ಅಂದು ಸಮೀಪದಲ್ಲಿ ಇಲ್ಲೇ ಭೂಕಂಪ
ಕೇಳಿ ತಿಳಿದಾಗಲೇ ಭಯಾನಕತೆಯ ತಿಳಿವು
ಇಂದು ದೂರದ ಖಂಡದಲಿ ಎಲ್ಲೋ ಭೂಕಂಪ
ನಿಂತ ನೆಲವೇ ಗಡಗಡ, ಭೂಕಂಪದ ಅರಿವು
ಭುವಿಯ ಒಡಲಾಳದ ಪೆಟ್ರೋಲ್ ಗ್ಯಾಸ್ ನೀರನು ಹೊರಗೆಳೆದರು
ಸಂದುಗೊಂದುಗಳು ಸಡಿಲಗೊಂಡು ಮೆತ್ತಗಾಗಿ ಹೊಂಚು ಹಾಕಿದವು
ಮಾನವನನ್ನೆ ಮೆತ್ತಗಾಗಿಸಲು, ಉಬ್ಬುತಗ್ಗುಗಳನು ಹಿಂದುಮುಂದಾಗಿಸಲು
ಕೇಳಿ ತಿಳಿದಾಗಲೇ ಭಯಾನಕತೆಯ ತಿಳಿವು
ಇಂದು ದೂರದ ಖಂಡದಲಿ ಎಲ್ಲೋ ಭೂಕಂಪ
ನಿಂತ ನೆಲವೇ ಗಡಗಡ, ಭೂಕಂಪದ ಅರಿವು
ನಿಂತ ನೆಲವೇ ಗಡಗಡ, ಭೂಕಂಪದ ಅರಿವು
ಭುವಿಯ ಒಡಲಾಳದ ಪೆಟ್ರೋಲ್ ಗ್ಯಾಸ್ ನೀರನು ಹೊರಗೆಳೆದರು
ಸಂದುಗೊಂದುಗಳು ಸಡಿಲಗೊಂಡು ಮೆತ್ತಗಾಗಿ ಹೊಂಚು ಹಾಕಿದವು
ಮಾನವನನ್ನೆ ಮೆತ್ತಗಾಗಿಸಲು, ಉಬ್ಬುತಗ್ಗುಗಳನು ಹಿಂದುಮುಂದಾಗಿಸಲು
ಅಂದು ದೃಷ್ಟಿ ನೆಟ್ಟಲ್ಲೆಲ್ಲ ಭುವಿಯ ಮೇಲ್ಮೈ ತಂಗಾಳಿಯ ಹಸಿರು ಮನೆಯ ತಾಣ
ಇಂದು ಕಾರ್ಬನ್ ಮೀಥೇನ್ ಧೂಳುಗಳ ಸಂಚಯ, ಕಾವೇರಿ ಹಸಿರು ಮನೆಯ ಪರಿಣಾಮ
ಜೀವನಕೆ ವಸ್ತುಗಳವು, ವಸ್ತುಗಳಿಗೆ ಜೀವನ ಮಾಡಿದ ಕೊಳ್ಳುಬಾಕ ಸಂಸ್ಕೃತಿ
ಉತ್ಪಾದಿಸಿದರು ಕಾರು ಮೋಟಾರು ಕ್ರೀಮು ಪಾನೀಯ ಇತ್ಯಾದಿ
ಅವು ಉತ್ಪಾದಿಸಿದವು ಕಾರ್ಬನ್ ಡೈ ಆಕ್ಸೈಡ್ ಮೋನಾಕ್ಸೈಡ್ ಮಿಥೇನ್ ಇತ್ಯಾದಿ
ಭುವಿಯ ಮೈ ಗಲಿಬಿಲಿಗೊಂಡು ಬಿಸಿಯಾಗಿ ಹೊಂಚು ಹಾಕಿ
ಹಿಮವ ಕರಗಿಸಿ ಸಾಗರವ ಹೆಚ್ಚಿಸಿ ಮಾನವನ ತಲೆ ಬಿಸಿಯಾಗಿದೆ
ಅಂದು ಎಳೆಯ ಬಿಸಿಲಿಗೆ ಮೈಯೊಡ್ಡಿ ನಿಂತರೆ ಹಿತಕರವಾದ ವಿಟಮನ್ ಡಿ
ಇಂದು- ಓಝೋನ್ ಸೀಳಿಕೊಂಡು ಬಂದ ಅತಿನೇರಳೆಕಿರಣ, ಪಾಡು ಕಾಪಾಡಿ
ಓಝೋನ್’ ಕೊಳ್ಳುಬಾಕ ರೆಪ್ರಿಜಿರೇಟರಿನ ಕ್ಲೋರೋಪ್ಲೋರೋ ಕಾರ್ಬನ್ ನಿಂದ ಛಿದ್ರ
ಅಣುವಿಕಿರಣಗಳ ಸೋರಿಕೆ, ಸ್ಪೋಟಕೆ ಒಡಲಾಳವೂ ಛಿದ್ರಛಿದ್ರ
ಪಾದರಸದ ಸೋರಿಕೆಯಿಂದ ಮಾನವನ ಮಾಟ ಕೆಡಿಸಿದ ಮಿನಿಮಾಟ್
ಭುವಿಯ ಒಳಹೊರ ಕ್ಷುದ್ರಗೊಂಡು ಸಹವರ್ತಿ ಘಟಕಗಳು ಹೊಂಚು ಹಾಕಿದವು
ಮರುಭೂಮಿಗೆ ಮಳೆತರಿಸಿ ಸಹ್ಯಾದ್ರಿಗಳನು ಬೆಂಗಾಡಾಗಿಸಿ ಸಹಕಾರ ನೀಡದಿರಲು
ಅಂದು ನಮ್ಮ ಆಸೆಗೆ ಅಗತ್ಯಕೆ ಬೆಳೆಯಬಹುದಾದ ಬೆಳೆಗಳು ಜವಾರಿ
ಇಂದು ದುರಾಸೆಯ ಬೇಳೆಕಾಳುಗಳು ಮಾನವನಿಗಾಗಿವೆ ದುಬಾರಿ
ಆಹಾರದ ಆಹಾರವೇ ರಾಸಾಯನಿಕ ಕ್ರಿಮಿನಾಶಕ- ಅದೂ ಹೈಬ್ರಿಡ್ ಬೀಜಕ್ಕೆ
ಕೃಷಿಭೂಮಿ ಸವುಳು-ಜವುಳು, ಹದಗೊಳಿಸುವ ಬ್ಯಾಕ್ಟೀರಿಯಾ ತೆವಳಿತೆವಳಿ ಆಳ
ಭುವಿಯ ಮಣ್ಣು ಸತ್ತು ಹೋಗಿ ಬೆಳೆಗಳ ಸತ್ವಹೋಗಿ ಕಾದುಕುಳಿತವು
ನರಮಾನವನ ನರಗಳ ಸತ್ವಗುಂದಿಸಿ ಅರ್ಧಾಯುಷ್ಯ ಮಾಡಲು
ಅಂದು ಭುವಿಯ ಭೂಭಾಗ ದಟ್ಟಕಾಡು, ನಡುನಡುವೆಯೊಮ್ಮೆ ಊರು
ಕಾಡಿಗೆ ಕಾಡಿಕಾಡಿ ಬರಬರುತ್ತ ಕಾಂಕ್ರೀಟ್ ಕಾಡು, ಉಳಿದವು ಒಂದಿಷ್ಟು ಗಿಡಗಂಟಿಗಳ ಕಾಡು
ರೆಸಾರ್ಟ ರಸ್ತೆ ಕರೆಂಟ ಕೃಷಿ ಅದು ಇದು ಮತ್ತೆಮತ್ತೆ ವಿಸ್ತಾರ
ಇತ್ತ ಮೊಬೈಲ್ ಕಂಪ್ಯುಟರ್ ಅತಿಗೀಳಿನಿಂದ ಮಾನವ ‘ಸತ್ವ-ಸಂಸ್ಕಾರ-ಸಂತಾನ’ ಹೀನ
ಅತ್ತ ಪಶುಪಕ್ಷಿ ಇಂಚರಗಳ ಮಾರಣಹೋಮ, ಅವುಗಳ ನೆಲೆ ಜೀವವೈವಿಧ್ಯ ವಿಹೀನ
ಕಲ್ಲುಮಣ್ಣು ಖನಿಜಗಳಿಗೆ ನೆಲಬಗೆತ, ಸೊರಗಿದ ನದಿಗಳ ಮರಳುತೆಗೆತ
ಮಣ್ಣು ನೀರು ಮರಗಳು ಒಂದಕ್ಕೊಂದು ಲಯ ಕಳೆದುಕೊಂಡು ಕಾದು ಕುಳಿತವು
ಮತ್ತೆಮತ್ತೆ ಕೈಗೆ ಸಿಗದೆ ಲಯವಾಗಿ ಮುಗಿದು ಹೋಗುವ ಸಂಪತ್ತಾದವು
ಅಂದು ನದಿ ತೀರಗಳಲ್ಲೇ ಸಂಸ್ಕೃತಿ, ನೀರೇ ಎಲ್ಲ..
ಇಂದು ನೀರೇ ಇಲ್ಲ, ಇದ್ದರಲ್ಲಿ ಖಾರ್ಖಾನೆಯ ವಿಷ ನೊರೆ ಪ್ಲೋರೈಡ್ ಇತ್ಯಾದಿ
ಡೊಂಕಾದ ನೀರನು ಕುಡಿದರೆ ಕೈ ಕಾಲು ಡೊಂಕು ಅದು ಇದು ಇತ್ಯಾದಿ
ನದಿ ಹಳ್ಳಕೊಳ್ಳಗಳ ಒತ್ತುವರಿ, ಮತ್ತೆ ಮೇಲೆ ಮರಳಿನ ಕೆತ್ತುವರಿ
ಅದರಲ್ಲೇ ಕೊಳ್ಳುಬಾಕ ನೀರಿನ ಮಾರಾಟ, ಅದೂ ನಕಲಿಯೊ ಅಸಲಿಯೊ..! ಸುಲಿಗೆ
ನದಿ-ಝರಿಗಳ ಹಳ್ಳಕೊಳ್ಳ ಕೆರೆಕಟ್ಟೆಗಳ ಮೂಲಗಳು ನಿಧಾನಕೆ ಕಣ್ಮರೆ
ನೀರೆಲ್ಲ ಬಸಿದುಹೋಗಿ ಗುಪ್ತವಾಗಿ ಲುಪ್ತಹೊಂದಿ ಕಾದುಕುಳಿತವು
ನೀರಿಗಾಗೇ ಯುದ್ಧನಡೆಸಲು, ದುರಾಸೆಯವರ ನೀರಿಳಿಸಲು; ಈಗ ಯಾರು ಆಸರೆ?
ಕೊಲ್ಲೆನು ಮನದಿಚ್ಚಿಗೆ ಮೆಲ್ಲೆನು ಬಾಯಿಚ್ಚಿಗೆ- ಮರೆತ
ವಿಜ್ಞಾನದ ಅಂಗೈಯಗಲ ವಿಶ್ವದಲಿ ಸಜೀವ ಪ್ರಾಣಿಗಳ ತಿನ್ನುವದೊಂದು ಮೆರೆತ
ಆಜ್ಞಾನದಲಿ ಮಾನವ ಮಾನವನನು ಮನಿಸಲು ನಿಗೂಢ ಸೂಕ್ಷ್ಮ ಪ್ರಯೋಗಗಳ ಮೊರೆತ
ಸೂಕ್ಷ್ಮ ಜೀವಿಗಳು ಬಚ್ಚಿಟ್ಟ ಆತ್ಮಗಳಂತೆ ಕಾದು ಕುಳಿತವು
ಮನೆಯ ಕಿಚ್ಚಾಗಿ ಮನೆಯನು ಸುಟ್ಟು ನೆರೆಮನೆಗಳನೂ ಸುಡಲು ಅವತರಿಸಿದವು.
✍️ರಮೇಶ ಹುಲಕುಂದ
ಸಹಾಯಕ ಪ್ರಾಧ್ಯಾಪಕ
ಸರಕಾರಿ ಪ್ರಥಮ ದರ್ಜೆ ಕಾಲೇಜು,
ಇಳಕಲ್