ಅಮೇರಿಕಾದ ವಿಶಿಷ್ಟ – ವಿಖ್ಯಾತ ಕವಿ ರಾಬರ್ಟ್ ಫ್ರಾಸ್ಟ್. ಅವನ ಅತಿಪ್ರಸಿದ್ದ“Dust of Snow” ತುಂಬಾ ಮಾರ್ಮಿಕ ಕವನ. ಎಲ್ಲರಿಗೂ ನಕಾರಾತ್ಮಕ ಎನಿಸುವ ಕಾಗೆ, ಹೆಮ್ಲಾಕ್ (ತೀರಾ ವಿಷಕಾರೀ ಮರ) ಅವನಿಗೆ ಸಕಾರಾತ್ಮಕ ಎನಿಸುತ್ತದೆ ಮತ್ತು ಹಾಗೆ ಯೋಚಿಸಿ ಧನಾತ್ಮಕವಾಗಿರಲು ಪ್ರೆರೇಪಿಸುವ ಪುಟ್ಟ ಕವನ.

ಹಿಮಧೂಳಿ

ಹೆಮ್ಲಾಕ್ ಮರದಿಂದ
ಹಿಮದ ಧೂಳ
ಕಾಗೆಯೊಂದು ನನ್ನ ಮೇಲೆ
ಉದುರಿಸಿದ ಪರಿ

ನನ್ನ ಮನೋಭಾವವನೆ
ಬದಲಿಸಿ ನಾ
ನಷ್ಟಗೊಳಿಸಿಕೊಂಡ ದಿನದ
ಕೆಲ ಭಾಗವನುಳಿಸಿತು.

Dust of Snow
BY ROBERT FROST
The way a crow
Shook down on me
The dust of snow
From a hemlock tree

Has given my heart
A change of mood
And saved some part
Of a day I had rued

✍️ಆಂಗ್ಲ: ರಾಬರ್ಟ್ ಪ್ರಾಸ್ಟ್    ಕನ್ನಡಕ್ಕೆ:ಕವಿತಾ ಹೆಗಡೆ ಅಭಯಂ ಹಬ್ಬಳ್ಳಿ