ಕಾವ್ಯ ಕನ್ನಡಿಯೊಂದು
ಕೈಜಾರಿ ಬಿಳುತಿರಲು
ಕೈಹಿಡಿದು ಸಲುಹಿದಾತೆ
ಪ್ರಸನ್ನಚಿತ್ತದಿ ಎನ್ನ ಮನದಾಳದಿ
ನೆಲೆನಿಂತು ಗೀತೆ ಹಾಡಿಸಿದಾತೆ

ಏನು ಬನ್ನಿಸಲಿ ನಿನ್ನ
ತಾಯೊಡಲ ಕುಡಿ ನಾನು
ಸಕಲಜೀವಕೂ ಪ್ರಕೃತಿ ಮಾತೆ
ವರ್ಣಿಸಲು ಪದವಿಲ್ಲದಾತೆ ನೀನು

ಸಹನೆಯಿಂ ಸಲುಹಿ
ಉಸಿರು ಹಸಿರನು ಕೊಟ್ಟು
ಬದುಕು ಬಂಡಿಯ ಎಳೆದಾತೆ ನೀನೂ
ರಕ್ಷಿಪ ಪುಣ್ಯಕೋಟಿ ನೀನು

       ✍️ಶ್ರೀಧರ ಗಸ್ತಿ             
ಶಿಕ್ಷಕರು,ಧಾರವಾಡ