2020 ಮಾರ್ಚ್  ದಿಂದ  21 ಜೂನ್ ವರೆಗೆ ಎರಡು ಬಾರಿ ಲಾಕ್ ಡೌನ್ ಬಂತು.  ಒಂದನೆಯ ದರಿಂದ  ಪಾಠ  ಕಲಿಯದ  ಕಾರಣ    ಎರಡನೆದು ಬಂತು. ಎರಡನೆಯದು ಪಾಠಕಲಿಸಿದೆಯಾ ಅಂತ ನಾವು ಆತ್ಮಾವಲೋಕನದ ಪ್ರಶ್ನೆ ಕೇಳಿಕೊಂಡರೆ ಪ್ರಾಯಶ:  ಉತ್ತರ  ‘ಕಲಿತಿಲ್ಲ’   ಅಂತ   ಹೆಚ್ಚಾಗಿ ಬರುವದು. ಸರ್ಕಾರ , ಸರ್ಕಾರಿ ಸಂಬಂಧಪಟ್ಟ ಇಲಾಖೆಗಳು, ಸಾರ್ವಜನಿಕರು ರಾಜಕಾರಣಿಗಳು ಎಲ್ಲರೂ  ಎಷ್ಟು  ಕಲಿಯ  ಬೇಕಾಗಿತ್ತೋ  ಅಷ್ಟು ಕಲಿಯಲಿಲ್ಲ.   ಭವಿಷ್ಯಶಾಸ್ತ್ರಗಳನ್ನು   ನಂಬುವ ನಾವು ಹೆಚ್ಚು ಜನ   ವೈಜ್ಞಾನಿಕವಾಗಿ   ಚಿಂತಿಸದೆ  ಏನಾಗಬಹುದು  ಎಂದು  ಊಹಿಸದೆ,   ಏನೆಲ್ಲ ಸಮಸ್ಯೆಗಳನ್ನು  ಎದುರಿಸಬೇಕಾತು  ಅನ್ನೋದು ಕಣ್ಣಮುಂದೆ ಇದೆ,  ಆಮ್ಲಜನಕ ಇಲ್ಲದಿರುವದು, ಮುಖ್ಯ  ಪ್ರಾಣರಕ್ಷಕ  ಔಷಧಿಗಳು  ಇಲ್ಲದೆ   ಇರು ವುದು,  ಹಾಸಿಗೆ   ಇಲ್ಲದಿರುವದು  ಸರಿಯಾದ  ಸಂಖ್ಯೆಯ ದಾದಿಗಳು,ಸುಶ್ರುರಕರು, ವೈದ್ಯರು, ಲಸಿಕೆ ಇಲ್ಲದಿರುವದು, ಆಸ್ಪತ್ರೆಗಳ ಕೊರತೆಒಂದೇ ಎರಡೇ?. ಹಲವಾರು ಸಮಸ್ಯೆಗಳ ಸುಳಿಗಳು, ನಮ್ಮ ಆರೋಗ್ಯ  ವ್ಯವಸ್ಥೆಯಲ್ಲಿ  ಎಲ್ಲೋ ಎಡವ ಟ್ಟುಗಳು, ಆಂತರಿಕ ಆರ್ಥಿಕ ಮಟ್ಟುಗಳು,ಖಾಸಗಿ ಆಸ್ಪತ್ರೆಗಳ,   ವೈದ್ಯರ,   ಔಷಧಿ   ತಯಾರಕರ ಅಂತರ್ಗತ   ಜಾಲಗಳು   ಎಲ್ಲವೂ  ಸೇರಿ ಸಮಸ್ಯೆಗಳ ಸಂಕೀರ್ಣತೆ ಹೆಚ್ಚಿಸಿದವು. 

ಇನ್ನೂ ರಂಗಭೂಮಿ ನಮ್ಮ ನಾಗರಿಕ ಅಥವಾ ಅನಾಗರಿಕ ವ್ಯವಸ್ಥೆಯ ಭಾಗ.  ಉಳಿದದುದರ ಝಳ   ಬಡಿಯುವದೇ  ಸತ್ಯ.  ರಂಗಭೂಮಿಗೆ ಸಂಬಂಧಪಟ್ಟಂತೆ ಹೇಳುವದಾದರೆ:

1) ಕಲಾವಿದರು ಅಸಂಘಟಿತ ಸಮುದಾಯ.ಇಲ್ಲಿ ಅವರಿಗೆ ಸರಿಯಾಗಿ ಹೇಳುವವರು ಕೇಳುವವರು ಕಡಿಮೆ. ರಾಜಧಾನಿಯಿಂದ ದೂರವಿದ್ದಷ್ಟುಅವರ ದನಿ ಯಾರಿಗೂ ಕೇಳುವದಿಲ್ಲ. ರಾಜಕೀಯ  ಪ್ರತಿ ನಿಧಿಗಳು ಕೇಳುವದಿಲ್ಲ, ಯಾಕೆಂದರೆ ನಾಟಕದ ಮಾಸ್ಕ್   ಹಾಕಿಕೊಂಡಿರುತ್ತಾರೆ.   ಯಾರ  ದನಿ ಜೋರೋ, ಯಾರು ಪ್ರಭಾವಿ ರಾಜಕೀಯ ವ್ಯಕ್ತಿ ಗಳಿಗೆ, ಮಾಧ್ಯಮದವರಿಗೆ  ಸಮೀಪ  ಸಂಪರ್ಕ ಹೊಂದಿರುತ್ತಾರೋ   ಅವರಿಗೆ  ಎಲ್ಲದರಲ್ಲಿಯೂ ಪ್ರಾಶಸ್ತ. ಎಲ್ಲೆಲ್ಲಿಯೂ   ಸಾಮಾಜಿಕ    ಭಾವನಾ ತ್ಮಕ ಅಂತರಗಳು ಹುಚ್ಚೆದ್ದು ಕುಣಿಯುತ್ತಿರುವಾಗ ಲಾಕ್ಡೌನ್  ಘೋಷಣೆಗಳು,  ಆಸ್ಪತ್ರೆ    ಅಲೆದಾಟ ಗಳು, ವ್ಯಾಕ್ಸಿನ್ ಗೆ  ಹುಡುಕಾಟಗಳು  ಸಮೀಪದ ವರ ಸಾವುಗಳು, ಭೇಟಿಯೂ   ಕೂಡಾ   ಆಗದೆ ಇರುವ ಸಂಭಂಧಗಳು ಎಲ್ಲವು  ಭಾವಜೀವಿಗಳಾ ದ  ಕಲಾವಿದರನ್ನು  ಹಣ್ಣುಗಾಯಿ   ನೀರುಗಾಯಿ ಮಾಡಿದವು.

2)ರಂಗ ಮಂದಿರಗಳು ಮುಚ್ಚಿರುವದು ಅಥವಾ ಭಾಗಶ ಅನುಮತಿ, ಪ್ರೇಕ್ಷಕರು  ಹೆದರಿ  ಬರದೆ ಇರುವದು, ಆದಾಯವಿಲ್ಲದೆ ಕಂಗಾಲಾದ  ವೃತ್ತಿ ಪರ ಕಂಪನಿಗಳು , ಯಾರೂ ನಾಟಕ ಮಾಡಿಸಲು ತಯಾರ ಇರದ  ಸನ್ನಿವೇಶದಲ್ಲಿ    ಕೆಲಸವಿಲ್ಲದೆ ಖಾಲಿಕುಳಿತ  ನವ   ವೃತ್ತಿಪರರು,   ಇದೆಲ್ಲದರ ನಡುವೆ  ಸರ್ಕಾರವನ್ನೇ  ಅನುದಾನಕ್ಕಾಗಿ  ನಂಬಿ ಕುಳಿತ ಹವ್ಯಾಸಿ, ಅರೆ ವೃತ್ತಿಪರರು, ಲೆಟರ್ ಹೆಡ್ ತಂಡಗಳು ದಿಕ್ಕುಗ್ ತೋಚದೆ ಕುಳಿತುಕೊಂಡವು. ಇಡೀ  ಪ್ರದರ್ಶಕ ಕಲೆಯ  ವೇಫಿಕೇ   ಅನ್ನುವ ರಂಗಭೂಮಿ ದಾರಿ ಯಾವುದಯ್ಯ ವೈಕುಂಠಕೆ ಅಂತ ಕುಳಿತವು. 

3) ಇದೊಂದು  ಸಾಂಸ್ಕೃತಿಕ  ತುರ್ತು   ಪರಿಸ್ಥಿತಿ ಆಗಿತ್ತು.”ಅವಶ್ಯಕತೆ ಅನ್ನೋದು ಸಂಶೋಧನೆಯ ತಾಯಿ  ಅನ್ನುವಂತೆ”  ಹೊಸ  ಸಾಧ್ಯತೆಗಳನ್ನು ಮೊದಲಲಾಕ್ಡೌನ್ ದಲ್ಲಿಯೇ ಕಲಿಯಬೇಕಾಗಿತ್ತು. ಆದರೆ ಕಲಿಯಲಿಲ್ಲ ಅನ್ನೋದು ಎಂಥಹದುರಂತ ಅನ್ನಬೇಕೋ ಗೊತ್ತಿಲ್ಲ.  ಒಟ್ಟಿನಲ್ಲಿ ಹೆಚ್ಚಿನ  ಜನ ಕಲಾವಿದರು ಉಚಿತ  ಆಹಾರದ ಪೊಟ್ಟಣಗಳು, ಸಾಮಾನುಗಳಿಗೆ   ತೃಪ್ತಿ   ಪಡೆದುಕೊಂಡರು. ಇದರಲ್ಲಿ ಗಮನಾರ್ಹ ಅಂಶವೆಂದರೆ, ಯಾವದೇ ಪ್ರತಿಭಾಪ್ರದರ್ಶನವಿಲ್ಲದೆ ಎಲ್ಲವನ್ನು ಸ್ವೀಕರಿಸಿದ ರು  ಕೆಲಸವಿಲ್ಲದೆ ಎಲ್ಲರಿಗೂ ಸಂಪೂರ್ಣ ವೇತನ ನೀಡಿದ ಹಾಗೆ. ಖಾಸಗಿ ಕಂಪನಿಗಳುಮನೆಯಿಂದ ಕೆಲಸ  ಅಂತ ಹೇಳಿ  ತಮ್ಮ  ಕೆಲವು ವೆಚ್ಚ ಉಳಿಸಿ ಕೊಂಡವು.

4)ಯಾವ ರಂಗಮಂದಿರಗಳು ಬಾಡಿಗೆ ಕಡಿಮೆ ಮಾಡಲಿಲ್ಲ,  ಕಲಾವಿದರು ಸಹ  ಸುಮ್ಮನೆ ಕುಳಿತರು. ಸರ್ಕಾರ/ ದೇವರು ಎಲ್ಲನೋಡಿಕೊಳ್ಳು ತ್ತಾನೆ ಅಂತ. ರಿಹರ್ಸಲ್ ಗೆ  ಯಾರು ಹೇಗೆ ಬರು ವದು  ಅಂತ ವಿಚಾರಮಾಡುತ್ತ ಕುಳಿತು ಹಳೆಯ ಡಿಜೆಲ್  ಕಾರಿನಹಾಗೆ  ಎಲ್ಲಿದ್ದವೋ  ಅಲ್ಲಿಯೇ ನಿಂತುಕೊಂಡು   ಈಗ  ದೂಕಿಸಿಯೋ  ಅಥವಾ ಇಳಿಜಾರಿಗೆ ಓಡಿಸಿಯೋ, ಮತ್ತೊಂದು ಕಾರಿನ ಬ್ಯಾಟರಿ  ಸಹಾಯದಿಂದ ಸುರು ಮಾಡುವ   ಸ್ಥಿತಿ ಯಲ್ಲಿದೆ.  ಇಷ್ಟು ದಿನ  ಬೇರೆ ಏನು ಮಾಡಿದರು? ಅನ್ನೋ ಪ್ರಶ್ನೆಗೆ ಸರಿಯಾದ ಉತ್ತರಸಿಗುವುದಿಲ್ಲ. ಹೊಲಮನಿ  ಇದ್ದವರು ಕೃಷಿ  ಅಂದರು.  ಕೆಲವು ಜನರಿಗೆ ದುರಿಣತ್ವದಲ್ಲಿ ಖುಷಿ, ಇನ್ನೊಂದಿಷ್ಟು ಜನ ಟೀಕೆ ಟಿಪ್ಪಣಿ ಮಾಡುತ್ತಾ ಕುಳಿತರು. ಇನ್ನೂ ಕೆಲವರು ಚಿಕ್ಕಮಕ್ಕಳಿಗೆ ಆನ್ ಲೈನ್ ತರಬೇತಿ ಕಲ್ಪನೆ ಇನ್ನೂ ಕೆಲವರು ತರಬೇತಿಯನ್ನೆ ಆರಂಭಿ ಸಿದರು. ಕೈ ಬೆರಳು ಮೇಲೆ ಎಣಿಸಿರುವ  ಹಾಗೆ  ಆನ್ ಲೈನ್  ಟೀಕಿಟ್  ಮಾರುವ  ಪ್ರಯತ್ನವನ್ನು ಮಾಡಿದರು.


5)ತಂತ್ರಜ್ಞಾನ ಪರ್ಯಾಯ ತತ್ವವನ್ನು ಹೊಂದಿಸಿ ಕೊಂಡರು.

6)ರಂಗಭೂಮಿ ಚಟುವಟಿಕೆಗಳ ಅನಿಶ್ಚಿತತೆ.

7)ಬೇಕಾದ ಹೊಸ ನಾಟಕಗಳು,  ರಂಗ  ಮಂದಿರ ಗಳು. 

8) ಸರ್ಕಾರದಮೇಲೆ ಅವಲಂಬಿತನ.

9) ಹೊಸ ಸಮಸ್ಯೆಗಳು. 

10)ಜನ ಬರುತ್ತಾರೋ ಇಲ್ಲವೋ ಅನ್ನೋ ಸನ್ನಿವೇಶ.

11) ಶುಚಿತ್ವ ಕಾದುಕೊಳ್ಳುವ ಹೊಸ ಜವಾಬ್ದಾರಿ  ಗಳು ಅಡ್ಡಿ ಆತಂಕಗಳು.

12) ಬಾಡಿಗೆ ಮತ್ತು ನಿರ್ವಹಣೆ.

13)ಹೊಂದಿಕೊಳ್ಳಬೇಕಾದ ಅಗತ್ಯತೆ.

14)ಆರ್ಥಿಕ ಹೊರೆ.

15)ಕಲಾವಿದರ ಮನೋ ಸ್ಥಿತಿ.

16)ಸಂಘಟನೆಯ  ಸವಾಲುಗಳು.

17)ಎಲ್ಲವೂ ಅನಿಶ್ಚಿತತೆ.

18)ಕರೊನಾ ಮತ್ತಾವಾಗ ವಕ್ಕರಿಸುವದೊ ಎಂಬ ಭಯ-ಆತಂಕ 

19)ಮಾಧ್ಯಮಗಳ  ಹಾವಳಿ   ಮತ್ತು   ಬೌದ್ಧಿಕ ದಿವಾಳಿತನ. 

20) ನಮ್ಮರಂಗ ಶಿಕ್ಷಣದ ಸಮಸ್ಯೆಗಳು. 

       ಪರಿಹಾರಗಳು


1) ರಂಗಮಂದಿರಗಳ ಬಾಡಿಗೆ ಮತ್ತು ಅವುಗಳಿಗೆ   ಸರ್ಕಾರ  ಸಬ್ಸಿಡಿಯನ್ನು ನೀಡುವದು.

2)ಪ್ರತಿ ಜಿಲ್ಲಾ ಸ್ಥಳಗಲ್ಲಿ   ನಿಯಮಿತ   ಪ್ರದರ್ಶ ನೀಡುವ ವ್ಯವಸ್ಥೆ.

3)ಅಸಂಘಟಿತ   ಕಾರ್ಮಿಕರೆಂದು   ಪರಿಗಣಿಸಿ ಅವರ ಇನ್ಸುರೆನ್ಸ್ ಸರ್ಕಾರವೇ ಮಾಡಬೇಕು. 

4)ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ  ಚಿಕಿತ್ಸೆಯನ್ನು ಆದ್ಯತೆ ಮೆರೆ ಮಾಡಿಸುವದು.


5) ವಿಶೇಷ ಘಟಕಗಳನ್ನು ಪ್ರತ್ಯೇಕ ಹಣಕಾಸಿನ ವ್ಯವಸ್ಥೆಯಲ್ಲಿ ನೋಡುವದು.

6)ಸರ್ಕಾರ  ನೀಡಿದ  ಅನುದಾನದ ವಿವರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವದು. 

8)ಯಾವದೇ  ಸಂಸ್ಥೆಗೆ  ಸತತವಾಗಿ   ಪ್ರತಿವರ್ಷ ನೀಡದೆ,  ಕನಿಷ್ಠ 3 ವರ್ಷ  ಗ್ಯಾಪ್  ಮಾಡಿ ಎಲ್ಲರಿಗೂ  ಅನುದಾನ  ನೀಡಿ   ಅವು ಸುಸ್ಥಿರವಾ ಗುವ ಹಾಗೆ ಪ್ರೋತ್ಸಾಹಿಸುವದು.

8)ಕೊರೊನಾದಿಂದ  ಆದ  ಆರ್ಥಿಕ ಹಿನ್ನಡೆಯು ಸಾಂಸ್ಕ್ರತಿಕವಾಗಿ, ವ್ಯಕ್ತಿಗತ, ಸಾಮುದಾಯಿಕವಾ ಗಿ ಪ್ರಭಾವ  ಬೀರಿದ  ಕಾರಣಕ್ಕಾಗಿ   ಅನುದಾನ, ಪ್ರಾಯೋಜಕತ್ವ  ಎಲ್ಲ  ಕಡಿಮೆಯಾಗಿರುವದು.
ಸಾಂಸ್ಕೃತಿಕ ಕ್ಷೇತ್ರಕ್ಕೆ ಅನುದಾನದ ಪ್ರಮಾಣ ಹೆಚ್ಚಿಸಬೇಕು.

10) ನಾಟಕ ರಚನೆ,  ಪಾತ್ರಧಾರಿಗಳ  ಸಂಖ್ಯೆ, ಕಥಾವಸ್ತು  ಮತ್ತು ಪೋರ್ಟೆಬಿಲಿಟಿ, ರಿಹರ್ಸಲ್ ಸುರಕ್ಷಿತೆ ಎಲ್ಲವೂ ಕರೊನಾ ಪ್ರಭಾವಕ್ಕೆ ಒಳಗಾಗಿ ರುವದು. ಈ  ಬಗ್ಗೆ  ಯೋಚಿಸಿ  ಸುಧಾರಣೆಗೆ ಪ್ರಯತ್ನಿಸಬೇಕು.

11)ಸೃಜನಶೀಲತೆ ಗೆ ರಚನೆಯಿಂದ ಅಭಿನಯದ ವರೆಗೂ ಪ್ರಭಾವವಾಗಿರುವದು ಈ ಕರೊನಾ ಸಮಯ.


12)ಸಾಂಸ್ಕ್ರತಿಕ ಪಾಲಿಸಿ ಇಲ್ಲದಿರುವದು,ಇದ್ದರೂ ಇಂಥಹ  ಸನ್ನಿವೇಶಗಳನ್ನು  ಎದುರಿಸಲು ಅಸಮ ರ್ಥವಾಗಿರುವದು. ಆದ್ದರಿಂದ ಸೂಕ್ತ ಸಾಂಸ್ಕೃತಿಕ ಪಾಲಿಸಿ ರಚಿಸಬೇಕು.

13)ಸಾಂಸ್ಕೃತಿಕ ಇಲಾಖೆ  ಮತ್ತು ಅಕಾಡೆಮಿ ವಿಶ್ವವಿದ್ಯಾಲಯಗಳಲ್ಲಿ ಸರಿಯಾದ ಸಮಗ್ರವಾದ ಸಾಂಸ್ಕೃತಿಕ  ಧುರೀಣತ್ವ  ದೊರಕುವಂತೆ   ಮಾಡ ಬೇಕು ಮತ್ತು ನಾಮಿನೇಷನ್ ಮಾಡಬೇಕು. 

14) ಆರೋಗ್ಯದ  ಕ್ಷೇತ್ರದಲ್ಲಿ ಅವ್ಯವಸ್ಥೆ   ಹೇಗಿದೆ ಯೋ ಅದೇ ರೀತಿ ಸಾಂಸ್ಕೃತಿಕ ಕ್ಷೇತ್ರದಲ್ಲಿ  ಸಹ ಅವ್ಯವಸ್ಥೆ   ತುಂಬಿದೆ.  ಕೇಂದ್ರ   ಮತ್ತು   ರಾಜ್ಯ ಸರ್ಕಾರಗಳಿಗೆ, ಪಕ್ಷ ಪ್ರಣಾಳಿಕೆ ಮತ್ತು ಸಿದ್ಧಾಂತ, ಸಂಸ್ಕೃತಿಗಳು ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಾಇವೆ. ಇದಕ್ಕೆ ಇಂದುನಮ್ಮ ಭಾರತೀಯ ಮತ್ತು  ಜಾಗತಿಕವಾದ  ದೃಷ್ಟಿಕೋನ   ಇರುವ ಧುರೀಣತ್ವ ಬೇಕು. ಹೆಚ್ಚಿನವರಿಗೆ ಜಾಗತಿಕ ದೂರ ದೃಷ್ಟಿ ಕಡಿಮೆ.

15) ಮನೆಯಿಂದ  ಹಿಡಿದು ಸ್ಕೂಲ್  ಮಟ್ಟ, ಕಾಲೇಜುಗಳಲ್ಲಿ ನಾಟಕ ತರಬೇತಿ ಹಾಗೂ ಪ್ರದರ್ಶನಕ್ಕೆ ಅವಕಾಶಗಳನ್ನು ಒದಗಿಸಬೇಕು.


16) ವಿಶ್ವವಿದ್ಯಾಲಯಗಳಲ್ಲಿ    ರಂಗಭೂಮಿ ಪ್ರದರ್ಶಕ ಕಲೆಗಳಿಗೆ  ಪ್ರಾಶಸ್ತ್ಯ  ನೀಡುವದಷ್ಟೇ ಅಲ್ಲದೆ  ಸಾರ್ವಜನಿಕ   ಹಬ್ಬಗಳಾದ   ಗಣೇಶ, ದಸರೆ, ಕ್ರಿಸ್ಮಸ್,  ಬಸವ ಜಯಂತಿ,  ರಮಜಾನಗ ಳಲ್ಲಿಆ ನೆವಗಳಿಂದ  ಸಾಂಸ್ಕೃತಿಕ ಚವಾಟುವಟಿಕೆ ಹೆಚ್ಚಿಸಬಹುದು.

 ಲಾಕ್ಡೌನ್   ತೆಗೆದುಹಾಕಿದಾಗ    ಏನೆಲ್ಲಾ ಆಗಬಹುದು ಅನ್ನೋದು ಒಂದು ಊಹೆ ಮಾತ್ರ, ನಮ್ಮ ಜನ ಸುಲಭವಾಗಿ ಬದಲಾಗುವದಿಲ್ಲ.

✍️ ಅರವಿಂದ ಕುಲಕರ್ಣಿ    ರಂಗಭೂಮಿಚಿಂತಕರು, ಧಾರವಾಡ