ಈ ಮಗು ನಮಗೆ ಬೇಡ.ಎಲ್ಲಿಯಾದರೂ ಬಿಟ್ಟು ಬಾ. ನಾನು ಇಂಥ ಮಗುವಿನ ತಂದೆ ಅಂತ ಕರಿಸಿ ಕೊಳ್ಳಲು ತಯಾರಿಲ್ಲ ಎಂದು ಖಡಕ್ ಆಗಿ ಹೇಳಿ ಹೋದ ಗಂಡ. ಮಗುವಿನ ಮುಖವನ್ನು ಸರಿ ಯಾಗಿ ನೋಡಲಿಲ್ಲ. ಗರ್ಭದಲ್ಲಿರುವಾಗಿಂದಲೂ ಮಗುವಿಗೆ ಯಾವ ತೊಂದರೆಯೂ ಇರಲಿಲ್ಲ. ಡೆಲಿವರಿ ಸಮಯದಲ್ಲಿ ಎನಾಯಿತೊ ಮಗುವಿನ ತಲೆ ಸ್ವಲ್ಪ ಪಕ್ಕಡಿನಿಂದ ಅಡಚಿದಂತಾಗಿತ್ತು. ವೈದ್ಯರ ಪ್ರಕಾರ ಅದು ಸರಿಯಾಗುವ ಲಕ್ಷಣದಲ್ಲ. ಮಗು ದೈಹಿಕವಾಗಿ ಬೆಳೆದರೂ ಮಾನಸಿಕವಾಗಿ ಇತರ ಮಕ್ಕಳಂತೆ ನಾರ್ಮಲ್ ಆಗಿ ಬುದ್ದಿ ಬೆಳವಣಿಗೆಯಾಗದು. ಆ ನಿಟ್ಟಿನಲ್ಲಿ ಕಾಪಾಡಿಕೊ ಳ್ಳಬೇಕೆಂದಾಗ ಉತ್ತರವಿಲ್ಲದೆ ಮೌನವಾಗಿ ಹಸು ಗೂಸನ್ನು ಎದೆಗಪ್ಪಿಕೊಂಡು ಎದೆಹಾಲು ಉಣಿ ಸಲು ಸಂಕಟದ ಅಲೆಗಳು ಬರಸಿಡಿಲಿನಂತೆ ಅಪ್ಪ ಳಿಸುವುದನ್ನು ಎದುರಿಸಲು ಸಿದ್ದವಾದ ಎಷ್ಟೋ ಮನಸ್ಸುಗಳು.

ಯಾರ ಶಾಪತಾಗಿತೋ ಅಥವಾ ಪೂರ್ವಜನ್ಮದಾ ಫಲವೋ ಹುಟ್ಟಿದ ಗಳಿಗೆಗೆ ಎಲ್ಲರೂ ಸಪ್ಪೆ ಮುಖ ಹೊತ್ತು ಹೀಗಾಗಬಾರದಿತ್ತು. ಇಂಥ ಮಕ್ಕಳು ಭೂಮಿಗೆ ಭಾರ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಎಂದೆಲ್ಲ ಮೂದಲಿಸುವವರಿಗೇನು ಕೊರತೆ ಯಿಲ್ಲ. ಅನುಕಂಪಕ್ಕೆ ಬಲಿಯಾಗುವವರು ಕೂಡ ಇದ್ದಾರೆ. ಜೀವ ಪ್ರಪಂಚದಲ್ಲಿ ಎಲ್ಲ ವಿಸ್ಮಯಗಳ ಲ್ಲಿ ಇದು ಒಂದು. ಹುಟ್ಟುವ ಮಗು ಯಾವುದಾದ ರೇನು? ಅದು ಹೇಗಿದ್ದರೇನು? ಅದರ ರಕ್ಷಣೆ ನಮ್ಮ ಹೊಣೆ. ದಿಕ್ಕರಿಸಿ ರಸ್ತೆಗೆ ಎಸೆದರೆ, ಅಮಾ ನುಷವಾಗಿ ಕೊಂದರೆ ಹೇಗೆ? ಅಂಗವಿಕಲತೆ ಶಾಪವಲ್ಲ. ಅದೊಂದು ಮಗುವಿನಲ್ಲಿ ಸ್ವಯಂ ಮುನ್ನುಗ್ಗುವ ಆತ್ಮವಿಶ್ವಾಸ ಬಲ ತುಂಬಿ ಎಲ್ಲ ಮಕ್ಕಳಂತೆ ಬದುಕುವ ಹಕ್ಕು ಈ ಮಗುವಿಗೂ ಇದೆ.

ಯಾವ ನ್ಯೂನತೆಯಿಂದ ಬಳಲುತ್ತಿದ್ದರೂ ಕೂಡ. ಅದನ್ನು ಹಿಮ್ಮೆಟ್ಟಿಸಿ ನಾವು ನಿಮ್ಮಂತೆ ಬದುಕ ಬಲ್ಲೆವು, ಸಾಧನೆಯ ಶಿಖರ ಏರಬಲ್ಲೆವೆಂಬ ಧೃಡ ನಂಬಿಕೆ ಬಿತ್ತಿದವರು ನಮ್ಮನಡುವೆಯೇ ಇದ್ದಾರೆ. ವಿಕಲಚೇತನರೆಂದು, ವಿಶೇಷ ಮಕ್ಕಳೆಂದು ಗುರು ತಿಸಲ್ಪಡುವ ಮಕ್ಕಳಿಗೆ ಎಲ್ಲರಂಗದಲ್ಲಿ ತೊಡಗಿಸಿ ಕೊಳ್ಳಲು ವಿಪುಲವಾದ ಅವಕಾಶಗಳನ್ನು ನೀಡು ವತ್ತ ನಾವುಗಳು ಹೆಜ್ಜೆ ಹಾಕಬೇಕು.

ಆ ಮಗುವಿಗೆ ಇನ್ನೂ ಒಂದೇ ವರ್ಷ. ಪೋಲಿಯೊ ಆಕ್ರಮಿಸಿಬಿಟ್ಟಿತು.ಮುಂದೆ ಆಕೆಯ ಭವಿಷ್ಯಚಕ್ರ, ಚಕ್ರಗಳ ಮೇಲಿನ ಕುರ್ಚಿಯ ಮೇಲೆಯೇ ಫಿಕ್ಸಾಗಿ ಬಿಟ್ಟಿತು. ಕೈಕಾಲು ಗಟ್ಟಿಯಾಗಿರುವ ನಾವುಗಳು ಸಾಧಿಸಿರುವುದಾದರೂ ಏನು? ವಿಶೇಷ ಮಕ್ಕಳ ನ್ನು ಕಂಡು ಅನುಕಂಪ ಪಡುವ ಪಾಡು ಬಿಟ್ಟರೆ ಮುಂದೆ? ನಮ್ಮ ಹೆಮ್ಮೆಯ ಓಟಗಾರ್ತಿ ಮಾಲತಿ ಹೊಳ್ಳ ಅವರನ್ನು ನೋಡಿ ಕಾಲುಗಳಿಲ್ಲದೆ 300ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಅವುಗಳ ಲ್ಲಿ ಪ್ಯಾರಾಲಿಂಪಿಕ್ಸ್ ಸ್ವರ್ಣ ಪದಕ ಗೆದ್ದಿರುವ ಮಹಾನ್‌ ಚೇತನ.

ಯಾವ ಯಶಸ್ಸು ಅನಾಯಾಸವಾಗಿ ದಕ್ಕುವಂತ ಹುದಲ್ಲ. ಅದರ ಹಿಂದೆ ಪರಿಶ್ರಮ ಅನವರತ ಕಾರ್ಯ ನಿರ್ವಹಿಸಿದಾಗ ಮಾತ್ರ ಗೆಲುವು ಸಾಧಿಸ ಬಹುದು. ಮಾಲತಿಯವರು ಚಿಕ್ಕವಳಿದ್ದಾಗ,ಮನೆ ಯ ಹಿತ್ತಲಿನಲ್ಲಿ ಉದುರಿ ಬಿದ್ದ ಮಾವಿನ ಕಾಯಿ ಗಳನ್ನು ಮೊದಲು ಆರಿಸಲು ಓಡುತ್ತಿದ್ದ ಮಕ್ಕಳ ಲ್ಲಿ ನಾನೇ ಮೊದಲಿಗಳಾಗಬೇಕೆಂದು ಆಸೆ. ಹಕ್ಕಿ ಗಳಂತೆ ಭಯವಿಲ್ಲದೆ ಒಂದೆಡೆಯಿಂದ ಮತ್ತೊಂದೆ ಡೆಗೆ ಹಾರಬೇಕೆಂಬಾಸೆ. ಬೆಳೆದು ದೊಡ್ಡವಳಾಗು ತ್ತಿದ್ದಂತೆ, “ಓಡಬೇಕಾದಲ್ಲಿ ನನಗೆ ಕಾಲುಗಳಿರಬೇ ಕಿತ್ತು, ಹಾರಬೇಕಾದರೆ ರೆಕ್ಕೆಗಳಿರಬೇಕಿತ್ತು “ಎಂಬ ಸತ್ಯ ಅರಿವಿಗೆ ಬಂದಾಗ ನೋವು, ಸಂಕಟ ನುಂಡರು, ಛಲ ಬಿಡಲಿಲ್ಲ. ಒಂದಲ್ಲ ಒಂದು ದಿನ, ನಾನು ಓಡಿಯೇ ಓಡ್ತೀನಿ ಅನ್ನೊ ಬಲವಾದ ಆತ್ಮವಿಶ್ವಾಸವಿತ್ತು.

ನಾವೆಲ್ಲಾ ವಿಭಿನ್ನರು ನಿಜ. ಅಂತೆಯೇ, ನಮ್ಮ ಬದುಕು ಕೂಡಾ ವಿಭಿನ್ನತೆಯಲ್ಲಿ ಹೊಳೆಯುವ ಉದಾಹರಣೆಯಾಗಿ ಕಂಗೊಳಿಸಬೇಕು. “ನಮಗೆ ಬೇಕಿರುವುದು ಈ ಸಮಾಜದ ಕರುಣೆ ಅಲ್ಲ, ನಾವೂ ಸಾಧಿಸಬಲ್ಲೆವು ಎಂದು ಸಿದ್ಧಪಡಿಸಿ ತೋರಿಸುವುದಕ್ಕೆ ಬೇಕಾದ ಸಹಾನುಭೂತಿ ಮಾತ್ರ” ಕರುಣೆಗಿಂತ ನಾವು ನಿಮ್ಮಂತೆ ಎಂಬ ಸಮಾನ ಮನೋಭಾವ ಬಂದರೆ ಸಾಕೆಂಬ ನಿಲುವು ಎಷ್ಟೊಂದು ಅರ್ಥಪೂರ್ಣ.

ಅವರ ಪುಸ್ತಕದಲ್ಲಿ ಅವರು ಅಂಗವಿಕಲರಾದಾಗ ಭಾವನೆಗಳನ್ನು ಸರಿಯಾಗಿ ಅರ್ಥೈಸದಿದ್ದ ಹಿರಿ ಯರು, ಸರಿಯಾಗಿ ಸಿಗದ ವೈದ್ಯಕೀಯ ಶುಶ್ರೂಷೆ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುವ ಹಲವಾರು ವಿಷಯಗಳಿವೆ. ಇವೆಲ್ಲವುಗಳಿಂದ ಸ್ವಯಂ ನಲುಗಿದರೂ ವಿಶ್ವಾಸಕಳೆದುಕೊಳ್ಳದೆ ಪದ್ಮಶ್ರೀ, ಅರ್ಜುನ, ಏಕಲವ್ಯ ಪ್ರಶಸ್ತಿಗಳು ವಿಶ್ವವಿದ್ಯಾಲ ಯದ ಡಾಕ್ಟರೇಟ್ ಮುಂತಾದ ಪ್ರಶಸ್ತಿ‌ಗಳಿಗೆ ಯೋಗ್ಯರಾಗಿ ಬೆಳೆದ ಈ ಮಹಾನ್ ಸಾಧಕಿಯ ಬೆಳವಣಿಗೆ ಪ್ರಶಂಸನೀಯ ಹಾಗೂ ಅನುಕರ ಣೀಯ. ಇಂಥಹ ಅನೇಕ ಸಾಧಕರು ನಮಗೆಲ್ಲ ಗೌರವದ ಪ್ರತೀಕ. ವಿಕಲಚೇತನ ಮಗು ಹುಟ್ಟಿತೆಂ ದು ತಿರಸ್ಕರಿಸದೇ ಅದನು ಪುರಸ್ಕರಿಸಿ ಸಮಾಜ ದ ಪ್ರಜೆಯಾಗಿಸುವಲ್ಲಿ ಶ್ರಮಿಸುವ ಎಲ್ಲ ಹೃದಯ ವಂತ ಮನಸುಗಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಆದ್ಯ ಕರ್ತವ್ಯ.

  ✍️ಶ್ರೀಮತಿ.ಶಿವಲೀಲಾ ಹುಣಸಗಿ      
ಶಿಕ್ಷಕಿ, ಯಲ್ಲಾಪೂರ