ಅಳಿದು ಉಳಿದಿರುವ ಹಲವು ಅರಸು ಮನೆತನ ಗಳ ಭಗ್ನ ಅವಶೇಷಗಳು ನಮ್ಮ ರಾಜ್ಯದಲ್ಲಿ ಬಹಳಷ್ಟು ಇವೆ. ಅವುಗಳಲ್ಲಿ ಮೊದಲಿಗೆ ನೆನಪಿಗೆ ಬರುವುದೇ ಹಂಪೆ. ವಿಸ್ತಾರದಲ್ಲಿ ಅದರಷ್ಟು ದೊಡ್ಡದಾಗಿ ಇರದಿದ್ದರೂ ತನ್ನದೇ ವೈಶಿಷ್ಟ್ಯದಿಂದ ಗಮನ ಸೆಳೆಯುವುದೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಬಂದಳಿಕೆ ದೇವಾಲಯಗಳ ಸಂಕೀರ್ಣ. ಇಲ್ಲಿ ಬಸದಿ, ದೇವಾಲಯ, ಮಹಾನವಮಿ ದಿಬ್ಬಎಲ್ಲವೂ ಇವೆ. ಈ ದೇವಾಲಯಗಳನ್ನು ನೋಡಿದಾಗ ಹಳೆಯ ಪುಟಗಳ ಹೊಸ ಚಿತ್ರಕ್ಕೆ ಕಾದು ಕುಳಿತಿರುವ ಶಬರಿಯಂತೆ ಭಾಸವಾಗುವುದು ನಿಜ.
ಪ್ರಸಿದ್ದ ಬಳ್ಳಿಗಾವಿಯ ದೇವಾಲಯಗಳನ್ನಷ್ಟೇ ಪ್ರವಾಸಿಗರು ನೋಡಿ ಹೋಗುವ ಹತ್ತಿರದಲ್ಲಿಯೇ ಇರುವ ಬಂದಳಿಕೆಗೆ ಹೋಗುವದಿಲ್ಲ. ಬಳ್ಳಿಗಾವಿ ಯಿಂದ ತಾಳಗುಂದದಲ್ಲಿರುವ ೨ ನೇಶತಮಾನದ ರಾಜ್ಯದ ಅತೀಪುರಾತನ ಶಿವಲಿಂಗವನ್ನು ನೋಡಿ ಕೊಂಡು ಮುಂದೆ ಸಾಗಿದರೆ ಸಿಗುವುದೇ ೧೧ ಮತ್ತು ೧೨ನೇ ಶತಮಾನದಲ್ಲಿ ಪ್ರಮುಖವಾದ ವ್ಯಾಪಾರಿ ಕೇಂದ್ರವಾಗಿದ್ದ ಬಂದಳಿಕೆ. ಇದನ್ನು ಬಾಂಧವಪುರ, ಬಾಂದವನಗರ ಎಂದೂ ಕರೆ ಯುತ್ತಿದ್ದರು. ಇಲ್ಲಿ ಹಳೆಯ ಪಟ್ಟಣದ ಕೋಟೆ ಹಾಗೂ ಕಂದಕಗ ಅವಶೇಷ ಈಗಲೂ ನೋಡ ಬಹುದು. ಇದು ಜೈನರ ಪ್ರಮುಖಕೇಂದ್ರವಾಗಿದ್ದು ನಂತರ ಕಾಳಮುಖರ ಕೇಂದ್ರವಾಗಿ ಪರಿವರ್ತಿತ ವಾಗಿತ್ತು.
ಶಾಂತಿನಾಥ ಬಸದಿ :

ಬಂದಳಿಕೆಯಲ್ಲಿ ಈ ಮಾರ್ಗದಲ್ಲಿ ಬಂದಾಗ ಕೆರೆಯ ಬಲಭಾಗದಲ್ಲಿ ರಸ್ತೆಯಿಂದ ಕೆಳಮಟ್ಟ ದಲ್ಲಿ ಈ ಸುಂದರ ಬಸದಿ ಇದೆ. ರಾಷ್ಟ್ರಕೂಟರ ಕೃಷ್ಣನ ಕಾಲಕ್ರಿ.ಶ ೯೧೮ ರಲ್ಲಿ ಜಕ್ಕೆಯಬ್ಬೆ ದೀಣಿಗೆ ನೀಡಿ ಕಟ್ಟಿಸಿದ್ದಳು. ಈ ಬಸದಿಯನ್ನು ೧೩ ನೇ ಶತಮಾನದಲ್ಲಿ (೧೨೦೦) ವ್ಯಾಪಾರಿ ಬೊಪ್ಪಸಿಟ್ಟಿ ನವಿಕರಣಗೊಳಿಸಿದ. ಗರ್ಭಗುಡಿಯಲ್ಲಿ ಶಾಂತ ನಾಥ ಮೂರ್ತಿ ಇದ್ದು ಸುಖನಾಸಿಯಲ್ಲಿ ಸರಸ್ವತಿ ಯ ಶಿಲ್ಪವಿದೆ. ನವರಂಗದ ಕಂಭಗಳು ಸುಂದರ ವಾಗಿದ್ದು, ಕಂಭದ ಮೇಲೆ ಅನೇಕ ಚಕ್ರಬಂಧ ಗಳಿವೆ.ದ್ವಾರದಲ್ಲಿ ದ್ವಾರಪಾಲಕರ ಮೂರ್ತಿಗಳನ್ನ ನಿಲ್ಲಿಸಲಾಗಿದ್ದು ಶಾಸನಗಳು ಅನಾಥವಾಗಿ ಬಿದ್ದಿದೆ. ಆದರೂ ಬಸದಿಯನ್ನ ಸಾಕಷ್ಟು ಅಂದ ವಾಗಿ ಕೇಂದ್ರ ಪುರಾತತ್ವ ಇಲಾಖೆ ಸಂರಕ್ಷಣೆ ಮಾಡಿದೆ.
ತ್ರಿಮೂರ್ತಿ ನಾರಾಯಣ ದೇವಾಲಯ :

ಈ ಬಸದಿಯ ಅನತಿ ದೂರದಲ್ಲಿ ದೇವಾಲಯದ ಅಳಿದು ಉಳಿದ ದೇವಾಲಯಗಳ ಸಂಕೀರ್ಣ ಇದೆ. ಇದರಲ್ಲಿ ಮೊದಲಿಗೆ ಕಾಣುವುದೇ ತ್ರಿಮೂ ರ್ತಿ ದೇವಾಲಯ. ದೇವಾಲಯ ೩ ಗರ್ಭ ಗುಡಿ, ೩ ಅಂತರಾಳ ಹಾಗೂ ಒಂದೇ ನವರಂಗವನ್ನು ಹೊಂದಿದೆ. ಗರ್ಭಗುಡಿಯ ಮೇಲೆ ಸುಂದರ ವೇಸರ ಮಾದರಿಯ ಶಿಖರ ಇದ್ದು, ಮಧ್ಯದ (ಪಶ್ಚಿಮ) ಶಿಖರ ಬಿದ್ದು ಹೋಗಿದೆ. ನವರಂಗದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಸುಂದರ ಕಂಭ ಗಳಿವೆ. ಪಶ್ಚಿಮ ಮತ್ತು ದಕ್ಷಿಣ ಗರ್ಬಗುಡಿಯಲ್ಲಿ ಶಿವಲಿಂಗ ಇದ್ದರೇ ಉತ್ತರದಲ್ಲಿ ವಿಷ್ಣುವಿನ ಮೂರ್ತಿ ಇದ್ದು ಪ್ರಭಾವಳಿಯಲ್ಲಿ ದಶಾವತಾರದ ಕೆತ್ತೆನೆ ಇದೆ. ಅಂತರಾಳದಲ್ಲಿ ಸುಂದರ ಜಾಲಂದ್ರ ಗಳಿವೆ.
ಸಹಸ್ರಲಿಂಗ ದೇವಾಲಯ :

ತ್ರಿಮೂರ್ತಿ ದೇವಾಲಯದ ಎದುರು ಭಾಗದಲ್ಲಿ ರುವ ದಿಬ್ಬದ ಮೇಲೆ ಇದನ್ನು ನಿರ್ಮಿಸಲಾಗಿದೆ. ೧೧ ನೇ ಶತಮಾನದಲ್ಲಿ ಮಚ್ಚಯ್ಯ ದಂಡನಾಯ ಕ ನಿರ್ಮಿಸಿದ ಈ ದೇವಾಲಯದಲ್ಲಿ ಗರ್ಭಗುಡಿ, ಸುಖನಾಸಿ ಮತ್ತು ನವರಂಗ ಇದೆ. ನವಂಗದಲ್ಲಿ ೪ ಕಂಭಗಳಿದ್ದು ಸಾಧಾರಣ ಮೇಲ್ಚಾವಣಿ ಇದೆ. ಇಲ್ಲಿನ ಪಾಣೀಪೀಠದ ಮೇಲೆ ಸಹಸ್ರ ಗೆರೆ ಇರು ವುದರಿಂದ ಈ ಹೆಸರು ಬಂದಿದೆ ಎನ್ನಲಾಗಿದೆ. ಸಧ್ಯ ಇಲ್ಲಿನ ಗರ್ಭಗುಡಿಯ ಶಿವಲಿಂಗವಿದೆ
ಮಹಾನವಮಿ ದಿಬ್ಬ :

ಇಲ್ಲಿ ಸೋಮೇಶ್ವರಕ್ಕೆ ಹೋಗುವ ದಾರಿಯಲ್ಲಿ ಮತ್ತೊಂದು ದಿಬ್ಬದ. ಮೇಲೆ ಪಾಳು ಬಿದ್ದಿರುವ ಶಿಲಾಮಂಟಪವಿದ್ದು ೧೨೦೬ ರಲ್ಲಿ ಮಲ್ಲ ದಂಡ ನಾಯಕ ನಿರ್ಮಿಸಿದ.
ಸೋಮೇಶ್ವರ ದೇವಾಲಯ :

೧೨೭೪ ರಲ್ಲಿ ಬೊಪ್ಪಶೆಟ್ಟಿ ನಿರ್ಮಿಸಿದ ಈ ದೇವಾ ಲಯವನ್ನು ಸೋಮೇಶ್ವರ ಅಥವಾಬೋಪೇಶ್ವರ ದೇವಾಲಯ ಎಂದು ಹೇಳುತ್ತಾರೆ. ಆದರೆ ಈ ದೇವಾಲವನ್ನು ೧೧೬೩ ರಲ್ಲಿ ಮಾಚನಾಯಕ ನಿರ್ಮಿಸಿದನ್ನು ೧೨೭೪ ರಲ್ಲಿ ನವೀಕರಣಗೊಳಿಸಿ ರಬಹುದು. ಈ ದೇವಾಲಯದ ಗರ್ಭಗುಡಿಯಲ್ಲಿ ಸುಮಾರು ೩೦ ಇಂಚು ಎತ್ತರದ ಶಿವಲಿಂಗವಿದೆ. ನವರಂಗದಲ್ಲಿ ಸುಂದರ ಕಲ್ಯಾಣ ಚಾಲುಕ್ಯರ ಕಾಲದ ಕಂಭಗಳಿದ್ದು ಅಂತರಾಳದಲ್ಲಿ ಸುಂದರ ಜಾಲಂಧ್ರಗಳಿವೆ. ಉಳಿದ ೨ ಗರ್ಭಗುಡಿಯಲ್ಲಿ ಯಾವ ಮೂರ್ತಿಗಳಿಲ್ಲ.
ಈ ದೇವಾಲಯದ ವಿಶೇಷ ಎಂದರೆ ಮುಖ್ಯ ದ್ವಾರದ ಎರಡೂ ಅಂಕಣದಲ್ಲಿ ಸುಂದರವಾಗಿ ಅಲಂಕಾರಗೊಂಡ ಜಾಲಂದ್ರಗಳು. ಜಾಲಂದ್ರದ ಮಧ್ಯೆ ಒಂದು ಬದಿಯಲ್ಲಿ ರಾಮಯಾಣ ಮತ್ತೊಂದರಲ್ಲಿ ಮಹಾಭಾರತದ ಕೆತ್ತೆನೆ ಇದೆ. ನಿಜಕ್ಕೂ ಅಧ್ಬುತ ಕೆತ್ತೆನೆ ಹೊಂದಿರವ ಈ ಪಟ್ಟಿಕೆ ಗಳಲ್ಲಿ ಶ್ರೀ ರಾಮನ ಪಟ್ಟಾಭಿಷೇಕ, ವನವಾಸಕ್ಕೆ ತೆರೆಳುವ ಸನ್ನಿವೇಶ, ರಾವಣನ ಆಸ್ಥಾನ, ಆಶೋಕವನ ಚಿತ್ರಣವಿದೆ.ಮಹಾಭಾರತದ ಕೆತ್ತೆನೆ ಇನ್ನೂ ಸುಂದರವಾಗಿದ್ದೂ ಜೂಜಾಟ, ಯುದ್ದದ ಸನ್ನೀವೇಶ, ಗದಾಯುದ್ದ ಸುಂದರವಾಗಿದೆ. ಇಲ್ಲಿ ಆನೆ ಮತ್ತು ಕುದುರೆಯ ಕೆತ್ತೆನೆಯಂತೂ ಅದ್ಭುತ.
ಇಲ್ಲಿ ಕೋಟೆಯ ಪಳೆಯುಳಿಕೆ ಮಧ್ಯ ಚಿಕ್ಕ ವೀರಭದ್ರ ದೇವಾಲಯವಿದೆ. ಇಲ್ಲಿ ಮಹಿಶಾಸುರ ಮರ್ಧಿನಿ ವಿಗ್ರಹವಿದ್ದು ಈಗ ತ್ರಿಕೂಟಾಚಲ ದೇವಾಲಯದಲ್ಲಿದೆ. ಇಲ್ಲಿನ ಪರಿಸರದಲ್ಲಿ ದೊರೆ ತ ಹಲವು ವೀರಗಲ್ಲು ಮತ್ತು ಮಹಾಸತಿ ಕಲ್ಲು ಗಳನ ಆವರಣದಲ್ಲಿ ಇರಿಸಲಾಗಿದೆ. ಊರಿನ ಹೊರವಲಯದಲ್ಲಿ ಸಂಪೂರ್ಣವಾಗಿ ನವೀಕರಣ ಗೊಂಡಿರುವ ಬನಶಂಕರಿ ದೇವಾಲಯವಿದೆ. ೧೩ ನೇ ಶತಮಾನದಲ್ಲಿ ಈ ದೇವಾಲಯಕ್ಕೆ ದಾನ ನೀಡಿದ ವಿವರ ಇದೆ. ಇಲ್ಲಿಯೂ ಸಾಕಷ್ಟು ಪಳೆ ಯುಳಿಕೆಗಳಿವೆ.
ಇಡೀ ದೇವಾಲಯದ ಸಂಕೀರ್ಣ ಕೇಂದ್ರ ಪುರಾ ತತ್ವ ಆದೀನದಲ್ಲಿದ್ದು ಆವರಣಕ್ಕೆ ಬೇಲಿ ಹಾಕಿ ಸಂರಕ್ಷಿಸಿದೆ.ದೇವಾಲಯ ಸಂಕೀರ್ಣ ನೋಡಿದಾಗ ಹಳೆಯ ಗತವೈಭವಗಳು ನೆನಪಾಗಲಿದ್ದುಅದನ್ನು ಕಾಪಾಡಬೇಕಾಗಿದೆ. ಉತ್ಕನನದಲ್ಲಿ ಇನ್ನೂ ಸಾಕಷ್ಟು ಕುರುಹಗಳು ಹೊರಬಹುದೇನೊ. ಇಂತಹ ಸ್ಮಾರಕಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿಲ್ಲ. ದಾರಿಯಲ್ಲಿ ಈ ದೇವಾಲಯದ ಬಗ್ಗೆ ಫಲಕ ಗಳಾಗಲಿ ಮಾರ್ಗಸೂಚಿಗಳಾಗಲಿ ಇಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾದಲ್ಲಿ ಪ್ರವಾಸಿಗರಿಗು ಜನಸಾಮಾನ್ಯರಿಗೂ ಇದರ ಮಹತ್ವದ ಅರಿವಾ ಗುತ್ತದೆ. ಈ ದೇವಾಲಯಗಳನ್ನು ನೋಡಿದ ಮೇಲೆ ದೇವಾಲಯಗಳು ಅನಾಥವಾಗಿ ಗಥ ವೈಭವದ ಕುರುಹುಗಳಾಗಿ ಹಳೆಯ ಇತಿಹಾಸದ ಹೊಸ ಬೆಳಕಿಗೆ ಕಾಡುವ ಕೊಂಡಿಯಾಗಿ ಕಾಡು ವದಂತೂ ನಿಜ.
ತಲುಪುವ ಬಗ್ಗೆ : ಷಿಕಾರಿಪುರ – ಶಿರಾಳಕೊಪ್ಪ ದಿಂದ ಆನವಟ್ಟಿ ಮಾರ್ಗದಲ್ಲಿ ಬಳ್ಳಿಗಾವಿಯ ದೇವಾಲಯಗಳನ್ನು ನೋಡಿಕೊಂಡು ತಾಳಗುಂದ ಮಾರ್ಗವಾಗಿ ತಾಳಗುಂದರ ಶಾಲೆಯ ಸಮೀಪ ಎಡಕ್ಕೆ ತಿರುಗಿ ತಾಳಗುಂದದ ಮೂಲಕ ಬಂದಳಿಕೆ ತಲುಪಬಹುದು.ಹಾನಗಲ್ ಮಾರ್ಗವಾಗಿ ಬರು ವವರು ತೊಗರ್ಸಿಯ ಮೂಲಕವೂ ಇಲ್ಲಿಗೆ ಬರಬಹುದು.
✍️ಶ್ರೀನಿವಾಸ ಮೂರ್ತಿಎನ್. ಎಸ್.
ಬೆಂಗಳೂರು
ಎಲ್ಲವೂ ಇರುವ ಈ ದೇವಾಲಯಗಳ ಸಮುಚ್ಚಯ ಪ್ರವಾಸಿಗರಿಗೆ ಅಪರಿಚಿತವಾಗಿ ಉಳಿದಿದೆ.ಈ ಲೇಖನ ಪ್ರವಾಸಿಗರಿಗೆ ಮಾಹಿತಿ ನೀಡುತ್ತದೆ.ಲೇಖಕರ ಪ್ಯತ್ನ ಸಾರ್ಥಕ.ಲೇಖನ ಚನ್ನಾಗಿದೆ. – ಸುಶೀಲಾದೀವಿ
LikeLiked by 1 person
ಸರ್ ಈಗಲೂ ಈ ದೇವಾಲಯಗಳು ಜೀರ್ಣಾಸ್ಥಿತಿಯಲ್ಲಿ ಇವೆ. ಮಾಹಿತಿಗೆ ಧನ್ಯವಾದಗಳು
LikeLiked by 1 person
ಸರ್ಕಾರ ಮತ್ತು ಸ್ಥಳೀಯ ಸಹಕಾರ ಅಗತ್ಯ ಧನ್ಯವಾದಗಳು
LikeLike