ಆಗಸದಲ್ಲಿ ಹೊಳೆಯುತಿದೆ ಕಾಮನ ಬಿಲ್ಲು ನೋಡು ಗೆಳತಿ
ಸಪ್ತ ಸ್ವರಗಳಂತೆ ಏಳು ಬಣ್ಣಗಳು ಚಿತ್ತಾರದಲ್ಲು ನೋಡು ಗೆಳತಿ
ಸೃಷ್ಟಿಯ ಕೊಡುಗೆ ಇದು ಹೆಚ್ಚು ಸಮಯವಿದ ಕಿಲ್ಲ ರೂಪಿಸಲು
ಮನ ಉಲ್ಲಾಸದಿಂದ ನಲಿಯುತಿದೆ ಸೊಬಗಲ್ಲು ನೋಡು ಗೆಳತಿ
ಬಣ್ಣ ಬಣ್ಣಗಳಲ್ಲಿ ಒಂದಾಗಿ ಹರಿಸುವಾ ಪ್ರೇಮ ಸುಧೆಯ
ವಿಹರಿಸುವ ಸಂತಸ ಹಕ್ಕಿಯಾಗಿ ಹಾರುವಲ್ಲು ನೋಡು ಗೆಳತಿ
ಕಾಮನ ಬಿಲ್ಲೇರಿ ತಕ ಧಿಮಿತಾ ನಾಟ್ಯವಾಡುವಾ ನವಿಲಾಗಿ
ಸರಸದಲಿ ಶೃಂಗಾರ ಕಾವ್ಯ ಆನಂದ ಹಾಡುವಲ್ಲು ನೋಡು ಗೆಳತಿ
ಮಳೆ ಸುರಿದು ಕೆಂಪೇರಿದೆ ಇಳೆಯು ನಾಚಿ ಹರಿಸಿದೆ ಸಲಿಲ
ಸಲೀಲ ಮುಸುಕು ಸರಿಸಿದ ನೀಲಾಕಾಶದಲ್ಲು ನೋಡು ಗೆಳತಿ
ತಿಳಿಯಾದ ತಂಗಾಳಿ ಮೈ ಸೋಕಿ ಹಿತವೆನಿಸಿದೆ ಮನಸಿಗೆ
ನಮಿಪ ಗಿರಿಜಾಸುತ ಮಾತೆ ಕಂಡ ನಿಸರ್ಗದಲ್ಲು ನೋಡು ಗೆಳತಿ
✍️ವಿ.ಎಚ್.ಕೆ.ಹಿರೇಮಠ.ಗದಗ