ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ ತಿಂಡಿಗಳಲ್ಲಿ ಕೊಟ್ಟೆರೊಟ್ಟಿ ತನ್ನದೇ ಆದ ಸ್ಥಾನ ಪಡೆದಿದೆ, ಕೆಲ ಹಬ್ಬ ಹರಿದಿನಗಳಲ್ಲಿ  ಈ  ತಿಂಡಿಯನ್ನು ಬಡವ ಬಲ್ಲಿದರೆಂಬ  ಭೇದ  ಭಾವವಿಲ್ಲದೇ   ತೆಳು ಬೆಲ್ಲ ಮತ್ತು ಕಾಯಿ ಹಾಲಿನೊಂದಿಗೆ ತಿಂದು ಖುಷಿಪಡು ವರು. ಹಸಿ  ಹಲಸಿನ  ಎಲೆಗಳನ್ನು ಲೋಟದಾಕಾ ರವಾಗಿ ತಯಾರಿಸಿ  (ಈ  ಪ್ರಕ್ರಿಯೆಗೆ  ಕೊಟ್ಟೆ    ಶೆಡುವುದು ಎನ್ನುವರು) ಅದರಲ್ಲಿ  ಇಡ್ಲಿಗೆ ಬೇಕಾ ದ ಹಿಟ್ಟನ್ನು  ಹಾಕಿ, ಕೊಟ್ಟೆ  ತಪ್ಲಿಯಲ್ಲಿ  ಹಬೆಯ  ಮೇಲೆ ಬೇಯಿಸಿ,ಕೊಟ್ಟಿರೊಟ್ಟಿ ತಯಾರಿಸುವರು. ಅಂದಿನ ಕಾಲದಲ್ಲಿ ಮನೆಯಲ್ಲಿ ಹಿತ್ತಾಳೆಯದೋ ತಾಮ್ರದ್ದೋ    ಆದ   ಕೊಟ್ಟೆ ತಪ್ಲಿ   ಇರುವುದೇ  ಒಂದು  ಪ್ರತಿಷ್ಟೆಯಾಗಿತ್ತು.  ನನ್ನ   ಇಪ್ಪತ್ತೈದನೇ  ವರ್ಷದವರೆಗೂ  ನಮ್ಮ   ಮನೆಯಲ್ಲಿ  ಸ್ವಂತದ್ದಾ ದ ಕೊಟ್ಟೆತಪ್ಲಿ ಇರಲಿಲ್ಲ. ಇದಕಾಗಿ  ನಾವು   ಪ್ರತೀ ಹಬ್ಬಕೂ  ಗೋಡೆಯಾಚೆಗಿನ  ಮನೆಯ   ಮರ್ಜಿ ಕಾಯಬೇಕಾಗಿತ್ತು. ಕೆಲವೊಮ್ಮೆ ಅವರು ಇದನ್ನು ದಯಪಾಲಿಸಿದರೆ ಮಾತ್ರ ನಾವು ಕೊಟ್ಟೆರೊಟ್ಟಿ ಮಾಡಿ ತಿನ್ನಬೇಕಾಗಿತ್ತು.


ಕುಮಟಾ ಕ್ಷೇತ್ರದ ಅಂದಿನ ಎಂಎಲ್ಎ ದಿ.ಎನ್ ಎಚ್ ಗೌಡರು ಮೊದಲು ಬಂಕಿಕೊಡ್ಲ ಹೈಸ್ಕೂಲಿ ನಲ್ಲಿ   ಶಿಕ್ಷಕರಾಗಿದ್ದರು. ಆ  ಸಂದರ್ಭದಲ್ಲಿ  ಹಬ್ಬ ಬಂತೆಂದರೆ   ಬಂಕಿಕೊಡ್ಲದಿಂದ  ಅವರ  ಮೂಲ ಮನೆ  ಗೊನೇಹಳ್ಳಿಗೆ  ದಂಪತಿ  ಸಮೇತ  ನಡೆದೇ ಹೋಗುವಾಗ    ಅವರ  ನೂರು ಅಡಿ   ಮುಂದೆ ಹಲಸಿನ ಎಲೆಯಿಂದ ತಯಾರಿಸಿದ ಖಾಲಿ ಕೊಟ್ಟೆ ಗಳನ್ನು   ಒಬ್ಬ   ಹೊತ್ತೊಯ್ಯುತ್ತಿದ್ದ,  ಆಗಲೇ ನಮಗೆ  ನಾಳೆ  ಯಾವುದೋ  ಹಬ್ಬವಿದೆ  ಅಂತ ನೆನಪಾಗುತ್ತಿತ್ತು. ಈ ನೆಲದ ಸಂಸ್ಕೃತಿಯ ಕೊಟ್ಟೆ ರೊಟ್ಟಿ ಆಧುನಿಕತೆಯ ಮುಂದಿನ ಶತಮಾನಗಳ ಲ್ಲಿಯೂ ಸಹ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳು ವುದೇ?

✍️ಪ್ರಕಾಶ ಕಡಮೆ. ನಾಗಸುಧೆ, 
ಹುಬ್ಬಳ್ಳಿ