ಪಂಪ  ವಿರಚಿತ  ಆದಿಪುರಾಣದಲ್ಲಿ  ಸಖ್ಯದ ನೆಲೆ ಗಳು  ಹೇಗೆ ಬಿಚ್ಚಿಕೊಳ್ಳುತ್ತವೆ  ಎನ್ನುವದೆ  ಒಂದು ಸೊಜಿಗ. ಜೈನಧರ್ಮದ  ಪ್ರಕಾರ  ವಿರಕ್ತನಾದರೇ ಅವನ  ಜೀವನ ಪಾವನ  ಹಾಗೂ ಹಲವುಜನ್ಮಗ ಳಲ್ಲಿ  ಮಾಡಿದ  ಪಾಪ-ಪುಣ್ಯಗಳಿಗೆ  ಮುಕ್ತಾಯ ಹಾಕಿದಂತೆ ಕಾಣುವುದೆಂದು ಬಹುಶ: ಕವಿ ಇಲ್ಲಿ ಭಾವಿಸಿರಬೇಕು. ಇದೊಂದು ಧಾರ್ಮಿಕ ಕೃತಿಯಾ ಗಿದ್ದರೂ ಕೂಡಾ ಸಖ್ಯ ಇಲ್ಲಿ ಹಾಸು ಹೊಕ್ಕಾಗಿದೆ. ಆದಿಪುರಾಣದಲ್ಲಿ  ಬರುವ  ಈಶಾನ್ಯ  ಕಲ್ಪದಲ್ಲಿ ಲಲಿತಾಂಗನು   ಜನ್ಮತಾಳುವನು.  ಈ   ಹಿಂದೆ ಹಲವಾರು ಜನ್ಮಗಳನ್ನು ಹೊತ್ತು; ಪಾಪ- ಪುಣ್ಯ ಗಳ ಪ್ರಭಾವದಿಂದ ಲಲಿತಾಂಗನು ಅರಸಿಯರ ಸುಖೋಪಭೋಗದಲ್ಲಿ ತೇಲಾಡುತ್ತಿದ್ದನು.


“ಇದು ಸುಖದೊಂದು ತುತ್ತತುದಿ ರಾಗದಿ ಮೊತ್ತಮೊದಲ್ ನಿರಂತರಾ
ಭ್ಯುದಯದ ಸಾಗರಂ ವಿಭವದಾಗರಮೀ ದಿವಿಜೇಂದ್ರರುದ್ರಲೋ
ಕದೊಳಮಿದೊಂದೆ ಸಾರಮಿದು ಜೈನಪದಾಬ್ಬವರ ಪ್ರಸಾದದಾ
ದುದು ನಿನಗಪ್ಪ ಕಾರಣದಿನೀಗಳೆ ಪೂಜಿಸು ಚೈತ್ಯರಾಜಿಯಂ”

ಈಗಾಗಲೇ  ಹಲವು  ಜನ್ಮಗಳನ್ನು  ಕಳೆದು  ಲಲಿ ತಾಂಗನಾಗಿ  ಜನಿಸಿದ   ಸಮಯ  ಅಮೃತ ಗಳಿಗೆ ಯಂತೆ ಗೋಚರಗೊಂಡಿತ್ತು. ನಿತ್ಯವೂ ಪ್ರೇಮನು ರಾಗದಲ್ಲಿ ಮುಳಗುತ್ತಿದ್ದನು ಹಾಗೇ ಕೇವಲ ಸುಖ ಭೋಗದಲ್ಲಿಯೇ ಜೀವನವನ್ನು ಕಂಡುಕೊಂಡಂತೆ ಎನ್ನುವ  ರೀತಿಯಲ್ಲಿ  ಆತನ ವರ್ತನೆಗಳು ಅವನ ನ್ನು  ಮುಗ್ದನ್ನನ್ನಾಗಿ  ಮಾಡಿದ್ದವು.  ಎಲ್ಲ ಬಗೆಯ ಆಕಾಂಕ್ಷೆಗಳು  ಪ್ರೇಮಾತರಂಗದ  ತುತ್ತ  ತುದಿಯ ನ್ನು ಮುಟ್ಟಿದಂತೆ ಎಂದುಕೊಂಡು ಬದುಕು ರೂಪಿ ಸಿಕೊಂಡವನು. ಆ ಅನುರಾಗದ ಕಡಲು ನಿತ್ಯವು ಉಜ್ವಲವಾಗಿ    ಉಕ್ಕುತ್ತಿತ್ತು.   ಅದಕ್ಕಾಗಿ    ಆ ಲಲನೆಯರೊಂದಿಗೆ ಅವನು ಚೈತ್ಯಾಲಯಗಳನ್ನು ಪೂಜಿಸುತ್ತಿದ್ದನು. ಅಂದರೆ  ಪ್ರೇಮಾನುರಾಗದಲ್ಲಿ ಯೇ ದೇವರನ್ನು ಕಂಡಂತೆ ಇದ್ದವನು. ಲಲಿತಾಂಗ ನ ದೃಷ್ಟಿಯಲ್ಲಿ ಪ್ರೀತಿಸುವುದು ಎಂದರೆ ದೇವರನ್ನ ಆರಾಧನೆ  ಮಾಡಿದಂತೆ  ಎಂಬ   ಕಲ್ಪನೆಯಲ್ಲಿದ್ದ ವನು.

  “..ಎಂಬುದುಮಮರಲೋಕದರ್ಶನಾ ನಂತರೋತ್ಪನ್ನರಾಗ ಸಾಗರೋದಾರಪೂರ…ನಾಲ್ಸಾಸಿರ್ವರ್ ಮನೋನಯನದಲ್ಲಿ ಭೆಯರೊಳಂ ಸ್ವಯಂ ಪ್ರಭೆ, ಕನಕಲತೆ, ಕನಕಮಾಳೆ, ವಿದ್ಯುಲ್ಲತೆಯೆಂಬ ನಾಲ್ವರ್ ಮಹಾದೇವಿಯರೊಳಂ”

ಈ ರೀತಿಯಾಗಿ  ಲಲಿತಾಂಗನಿಗೆ  ನಾಲ್ಕು  ಸಾವಿರ ಲಲನೆಯರನ್ನೊಳಗೊಂಡು   ಜೀವಿಸುತ್ತಿದ್ದನು. ಅವರಲ್ಲಿ ಒಬ್ಬಳಾದ ಕಾಮನನ್ನೆ ಹೊದ್ದು ಕಾಮನ ಕಾಂತಿಯ  ಪಡೆದ   ಸ್ವಯಂಪ್ರಭೆಯೊಂದಿಗೆ  ಜೀವಿತಾವಧಿವರೆಗೆ   ಅನುರಕ್ತನಾಗಿ   ಜೀವಿಸುತ್ತಿ ದ್ದನು.

“ರನ್ನಕಾಂತಿಯ ಮಡುವಿನಲ್ಲಿ ಇವನು ಮುಳು ಗಿದ್ದನು. ವಿಲಾಸವೇ  ಇವನ  ಕಾಯಕವಾಯಿ ತು.  ಕಣ್ಣಿಗೆ  ತೃಪ್ತಿಯಾಗುವ  ತನಕ  ತನ್ನ ನಲ್ಲೆ ಯರನ್ನು ನೋಡಿದನು.” 

ಇದು  ಪ್ರೇಮವೋ  ಇಲ್ಲವೇ ಕಾಮದ ಧಾಹವೋ ಎನ್ನುವ  ಪ್ರಶ್ನೇ  ಮೂಡಿದರೂ ಕೂಡ ಪಂಪ ಕವಿ ಮಾತ್ರ   ಅವನ್ನೊಬ್ಬ.  ವಿಲಾಸಿ  ಪ್ರೇಮಿ   ಎಂದೇ ಗುರುತಿಸುತ್ತಾನೆ. ಲಲಿತಾಂಗನು ಪ್ರೇಮಾಂತರಂಗ ದಲ್ಲಿ ಸದಾ ತಲ್ಲೀನನಾಗುತ್ತಿದ್ದನು. ದಿನವು ಲಲಿತೆ ಯರು  ಇವನ  ಸುತ್ತಲೇ ಕಾಲ  ಕಳೆಯುತ್ತಿದ್ದರು. ಕಾಮಕಾಂತರರಾಗಿ, ಕಾಂತಿಯನ್ನು  ಸೆಳೆಯುತ್ತಿದ್ದ ರು.  ವಿಲಾಸ,  ಯುಕ್ತ,  ಭೋಗ     ಮುಕ್ತವಾದ ಆನಂದವು   ಅಡಿಯಿಂದ    ಮುಡಿಯವರೆಗೂ ಕೊನರಿದ್ದವು. ಒಂದು ಅರ್ಥದಲ್ಲಿ ಸುಖ-ಭೋಗ (ದು:ಖವನ್ನು ಹೊರತು)ದಲ್ಲಿ   ಕಾಮಾಗ್ನಿಯಾಗಿ ಮೆರೆಯುತ್ತಿದ್ದನು. ಇತನ  ಪ್ರೀತಿಗೆ  ತಕ್ಕ  ಹಾಗೇ ಇರುವ  ಮತ್ತು  ಆತನ  ಆತ್ಮದಂತೆ ಇದ್ದ ಮಡದಿ ಯೇ ಸ್ವಯಂಪ್ರಭೆ. ಆಕೆಯು

“ಅದು ಸುಖದೊಂದು ಪಿಂಡಮದು ಪುಣ್ಯದ ಪುಂಜಮದಂಗಜಂಗೆ ಬಾ
ಱ್ಮೊದಲದು ಚಿತ್ತಜಂಗೆ ಕುಲದೈವಮದಂಗಜ ಚಕ್ರವರ್ತಿಗೆ
ತ್ತಿದ ಪೊಸವಟ್ಟಮಂತದು ಮನೋಜನ ಕೈಪಿಡಿಯಂದು ಮಾಣ್ದೆನಾ
ಸುದತಿಯ ರೂಪನಿಂ ಪಳ್ ತನೆಂದೊಡೆ ಚಿಃ ಕರಮಗ್ಗನಾಗನೇ”

ಇವಳು  ಮನ್ಮಥನ  ಮಗಳೇ ಎನ್ನುವಷ್ಟು ರೂಪ ವತಿ  ಇವಳೊಂದು  ಚಿಂತಾವಮಣಿಯೇ   ಸರಿ. ಒಟ್ಟು  ಸುರಾಂಗನೆಯರೆಲ್ಲರ  ರೂಪವನ್ನು  ಇವ ಳೊಬ್ಬಳಿಗೆ ತೊಡಿಸಿದಂತಾಗಿತ್ತು. ಈ ಕಾರಣಕ್ಕಾಗಿ ಯೇ  ಬಹುಶ್ಯ  ಲಲಿತಾಂಗನು ಸುಖದ ಸುಪ್ಪತ್ತಿಗೆ ಯೊಂದಿಗೆ  ಒಲವಿನ  ಬುಗ್ಗೆಗಳನ್ನು   ಪಡೆಯುತ್ತಿ ದ್ದನು.  ಸ್ವಯಂಪ್ರಭೆಯ   ಹಿಂದೆಯೇ   ಸದಾ ಅಲೆದಾಡುತ್ತಿದ್ದನು. ಲಲಿತಾಂಗನ   ಜೀವತಾಳಕ್ಕೆ ಇವಳೇ ವೀಣೆಯಾಗಿದ್ದಳು. ಸ್ವಯಂ ಭೂರಮಣ ಸಮುದ್ರದ  ದಡದಲ್ಲೂ  ಹಾಗೂ   ಉದ್ಯಾನದ ಬಳ್ಳಿ  ಮಡುಗಳಲ್ಲಿ  ಆಟವಾಡುತ್ತಾ ರಸಿಕ  ಶಿಖಾ ಮಣಿಯಂತೆ   ಲೋಕಕೆಲ್ಲ  ತೋರ್ಪಡಿಸಿದನು,
ಇಂತಹ ಸುಖದಲ್ಲಿ ತಲ್ಲೀನಗೊಂಡದಾಂಪತ್ಯದಲ್ಲಿ ಒಂದು ಚಂಡಮಾರುತವೇ ಬೀಸಿತು. ಇನೇನು ಲಲಿತಾಂಗನ ಆಯುಷ್ಯ ಕೇವಲ ಆರು ತಿಂಗಳು ಮಾತ್ರ  ಉಳಿದಿರುವ  ವಿಚಾರ   ತಿಳಿಯುತ್ತದೆ. ಅಷ್ಟು ಕಾಲಗಳವರೆಗೆ ಅನುಭವಿಸಿ ಉಂಡ ಸವಿ ನೆನಪುಗಳು ಈಗ ಬರಿ ನೆನಪು ಅಷ್ಟೇ. ಅವುಗಳೆ ಲ್ಲವೂ  ಒಂದೊಂದೆ  ಎಲೆ ಉದುರುವಂತೆ,  (ನೆನ ಪುಗಳನ್ನು  ಒಂದಾದ  ಮೇಲ್ಲೊಂದನ್ನು  ನೆನಪಿಸಿ ಕೊಳ್ಳುವುದು)  ಉದರಲು  ಪ್ರಾರಂಭವಾಯಿತು. ಸಖ್ಯದ   ನಿಜವಾದ   ಅರ್ಥವೇ  ಇದು  ಅಲ್ವಾ?. ಏಕೆಂದರೆ   ನಾವು   ಬದುಕಿನೊಂದಿಗೆ ಒಪ್ಪಂದದ ಗುತ್ತಿಗೆದಾರರಾಗಿ     ಜೀವನ     ಸಾಗಿಸುತ್ತಿದ್ದೇವೆ ಅಷ್ಟೇ.  ಅದರ  ಕಾಲಾವಧಿ  ಮುಗಿದ   ಕೂಡಲೆ ಬಿಡುವುದು ಅನಿವಾರ್ಯ. ಸುಖದ   ಸೋಪಾನ  ಮಿಲನೊಂದಿಗೆ ಅಂತ್ಯವಾಗುತ್ತದೆ ಎಂಬುವುದನ್ನ ನಾವು ಒಪ್ಪಿಕೊಳ್ಳಬೇಕು.  ಆಗಲೇ   ಜೀವನದ  ಸಾರ್ಥಕತೆಗೆ ಅರ್ಥ  ದೊರೆಯುವುದು.  ಇಲ್ಲವಾ ದರೆ   ಬದುಕು ಬರಡಾಗಿರುವುದು.


“ಸುರತರುನಂದನರ್ ಗಳಿರ ರತ್ನಪಿನದ್ದವಿಮಾನಕುಟ್ಟಿಮಾಂ
ತರ ಸುರತಾಲಯಂಗಳರ ಚಾರುವಿಲೋಲಕಟಾಕ್ಷಪಾತಸೌಂ
ದರಪರಿವಾರದೇವಿಯರಿರಾ ಕಡುಕೆಯ್ದು ಕೃತಾಂತನಿಂತು ನಿ
ರ್ನೆರಮೆಱೆದುಯ್ಯೆ ಬಾರಿಸದೆ ಕೆಮ್ಮನುಪೇಕ್ಷಿಸಿ ನೋಡುತಿರ್ಪಿರೇ”

ಲಲಿತಾಂಗನ  ಬದುಕು  ಮುಗಿತಾ ಬಂತು ಎಂದು ತಿಳಿದಾಗಲೂ ಸಹ ತನ್ನ ಆಯುಸ್ಸಿಗಾಗಿ ಕಲ್ಪವೃಕ್ಷ ಗಳಲ್ಲಿ, ಕಾಮಧೇನುಗಳಲ್ಲಿ, ಚಿಂತಾಮಣಿಗಳಲ್ಲಿ ಕಾಡಿ ಬೇಡುತ್ತಾನೆ. ನನಗೆ  ಯಮನಿಂದ   ಮುಕ್ತಿ ಕೊಡಿಸಿರಿ  ಎಂದು  ಗೊಗೇರಿಯುತ್ತಾನೆ.  ಜೀವನ ದ್ದುಕ್ಕೂ ಪ್ರೀತಿ-ಪ್ರೇಮದಲ್ಲಿ, ಕಾಮ-ಭೋಗದಲ್ಲಿ ಜೀವನ ಸಾಗಿಸಿದಂತವನಿಗೆ ಸಾವು ಎಂದಕೂಡಲೆ ಅವನಿಗಾದ ಆಘಾತ ಹೇಳಲು ಅಸಾಧ್ಯ. “ಕಾಮ ಸಾಮ್ರಾಜ್ಯದ  ಏಕೈಕ  ಚಕ್ರೇಶ್ವರಿಯಾದ   ಸ್ವಯಂ ಪ್ರಭೇ  (ಬಿಟ್ಟು ಹೇಗೇ)  ನಾನು   ನೀನೂ    ದೇಹ ಬೇರಾದರೂ ಜೀವ ಒಂದೇ ಆಗಿರುವೆವು” ಎಂದು ಆಕೆಯನ್ನು  ನೆನಪಿಸಿಕೊಂಡು   ಪರಿ  ಪರಿಯಾಗಿ ರೋಧಿಸಿದರೂ ವಿಧಿಯ ಪರಿಪಾಠದಲ್ಲಿಮನುಷ್ಯ ನ ಆಟಕ್ಕೆ ಬೆಲೆಯಿಲ್ಲ. ದೇಹಗಳು ಎರಡು ಒಂದೇ ಆಗಿದ್ದರು  ಸಹ  ಜೀವಗಳು   ಬೇರೆ ಬೇರೆ ಆಗಿರು ವುದು ಖಚಿತ ಎಂಬ ಮಾತುಗಳನ್ನು ತಿಳಿದುಕೊ ಳ್ಳುವಂತಹ  ಸ್ಥಿತಿಯಲ್ಲಿ   ಲಲಿತಾಂಗ   ಇರಲಿಲ್ಲ.
ನೀನಾದರು ನನ್ನನ್ನು ನಿನ್ನಿಂದ ಅಗಲಿಸುವುದನ್ನು ನಿಲ್ಲಿಸು, ನಮ್ಮಿಬ್ಬರ ಪ್ರೇಮದ ಜೀವಂತಿಕೆಯನ್ನು ಕಂಡು  ಯಮನು  ನಮ್ಮಿಬ್ಬರನ್ನು   ಅಗಲಿಸಲು ಮುಂದಾಗಿದ್ದಾನೆ. ಅದಕ್ಕಾಗಿ  ನೀನು   ಎಂದೂ ಅಧೈರ್ಯಳಾಗಬೇಡ  ಎಂದು  ಹೇಳುವ  ಮಾತು ಗಳು ಕೇವಲ ಮಾತಷ್ಟೇ. ಆದರೆ  ಮರಣ  ಯಾರ ನ್ನು ಬಿಟ್ಟಿಲ್ಲ ಅದನ್ನು ನಾವು ಮರೆಯಬಾರದು. ಕಾಮ ಭೋಗದಲ್ಲಿರುವ ತಾತ್ವಿಕತೆಯನ್ನು ಸೂಕ್ಷ್ಮ ವಾಗಿ ಗಮನಿಸಬೇಕು. ಆಗ ಮಾತ್ರ “ಶ್ಲೇಷ”ದ ವಿಚಾರ    ಗೋಚರವಾಗುವುದು.   

ಆದಿಪುರಾಣ ದಲ್ಲಿ  ಕವಿ ಪಂಪನು ಜಾಣ್ಮೆಯಿಂದ ದಾಂಪತ್ಯ ವನ್ನು  ಮಧುಪರ್ಕದಂತೆ    ರುಚಿಸಿ,    ಒಮ್ಮೆ   ವೈರಾಗ್ಯ ಮತ್ತೊಮ್ಮೆ ಸಾವನ್ನು  ತಂದು   ಸಮತೋಲನವನ್ನು    ಸೃಷ್ಠಿಸಿದ್ದಾನೆ.     ಕಾಮ,   ಕ್ರೋಧ, ಮಧ,   ಮತ್ಸರಗಳೆಲ್ಲವನ್ನೂ     ದಾಟಿ   ಮತ್ತೊಂದು ಬಗೆಯ ಸಖ್ಯವಿದೆಂದು ಸಾರುವ ಮತವನ್ನು ಒಪ್ಪ ಲೇಬೇಕು. ಕಾಮದಲ್ಲಿಯೇ ಮುಳಿಗಿದ್ದಲಲಿತಾಂಗ ಮತ್ತು ಸ್ವಯಂಪ್ರಭೆಯರ   ಅಗಲುವಿಕೆ   ಅದು ನಿಜಕ್ಕೂ ಹಿಂಸೆಯೇ ಸರಿ ಕ್ಷಣಾರ್ಧದಲ್ಲಿಹೊರಟು ಹೋಗುವ  ಜೀವವನ್ನು  ನೆನದರೆ,  ಒಂದು   ಕ್ಷಣ    ರೋಮಾಂಚನವೇ  ಕವಿದು ಬಿಡುತ್ತದೆ. ಬಹುಶ: ಇದೇ ‘ಸಖ್ಯದ ತುತ್ತ  ತುದಿ’    ಆಗಿರಬೇಕೇಂದು  ನಾನು  ಇಲ್ಲಿ  ಭಾವಿಸಿ ದ್ದೇನೆ.  ಇಂತಹ   ಸಖ್ಯದ ಪರಿಯನ್ನು ಒಂದೇ ಜನ್ಮಕ್ಕೆ   ಸೀಮಿತಗೊಳಿಸದೆ,    ಅದನ್ನು    ಜನ್ಮ- ಜನ್ಮಾಂತರಗಳವರೆಗೆ    ರೂಪಿಸಿಕೊಂಡು    ಪ್ರೀತಿ ಗಾಗಿ(ಶೃಂಗಾರಕ್ಕಾಗಿ) ‘ಪಂಪ’ ಹೊಸ ದಾರಿಯನ್ನೆ ಸೃಷ್ಠಿಸಿದ್ದಾನೆ. ಇತ್ತ ಕಡೆ ಸ್ವಯಂಪ್ರಭೆ ಪ್ರಾಣನಾಥ ನ ಪ್ರಾಣಹಾರಿ ಹೋಗುವ ಸ್ಥಿತಿಯಲ್ಲಿ ಇದ್ದರೂ ಕೂಡ   ಆಕೆಯು    ನಿಲ್ಲಿಸುವಂತಹ    ಯಾವ ಅವಕಾಶಗಳು   ಇಂದ್ರಾದಿಗಳು ನೀಡಲಿಲ್ಲ. ಇದು ವಿಧಿಯ  ಲಿಖಿತ  ಅಷ್ಟೇ. ಲಲಿತಾಂಗನ   ಅಗಲಿಕೆ ಯಿಂದ   ಪತ್ನಿ   ಸ್ವಯಂಪ್ರಭೆಗೆ   ಸ್ವರ್ಗದಲ್ಲಿಯೇ ನರಕದಂತ    ಸಂಕಟವಾಯಿತು.   ಸೌಂದರ್ಯದ ಕಣಿಯಾಗಿದ್ದರೂ,   ಒಂಟಿಯಾಗಿ    ಬರಗಾಲದ ಬಿರುಕು,   ಮುಖದ   ಕಾಂತಿಹೀನಳಾಗಿ,   ವಿರಹ ದಿಂದ ಅಲೆದಾಡುತ್ತಾ,ಕಣ್ಣೀರು ಸುರಿಸುತ್ತಾ ವ್ಯಥೆ ಪಡಬೇಕು ಅಷ್ಟೇ. ಯಾವ ದಾರಿಗಳು ಲಲಿತಾಂಗ ನನ್ನು ರಕ್ಷಿಸಲು ಇರಲಿಲ್ಲ.  ಆ  ವಿಚಾರ   ಆಕೆಗೂ ಸಹ ಗೊತ್ತಿತ್ತು. ಮನದೊಳಗೆ   ಇರುವ    ಪ್ರೀತಿ ಆಕೆಗೆ ಹೀಗೆಲ್ಲಾ ಮಾಡಿಸಿತು.

“ಮುರಿದೆೞೆದುಯ್ಯ ನಿನ್ನನಿರದಂತಕನಾರ್ ನಡೆನೋಡೆನೋಡೆ ನೀಂ
ಕರಗಿದೆಯಂತುಮೆನ್ನ ಸುಶರೀರದೊಳಿರ್ದುದು ಜೀವಮೀಯೊಡಲ್
ಕರಗಿದುದಿಲ್ಲದೆನ್ನ ಬಸಮಲ್ತೊಡಲಿಂದೆಮ ಶೋಕದೋಳ್ ಮನಂ
ಕರಗಿದುದೆಯ್ದೆ ವಾರದಿರೆಯಿರ್ದೆಡೆಯಿಂ ಲಲಿತಾಂಗವಲ್ಲಭಾ”

ದಾಂಪತ್ಯವೆಂದರೆ ಹಾಗೇ, ಒಂದೇ ರಥ ; ಎರಡು ಗಾಲಿಗಳು  ಸಹಜವಾದ  ರೀತಿಯಲ್ಲಿ  ಚಲಿಸಿದರೆ ಮಾತ್ರ   ಜೀವನ    ಹಸನಾಗಿ   ಸಾಗುವುದೆಂದು ಜನಪದರು   ಹೇಳಿದ  ಮಾತುಗಳನ್ನು   ನೆನಯ ಬೇಕು. ಸ್ವಯಂಪ್ರಭೆಯ  ಕಣ್ಮುಂದೆಯೇ    ಬೆಳಕಿ ನಂತೆ  ಕರಗಿ   ಹೋಗುತ್ತಿರುವ.  ಲಲಿತಾಂಗನನ್ನು ಕಂಡು, ನನ್ನೆದುರಿಗೆಯೇ ನೀ ಹೀಗೆ ಕರಗಿ ಹೋದೆ ಯಲ್ಲ! ಈ ಹಾಳು ಜೀವ ದೇಹಬಿಟ್ಟು ಹೋಗುತ್ತಿ ಲ್ಲವಲ್ಲ? ಎಂದು ವ್ಯಥೆ ಪಡುವಳು. ನನ್ನ ಮನಸ್ಸು ತುಂಬಾ  ನೀನೇ   ತುಂಬಿರುವಾಗ,  ನಾ   ಹೇಗೆ ಜೀವಸಲಿ  ಎಂದು ಪ್ರಲಾಪಿಸುತ್ತಾಳೆ. ವಿರಹದಲ್ಲಿ ನೊಂದು ಬೆಂದು ಕಣ್ಣೀರಿಡುವಳು.  ಈ   ಅಗಲಿಕೆ ಯು   ದೇವಾನು ದೇವತೆಗಳಿಗೂ  ಮತ್ತು  ಪ್ರಕೃತಿ ಗಳಿಗೂ ಬಿಟ್ಟಿಲ್ಲ  ಎಂದು  ಸ್ವಯಂಪ್ರಭೆಗೆ   ದೇವ ಕನ್ನೆಯರು   ಹೇಳುವರು.  ಬದುಕು    ಮುಳುಗಿ ಹೋಯಿತು    ಎಂದಾಗಲೆಲ್ಲ   ಮತ್ತೆ    ಬದಕನ್ನು ರೂಪಿಸಿಕೊಳ್ಳಬೇಕು  ಬದುಕಬೇಕೆಂದು    ಹುಡು ಕುವ  ತವಕ   ಇಂದು   ನಿನ್ನೆಯದ್ದಲ್ಲ,   ಅದು ಪ್ರಾಚೀನದಿಂದಲೂ ಬಂದಂತಹದಾಗಿದೆ. ಹತಾಶೆ ಯಲ್ಲಿ  ಇದ್ದವಳಿಗೆ  ಏನು    ಹೊಸ  ದಿಗಂತದ ದರ್ಶನವಿರಬೇಕು. ಅದು ಜನ್ಮಾಂತರದಲ್ಲಿ ಮತ್ತೆ ಹುಟ್ಟಿ ಬದುಕಿನ ಹಿಂದಿನ ವಿರಹಗಳನ್ನೆಲ್ಲ ಹಾಗೂ ಮುಂದಿನ   ಜನ್ಮದಲ್ಲಿ   ಅನುಭವಿಸಿ   ಸುಖದಲ್ಲಿ ತೆಲಬೇಕೆಂಬ ಮಹದಾಸೆಯನ್ನು ಅರಿಯಬೇಕು. ಪಂಪ ಯಾಕೆ  ಇಂದಿಗೂ  ಜೀವಂತವಾಗಿ    ನಿಲ್ಲು ತ್ತಾನೆ.  ಏಕೆಂದರೆ,   ಬದುಕು  ಶಾಶ್ವತವಲ್ಲ ಎಂದು ಅರ್ಥಮಾಡಿಸಲು      ಬಳಸುವ     ಮಾರ್ಗಗಳು ಸಮಂಜಸವೂ ಹೌದುಅವುಗಳು ಸರ್ವಕಾಲಕ್ಕೂ ಪ್ರಚಲಿತವೆನಿಸುತ್ತವೆ.

    ಡಾ. ರೇಣುಕಾ ಅರುಣ ಕಠಾರಿ.