ಸುರಿವ ಝಡಿಮಲಳೆಯಲ್ಲಿ
‘ಗಢದ್ದು’…ನಿದ್ದೆ
ಪ್ರಿಯೆ ನಿನ್ನ ನೆನಪಾಗಿ
ಸಿಹಿಗನಸು ಒದ್ದೆ.

ಸವಿ ಚಳಿಗೆ ಕಂಬಳಿಯು
ಬೆಚ್ಚಗಿನ ನೆನಪು,
ಹಿತವಾಗಿ ಕಾಡುವದು
ನುಣುಪು ಕುಳಿ ಕದಪು.

ಅಂದು ಯೌವ್ವನದಲ್ಲಿ
ಸಂಗಾತಿ ನೀನು,
ಇಂದೆನಗೆ ವ್ರದ್ಧಾಪ್ಯ
ಬರಿ ಕನಸ ಜೇನು.

ಬಾ..ಕವಿತೆ,ಎಲ್ಲವಿತೆ..?
ನನಸಲ್ಲಿ ಬಂದು,
ಒಲವಿನಕ್ಕರವಾಗು,
ಎದೆಯಲ್ಲಿ ನಿಂದು.

    ✍️ ಅಬ್ಳಿ,ಹೆಗಡೆ, ಹೊನ್ನಾವರ