[೨೦೨೧ ರ ನ್ಯಾಷನಲ್ ಅಚೀರ‍್ಸ್ ಬುಕ್ ಆಫ್ ರೆಕರ‍್ಡಗೆ ಸರ‍್ಪಡೆಗೊಂಡ ಕಲಾವಿದನ ಸಾಧನೆಯ ಕುರಿತಾದ ಕಿರು ಲೇಖನ]

ಜನಪರ  ಸೇವೆಯ. ಜನಪದ  ಸಂಜೀವಿನಿ ಗವಿಸಿದ್ದಯ್ಯ ಹಳ್ಳಿಕೇರಿಮಠ ಜಾನಪದದಲಿ ‘ಜಾಣ ಪದಗಳ’ ಬದುಕಿನ ಸೊಗಡನ್ನು ಸೂರು ಮಾಡುವ ಕೋಗಿಲೆಯ ಕಂಠ ! ಬದುಕಿನ ಹೊಳ- ಹೊರವುಗಳ  ಮೂಲಕ  ಜನಪದ  ಜಗತ್ತಿನ  ಸತ್ವ ವನ್ನು ಹಾಗೂ ಅಂದು ಇಂದಿನ ತೌಲನಿಕತೆಯನ್ನು ಬಿತ್ತರಿಸುವ ಜನಪದ ಜಂಗಮ ! ಗ್ರಾಮೀಣ ಸೊಗಡನ್ನು ಜನಪದಿಯ ತತ್ವಗಳನ್ನು ತಮ್ಮ ವ್ಯಕ್ತಿತ್ವದ ಮೂಲಕ ಅಳವಡಿಸಿಕೊಂಡು ಜನಪದ ದಿಂದ ಜಾಣಪದಗಳ ಮೂಲಕ ಕ್ರಾಂತಿ ಮಾಡುವ ಜನಪದ  ಸಂತ !  ಸಾಮಾಜಿಕ    ಕಳಕಳಿಯಲಿ ಮುಂದಾಗಿ   ತಮ್ಮ  ಜನಪದಗಳಿಂದಲೇ   ಜಾಣ ಪದಗಳ ಮೂಲಕ ಹೋರಾಟದ ಕ್ರಾಂತಿ ಮಾಡಿ ಜಾಗೃತಿ  ಮಾಡುತ್ತಿರುವ  ಏಕೈಕ  ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ !

ನಮ್ಮ  ನಿತ್ಯ  ಬದುಕಿನಲ್ಲಿ  ಬಾಂಧವ್ಯ  ಹಾಸ್ಯ, ಸಮರಸ, ಸಂಸಾರ, ಸಾಮರಸ್ಯ  ಎಲ್ಲವನ್ನೂ ಬದುಕಿಗೆ  ಸುತ್ತಿಕೊಂಡಿದ್ದೇವೆ. ಅಂತಹ  ಸಾತ್ವಿಕ ಸತ್ಯವನ್ನು ಬಿಚ್ಚಿಡುವ ಮೂಲಕ ಅಂಕು- ಡೊಂಕು ಗಳನ್ನು  ಹೋಲಿಕೆಯ  ಮಾಡಿ  ಹಾಸ್ಯ  ಮತ್ತು ಬದುಕಿನ ಮೂಲ ಸತ್ವವನ್ನು   ಜಾಗೃತಿಗೊಳಿಸುವ ದರೊಂದಿಗೆ   ಕರ್ನಾಟಕದಲ್ಲಿ   ಮನೆ   ಮಾತಾಗಿ ದ್ದಾರೆ; ಗವಿಸಿದ್ದಯ್ಯ ಹಳ್ಳಿಕೇರಿಮಠ. ಇವರೊಬ್ಬ ಶುದ್ದ  ಗ್ರಾಮೀಣ  ಪ್ರತಿಭೆಯ  ದೇವರ ಕೊಡುಗೆ.
ಕಲೆ ಎಂಬುದು ತಲೆಯೊಳಗಿನ ತನ್ಮಯತೆ ಮತ್ತು ಅಭಿವ್ಯಕ್ತಿಯನ್ನು ಬಿತ್ತರಿಸುವ  ಪ್ರತಿಭೆ. ಕಲೆ ಬದು ಕಿಗೆ  ಅನಿವಾರ್ಯ  ಎಂದಿದ್ದಾರೆ   ಅ.ರಾ ಮಿತ್ರ. ಕಲಾವಿದನಾದವನು  ಮೊದಲು  ಕಲೆಯ  ಸತ್ವವ ನ್ನು  ಅನುಭವಿಸಬೇಕು,  ಆನಂದಿಸಬೇಕು,    ಆ ಅನುಭವ ಮತ್ತು ಅನುಭವಿಸಿದವರು ಮಾತ್ರ ಇನ್ನೊಬ್ಬರಿಗೆ ಆನಂದ ನೀಡಬಲ್ಲರು. ಜನ ಉಪ ಯೋಗಿ  ಕಲೆಗಳೇ  ನಿಜವಾದ  ಕಲೆ,  ಅದರಿಂದ ಮನೋರಂಜನೆ   ಹಾಗೂ   ಜಾಗೃತಿ ನೀಡಿ ಸಮಾ   ಜದ  ನ್ಯೂನ್ಯತೆಯನ್ನು   ತಿದ್ದಲಾಗುತ್ತದೆ.  ” ಜನ  ಉಪಯೋಗಿ  ಕಲೆಯೇ  ನಿಜವಾದ ಸಾರ್ಥಕ  ಕಲೆ” ಎಂದು ಅರಿಸ್ಟಾಟಲ್ ಹೇಳಿದ್ದಾರೆ. ಲಲಿತ ಕಲೆಗಳಲ್ಲಿ  ಒಂದಾದ  ಸಂಗೀತ  ಕಲೆ  ಮಾನವನ ಉಲ್ಲಾಸ,   ಉತ್ಸಾಹದ   ಜೊತೆಗೆ   ಮಾನಸಿಕ ವಿಕಾಸ  ಮಾಡುವಲ್ಲಿ  ಸಂಗೀತ  ಪ್ರೇರಣೆಯಾಗು ತ್ತದೆ. ಆ ಸಂಗೀತದಲ್ಲಿ  ಮೂಲ  ಕಲೆ   ಜನಪದ ಕಲೆ. ಜನರ  ಬಾಯಿಂದ  ಬಾಯಿಗೆ ತಲುಪುವಂತ ಹದ್ದು.   ಹಾಡುವ   ಆಸಕ್ತಿ  ಇರುವವರು   ತಮ್ಮ ಕೆಲಸದೊಂದಿಗೆ   ಹಾಡುತ್ತ   ಆನಂದ    ಪಡುವ ಕಲೆಯೇ ಜನಪದ.  ಜನಪದ  ಬದುಕಿನ   ಎತ್ತರ- ಬಿತ್ತರಗಳನ್ನು ಬಿಂಬಿಸುತ್ತದೆ. ಅಂತಹ ಕಲೆಯನ್ನು ಕರಗತ ಮಾಡಿಕೊಂಡು ಸಮಾಜದ ಜಾಗೃತಿಯ ಜೊತೆಗೆ ಆತ್ಮಾನಂದವನ್ನು ನೀಡುವಲ್ಲಿ ಯಶಸ್ವಿ ಯಾಗಿದ್ದಾರೆ.


ಜನಪದ  ಉಳಿವಿಗಾಗಿ,  ಕಾಡು, ನಾಡು, ನೆಲ, ಜಲ  ಸಂರಕ್ಷಣೆಗಾಗಿ  ನಿರಂತರ  ಜನ  ಪದಗಳ ಮುಖಾಂತರ ಆತ್ಮಾನಂದ ನೀಡುವುದರ ಜೊತೆಗೆ ಹಲವಾರು   ಹೋರಾಟಗಳಲ್ಲಿ   ಸಕ್ರಿಯವಾಗಿ ಭಾಗವಹಿಸುವದಲ್ಲದೆ     ಸ್ವತಹಃ    ಹಲವಾರು ಹೋರಾಟಗಳನ್ನು ಆಯೋಜಿಸಿ ಯಶಸ್ವಿಯಾಗಿ ದ್ದಾರೆ.ಅಂದು ಪಂಚಾಕ್ಷರ ಗವಾಯಿಗಳುಸಂಚಾರಿ ಸಂಗೀತ ಪಾಠಶಾಲೆ ಮಾಡುತ್ತ ಗಾನಾಶ್ರಮವನ್ನು ನಿರ್ಮಿಸಿ  ಅಂಧ,  ಅನಾಥರಿಗೆ  ಆಶ್ರಯದಾತರಾ ದರು.  ಅದರಂತೆ   ಗವಿಸಿದ್ದಯ್ಯರ   ಸಂಚಾರಿ ಜನಪದ  ಶಿಕ್ಷಣ  ನಿತ್ಯ ನಿರಂತರ ಸಾಗಿದೆ.  ಅವರ ಕನಸು  ನನಸಾಗಿಸುವಲ್ಲಿ   ಶ್ರಮಿಸುತ್ತಿದ್ದಾರೆ. ಅವರ ಕನಸು  ನನಸಾಗಿಸುವಲ್ಲಿ  ಸಂದೇಹವಿಲ್ಲ  ಎಂದು ನನ್ನ ಅಭಿಪ್ರಾಯ. ಏಕೆಂದರೆ ಅವರು ಅಪಾರ ಶ್ರಮಜೀವಿ.   ಸದಾ   ಕ್ರೀಯಾಶೀಲತೆ, ಸೃಜನಶೀಲತೆಯ  ಹುಡುಕಾಟದಲ್ಲಿ  ನಿರತರಾಗಿ ದ್ದಾರೆ.  ಕೇವಲ ಹಾಡುಗಾರಿಕೆಯೊಂದೆ  ಇವರ  ಪ್ರತಿಭೆ   ಅಲ್ಲ. ಉತ್ತಮ ವಾಗ್ಮಿ, ಸಾಹಿತಿ, ಹೋರಾಟಗಾರ, ಚಿಂತನೆಯನ್ನು  ತುಂಬಿಕೊಂಡ  ಚೇತನರಾಗಿ ಜನ-ಮನ ಗೆದ್ದವರು.


ಜನಪದ ಕೂಗು ಎಂಬ ಶಿರ್ಷಿಕೆಯ ಅಡಿಯಲ್ಲಿ ರಾಜ್ಯದ ನೂರಾರು ಕಾಲೇಜುಗಳಲ್ಲಿ ಜನಪದ ಜಾಗೃತಿಗಾಗಿ ಜನಪದ  ಕೂಗು  ಕಾರ್ಯಕ್ರಮ; ಅವರ  ಏಕಾಂಗಿಯಾಗಿ  ಪರಿಶ್ರಮ  ಅದು  ಜನ ಮೆಚ್ಚುವಂತಹದ್ದು.     ಇಂತಹ    ಕಾರ್ಯಕ್ರಮಗ ಳಿಂದ ಹಣ ಬರಬೇಕು, ಹಣಕ್ಕಾಗಿ  ಹಾಡಬೇಕು, ಗಳಿಸಬೇಕು ಎಂಬ ಯಾವದೇ ಫಲಾಪೇಕ್ಷೆ ಇಲ್ಲದೆ ಯಾರೇ  ಅವರನ್ನು  ಆಹ್ವಾನಿಸಿದರು  ಸಂತೋಷ ದಿಂದ  ಕಾರ್ಯಕ್ರಮಕ್ಕೆ  ಒಪ್ಪಿಕೊಂಡು  ಯಶಸ್ವಿ ಯಾಗಿ ನಡೆಸುತ್ತಾರೆ. ಇವರ ಉದ್ದೇಶ ಜನಪದ ಉಳಿಯಬೇಕು,  ಬದುಕಿ   ಬಾಳುವ   ಜನರಲ್ಲಿ ಜನಮನದಲ್ಲಿ   ಬಾಂಧವ್ಯ    ಸ್ವಾಸ್ಥ್ಯತೆಯಿಂದ ಬೆಳೆಯಬೇಕು. ಆಧುನೀಕತೆಯ ಆಡಂಬರದಲ್ಲಿ ನಾವು ಆಶೆ ಬುರುಕರಾಗಿ ನಮ್ಮ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಹಾಳು ಮಾಡಿಕೊಂಡು ಮನಶಾಂತಿಯನ್ನು ಕಳೆದುಕೊಳ್ಳುತಿದ್ದೇವೆ. ಅನಾ ರೋಗ್ಯಕರ  ಸಮಾಜವನ್ನು ನಿರ್ಮಾಣ ಮಾಡುತ್ತಿ ದ್ದಾರೆ. ಆದ್ದರಿಂದ ಗ್ರಾಮೀಣ ಸೊಗಡಿನಲ್ಲಿರುವ ಬಾಂಧವ್ಯ,  ಭಕ್ತಿ,   ಸಾಮರಸ್ಯ,   ನೂರುಕಾಲ ಬಾಳುವಂತೆ  ಪ್ರೇರೆಪಿಸುತ್ತದೆ. ಆತ್ಮವಿಶ್ವಾಸವನ್ನು ತುಂಬಲು ಜನಪದದ ಮೂಲಕ  ನಿರಂತರವಾಗಿ ಶ್ರಮಿಸುತ್ತಿದ್ದಾರೆ.  ನಾವು  ಹಲವಾರು   ಕಲಾವಿದ ರನ್ನು ನೋಡಿದ್ದೇವೆ.ಯಾರು ಇಂತಹ ಜವಾಬ್ದಾರಿ ಯುತ  ಕಾರ್ಯಕ್ಕೆ  ಸಿದ್ದರಾದವರು   ವಿರಳ. ಏಕೆಂದರೆ  ಅವರು  ತಾವು  ತಮ್ಮ ಕಲೆ ಅದಕ್ಕೂಂ ದಿಷ್ಟು  ಬೆಲೆಯ  ನೆಲೆಗಟ್ಟಿನಲ್ಲಿ ಬಾಳಿ ಬದುಕಿದ   ವರು. ಆದರೆ ಗವಿಸಿದ್ದಯ್ಯ ಹಳ್ಳಿಕೇರಿಮಠರವರ ಹೋರಾಟ, ಜಾಗೃತಿಗಾಗಿ ಉಪನ್ಯಾಸ, ಸಾಮಾಜಿ ಕ  ಕಲೆಯ  ಕಳಕಳಿಯೊಂದಿಗೆ  ಉಸಿರಾಗಿಸಿಕೊಂ ಡವರು.   ಅವರು   ತಮ್ಮ  ಕಲೆಯ    ಮೂಲಕ   ನಿರಂತರ ಶ್ರಮಿಸುತಿದ್ದಾರೆ. ಇವರು ಕಪ್ಪತ್ತಗುಡ್ಡದ ಉಳಿವಿಗಾಗಿ   ವಿದ್ಯಾರ್ಥಿ   ದೆಸೆಯಿಂದಲೇ   ಹೋರಾಟ ಮಾಡುತ್ತ, ಜಾಗೃತಿ  ನೀಡುತ್ತ   ಬಂದ ವರು. ನಂತರ ತೋಂಟದಾರ್ಯ ಶ್ರೀಗಳು   ಕಪ್ಪತ್ತಗುಡ್ಡದ ಉಳಿವಿನ ಹೋರಾಟಕ್ಕೆ ಚಾಲನೆ ಕೊಟ್ಟಾಗ ಗವಿಸಿದ್ದಯ್ಯ, ಶ್ರೀಗಳ ಜೊತೆಯಲ್ಲಿ ಹೆಜ್ಜೆ ಹಾಕಿ ಯಶಸ್ವಿಯಾದವರು.


“ಬಾಳುವದೊಂದೆ  ಭೂಮಿ, ಕುಡಿಯುವದೊಂದೆ ಜಲ, ಜಗ ಒಂದೇ,  ಜನ  ಒಂದೇ  ಎಂಬ  ಭಾವ ಬಾರದೆ  ಬದುಕಬೇಡಿರಯ್ಯ”  ಎಂಬ  ಸಾತ್ವಿಕತೆ ಯನ್ನು  ಜನಪದಗಳು   ಸಾರುತ್ತವೆ.  ಇಂತಹ ನೂರಾರು  ಕಾರ್ಯಕ್ರಮಗಳನ್ನು  ನೀಡುತ್ತ  ಹಲ ವಾರು    ಮಾಧ್ಯಮಗಳಲ್ಲಿ    ತನ್ನ    ಕಲಾಸೇವೆ ಮಾಡುತ್ತ ಜನ ಮಾನಸದಲ್ಲಿ ನೆಲೆಕಂಡ ಕಲಾ ಚೇತನ ಗವಿಸಿದ್ದಯ್ಯ.

ಜಂತ್ಲಿಶಿರೂರಿನ  ಕಲಾವಿದ  ಗವಿಸಿದ್ದಯ್ಯ    ಹಳ್ಳಿ ಕೇರಿಮಠ ಬಾಲ್ಯದಿಂದಲೂ ಕಂಚಿನ ಕಂಠದಿಂದ ಎಲ್ಲರ ಮನಗೆದ್ದವರು ಪ್ರತಿಭಾಕಾರಂಜಿಯಂತಹ ಸರಕಾರಿ ಶಾಲಾ ಕಾರ್ಯಕ್ರದಿಂದ ಸಾಂಸ್ಕೃತಿಕ ಮನೋಭಾವದ ಜೊತೆಗೆ ಬೆಳೆದ ಕಲಾವಿದ.  ಎಂ. ಎ. ಪದವೀಧರನಾಗಿ  ಕೃಷಿಯನ್ನೇ   ನಂಬಿ ನೆಚ್ಚಿ   ಬದುಕುವದರ   ಜೊತೆಗೆ   ಕಲೆಯನ್ನು    ಹವ್ಯಾಸವಾಗಿ   ಬೆಳೆಸಿಕೊಂಡು     ಸಮಾಜಸೇವೆ ಯಲ್ಲಿ  ನಿರತರಾಗಿ  ಹಲವಾರು   ಪ್ರಶಸ್ತಿಗಳಿಂದ  ಪುರಸ್ಕೃತರಾಗಿದ್ದಾರೆ. ಹಲಗಿಯ ನಾದದ ಗತ್ತು, ಗವಿಸಿದ್ದಯ್ಯನ  ಕಂಚಿನ  ಕಂಠ,  ಉಲ್ಲಾಸ, ಕೇಳುವ ಹಂಬಲ  ಎಲ್ಲವನ್ನು  ಪ್ರೇಕ್ಷಕರಲ್ಲಿ  ಕಾಣ ಬಹುದು. ಏಕೆಂದರೆ ಜನಪದ ಎಂದರೇನೆ ಜನರು ತಮ್ಮ  ನಿತ್ಯ ಬದುಕಿನ  ಚಟುವಟಿಕೆ  ಜಾಗೃತ  ಸ್ಥಿತಿಯಲ್ಲಿರುವದರಿಂದ   ಕೇಳುಗನಲ್ಲಿ    ಆಸಕ್ತಿ ಹೆಚ್ಚಿಸುತ್ತದೆ. ಅದರಂತೆ ತಿಳಿ ಹಾಸ್ಯದ ಮೂಲಕ  ಸಂಸಾರ ದ ಸೊಬಗು, ಬದುಕಿನ    ಬಾಂಧವ್ಯ, ಸಾಮರಸ್ಯ, ಸಮಾಜದಲ್ಲಿ ನಡೆಯುವ   ಕಾರ್ಯ ದಲ್ಲಿಯ ನಗೆ- ನೋಟಗಳನ್ನು  ತನ್ನ   ಮಾತಿನ   ಮೋಡಿಯಲ್ಲಿ ಜನ-ಮನ ಸೆಳೆಯುವ ಸಾಮರ್ಥ್ಯ ವಿದೆ   ಮತ್ತು    ಅದರಲ್ಲಿ  ನಿಪುಣರಾಗಿದ್ದಾರೆ.  ಅಷ್ಟೇ  ಅಲ್ಲದೆ    ಅಂದು  ಇಂದಿನ  ಜನಪದದ  ಒಂದು  ತೌಲನಿಕ ಝಲಕ್ ನೊಂದಿಗೆ  ವ್ಯತ್ಯಾಸ ವನ್ನು  ಜನಪದ    ಸತ್ವವನ್ನು  ಸಾರುವಲ್ಲಿ  ಹಳ್ಳಿಕೇರಿಮಠ ಯಶಸ್ವಿಯಾಗಿದ್ದಾರೆ.  ರಾಜ್ಯದ  ಹಲವಾರು ಮಠಮಾನ್ಯಗಳು, ಸಂಘಸಂಸ್ಥೆಗಳು ಇವರ ಸಾಧನೆಗೆ  ಸನ್ಮಾನಿಸಿದ್ದಾರೆ. ಪ್ರಶಸ್ತಿ  ನೀಡಿ ಗೌರವಿಸಿದ್ದಾರೆ. ಇಂತಹ  ಕಲಾವಿದನಿಂದ  ಗದಗ  ಜಿಲ್ಲೆಯ  ಜಂತ್ಲಿ ಶಿರೂರ  ಗ್ರಾಮ    ಬೆಳಕಿಗೆ ಬಂದಿದೆ.

ಕರೋನ ಜಾಗೃತಿಗಾಗಿ ಹಲವಾರು ಸೇವೆಗಳನ್ನು ನೀಡುತ್ತ ನಾಡು-ನುಡಿಯ ಉಳಿವಿನ ಹೋರಾಟ ದೊಂದಿಗೆ ತಮ್ಮ ಪತ್ನಿ ಭಾಗ್ಯರವರನ್ನು ಕಲಾಸೇವೆ ಯಲ್ಲಿ ನಿರತರಾಗಿಸಿಕೊಂಡು ಅಮೋಘ ಸಾಧನೆ ಮಾಡುತಿದ್ದಾರೆ. ಕರೋನದ ಮೊದಲನೆ ಅಲೆಯ ಸಂದರ್ಭದಲ್ಲಿ ಕರೋನ ಜಾಗೃತ ಗೀತೆಯನ್ನು ಪ್ರಚುರಪಡಿಸಿ ಅನೇಕ ಸಾಮಾಜಿಕ  ಜಾಲತಾಣಗ ಳಲ್ಲಿ ಅಂದರೆ ಸುವರ್ಣ ಹಿಂದುಸ್ಥಾನ, ಯುಟಿವಿ, ದಿಗ್ವಿಜಯ  ಹೀಗೆ  ನೂರಕ್ಕೂ  ಅಧಿಕ  ಮಾಧ್ಯಮ ದಲ್ಲಿ ಪ್ರಸಾರವಾಗಿದೆ. ಹಲವಾರು ಲೇಖನಗಳನ್ನು ರಚಿಸಿದ್ದಾರೆ. ಕರೋನ ಜಾಗೃತಿಗಾಗಿ ಸರಕಾರ ಹಾಗೂ ಸಂಘಸಂಸ್ಥೆಗಳ ಮೂಲಕ ಕಾರ್ಯಕ್ರಮ ಗಳನ್ನು ನೀಡಿದ್ದಾರೆ. ಇವರ  ವಿಶೇಷತೆ  ಏನೆಂದರೆ ಕರೋನ ಸಂದರ್ಭದಲ್ಲಿ ಯಾವದೇ ಆಡಂಬರ, ವೈಭವಕ್ಕೆ ಕಟ್ಟು ಬೀಳದೆ ಸರಳ ವಿವಾಹಕ್ಕೆನಾಂದಿ ಹಾಡಿದರು. ಇವರ ಆದರ್ಶದಂತೆ ಹಲವಾರು ಜನ ಸರಳ  ವಿವಾಹಕ್ಕೆ  ಮುಂದಾಗಿ    ಮದುವೆಯಾಗಿ ದ್ದಾರೆ.  ಸಮಾಜ   ಆರೋಗ್ಯವಾಗಿದ್ದರೆ   ನಾವೆಲ್ಲ ಆರೋಗ್ಯವಾಗಿರುತ್ತೇವೆ,  ಸಮಾಜದ   ಹಿತವೇ ನಮ್ಮ ಹಿತ ಎನ್ನುವ  ಕಲ್ಪನೆ  ನೂರಕ್ಕೂ   ಅಧಿಕ ಜನರು   ಇದೇ  ತತ್ವಗಳನ್ನು  ಪಾಲಿಸಿ  ಹೆಜ್ಜೆ  ಇಟ್ಟಿ   ದ್ದಾರೆ. ಇದೊಂದು  ವಾಸ್ತವಿಕ  ಸತ್ಯಕ್ಕೆ ಕನ್ನಡಿಯ ಲ್ಲವೇ.! ಕರೋನ ವಾರಿಯರ್ಸ ಜೊತೆಗೆ ಕರೋನ ಜಾಗೃತಿಗಾಗಿ ಶ್ರಮಿಸಿದ್ದಾರೆ. ಇವರ ಅಮೋಘ ಸೇವೆ ಸಾಧನೆಯು ನ್ಯಾಶನಲ್ ಬುಕ್ ಆಫ್ ರೇಕಾರ್ಡಗೆ ಸೇರ್ಪಡೆಗೊಂಡಿರುವದು ನಮಗೆಲ್ಲ ಹೆಮ್ಮೆಯ ಸಂಗತಿ.


ಅಷ್ಟೆ ಅಲ್ಲದೆ ಆಹಾರ ಕಿಟ್ ವಿತರಣೆ, ಅಂತರ್ಜಾ ಲದ  ಮೂಲಕ  ಜನಪದ    ಶಿಕ್ಷಣ,  ವಿಶೇಷ ಪ್ಯಾಕೇಜ್ ಘೋಷಣೆ, ಕಣ್ಣಿನ ತಪಾಸಣೆ ಶಿಬಿರ, ಪ್ರಾಣಿಗಳಿಗೆ ಆಹಾರ ವಿತರಣೆ ಹೀಗೆ  ಹಲವಾರು ಸಮಾಜಮುಖಿ ಕಾರ್ಯಕ್ರಮದ ಸೇವೆಯಲ್ಲಿ   ನಿರತರಾಗಿದ್ದಾರೆ. ಕರೋನ ಜಾಗೃತಿಗಾಗಿ  ದಂಪತಿ ಗಳ ಅಳಿಲು  ಸೇವೆ, ಆರೋಗ್ಯ ಸ್ವಾಸ್ಥ್ಯವೇ ನಮ್ಮ ಗುರಿ.  ಕರೋನ   ಓಡಿಸೋಣ   ಹೀಗೆ   ಜಾಗೃತಿ ಮೂಡಿಸುವಲ್ಲಿ   ನಿರತರಾಗಿದ್ದಾರೆ.    ಕರೋನ ಜಾಗೃತಿಗಾಗಿ  ದಂಪತಿಗಳ  ಅಳಿಲು   ಸೇವೆ, ಆರೋಗ್ಯ ಸ್ವಾಸ್ಥ್ಯ  ಸಂಕಲ್ಪಕ್ಕೆ  ದಂಪತಿಗಳ  ಪಣ ಮತ್ತು  ಕರೋನ   ಜಾಗೃತಿಗಾಗಿ   ವಿಶೇಷ  ಗೀತೆಗ ಳನ್ನು  ರಚಿಸಿ  ಪ್ರಸಾರಪಡಿಸಿದ್ದಾರೆ.  ಕರೋನ ಬಂದೈತಿ ಜಾಗೃತನಾಗು,ಏಮಾನವ ಎಚ್ಚರನಾಗು,  ಬಂದಿದೆ   ಕರೋನ  ಜಾಗೃತಿ   ಹೊಂದೋಣ, ಆರೋಗ್ಯ  ಸ್ವಾಸ್ಥ್ಯವೇ  ನಮ್ಮ ಗುರಿ,  ಕರೋನ ಓಡಿಸೋಣ    ಹೀಗೆ   ಜಾಗೃತಿ   ಮೂಡಿಸುವಲ್ಲಿ ನಿರತನಾದ   ಗವಿಸಿದ್ದಯ್ಯ  ದಂಪತಿಗಳ   ಸೇವಾ ಭಾವ ಅಮೋಘವಾದದ್ದು.

ಕಲೆ ಎಂಬುದು ವ್ಯಾಪಾರವಲ್ಲ ಕಲೆ ಎಂಬುದು ಬೆಲೆ ಕಟ್ಟಲಾಗದ ಅಭಿವ್ಯಕ್ತಿ ಹಾಡುಗಾರನಾಗಿ, ಸಾಹಿತಿಯಾಗಿ, ಹೋರಾಟಗಾರನಾಗಿ ತಮ್ಮ ವ್ಯಕ್ತಿತ್ವವನ್ನು ಬೆಳಸಿಕೊಂಡ ಗವಿಸಿದ್ದಯ್ಯ ಚಿಕ್ಕ ವಯಸ್ಸಿನಲ್ಲಿಯೇ ಹಿರಿಯ ಸಾಧನೆ ಮಾಡಿದ್ದಾರೆ. ಸಮಾಜದ ಸಜ್ಜನ ಸಾತ್ವಿಕತೆಗೆ ಚಿಂತಿಸುವ ಚಿಂತಕ ನಾಗಿದ್ದಾರೆ. ಕೇವಲ ತನ್ನ ಸ್ವಾರ್ಥಕ್ಕಾಗಿ ಬಾಳಿ ಬದುಕಿದವರು ಎಂದಿಗೂ ಇತಿಹಾಸ ಸೃಷ್ಠಿಸಲು ಸಾಧ್ಯವಿಲ್ಲವೆಂಬುದು ಎಷ್ಟು ಸತ್ಯವೋ ಅದರಂತೆ ಸಮಾಜದ ಚಿಂತನ ಮಂಥನದಲ್ಲಿ ನಿರತನಾಗಿ ಅಮೋಘ ಸಾಧನೆ ಮಾಡಿದ್ದಾರೆ. ಸರಳ ಸಜ್ಜನ ಸಂಪನ್ನತೆಯ ವ್ಯಕ್ತಿತ್ವ ಸದಾಕಾಲ ಎಲ್ಲರೊಂದಿಗೆ ನಗುನಗುತ ಸಾಗುವ ಸ್ನೇಹಜೀವಿ. ಕಲೆಯನ್ನು ವ್ಯಾಪಾರ ಮಾಡಿಕೊಳ್ಳದೆ ತನ್ನೊಳಗಿನ ಅಭಿವ್ಯಕ್ತಿ ಯನ್ನು  ಹಂಚುತ್ತ  ಕಲೆಯ   ಸಾರ್ಥಕತೆಯನ್ನು ಮೆರೆಯುತ್ತಿರುವ  ಅಪರೂಪದ   ಕಲಾ  ಪ್ರತಿಭೆ. ಇವರ  ನಿಸ್ವಾರ್ಥ  ಸೇವೆ, ಅಮೋಘ  ಸಾಧನೆ ಸಜ್ಜನ,  ಸರಳತೆಯಲ್ಲಿ  ಮೇರು  ಸ್ಥಾನಕ್ಕೇರಿದ ಗವಿಸಿದ್ದಯ್ಯನ  ಕುರಿತು  ಅವರ  ಹಾಡು-ಪಾಡು ಕುರಿತು  ನನ್ನ  ಅಭಿವ್ಯಕ್ತಿಯನ್ನು   ಬಿತ್ತರಿಸಿದ್ದೇನೆ. ಇವರ ಹಂಬಲಕ್ಕೆ ನಮ್ಮ ಬೆಂಬಲ ನೀಡುತ್ತಾ ಕಲಾವಿದರನ್ನು  ನಾಡಿನ  ತುಂಬ  ಬೆಳೆಸೋಣ ಕಲೆಯನ್ನು ಉಳಿಸೋಣ.

✍️ ಪ್ರೊ.ಬಸವರಾಜ ನೆಲಜೇರಿ
ವಿಜಯ ಲಲಿತಕಲಾ ಕಾಲೇಜು,
ಗದಗ