ರಾಜ್ಯದ ದೇವಾಲಯದ ವಾಸ್ತು ಲೋಕದಲ್ಲಿ ಸಾತವಾಹನರಿಂದ ವಿಜಯನಗರ ಹಾಗು ಪಾಳೇ ಗಾರರು, ಮೈಸೂರು ಅರಸರವರೆಗೆ ಹಲವು ರಾಜ ಮನೆತನಗಳು     ತಮ್ಮದೇ     ಆದ    ಶೈಲಿಯಲ್ಲಿ ದೇವಾಲಯಗಳನ್ನಿ    ನಿರ್ಮಿಸಿದ್ದಾರೆ.      ಆದರೆ ಕೆಲವು   ದೇವಾಲಯಗಳ  ಸಂಕೀರ್ಣಗಳು  ಅಧ್ಯ ಯನ   ದೃಷ್ಟಿಯಿಂದ  ಪ್ರಮುಖವಾದವು.  ಇವುಗ ಳಲ್ಲಿ ಬಾಗಲಕೋಟೆ ಜಿಲ್ಲೆಯ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲು ಪ್ರಮುಖವಾದ ಸ್ಥಳ.

ದೇವಾಲಯ   ಬೆಳೆದು    ಬಂದ    ಬಗ್ಗೆ    ಹಾಗು ಔತ್ತರೇಯ ಹಾಗು ದಾಕ್ಷಿಣಾತ್ಯ ಶೈಲಿಗಳ ದೇವಾಲ ಯಗಳನ್ನ   ಹೊಂದಿರುವ    ಈ   ಸಂಕೀರ್ಣದಲ್ಲಿ ನಾಡಿನ ದೇವಾಲಯಗಳಲ್ಲಿ ದೇವಾಲಯ ವಾಸ್ತು ಬೆಳೆದ  ಬಗ್ಗೆ   ಅದರಲ್ಲೂ   ಶಿಖರದ ಮಾದರಿಯ ಅಧ್ಯಯನಕ್ಕೆ  ಪೂರಕವಾದ   ಹಲವು   ಮಾದರಿ ಗಳು ಇಲ್ಲಿವೆ. ಪ್ರಮುಖವಾಗಿ  ಕಳಿಂಗ   ಶೈಲಿಯ ಪಂಚಭೂಮಿ   ಮಾದರಿಗಳು     ವಿರಳವಾದವು.  ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣದ ಈ  ದೇವಾಲಯಗಳು    ವಾಸ್ತು     ಲೋಕದಲ್ಲಿ ಪ್ರಮುಖವಾಗಿ   ಗುರುತಿಸಿಕೊಂಡಿದೆ.     ಇಲ್ಲಿನ ದೇವಾಲಯಗಳು    ಎರಡೂ  ಮಾದರಿಯಲ್ಲಿದ್ದು ಕಳಿಂಗ ಶೈಲಿ ಹಾಗು ಡ್ರಾವಿಡ ಮಾದರಿಯ ಶಿಖರ ಗಳಿಂದ ಗುರುತಿಸಬಹುದು.

ಸಂಗಮೇಶ್ವರ ದೇವಾಲಯ :


ಸುಮಾರು 696 ರಲ್ಲಿ ಬಾದಾಮಿ ಚಾಲುಕ್ಯ ದೊರೆ ವಿಜಯಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ದೊಡ್ಡದಾದ  ಸಭಾಮಂಟಪ  ಹೊಂದಿದೆ.  ಗರ್ಭ ಗುಡಿಯಲ್ಲಿ   ಸಂಗಮೇಶ್ವರ  ಎಂದು   ಕರೆಯುವ ಶಿವಲಿಂಗವಿದ್ದು   ಬಾಗಿಲುವಾಡದಲ್ಲಿನ    ಗಂಗಾ, ಯಮುನ ಹಾಗು ನಂದಿಯ ಶಿಲ್ಪವಿದ್ದು ಇನ್ನು ಎರಡು ಚಿಕ್ಕ ಗುಡಿಗಳಿವೆ.  ಇಲ್ಲಿನ   ಶಿವನ ವಿವಿಧ ರೂಪದ ಗಜಸಂಹಾರ ಮೂರ್ತಿ, ಭೃಂಗಿಯೊಡನೆ ಶಿವ    ಗಮನ   ಸೆಳೆಯುತ್ತದೆ.   ಇನ್ನು   ಡ್ರಾವಿಡ  ಶೈಲಿಯಲ್ಲಿರುವ ಈ ದೇವಾಲಯದಲ್ಲಿನ   ಹೊರ ಭಿತ್ತಿಯಲ್ಲಿನ   ಜಾಲಂದ್ರಗಳೂ  ಹಾಗೂ    ಶಿವನ ವಿವಿಧ ಕೆತ್ತೆನೆಗಳು  ಗಮನ   ಸೆಳೆಯುತ್ತದೆ.ಇನ್ನು  ಈ ದೇವಾಲಯಕ್ಕೆ ಎರಡೂ ತಲದ   ಡ್ರಾವಿಡ ಶೈಲಿಯ ಶಿಖರವಿದೆ.

ವಿರುಪಾಕ್ಷ ದೇವಾಲಯ :

ಸುಮಾರು 740 ರಲ್ಲಿ ಎರಡನೆಯ ವಿಕ್ರಮಾದಿತ್ಯ ನ ರಾಣಿ   ಲೋಕ ಮಹಾದೇವಿ   ಕಟ್ಟಿಸಿದ  ಈ ದೇವಾಲಯ ಗರ್ಭಗುಡಿ, ಪ್ರದಕ್ಷಿಣಾ ಪಥ, ಸಭಾ ಮಂಟಪ ಹಾಗು ಮುಖಮಂಟಪ ಹೊಂದಿದೆ. ದೇವಾಲಕ್ಕೆ ಪ್ರತ್ಯೇಕವಾದ ನಂದಿ ಮಂಟಪವಿದೆ. ಈ  ದೇವಾಲಯವನ್ನು ಪಲ್ಲವರ  ಮೇಲಿನ ಗೆಲು ವಿಗೆ ಕಟ್ಟಿಸಿದ್ದು  ಎನ್ನಲಾಗಿದೆ.   ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಬಾಗಿಲಿವಾಡ ಸುಂದರವಾಗಿ ಅಲಂಕೃತಗೊಂಡಿದೆ. ಇನ್ನು ಇಲ್ಲಿನ ಸಭಾಮಂಟ ಪದಲ್ಲಿನ   18 ಕಂಭಗಳಲ್ಲಿ      ರಾಮಾಯಣ, ಮಹಾಭಾರತ,  ಭಾಗವತದ     ಕೆತ್ತೆನೆಯಿದ್ದು ನರಸಿಂಹ, ಶರಶಯ್ಯೆಲ್ಲಿನ ಭೀಷ್ಮ, ಗದಾಯುದ್ದ, ಸಮುದ್ರಮಂಥನ, ಗಿರಿಜಕಲ್ಯಾಣ, ಗೋವರ್ಧನ ಗಿರಿಧಾರಿ ಹಾಗು  ಸೂರ್ಯನ  ಕೆತ್ತೆನೆ ಸುಂದರವಾ ಗಿದೆ.  ಎಲ್ಲೋರದ.  ಕೈಲಾಸನಾಥ ದೇವಾಲಯಕ್ಕೆ ಈ ದೇವಾಲಯದ  ಪ್ರಭಾವ ನೋಡಬಹುದು. ಇನ್ನು  ಈ  ದೇವಾಲಯಕ್ಕೆ   ಡ್ರಾವಿಡ    ಶೈಲಿಯ ಶಿಖರವಿದೆ.  ಇನ್ನು ಇಲ್ಲಿನ ನಂದಿ ಮಂಟಪದಲ್ಲಿ ಪಲ್ಲವರ ಪ್ರಭಾವ ನೋಡಬಹುದು. ಈ ದೇವಾಲ ಯವನ್ನು ಲೋಕನಾಥ  ದೇವಾಲಯವೆಂದು  ಕರೆ ಯಲಾಗಿದೆ.

ಇನ್ನು ಇಲ್ಲಿ ಪ್ರತ್ಯೇಕವಾದ ನಂದಿ ಮಂಟಪವಿದ್ದು ಸುಮಾರು   ಐದು  ಅಡಿ   ಎತ್ತರದ  ಅಧಿಷ್ಟಾನದ ಮೇಲೆ ಇದ್ದು ಸುಮಾರು 6 ಆಡಿ ಎತ್ತರದ  ನಂದಿ ಇದೆ.  ಇಲ್ಲಿನ  ಕಂಭಗಳಲ್ಲಿ   ಮಿಥುನ ಶಿಲ್ಪಗಳಿವೆ.  ಸುತ್ತಲಿನ ಗೋಡೆಗಳಲ್ಲಿ ಶಿಖರ ಮಾದರಿಗಳಿದ್ದು ಇಲ್ಲಿ  ಆನೆ  ಹಾಗೂ   ಸಿಂಹದ   ಕೆತ್ತೆನೆ  ನೋಡಬ ಹುದು.

ಮಲ್ಲಿಕಾರ್ಜುನ ದೇವಾಲಯ :

ಸುಮಾರು    ಕ್ರಿ.ಶ. 740 ರಲ್ಲಿ   ವಿಕ್ರಮಾದಿತ್ಯನ ರಾಣಿ ತ್ರೈಲೋಕ್ಯ ಮಹಾದೇವಿ ನಿರ್ಮಿಸಿದ ಈ ದೇವಾಲಯ ವಿರುಪಾಕ್ಷ ದೇವಾಲಯದ ಮಾದರಿ ಯಲ್ಲಿಯೇ   ಇದ್ದು    ಗರ್ಭಗುಡಿ,    ಸುಖನಾಸಿ,  ಮುಖಮಂಟಪ,   ಸಭಾಮಂಟಪ   ಹಾಗು ನಂದಿ ಮಂಟಪ    ಹೊಂದಿದೆ.   ಗರ್ಭಗುಡಿಯಲ್ಲಿ   ಶಿವ   ಲಿಂಗವಿದ್ದು ಸುಖನಾಸಿಯಲ್ಲಿನ ವಿತಾನದಲ್ಲಿ ಶಿವ ಪಾರ್ವತಿಯ ಶಿಲ್ಪವಿದೆ.  ಇನ್ನು   ಮಹಾಮಂಟಪ ದಲ್ಲಿನ 16 ಕಂಭಗಳಲ್ಲಿ   ರಾಮಾಯಣ,  ಮಹಾ ಭಾರತ, ಹಾಗು  ಪ್ರಂಚತಂತ್ರಗಳ   ಕೆತ್ತೆನೆ  ನೋಡ ಬಹುದು.  ಡ್ರಾವಿಡ   ಮಾದರಿಯ  ಶಿಖರ ಹಾಗು ಹೊರ ಭಿತ್ತಿಯಲ್ಲಿ ಜಾಲಂದ್ರಗಳು ಹಾಗು ವಿವಿಧ ಕೆತ್ತೆನೆ   ನೋಡಬಹುದು.  ದೇವಾಲಯದ  ಗರ್ಭ ಗುಡಿ, ಅಂತರಾಳ, ಮುಖಮಂಟಪ ಹಾಗು ನಂದಿ ಮಂಟಪವನ್ನು ಹೊಂದಿದೆ.

ಗಳಗನಾಥ ದೇವಾಲಯ :

ಈ ದೇವಾಲಯ ಸುಮಾರು ಸುಮಾರು ಕ್ರಿ.ಶ.    7ನೇ ಶತಮಾನದಲ್ಲಿ ವಿನಾಯಾದಿತ್ಯನ ಕಾಲದಲ್ಲಿ  ನಿರ್ಮಾಣವಾಗಿದ್ದು   ಗರ್ಭಗುಡಿ,    ಸುಖನಾಸಿ, ಸಭಾಮಂಟಪ   ಹೊಂದಿದೆ.    ಗರ್ಭಗುಡಿಯಲ್ಲಿ ಸುಮಾರು  12 ನೇ ಶತಮಾನದಲ್ಲಿ    ಇರಿಸಲಾದ ಶಿವಲಿಂಗವಿದ್ದು,  ಮಂಟಪದ   ಭಾಗ  ಬಹುತೇಕ ನಾಶವಾಗಿದೆ. ಇನ್ನು ಗರ್ಭಗುಡಿಯ  ಬಾಗಿಲುವಾ ಡದಲ್ಲಿನ   ಲಲಾಟದಲ್ಲಿನ    ನೃತ್ಯಭಂಗಿಯ  ಶಿವ ನಿದ್ದು  ಪಕ್ಕದಲ್ಲಿನ ಸಂಗೀತಗಾರರ ಕೆತ್ತೆನೆ ಹಾಗು ಗಂಗಾ ಯಮುನೆಯರ ಕೆತ್ತೆನೆ ಇದೆ. ಇನ್ನು   ಸುಖ ನಾಸಿಯಲ್ಲಿನ    ನಟರಾಜನ   ಶಿಲ್ಪವಿದ್ದು  ಇಲ್ಲಿನ ಮಂಟಪದಲ್ಲಿ ಇರುಬಹುದಾದ ಅಂಧಕಾಸುರನ ಶಿಲ್ಪವಿದೆ.ಕಳಿಂಗ ಶೈಲಿಯ ಮಾದರಿಯ ಉತ್ತಮ ಉದಾಹರಣೆ   ಈ   ದೇವಾಲಯ.     ಮೂರು ಭೂಮಿಯ ಹೊಂದಿರುವ ಈ ದೇವಾಲಯದಲ್ಲಿ ಅಮಲಕ  ಹಾಗೂ  ಕಲಶ  ಮಾದರಿಗಳು ಸಂಪೂ ರ್ಣವಾಗಿ     ಹೊಂದಿರುವದನ್ನು   ಗಮನಿಸಬಹು ದು. ಇಲ್ಲಿನ ಮಂಟಪದಲ್ಲಿನ ಸುಂದರವಾದ ಶಿವನ ಮೂರ್ತಿ ಇದೆ.

ಕಾಡ ಸಿದ್ದೇಶ್ವರ ದೇವಾಲಯ :

ಸುಮಾರು   ಏಳನೇ   ಶತಮಾನದಲ್ಲಿ ನಿರ್ಮಾಣ ವಾದ ಈ ದೇವಾಲಯ ಕಳಿಂಗ ಶೈಲಿಯ ಶಿಖರದ ಮಾದರಿಯಲ್ಲಿ ನಿರ್ಮಾಣವಾದದ್ದು. ಸುಮಾರು ಮೂರು  ಭೂಮಿಯನ್ನ   ಗರ್ಭಗುಡಿಯ  ಮೇಲೆ ಹೊಂದಿರುವ    ಶಿಖರವಿರುವ   ಇಲ್ಲಿನ  ತ್ರಿಶೂಲ ಧಾರಿ ಶಿವ ಗಮನ ಸೆಳೆಯುತ್ತದೆ.

ಜಂಬುಲಿಂಗ ದೇವಾಲಯ :

ಈ ದೇವಾಲಯ   ಸಹ  ಅದೇ   ಕಾಲ  ಘಟ್ಟದಲ್ಲಿ ನಿರ್ಮಾಣವಾಗಿದ್ದು ಕಾಡ ಸಿದ್ದೇಶ್ವರ ದೇವಾಲಯ ಮಾದರಿಯನ್ನು ಮುಂದುವರಿಸಿ ಬೆಳೆಸಿದ ದೇವಾ ಲಯ. ಇಲ್ಲಿ  ಸುಖನಾಸ  ಹಾಗು ನಂದಿ ಮಂಟಪ ಸೇರ್ಪಡೆಯಾಗಿದ್ದು ಇಲ್ಲಿನ ಪಾರ್ವತಿ ಹಾಗು ನಟರಾಜನ ಉಬ್ಬು ಶಿಲ್ಪ ಗಮನ ಸೆಳೆಯುತ್ತದೆ.

ಕಾಶಿ ವಿಶ್ವೇಶ್ವರ ದೇವಾಲಯ :

ಸುಮಾರು 8 ನೇ ಶತಮಾನದ ಈ ದೇವಾಲಯ ಪಂಬ ಭೂಮಿ ಶಿಖರದ  ಮಾದರಿಗೆ   ಉತ್ತಮ ಉದಾಹರಣೆ.   ನಾಡಿನಲ್ಲಿ   ಲಬ್ಯವಿರುವ    ಈ ಮಾದರಿಯ ಏಕ ಮಾತ್ರ ದೇವಾಲಯವಾಗಿದ್ದು ಇಲ್ಲಿನ   ವಿತಾನದಲ್ಲಿನ    ಶಿವ  ಪಾರ್ವತಿ  ಹಾಗು ಕಾರ್ತಿಕೇಯನ ಕೆತ್ತೆನೆ ಸುಂದರವಾಗಿದೆ.

ಪಾಪನಾಥ ದೇವಾಲಯ :

ದೇವಾಲಯದ ಸಂಕೀರ್ಣದಿಂದ ಹೊರಗಿರುವ ಈ ದೇವಾಲಯವನ್ನು ಶಾಸನಗಳಲ್ಲಿ ಮುಕ್ತೇಶ್ವರ ಎಂದೇ ಬಣ್ಣಿಸಲಾಗಿದೆ. ದೇವಾಲಯ ಗರ್ಭಗುಡಿ, ಸುಖನಾಸಿ,  ಪ್ರದಕ್ಷಿಣಾ  ಪಥ,   ಅರ್ಧಮಂಟಪ, ಸಭಾಮಂಟಪ ಹಾಗು ಮುಖಮಂಟಪ. ಹೊಂದಿ ದೆ.  ಗರ್ಭಗುಡಿಯಲ್ಲಿ  ಶಿವಲಿಂಗವಿದ್ದು  ಬಾಗಿಲು ವಾಡದಲ್ಲಿನ ಗಜಲಕ್ಶ್ಮಿ ಕೆತ್ತೆನೆ ಇದೆ. ಇನ್ನು ವಿಷ್ಣು, ಶಿವ ಹಾಗು ಸೂರ್ಯನ ಶಿಲ್ಪವಿದ್ದು ಸಭಾಮಂಟ ಪದಲ್ಲಿನ ಮಹಿಶಾಸುರ ಮರ್ಧಿನಿ,  ಅನಂತಶಯ ನ ವಿಷ್ಣು ಹಾಗು ಮಿಥುನ ಶಿಲ್ಪಗಳು ಗಮನ ಸೆಳೆ ಯುತ್ತದೆ.  ಈ  ದೇವಾಲಯ  ಕಳಿಂಗ    ಶೈಲಿಯ ಶಿಖರ  ಹೊಂದಿದ್ದು, ಇಲ್ಲಿನ  ಹೊರಭಿತ್ತಿ ಯಲ್ಲಿನ ಕೆತ್ತೆನೆ ಗಮನ ಸೆಳೆಯುತ್ತದೆ.

✍️ಶ್ರೀನಿವಾಸ ಮೂರ್ತಿ ಎನ್. ಎಸ್. ಬೆಂಗಳೂರು