ರಕ್ತ ಸಂಬಂಧಗಳ ಮೀರಿದ ಬಂಧವಿದು, ಇದನ್ನು ಹೇಳಬೇಕು ಅಂತದರೆ ಅದಕ್ಕೊಂದು ಬಲವಾದ ಕಾರಣ ಇರಬೇಕು ಅಲ್ವಾ.  ಗೆಳೆತನ ಅಂದಾಕ್ಷಣ ನೆನಪಿಗೆ ಬರುವುದೇ ನಮ್ಮ ಕೆಲ ಗೆಳೆಯರು. ಅವರೇ ನೆನಪಿಗೆ ಬರಬೇಕು ಅಂತ ಹೇಳಿದರೆ ಏನಾದರೂ ಮಾಡಿರಬೇಕು ಅಲ್ವಾ. ನಾವು ಕಾಲೇಜಿನಲ್ಲಿ ಮಾಡೋ ಮೋಜು-ಮಸ್ತಿ ಗಲಾಟೆ ರಾಜಿಸಂಧಾನ ಅಬ್ಬಾ ಎಲ್ಲಾ ನೆನಪು ಮಾಡಿಕೊಂ ಡರೆ ಚಿಕ್ಕ ಮಕ್ಕಳಂತೆ ಅನಿಸುತ್ತದೆ. ಇದೆನ್ನೇ ಹೇಳುವುದು ನಿಜವಾದ ಗೆಳೆತನ ಅಂಥ.

ತುಂಬಾ ಜನ ಹೇಳುತ್ತಾರೆ ಗೆಳೆಯರು ಅಂದರೆ ದುರ್ಯೋಧನ ಕರ್ಣನ ಹಾಗಿರಬೇಕು ಕಷ್ಟ-ಸುಖ ಎರಡರಲ್ಲೂ ಒಟ್ಟಾಗಿರಬೇಕು. ಹೀಗೊಂದು ಕಾಲವಿತ್ತು, ಬೆಳಗ್ಗೆ ಕಾಲೇಜಿಗೆ ಹೊರಟಗಿನಿಂದಾ ಸಂಜೆ ತನಕ ಒಟ್ಟಿಗೆ ಖುಷಿಯಾಗಿ ಇದ್ದು, ಗೆಳೆಯ ಅಂದಾಕ್ಷಣ ಕಣ್ಮುಂದೆ ಬಂದು ಏನು ಹೇಳು ಎನ್ನುತ್ತಿದ್ದರು. ಆದರೆ ಈಗಿನ ಸಮಯದಲ್ಲಿ ಮೊಬೈಲ್ ಗಳಲ್ಲಿ ಕಷ್ಟ ಅಂದರೂ ಕಾಲ್ ಮಾಡೋದು, ಸುಖ ಅಂದರು ಕಾಲ್ ಮಾಡೋ ದು, ಕೊನೆಗೆ ಅವರೇ ಗಲಾಟೆಯಡಿ ಬೇರೆಯಾಗು ವುದು ಇಷ್ಟೇ.     

ಹೆಚ್ಚಾಗಿ ಪೋಷಕರು ಒಂದು ಮಾತು ಹೇಳು ತ್ತಾರೆ, ಅವರ ಮಗಳನ್ನು ಎಲ್ಲಾದರೂ ಗೆಳಯರ ಬಳಿಕಳುಹಿಸಿ ಕೊಡಬೇಕಾದರೆ “ಅವನು ಇದ್ದಾನೆ ಅಲ್ವಾ ಬಿಡು ಏನಾಗಲ್ಲ” ಎಂಬ ನಂಬಿಕೆ ಇರು ತ್ತದೆ, ಆ ನಂಬಿಕೆಯೇ ಗೆಳತನ. ಗೆಳೆತನ ಅಂದರೆ ನಿಷ್ಕಲ್ಮಶ ಪ್ರೀತಿ, ನಂಬಿಕೆ, ಇಷ್ಟೇನಾ?

ಗೆಳೆತನ ಅಂದರೆ ಅಂಬರೀಶ್ ಹಾಗು ವಿಷ್ಣು ದಾದಾ ಒಂದು ಹಾಡಿದೆಯಲ್ಲ ಕುಚಿಕು ಕುಚಿಕು ಕುಚಿಕು ನೀ ಚಡ್ಡಿ ದೋಸ್ತು ಕಣೋ ಕುಚಿಕು ಅಂತ. ಇದು ಕೇವಲ ಚಿತ್ರದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಅನ್ವಯವಾಗುದರ ಜೊತೆಗೆ ಗೆಳೆತನ ಎಂದರೇನು ಎಂದು ಅರ್ಥೈಸಿಕೊಡು ತ್ತದೆ. ಗೆಳತನಕ್ಕೆ ಜಾತಿ, ಧರ್ಮ, ಬಣ್ಣ,ಬಡವ ಶ್ರೀಮಂತ ಇದ್ಯಾವುದು ಬೇಕಿಲ್ಲ, ಕೇವಲ ಸ್ನೇಹ ಮಾಡೋ ಉತ್ತಮ ಮನಸಿದ್ದರೆ ಸಾಕು. ಗೆಳೆ ಯರು ಜೀವನದಲ್ಲಿ ಇಷ್ಟು ಪ್ರಮುಖರೆಂದರೆ ಪೋಷಕರಲ್ಲಿ ಹೇಳಲಾಗದ ಕೆಲ ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾರೆ. ದಿನಕ್ಕೆನೂರಾ ರು ಮೆಸೇಜೂ, ಮಾತನಾಡಿದಷ್ಟು ಮಾತಾಡಬೇ ಕೇನಿಸುವ ಫೋನ್ ಕರೆಗಳು ಇವೆಲ್ಲವನ್ನು ನೆನ ಪಿಸಿಕೊಂಡರೆ ತುಟಿಯಂಚಿನಲ್ಲಿ ಮುಗುಳುನಗೆ ಚೆಲ್ಲುದರ ಜೊತೆಗೆ ಅಂತಹ ಗೆಳೆಯರನ್ನು ಕಂಡಾಗ ಕಣ್ತುಂಬಿ ಬರುವುದಂತೂ ಸತ್ಯ. 

ಈ ಲಾಕ್ ಡೌನ್ನಿಂದಾಗಿ ಎಲ್ಲಾರು ದೂರವಿದ್ದಾರೆ. ಅವರ ನೆನಪು, ಧ್ವನಿ, ಗ್ರೂಪ್ ಫೋಟೋವನ್ನು ನೋಡಿದಕ್ಷಣ ಸಿಗುವಂತಹ ಖುಷಿ ಹೇಳತೀರದು. ಆದಷ್ಟು ಬೇಗ ಕಾಲೇಜು ಶುರುವಾಗಿ ನನ್ನೆಲ್ಲ ಗೆಳಯರನ್ನು ನೋಡಬೇಕೆಂನ್ನುವ ತವಕ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದೆ.

       ✍️ಪೌದನ್ ಜೈನ್          ಎಸ್.ಡಿ.ಎಮ್ ಕಾಲೇಜು ಉಜಿರೆ.