕಾರಗೊಳಿಸುತ್ತ ತಮ್ಮಎಡಪಂಥೀಯವೋ ಬಲಪಂಥೀಯವೋ, ಅಥವಾ ಮಧ್ಯಮ ಮಾರ್ಗಿಯ. ತುಡಿತ ಮಿಡಿತ ಗಳಿಗೆ ಇಂಬುಕೊಡುತ್ತ ಜೀವಂತವಾದ ನಾಗರಿಕ ಕಲಿಕಾ ಸಂಸ್ಕತಿಯ ಬೆಳವಣಿಗೆಯನ್ನು ವಿದ್ಯಾ ಸಮುಚ್ಚಯಗಳ ಕಣಿವೆಯಲ್ಲಿ ಹರಿಯುವ ವಿದ್ಯಾ ನದಿಯ ಎರಡು ಬದಿಗಳಲ್ಲಿ ಈ ಶಾಲಾ ಕಾಲೇಜು ರಂಗಭೂಮಿ ಮಾಡಬೇಕಿತ್ತು. ಆದರೆ ಇಂದು ಏನಾಗಿದೆ ಅಂದರೆ, ಹರಿತವಾದ ರಾಜಕೀಯ ಸಂಸ್ಕೃತಿ ಪಕ್ಷ ಪ್ರತಿಪಾದನೆಗಳ ಸಲುವಾಗಿ ರಾಜಕೀಯ ಸಿದ್ಧಾಂತಗಳ ಘರ್ಷಣೆಗಳಿಂದಾಗಿ ನಿಂತ ನೀರಾಗಿದೆ.ಈ ಕಡೆ ಸರೋವರವೂ ಆಗಿಲ್ಲ, ಕೆರೆಗಳೂ ಕೂಡ ಆಗದೆ ಗುಂಡಿಗಳಾಗಿವೆ. ಇಂದು ಯಾವದೇ ವಿಶ್ವವಿದ್ಯಾಲಯಗಳ, ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳು ರಾಜಕೀಯ ನಿರ್ಭರತೆ ಹೊಂದಿಲ್ಲ. ಯಾವ ಯಾವದೋ ರಾಜಕೀಯ ಗಾಳಿಗಳು ಬಿಸುತ್ತಾ ಇರುತ್ತವೆ. ಕುಲಾಧಿಪತಿ, ಉಪಕುಲಪತಿ, ನಿರ್ದೇಶಕರ ಕಮಿಷನರ್ ಗಳ ನೇಮಕಾತಿ ಪದೋನ್ನತಿ ಎಲ್ಲವೂ ನಡೆಯುತ್ತಿರುವದನ್ನ ನೋಡಿದಾಗ ‘ಇದೇ ಒಂದು ದೊಡ್ಡ ತಾರಾಗಣ ಹೊಂದಿದ ನಾಟಕ ತಂಡ’ ಅಂತ ಅನಿಸಿದರೆ ಅತಿಶಯೋಕ್ತಿ ಇಲ್ಲ. ಇದು ಎಂತಹುದೆಂದರೆ ಬ್ಲಾಕ್ ಬಸ್ಟರ್ ಸಿನಿಮಾ “ಅಮರ ಆಕಬರ್ ಅಂಥೋನಿ” ಸಿನಿಮಾ ಮೀರಿಸಿ, ನಿನ್ನೆ ಮೊನ್ನೆ ನಿರ್ಮಿಸಿದ “ಪರ್ವ” ವನ್ನೂ ಕೂಡ ಸರ್ವ ರೀತಿಯಿಂದಲೂ ಮೀರಿಸುತ್ತದೆ.

ವ್ಯಾಪ್ತಿ:
“ಮನೆಯೇ ಮೊದಲ ಪಾಠಶಾಲೆ” ಅನ್ನುವ ತತ್ವವನ್ನು ನಂಬಿದರೆ ನಮ್ಮ ಕಲ್ಪನೆಯ ಶಾಲಾ ಕಾಲೇಜು ರಂಗಭೂಮಿ ಮನೆಯಿಂದಲೇ ಆರಂಭ ವಾಗುವದು. ಸಂಸ್ಕೃತಿ ಸಂಪ್ರದಾಯ, ಸತ್ಯ, ಅಸತ್ಯ, ಹಿಂಸೆ ಅಹಿಂಸೆ, ಪ್ರಾಮಾಣಿಕತೆ,ಉತ್ತಮ ಸಂಸ್ಕಾರಗಳ ಸಾಕ್ಷರತೆಯ ರ,ಠ,ಈ,ಕ ಆರಂಭ ವಾಗುವದೇ ಇಲ್ಲಿಂದ. ಅದು ಮುಂದೆ ಮುಕ್ತ ವಾದ ಬೃಹತ್ ಜಗತ್ತಿಗೆ ತೆಗೆದುಕೊಳ್ಳುತ್ತದೆ. ಈ ನಡುವೆ ಆ ವಿದ್ಯಾರ್ಥಿಗಳು ಹೋಗುವ ಎಲ್ಲಶಾಲೆ ಕಾಲೇಜು, ವಿಶ್ವವಿದ್ಯಾಲಯ. ಸಂಕೀರ್ಣಗಳನ್ನ ಒಳಗೊಂಡಿರುತ್ತದೆ. ಈ ಎಲ್ಲ ಸಂಕೀರ್ಣಗಳು ಪ್ರದರ್ಶಕ ಕಲೆಗಳ ಪ್ರತಿಭೆ ಹೊಂದಿದ ಪ್ರತಿಭಾ ಉತ್ಪಾನೆಯ ಉಗಮ ಸ್ಥಳಗಳು. ಇದನ್ನು ಸದು ಪಯೋಗಿಸಲು ಯೋಗ್ಯ ಒಳ್ಳೆಯ ಶ್ರೇಷ್ಠತೆಯ ಗಡಿ ದಾಟಿದ ಗುರು ವೃಂದ ಮಾತ್ರ ಪ್ರತಿಭೆಯನ್ನು ಗುರುತಿಸಿ, ಮನ್ನಣೆ ನೀಡಿ ಪ್ರೋತ್ಸಾಹಿಸಲು, ಪೋಷಿಸಲು ಅವಶ್ಯಕವಾಗಿ ಬೇಕು. ಇದು ಸಂಶೋಧನೆಯು ಹೌದು,ಆವಿಷ್ಕಾರವೂ ಹೌದು. ಇವೆಲ್ಲವೂ ಸಾಮುದಾಯಿಕ ಸಂಸ್ಕ್ರತಿಯ ಹಿನ್ನೆಲೆಯಲ್ಲಿ ಜರುಗಬೇಕು. ಇದೆಲ್ಲ ಮನೆಯಿಂದ ಆರಂಭವಾಗುವದಕ್ಕೆ ‘ಸಾಂಸ್ಕ್ರತಿಕ ಪಾಲಕತ್ವ’ ಬೇಕು. ಈ ಸಾಂಸ್ಕೃತಿಕ ಪಾಲಕತ್ವ ಅನ್ನುವ ಪರಿಕಲ್ಪನೆ ವೈಶಿಷ್ಟಮಯವಾದುದು. ಇದರಲ್ಲಿ ಸ್ವೀಕಾರ, ಸ್ವಾಧೀನತೆ, ಅಂತರ್ಗತೆ ತಿಳುವಳಿಕೆ ಇತಿಹಾಸದ ಅರಿವು ನಂಬುಗೆ ವಿಶ್ವಾಸದ. ಕಾರಣ ಗಳ ಪೂರಕತೆ, ಸಂಪ್ರದಾಯ ಮತ್ತು ಮೌಲ್ಯಗಳು ಇವುಗಳ ಸಂಕೀರ್ಣತೆಯನ್ನು ಹರೆಯದ ಪಾಲ ಕರು,ಪೋಷಕರು ಮತ್ತು ಶಿಕ್ಷಕರು,ಪ್ರಾಧ್ಯಾಪಕರು ಅರಿತಿರಬೇಕಾಗುತ್ತದೆ. ಅವರಿಗೆ ಅರಿವಿದ್ದಾಗ ಮಾತ್ರ ಮನೆಯೇ ಮೊದಲ ಪಾಠಶಾಲೆ ಅನ್ನೋ ದು ಅರ್ಥ ಪಡೆಯುತ್ತದೆ. ಆಗ ಮಾತ್ರ ಅವರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ವರ್ಗಾಯಿಸಲು ಸಾಧ್ಯ. ಅವರು ಅದನ್ನ ಪಾಲಿಸುತ್ತಾ ಬಂದರೆ ಮಕ್ಕಳು ಸಹ ಗೊತ್ತಿಲ್ಲದ ಹಾಗೆ ಅನುಕರಣೆ ಮಾಡುತ್ತಾ ಕಲಿಯುತ್ತಾರೆ. ಕಲಿಯುತ್ತಾ, ಮಾಡುತ್ತಾ ಹೋದಂತೆ ಅವರು ಜವಾಬ್ದಾರಿ ರೂಢಿಸಿಕೊಳ್ಳುತ್ತಾರೆ. ಕಾನ್ವೆಂಟ್ ಶಾಲೆಗಳು, ಮದರಸಾಗಳು, ವಿಹಾರಗಳು ಪಾಠಶಾಲೆಗಳು ತಮ್ಮದೇ ಆದ ರೀತಿಯಲ್ಲಿ ಸಾಂಸ್ಕೃತಿಕ ಜೀವನದ ಮೌಲ್ಯಗಳನ್ನು ನೀಡುತ್ತಾ ಬಂದಿದ್ದು ಅವು ಎಲ್ಲ ಕೂಡಿ ಸಾಂಸ್ಕೃತಿಕ ಅನ್ನುವದನ್ನೆಲ್ಲ ಹೆಚ್ಚು ಹೆಚ್ಚು ಸಂಕೀರ್ಣ ಮಾಡಿದೆ ಇವೆಲ್ಲವೂ ಇಂದು ಸಂಪೂರ್ಣವಾಗಿ ಬದಲಾಗುವ ಸಮಯ ಬಂದಿದೆ ಈ ಬದಲಾವಣೆ ಕೆಳಗಿನಿಂದಲೇ ಆಗಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಈ ಬಾಲ್ಯ ಅವಸ್ಥೆಯಿಂದಲೇ ಆಗುವ, ಆಗಬೇಕಾದ ವ್ಯವಸ್ಥೆ ಬಗ್ಗೆ ಒತ್ತಿ ಹೇಳಿದ್ದರೂ ಅದೊಂದು ದಿವ್ಯ ಮೌನದ ಆವಸ್ಥೆಯಲ್ಲಿದೆ.
ಉದ್ದೇಶಗಳು

ಈ ಹಿಂದಿನ ಎಲ್ಲ ಪ್ಯಾರಾಗಳನ್ನು ಗಮನಿಸಿದಾಗ ಶಾಲಾ ಕಾಲೇಜುಗಳ ರಂಗಭೂಮಿಯ ಕ್ಯಾನ್ವಾಸ್ ಸ್ವಚ್ಛವಾಗಿ ಕಾಣುತ್ತದೆ. ಒಂದುಕಾಲದಲ್ಲಿ ಎಲ್ಲ 64 ವಿದ್ಯೆಗಳನ್ನು ಅಂದರೆ ನಾಟ್ಯಶಾಸ್ತ್ರದಿಂದ ಹಿಡಿದು ಎಲ್ಲವನ್ನೂ ನಮ್ಮ ಪ್ರಾಚೀನ ಭಾರತದ ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಿಸ ಲಾಗುತ್ತಿತ್ತು. ಹಾಗೆಯೇ ಅವೆಲ್ಲ ಒಂದು ರೀತಿ ಯಿಂದ ಮನೆಯೇ ಮೊದಲ ಪಾಠಶಾಲೆಯ ವಿಸ್ತೃತ ರೂಪವಾಗಿದ್ದವು. ಗುರುಕುಲ ಅನಿಸಿಕೊಂ ಡವು. ಸಾಂಪ್ರಾದಾಯಕವಾದ ವಿದ್ಯೆ ಮತ್ತು ಕೌಶಲ್ಯಗಳನ್ನು ಅವರವರ ಆಸಕ್ತಿ ಮತ್ತು ವಂಶ ಪಾರಂಪಾರಿಕ ವೃತ್ತಿಗೆ ಅನುಗುಣವಾಗಿ ಹೇಳಿ ಕೊಡಲಾಗುತ್ತಿತ್ತು. ಅಷ್ಟೇ ಅಲ್ಲ ಕೌಶಲ್ಯ ಮತ್ತು ವಿದ್ಯೆ ಅನ್ನುವದು ಅಂದು ಪಡೆಯುವ ಶಿಕ್ಷಣದ ಆವಿಭಾಜ್ಯ ಅಂಗವಾಗಿತ್ತು. ಹೀಗಾಗಿ ಉದ್ದೇಶ ಗಳು ನಿಚ್ಚಳವಾಗಿದ್ದವು ಮತ್ತು ಅವು ಈಗಲೂ ಸಹ ಅನ್ವಯವಾಗುತ್ತವೆ.
1)ಸಾಂಸ್ಕೃತಿಕ ಪಾಲಕತ್ವ ಬಗ್ಗೆ ಅರಿವನ್ನು ಬಾಲ್ಯದ ಆರಂಭದ ದಿನಗಳಲ್ಲಿಯೇ ಅವರ ಪಾಲಕರು ತಮ್ಮ ಮಕ್ಕಳಿಗೆ ನೀಡಲು ಸಹಾಯ ವಾಗುವಂತೆ ಇತಿಹಾಸ, ಧರ್ಮ, ಹಬ್ಬಗಳು ಆಚರಣೆಗಳು ಮಹತ್ವ ತಿಳಿಸಿ ಹೇಳುವ ತರಬೇತಿ ಆಗುವದು ಅಗತ್ಯವಾಗಿದೆ. NEP ದೃಷ್ಟಿಯಿಂದ ಲೂ ಈ ಹಂತ ಮಹತ್ವದ್ದಾಗಿದೆ.
2)ಎಲ್ಲ ಮಾಧ್ಯಮಗಳನ್ನು ಬಳಸಿಕೊಂಡು ದೇಶಾ ಭಿಮಾನ, ನಾಗರಿಕತೆ, ಕರ್ತವ್ಯ, ಜವಾಬ್ದಾರಿ, ಸುಸ್ಥಿರತೆ, ಆತ್ಮ ನಿರ್ಭರ ಭಾರತ ನಿರ್ಮಾಣ, ಅಷ್ಟೇ ಅಲ್ಲದೆ ಎಲ್ಲ ಕ್ಷೇತ್ರಗಳಲ್ಲಿ ಕೌಶಲ್ಯಾಭಿವೃದ್ದಿ ಯನ್ನು ಎಲ್ಲ ಪ್ರದರ್ಶಕ ಕಲಾ ಕ್ಷೇತ್ರಗಳಲ್ಲಿ ಮಾಡುವುದು.
3)ಮಾನವೀಯ ಮೌಲ್ಯಗಳ, ನಾಗರಿಕಪ್ರಜ್ಞೆಗಳ, ಜವಾಬ್ದಾರಿಗಳ ಬಗ್ಗೆ ಬಾಲ್ಯದ ಆರಂಭದಲ್ಲಿಯೇ ಅರಿವು ಜಾಗೃತಿ ಹುಟ್ಟಿಸುವದು.
4) ಪ್ರದರ್ಶನ, ಪ್ರಾತ್ಯಕ್ಷಿಕೆಗಳ ಮೂಲಕ ಅಂದರೆ ಕಥೆ ಹೇಳುವದು, ಪುರಾಣ ಕೀರ್ತನೆಗಳಿಂದ ಪಾಲಕತ್ವ ತಿಳುವಳಿಕೆ ಆಗಬೇಕಾಗಿದೆ.

5)ಹೊಸ ಶಿಕ್ಷಣ ನೀತಿಯಲ್ಲಿ ನಮೂದಿಸಲಾದ ಸಂಗೀತ, ಚಿತ್ರಕಲೆ ನಾಟಕ, ನೃತ್ಯ ಶಿಲ್ಪಕಲೆ, ಛಾಯಾಗ್ರಹಣ ಇತ್ಯಾದಿ ಕೌಶಲ್ಯ ಭರಿತ ಜ್ಞಾನ 8ನೇ ವಯಸ್ಸಿನಿಂದ ಆರಂಭವಾಗಬೇಕಿದೆ.
6)ಸಮಗ್ರ ಸಂಪೂರ್ಣ ವ್ಯಕ್ತಿತ್ವಕ್ಕಾಗಿ ಸಾಂಸ್ಕೃತಿಕ ರಹದಾರಿಗಳನ್ನು ಹುಡುಕುವ ಪ್ರಯತ್ನಗಳು ಮಾತ್ರ ಎಳೆಯ ವಯಸ್ಸಿನಲ್ಲಿಯೇ ಎಳೆಯ ಮನ ಸುಗಳಲ್ಲಿ ಬುನಾದಿ ಹಾಕಬೇಕಾಗಿದೆ.
7)ಆಯ್ಕೆ ಆಧಾರಿತ ಮೌಲ್ಯಅಂಕ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತ ವಿವಿಧ ಮಟ್ಟದಲ್ಲಿ ವಿವಿಧ ದ್ವಾರ ಗಳ ಮೂಲಕ ಹೊಸ ಕೌಶಲ್ಯಗಳನ್ನು ಸಾಕಾರ ಪಡೆಯುವದು. 8)ಶಿಕ್ಷಣವ್ಯವಸ್ಥೆಯ ಎಲ್ಲ ಮಟ್ಟಗಳಲ್ಲಿ ಒಳ್ಳೆಯ ಮಿಶ್ರಣದ (blended) ಕಲಿಕೆ ಕಲಿಯುವದು ರಂಗಭೂಮಿಯ ದಾರಿಯಿಂದ ಸುಲಭ. 9)ಸಾಂಸ್ಕೃತಿಕ ವೈವಿಧ್ಯತೆಯನ್ನು ಸರಿಯಾದ, ತಕ್ಕುದಾದ ದಾರಿಯ ಮೂಲಕ ಪಡೆಯುತ್ತಾ ಸಾಗುವದು. 10)ಎಲ್ಲ ಶಾಲಾ ಕಾಲೇಜುಗಳಲ್ಲಿ ಅವುಗಳ ಕ್ಷೇತ್ರ ಗಳಲ್ಲಿ ಕ್ರಿಯಾಶಾಲಿಯಾಗಿ ವರ್ಷದುದ್ದಕ್ಕೂ ಆನ್ ಲೈನ್ ಅಥವಾ ಆಫ್ ಲೈನ್ ಗಳಲ್ಲಿ ಭಾಷಿಕ, ಪ್ರಾದೇಶಿಕ,ರಾಷ್ಟ್ರೀಯ ದೇಶಾಭಿಮಾನ ಚಟುವ ಟಿಕೆಗಳನ್ನು ನಿರಂತರ ನಡೆಸುತ್ತಾ ಇರುವದು. 11)ಯುವ ಜನಾಂಗದಲ್ಲಿ ನಿರುದ್ಯೋಗದ ಸವಾಲುಗಳನ್ನು ಎದುರಿಸಲು, ಉದ್ಯಮಶೀಲ ತೆಯ ಗುಣಗಳನ್ನು, ಸಂಶೋಧಕ, ಸೃಜನಾತ್ಮಕ ಪ್ರವೃತ್ತಿಗಳನ್ನು ಕಂಡುಕೊಂಡು ಆತ್ಮವಿಶ್ವಾಸ ಧೈರ್ಯ, ಸಾಹಸಗುಣಗಳನ್ನು ಅಭಿವೃದ್ಧಿಪಡಿಸಿ ಕೊಳ್ಳುವದು.
ಭಾರತ ಮತ್ತು ಹೊರದೇಶಗಳಲ್ಲಿ

ಕ್ಯಾಂಪಸ್ ರಂಗಭೂಮಿ ಅನ್ನುವದು ಭಾರತ ಮತ್ತು ಹೊರದೇಶಗಳ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಭಿನ್ನ ಭಿನ್ನವಾಗಿರುತ್ತವೆ. ಈ ಭಿನ್ನತೆ ಅನ್ನುವದು ಹೆಚ್ಚು ಎದ್ದುಕಾಣುವದು ಅದರ ಪಠ್ಯಕ್ರಮ, ಅನುಷ್ಠಾನ, ತರಬೇತಿ, ಸ್ವಯಂ ಉದ್ಯೋಗ ಪ್ರೇರಣೆ, ಉದ್ಯೋಗ ಮತ್ತು ಆತ್ಮ ವಿಶ್ವಾಸ, ಸಾಮಾಜಿಕ ಮನ್ನಣೆ, ಆದಾಯ ಗಳಿಕೆ ಇವುಗಳಿಂದ ಗುರುತಿಸಬಹುದಾಗಿದೆ. ಕೆಲವು ಸರ್ಕಾರಿ, ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ರಂಗಭೂಮಿಗೆ ಸಂಬಂಧಿಸಿದ, ಸಂಗೀತ ನೃತ್ಯಕ್ಕೆ ಚಿತ್ರಕಲೆಗೆ ಡಿಪ್ಲೊಮಾ/ ಡಿಗ್ರಿಗಳನ್ನು ನೀಡುತ್ತಿವೆ. ಇದರ ಜೊತೆಗೆ ನೀನಾಸಂ, ಗಂಗೂಬಾಯಿ ವಿಶ್ವ ವಿದ್ಯಾಲಯ, ಹಂಪಿ ವಿಶ್ವವಿದ್ಯಾನಿಲಯಗಳು ಸರ್ಟಿಫಿಕೇಟಗಳನ್ನು ನೀಡುತ್ತವೆ. ಇನ್ನೂ ಕೆಲವು ದೂರಶಿಕ್ಷಣ,ಅಂತರ್ಜಾಲಗಳ ಮೂಲಕ ಬೇಕಾದ ಶಿಕ್ಷಣ ನೀಡುತ್ತಿದ್ದು, ಅದು ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಬೇರೆ ಆಗಿರುತ್ತವೆ. ದೇಶದಲ್ಲಿ ಒಂದೇ ಒಂದು ರಾಷ್ಟ್ರೀಯ ನಾಟಕ ಶಾಲೆ ಅಂತಾ ದೆಹಲಿಯಲ್ಲಿ ಇದ್ದು, ಪಾಶಿಮಾತ್ಯ ಪ್ರಭಾವದ ರಂಗಶಿಕ್ಷಣ ನೀಡುತ್ತದೆ. ಇದನ್ನು ಬಿಟ್ಟು ಅಂದಾಜಿ ನಲ್ಲಿ ಹೇಳಬೇಕೆಂದರೆ 8/9 ವಿಶ್ವವಿದ್ಯಾಲಯಗಳು ಸ್ನಾತಕವೋ, ಸ್ನಾತಕೋತ್ತರ ಪದವಿಯನ್ನೋ ನೀಡುತ್ತವೆ. ಇವುಗಳಿಂದಲೇ ಕಲಿಸುವ ನೌಕರಿ ಬಿಟ್ಟರೆ ಸ್ವತಂತ್ರವಾಗಿ ಉದ್ಯೋಗ ಮಾಡುವ ಅಥವಾ ಪ್ರದರ್ಶಕ ಕಲೆಯ ಪ್ರತಿಭೆಯಿಂದ ಸಂಸಾರ ನಡೆಯುವಷ್ಟು ಸ್ವಾವಲಂಬನೆಯ ಶಿಕ್ಷಣವನ್ನು ನೀಡುವದಿಲ್ಲ, ಪಡೆಯುವದೂ ಇಲ್ಲ. ಇದಕ್ಕೆ ಖಂಡಿತವಾಗಿ ಅಪವಾದಗಳು ಇದ್ದೆ ಇರು ತ್ತವೆ. ಆ ಕಲಾವಿದ ಎಲ್ಲಿ ಯಾರ ಸಂಗಡ ಇದ್ದಾನೆ ಅನ್ನುವುದರ ಮೇಲೆ ಅದು ಅವಲಂಬಿಸಿರುತ್ತದೆ. ಬಾಂಬೆ, ಚೆನ್ನೈ, ಬೆಂಗಳೂರು, ದೆಹಲಿಯಲ್ಲಿ ಖಾಸಗಿ ಸಂಸ್ಥೆಗಳು ಇದ್ದರೂ ಸಹ ಆದೃಷ್ಟದ ಬಲ ಈ ಲೇಖನಿ ಅನುಭವದ ಪ್ರಕಾರ ಯಾವ ವಿಶ್ವ ವಿದ್ಯಾಲಯಗಳೂ ಕೂಡ ಈ ಉದ್ದೇಶಕ್ಕಾಗಿ ಪ್ರತಿವರುಷ ಪ್ರತ್ಯೇಕ ಬಜೆಟ್ ತಯಾರಿಕೆಯನ್ನು ಮುಂಚಿತವಾಗಿ ಮಾಡಿರುವುದಿಲ್ಲ, ಹೊಸ ನಾಟಕ ರಚಿಸುವದಕ್ಕಾಗಿ ಯಾರನ್ನೂಆಮಂತ್ರಿಸುವದಿಲ್ಲ.

ಗಿರೀಶ್ ಕಾರ್ನಾಡರಿಗೆ ಅಮೆರಿಕದ ಖಾಸಗಿ ವಿಶ್ವವಿದ್ಯಾಲಯ ‘ಅಗ್ನಿ ಮತ್ತು ಮಳೆ’ ನಾಟಕ ಬರೆಯಲಿ ಅಂತಾನೆ ಆಮಂತ್ರಿಸಿದ್ದರು. ಹಾಗೆಯೇ ಭಾರತದ ಯಾವ ವಿಶ್ವವಿದ್ಯಾಲಯಗಳೂ ಕೂಡ ಆಮಂತ್ರಿಸಿದ ಉದಾಹರಣೆ ಬೆಳಕಿಗೆ ಬಂದಿಲ್ಲ.
ಇತ್ತೀಚಿಗೆ ಅಪಘಾತದಲ್ಲಿ ಮಡಿದ ಸಂಚಾರಿ ವಿಜಯ ಅನ್ನುವ ನಟ ಮತ್ತೆ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹೊರ ದೇಶಕ್ಕೆ ಹೋಗಿದ್ದರು. ಹಳೆಯ ವಿದ್ಯಾರ್ಥಿಗಳ ಬಗ್ಗೆ ಅವರ ಆದಾಯ, ಉದ್ಯೋಗ ಸ್ಥಿತಿಗತಿಗಳ ಅಧ್ಯಯನವೂ ಆಗಿಲ್ಲ. ನೋಡಬಹುದಾದ ಯಶಸ್ವಿ ಮಾಡೆಲ್ ಗಳೂ ಇಲ್ಲ. ಭದ್ರ, ಸುರಕ್ಷಿತ ಸ್ಥಿತಿಗತಿಗಳು ಹೆಚ್ಚಿಲ್ಲ. ಇದು ಯಾಕೆ ಹೀಗೆ ಅಂದರೆ, ಸಮಾಜದಲ್ಲಿ ನಟ, ನಟಿ ಮತ್ತು ತಂತ್ರಜ್ಞರಿಗೆ ಸಿಗಬೇಕಾದ ಸ್ಥಾನ- ಮಾನ ಸಿಗದೇ ಇರುವದು.

ಪ್ರದರ್ಶಕ ಕಲೆಗಳಲ್ಲಿ ಮೀಸಲಾತಿ ಅನ್ನುವದು ಇಲ್ಲವೇ ಇಲ್ಲ, ಕೇವಲ ಪ್ರತಿಭೆ ಮಾತ್ರ ಆಧಾರ. ಸರ್ಕಾರಿ ಕೆಲಸದಲ್ಲಿ ಮಾತ್ರ ಮಿಸಲಾತಿ ಇದ್ದು ಪ್ರತಿಭೆ ಅನ್ನೋದು ಬೇಡವಾದ ವಿಷಯ ಆಗಿದೆ ಇತ್ತೀಚಿಗೆ. ಕರ್ನಾಟಕ ರಾಜ್ಯ ಸರ್ಕಾರ ಆಜ್ಞಾಪತ್ರ ಹೋರಡಿಸಿದೆ “ನಮ್ಮ ನಡೆ ಸಂವಿಧಾನದ ಕಡೆ” ಎನ್ನುವ ಮೂಲಕ ಎಲ್ಲರಿಗಾಗಿ ಅವಕಾಶ ಗಳನ್ನು ನೀಡಲು, ತಿಳಿಸಿ ಹೇಳಲು ಸಮಾಜ ಕಲ್ಯಾಣ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಅಡಿ ಯಲ್ಲಿ ಯೋಜನೆ ತಂದದ್ದು ವಿನೂತನವಾದುದು. ಅದರ ಪ್ರಕಾರ ನಾಟಕ ರಚನೆಯಿಂದ ಹಿಡಿದು ನಾಟಕದ ತಿರುಗಾಟದ ವಾಹನದ ಚಾಲಕ ಸಹ ಕೇವಲ ಎಸ್.ಸಿ, ಎಸ್ಟಿ ವರ್ಗಕ್ಕೆ ಸೇರಿದವರಾಗಿರ ಬೇಕು ಎಂದು ಫರ್ಮಾನು ಹೊರಡಿಸಿದೆ. ಇದು ಸಹ ಸಾಮಾಜಿಕ ಅಂತರ ಇಟ್ಟುಕೊಳ್ಳುವ ಹೊಸ ಪದ್ಧತಿ ಜಾರಿಗೆ ಬಂತು. ಒಳ್ಳೆಯ ದೃಷ್ಟಿಯಿಂದ ಇದು ಎಲ್ಲ ಕಡೆ ಹಬ್ಬಬೇಕು ಅಂದರೆ ಎಲ್ಲ ವಿಶ್ವ ವಿದ್ಯಾಲಯ, ಶಾಲೆ ಕಾಲೇಜು ರಂಗಭೂಮಿಗೂ ಇದು ಅನ್ವಯವಾದರೆ ಹಲವಾರು ವಿದ್ಯಾರ್ಥಿ, ಪಾಲಕರಿಗೆ ಅನುಕೂಲವಾಗುತ್ತದೆ. ಯುನಿವರ್ಸಿ ಟಿಗಳಿಗೆ ಧನ ಸಹಾಯ ಮಾಡಲು ಅನುಕೂಲ ವಾಗುತ್ತದೆ ಹಾಗೂ ಸಬಾಟಿಕ್ ಅಧ್ಯಯನಕ್ಕೂ ಒಳ್ಳೆಯದು.
ಸದ್ಯದ ಪರಿಸ್ಥಿತಿ ಮತ್ತು ಸನ್ನಿವೇಶ

ಇಂದು ಇಂಡಿಯಾದ ಹೆಚ್ಚಿನ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ‘ಕ್ಯಾಂಪಸ್ ಥೇಟರ್’ ಅನ್ನೋದು ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದೆ. ಅಲ್ಲಿಯ ಆಡಳಿತ ವ್ಯವಸ್ಥೆ, ನೇಮ ಕಾತಿಗಳು, ಕ್ಷಣಕ್ಷಣಕ್ಕೂ ಬದಲಾಗುವ ಧುರೀಣರ ಕುರ್ಚಿಗಳು ಬದಲಾಗದ ಪಠ್ಯಕ್ರಮ, ಕೊರತೆ ಬಜೆಟ್ಗಳು, ಪದೋನ್ನತಿಯ ರೀತಿ ನಿಯಮಾವ ಳಿಗೆ, ಅಕ್ರಮ ರಾಜಕೀಯ ಸಂಬಂಧಗಳು, ಜಾತಿಯ ಭಾವನೆಗಳ ಸಂಘರ್ಷ ತನ್ನದೇ ಆದ ಬೃಹತ್ ಶಿಕ್ಷಣ ಮಹಾಭಾರತ ಮಾಡಿ, ವಿಚಿತ್ರ ವಾದ ರಂಗ ನಾಟಕದ ರಂಗಭೂಮಿಗಳಾಗಿವೆ. ಹೆಚ್ಚಿನ ಮಟ್ಟಿಗೆ ಎಡಪಂಥೀಯ, ಸ್ವಲ್ಪಮಟ್ಟಿಗೆ ಬಲಪಂಥೀಯ, ಉಳಿದ ತಟಸ್ಥ ಭಾವದ ಗುಂಪು ಗಳ ಗಣಿಗಾರಿಕೆಯ ಪ್ರಯತ್ನಗಳಲ್ಲಿ ಕ್ಯಾಂಪಸ್ ರಂಗಭೂಮಿ ಮೇಲೆ ಬೆಳಕೇ ಇಲ್ಲ. ರಂಗಭೂಮಿ ಅನ್ನುವದೇ ಪ್ರತಿಭಟನೆಯ ಸಂಕೇತವಾಗಿದೆ. ಭರತನ ನಾಟ್ಯಶಾಸ್ತ್ರದ ಪ್ರಕಾರ ನಾಟಕದ ಹುಟ್ಟೇ ದೇವದಾನವರ ಪ್ರತಿಭಟನೆಯ ಬಗೆಹರಿಸಲು.

ಬ್ರಹ್ಮ ನಾಟ್ಯಶಾಸ್ತ್ರರಚನೆಯಲ್ಲಿರುವದು ಆಳುವ ವರ್ಗ, ಬಲ ವಿರೋಧಿಗಳು, ಎಡಪಂಥ ಅನ್ನುವ ಹಾಗೆ ಆಗಿದೆ. ಇವೆಲ್ಲ ವೇದಿಕೆಯ ಮೇಲೆ ಸೈಡ್ ವಿಂಗ್ ಇದ್ದಂತೆ. ಪ್ರಾಚೀನ ಭಾರತದಲ್ಲಿ ರಂಗ ಭೂಮಿ ಯಾವಾಗಲೂ ಹಾಸ್ಯ, ಶೃಂಗಾರ ಪ್ರೇಮ ಭಕ್ತಿ ವೀರರಸ ಪ್ರಧಾನವಾಗಿದ್ದವು. ಅವೆಲ್ಲವೂ ಕೂಡಿ ಮೋಕ್ಷದ ಹಾದಿಗೆ ತಮ್ಮದೇ ರೀತಿಯಲ್ಲಿ ಕರೆದೊಯ್ಯುವ ಮಾರ್ಗಗಳಾಗಿದ್ದವು. ಈಗ ಅದನ್ನು ಮೋಕ್ಷ ಅನ್ನುವದರ ಬದಲಾಗಿ ಸಂಪೂರ್ಣ ಸಫಲತೆಯ ವ್ಯಕ್ತಿತ್ವ ವಿಕಸನ ಅಂತ ಕರೆಯಬಹುದಾಗಿದೆ. ನಮ್ಮ ಪ್ರಾಚೀನ ಭಾರತ ದಲ್ಲಿ ಸಂಘರ್ಷಕ್ಕೆ ಸ್ಥಾನ ಇರಲಿಲ್ಲ. ಅಂತಹ ದೊಂದು ವಾತಾವರಣ ನಮ್ಮ ಕ್ಯಾಂಪಸ್ ಗಳಲ್ಲಿ ಆಗಬೇಕೆಂದರೆ ಸರಿಯಾದ ಸಮಗ್ರವಾದ ಸಂಪೂ ರ್ಣ ರಂಗಭೂಮಿ ಆತ್ಮನಿರ್ಭರ ಭಾರತದ ಸ್ವರೂಪ ಹೊಂದಿರಬೇಕಾಗಿರುತ್ತದೆ. ಅದಕ್ಕೆ ಬೇಕಾದ ಮಾನವ ಸಂಪನ್ಮೂಲಗಳನ್ನು ಎಲ್ಲಿಂದ ತರುವದು? ಹುಟ್ಟಿಸುವದು ಎಲ್ಲಿಂದ? ಅದೆಲ್ಲ ಸಿಗುವದು ಶಾಲೆ, ಕಾಲೇಜು ವಿಶ್ವವಿದ್ಯಾಲಯದ ಕ್ಯಾಂಪಸ್ ಗಳಲ್ಲಿ ಸಂಶೋಧಿಸಿ ಸೋಸಿ ತೆಗೆದಾಗ ಮಾತ್ರ.
ಅದಕ್ಕಾಗಿ ಏನು ಮಾಡುವದು ?

- ಕಲಾಶಿಕ್ಷಣ ಅದರಲ್ಲೂ ಪ್ರದರ್ಶಕ ಕಲೆಗಳು ಪಠ್ಯಕ್ರಮದ ಒಂದು ಭಾಗವಾಗಿ ಮಾರ್ಪಡಿಸುವುದು ಇದು ಹೊಸ ಶಿಕ್ಷಣ ನೀತಿಯ ಒಂದು ಭಾಗವಾಗಬೇಕು.
- ಪ್ರಾಧ್ಯಾಪಕ/ ಬೋಧಕ ವರ್ಗದವರಲ್ಲಿ ಪ್ರದರ್ಶಕ ಕಲೆಗಳ ತರಬೇತಿ ಮತ್ತು ಶಿಕ್ಷಣದಲ್ಲಿ ಅದನ್ನು ಪೂರಕವಾಗಿ ಬಳಸುವದರ ಬಗ್ಗೆ.ಇದು ವೃತ್ತಿಪರ ಕಾಲೇಜುಗಳಲ್ಲಿ ಆಗಬೇಕು.
- ಪ್ರತಿ ಸಂಸ್ಥೆ ಮಟ್ಟದಲ್ಲಿ ಅದಕ್ಕೆ ಬೇಕಾದ ಆರ್ಥಿಕ ಹೂಡಿಕೆ ಮಾಡುವದು.
- ಪ್ರಾಚಾರ್ಯ ಮತ್ತು ಮತ್ತು ಉತ್ಸಾಹಿ ಶಿಕ್ಷಕರನ್ನು ಒಳಗೊಂಡ ತಂಡ ಸ್ಥಳೀಯ ಮಟ್ಟದಲ್ಲಿ ಅಕಾಡೆಮಿ ಹಾಗೆ ಕೆಲಸ ಮಾಡ ಬೇಕು
- ವಿವಿಧ ವಿಷಯ ಮತ್ತು ಶಾಸ್ತ್ರಗಳ ಪ್ರಕಾರ ಎಲ್ಲ ಮಾಧ್ಯಮಗಳ ಬಳಕೆಯನ್ನು ಎಲ್ಲ ಶಿಕ್ಷಣ ಪ್ರಕಾರಗಳಲ್ಲಿ ಅಳವಡಿಸುವದು
- ಎಲ್ಲಾ ಮಟ್ಟದ ಕ್ಯಾಂಪಸ್ ರಂಗಭೂಮಿ ಗಳಿಗೆ ಪ್ರೋತ್ಸಾಹದಾಯಕವಾದ ತಕ್ಕುದಾದ ಸಬ್ಸಿಡಿ ಮತ್ತು ಸಾಧ್ಯವಿದ್ದ ಸೌಲಭ್ಯ, ಫೀ ಕಡಿತ ಮಾಡುವದು.
- ಬಹುಭಾಷಾ,ಬಹು ಸಂಸ್ಕೃತಿ, ಬಹುಶಾಸ್ತ್ರ ವಿಸ್ತೃತ ಕಲಿಕೆಗೆ ಮಹತ್ವ ಮತ್ತು ಒತ್ತು ನೀಡುವುದು ವ್ಯಕ್ತಿತ್ವ ವಿಕಸನಕ್ಕೆ ಇಂಬು ಕೊಡುವದು.
- ಪಠ್ಯಕ್ರಮದ ಪ್ರಕಾರ ಯಾವದೇ ವಿಷಯ ದಲ್ಲಿ ರಂಗ ಸ್ವರೂಪ ನೀಡಿ ಕಲಿಸುವದು.
- ಅನ್ವಯಿಕ ಸಂಶೋಧನೆ, ಕ್ರಿಯಾಸಂಶೋಧ ನೆಯನ್ನು ವಿದ್ಯಾಲಯದ ರಂಗಭೂಮಿ ಯಲ್ಲಿ ನಡೆಸಿದಾಗ ಹೊಸ ಚಿಂತನೆಗಳು ಪ್ರಯೋಜನಕಾರಿಯಾಗಿ ಲಭ್ಯವಾಗುತ್ತವೆ.
- ಸೃಜನಶೀಲ ಸ್ವತಂತ್ರ ಕಲಾ ವಿಷಯಗಳ ಶಿಕ್ಷಣವು ವೃತ್ತಿಪರ ಶಿಕ್ಷಣದಲ್ಲಿ ಹೊಸ ರೂಪಾಂತರ ಬದಲಾವಣೆ ತರಲು ಸಾದ್ಯ. ಇದು ಹೊಸ ಉತ್ಪಾದನೆ, ಹೊಸ ಅನುಭವ ಹೊಸ ಮಾರುಕಟ್ಟೆ ಹುಟ್ಟಿಸಲು ಸಾಧ್ಯ. ಹೊಸ ತಂತ್ರಜ್ಞಾನ, ಹೊಸ ಆವಿಷ್ಕಾರಗಳು ಸಹ ಸಾಧ್ಯ.
- ಇವೆಲ್ಲ ಸಾಧ್ಯವಾಗಲಿಕ್ಕೆ ಒಳ್ಳೆಯ ಪ್ರತಿಭಾ ವಂತ, ಸೃಜನಶೀಲತೆ ಮೈಮನ ರೂಢಿಸಿ ಕೊಂಡಿರುವ ವ್ಯವಸ್ಥೆ ಅರ್ಥಮಾಡಿಕೊಂಡಿ ರುವ ವ್ಯಕ್ತಿಗಳ ನೇಮಕಾತಿ ಮತ್ತು ಸೂಕ್ತ ಧುರೀಣತ್ವ ಬೇಕು.
✍️ಅರವಿಂದ ಕುಲಕರ್ಣಿ ರಂಗಭೂಮಿ ಚಿಂತಕರು,ಧಾರವಾಡ