ಒಂದು ಊರಿನಲ್ಲಿ ಒಂದು ಕೊಳವಿತ್ತು. ಆ ಕೊಳದಲ್ಲಿ ಕಪ್ಪೆ, ಮೀನು ಹಾಗೂ ಆಮೆ ಮುಂತಾದ ಜೀವಿಗಳು ವಾಸವಾಗಿದ್ದವು.
ಒಂದು ದಿನ ಆಕೊಳದ ಬಳಿ ನರಿಯೊಂದು ನೀರು ಕುಡಿಯಲೆಂದು ಬಂದಿತು. ಕೊಳ ಶಾಂತವಾಗಿ ಇರುವು ದನ್ನು ಕಂಡ ನರಿ ತನ್ನ. ಬುದ್ಧಿ ತೋರಿ ಸಿತು. ‘ಓ ಕೊಳದ ರಾಜನೇ… ನಾನು ಈ ಕೊಳದ ನೀರನ್ನು ಕುಡಿಯಬಹುದೇ ..’ ಎಂದು ಕೂಗಿತು. ಆಗ ಕೊಳದಿಂದ ಇಣುಕಿದ ಆಮೆ, ಮೀನು, ಕಪ್ಪೆ ಗಳು ‘ನಮ್ಮ ಕೊಳದಲ್ಲಿ ರಾಜ ಅನ್ನುವವರು ಯಾರೂ ಇಲ್ಲ. ರಾಜ ಅಂದರೆ ಯಾರು..? ‘ ಎಂದು ಪ್ರಶ್ನಿಸಿದವು.
ಆಗ ನರಿ “ಒಹ್ ನಿಮಗೆ ರಾಜ ಎಂದರೆ ಯಾರೆಂದೇ ಗೊತ್ತಿಲ್ಲವೇ..!? ರಾಜ ಎಂದರೆ ಬಲ ಶಾಲಿ ಹಾಗೂ ಅಧಿಕಾರವುಳ್ಳವನು. ಅವನ ಅಣ ತಿಯಂತೆ ಎಲ್ಲಾ ಪ್ರಾಣಿಗಳು ನಡೆದುಕೊಳ್ಳುತ್ತವೆ. ನಮ್ಮ ಕಾಡಿನಲ್ಲಿ ನಾವು ಸಿಂಹವನ್ನು ಕಾಡಿನ ರಾಜನೆಂದು ಒಪ್ಪಿಕೊಂಡಿದ್ದೇವೆ. ನೀವು ನಿಮ್ಮ ಕೊಳಕ್ಕೆ ರಾಜನನ್ನು ಆಯ್ಕೆ ಮಾಡಿ” ಎಂದು ಹೇಳಿ ನೀರು ಕುಡಿದು ಹೋಯಿತು. ಶಾಂತವಾ ಗಿದ್ದ ಕೊಳದೊಳಗೆ ಈಗ ಬಿಸಿಯ ವಾತಾವರಣ ಶುರು ಆಯಿತು.
ಹಿರಿಯ ಆಮೆಯೊಂದು ಮನಸ್ಸಿನಲ್ಲೇ ಯೋಚಿಸಿ ತು. ‘ನಾನು ಜೀವಿಗಳಲ್ಲೇ ಅತಿ ಹೆಚ್ಚು ಕಾಲ ಬದು ಕುವ ಪ್ರಾಣಿ. ಅಲ್ಲದೇ ಕಾಡಿನ ಪ್ರಾಣಿಯಾದ ಮೊಲದ ಜೊತೆಗಿನ ಓಟದ ಸ್ಪರ್ಧೆಯಲ್ಲೂ ನಮ್ಮ ಪೂರ್ವಜರೇ ಗೆದ್ದಿದ್ದಾರೆ. ಗಾತ್ರದಲ್ಲೂ ನಾನೇ ದೊಡ್ಡವ ಹಾಗೂ ಹಿರಿಯ. ಹಾಗಾಗಿ ನಾನು ಈ ಕೊಳದ ರಾಜನಾಗಲು ಯೋಗ್ಯ’ ಎಂದುಕೊಂಡಿ ತು. ತನ್ನ ಅನಿಸಿಕೆಯನ್ನು ಎಲ್ಲರೆದುರು ತಿಳಿಸಿತು.
ಆಗ ಕಪ್ಪೆಯು ‘ನಾನು ಈ ಕೊಳದೊಳಗೆ ಈಜ ಬಲ್ಲೆ ಜಿಗಿಯಬಲ್ಲೆ ಹಾರಬಲ್ಲೆ.. ಹೆಚ್ಚಿನ ಸಂಖ್ಯೆ ಯಲ್ಲಿ ಸಂತಾನೋತ್ಪತ್ತಿ ಮಾಡಬಲ್ಲೆ. ನೆಲದ ಮೇಲೂ ಓಡಾಡಿ ಕುಪ್ಪಳಿಸಬಲ್ಲೆ. ರಾಗಬದ್ಧವಾಗಿ ಹಾಡಬಲ್ಲೆ. ಆದ್ದರಿಂದ ನಾನೇ ಈ ಕೊಳದ ರಾಜ ನಾಗಲು ಯೋಗ್ಯ’ ಎಂದಿತು.
ಮೀನು ತನ್ನ ಮಿರುಗುವ ರೆಕ್ಕೆಗಳನ್ನು ಬಡಿಯುತ್ತ “ಅಮೆ ಮತ್ತು ಕಪ್ಪೆಗೆ ನೀವಿಬ್ಬರೂ ನೀರಿನಲ್ಲೂ ನೆಲದಲ್ಲೂ ಬದುಕುವ ಉಭಯವಾಸಿಗಳು. ನಮ್ಮದು ನೀರಿನಲ್ಲಿ ಮಾತ್ರ ಬದುಕಿ ಬಾಳುವ ವಂಶ. ನೀರಿನಲ್ಲಿ ನಮ್ಮ ಸಂಖ್ಯೆ ಅತಿಹೆಚ್ಚು. ಆದ್ದರಿಂದ ಕೊಳದ ಪೂರ್ತಿ ಅಧಿಕಾರ ನಮ್ಮದೇ ಆಗಿರುತ್ತದೆ. ಆದ್ದರಿಂದ ನಾನು ಈ ಕೊಳದ ರಾಜನಾಗಬೇಕು.” ಎಂದಿತು.
ಹೀಗೆ ಮೂವರಲ್ಲಿ ವಾದ ವಿವಾದ ಮುಂದುವರೆ ದಾಗ ಅದನ್ನು ಮರದ ಮರೆಯಲ್ಲಿ ನಿಂತು ಕೇಳು ತ್ತಿದ್ದ ನರಿ ತನ್ನ ಕುತಂತ್ರ ಫಲಿಸಿತು .. ಕೊಳದ ಶಾಂತಿ ಕದಡಿತು ಎಂದು ನಗುತ್ತಾ ಕಾಡಿನಲ್ಲಿ ಮರೆಯಾಯಿತು. ಇತ್ತ ಆಮೆ, ಕಪ್ಪೆ , ಮೀನಿನ ಜಗಳ ಮುಂದುವರೆಯುತ್ತಲೇ ಇತ್ತು. ಆ ಹೊತ್ತಿಗೆ ಆ ಕೊಳಕ್ಕೆ ಕೊಕ್ಕರೆಯೊಂದು ಬಂದಿತು.

ಜಗಳದ ವಿಷಯವನ್ನು ಅರಿತಕೊಂಡು ಮೂವರ ಬಳಿ ‘ನಾನು ಇಲ್ಲೇ ಸಮೀಪವಿರುವ ಇನ್ನೊಂದು ಕೊಳವನ್ನು ಆಶ್ರಯಿಸಿದ್ದೆ. ಇದ್ದಕ್ಕಿದ್ದಂತೆ ಕೊಳದ ನೀರು ಬತ್ತಿಹೋಗಿ ಕೊಳ ಬರಿದಾಯಿತು. ಅಲ್ಲಿ ರುವ ಜೀವಿಗಳೆಲ್ಲ ಸತ್ತೇ ಹೋದವು. ಆದ್ದರಿಂದ ನಾನು ಶ್ರೇಷ್ಠ ನಾನು ಹಿರಿಯ, ಕೊಳದ ಅಧಿಪತಿ ನಾನೇ ಆಗಬೇಕು ಎನ್ನುವ ಮನೋಭಾವ ತೊರೆ ಯಿರಿ. ಇಲ್ಲಿ ನಾವ್ಯಾರು ರಾಜರಲ್ಲ.. ಸೂರ್ಯ, ಭೂಮಿ, ಮಳೆ ಸುರಿಸುವ ಮೋಡ, ಆಹಾರ, ಆವಾಸ ನೀಡುವ ಈ ಕೊಳ ಇವುಗಳಿಗಿಂತ ನಾವು ಶ್ರೇಷ್ಠರಲ್ಲ. ಇಲ್ಲಿ ಯಾರೂ ಮೇಲು ಅಲ್ಲ ಕೀಳು ಅಲ್ಲ. ನಾವೆಲ್ಲರೂ ಒಂದೊಂದು ಸಂಗತಿಗಳಲ್ಲಿ ವಿಶಿಷ್ಟರಾಗಿದ್ದೇವೆ. ಆದ್ದರಿಂದ ನಮ್ಮ ನಮ್ಮ ಸ್ಥಾನದಲ್ಲಿ ನಾವು ಖುಷಿಯಾಗಿರೋಣ ” ಎಂದಿತು.
ಕೊಕ್ಕರೆಯ ಮಾತನ್ನು ಕೇಳಿದ ಆಮೆ, ಮೊಲ, ಕಪ್ಪೆಗಳು “ಹೌದು.. ನಿನ್ನ ಮಾತಿನಲ್ಲಿ ನಿಜವಿದೆ. ಇಷ್ಟು ದಿನ ನಾವು ಹೀಗೆ ಯೋಚಿಸಿದ್ದೇವು. ಆ ನರಿ ಬಂದು ನಮ್ಮ ಯೋಚನೆಯನ್ನೇ ಬದಲಿಸಿ ಒಡಕು ಮೂಡಿಸಿತು. ಅಂತಹವರಿಂದ ನಾವು ದೂರವೇ ಉಳಿಯೋಣ ಎಂದು ದೃಢನಿರ್ಧಾರ ಮಾಡಿದವು.
✍️ರೇಖಾ ಭಟ್, ಹೊನ್ನಗದ್ದೆ
ರೇಖಾ ಭಟ್ ಅವರ ಕಥೆ ಮಾರ್ಮಿಕವಾಗಿದೆ. ಮನುಷ್ಯನ ಮನದ ಕುಹಕತನ ಎತ್ತಿ ತೋರಿಸುತ್ತದೆ. 👌🌹
LikeLike