ಅದೊಂದು ದೃಶ್ಯ ಹೊಳೆದಾಟುವ ಭರದಲ್ಲಿ ಎಲ್ಲರೂ ಆತುರಗಾರರು. ದೋಣಿಯಲ್ಲಿ ಐದು ವರ್ಷದ ಪುಟ್ಟ ಪೋರಿ ತನ್ನ ತಂದೆಯ ಜೊತೆಗೆ ಪಕ್ಕದೂರಿಗೆ ಹೊರಟಿದ್ದಳು. ನೀರಿನ ಅಲೆಯಲಿ ಪುಟ್ಟ  ಕೈಗಳಾಡಿಸುತ್ತ, ನದಿಯ ವಿಹಾರದಲ್ಲಿ ಮಗ್ನಳಾಗಿರುವ ಸಂದರ್ಭ. ದೂರದಲ್ಲಿ ಎರಡು ಬಾಲಕರು ಕಾಪಾಡಿ ಎಂಬ ಕೂಗಿನ ಆರ್ತನಾದ ಕೇಳಿಬರುತ್ತಿತ್ತು. ದೋಣಿಯಲ್ಲಿದ್ದವರಿಗೆ ಆತಂಕ ಮುನ್ಸೂಚನೆ ತಿಳಿದಂತಿತ್ತು. ಆ ಬಾಲಕರ ಬೆನ್ನಹತ್ತಿರುವುದು ಮೊಸಳೆಯೆಂದು ತಿಳಿದಾಕ್ಷಣ ಅಂಬಿಗನಿಗೆ  ಹುಟ್ಟನ್ನು  ಬೇಗ  ಬೇಗ ತಿರುಗಿಸಲು ಒತ್ತಾಯಿ ಸುತ್ತಿದ್ದರು. ತಮ್ಮ ಜೀವ ಉಳಿದರೆ ಸಾಕೆಂಬ ಧಾವಂತ.

ಆ ಬಾಲಕರ ಕೂಗು ಎಲ್ಲರ ಮನ ಕಲುಕಿದ್ದರೂ ಮುಂದಾಗಿರಲಿಲ್ಲ, ಪೋರಿಗೆ ಅವರನ್ನು ರಕ್ಷಿಸುವ ಮನ್ಸು. ಅಪ್ಪನತ್ತ  ನೋಡಿದಾಗ  ಬೇಡ   ಮಗಾ ನೀನಿನ್ನು ಚಿಕ್ಕವಳು ನೀರಿಗಿಳಿಯುವ. ಸಾಹಸ ಮಾಡಬೇಡೆಂದರು. ಆದರೆ ಜೀವದುಳಿವಿಗಾಗಿ ಹೋರಾಡುವ ಬಾಲಕರ ಕೂಗು ನಮ್ಮ ಕಾಲುಗ ಳನ್ನು ಹಿಡಿಯಲು ಮೊಸಳೆ ಬರುತ್ತಿದೆ..ನಮ್ಮ ಜೀವ ಯಾರಾದರೂ ಕಾಪಾಡಿ ಎಂದು ಕೂಗುವ. ಧ್ವನಿ ಐದು ವರ್ಷದ ಬಾಲಕಿಗೆ ಸಹಿಸಲಾಗಲಿಲ್ಲ.   ಅವರ   ಜೀವ  ಉಳಿಸಲು ಸಂಕಲ್ಪ ಮಾಡಿ    ಧೈರ್ಯದಿಂದ,  ಅವಳಪ್ಪ ಹಾರುವ ಮೊದಲೇ ಎಲ್ಲರೂ ನೋಡು ನೋಡುತ್ತಿದ್ದಂತೆಯೇ ಹಾರಿಬಿಟ್ಟಳು. ಮೀನಿಗಿಂತಲೂ ವೇಗವಾಗಿ   ಈಜುತ್ತ  ಅವರತ್ತ ಸಾಗಿ ಅವರ ಕೈಗಳನ್ನು ಬಲವಾಗಿ ಹಿಡಿದು ಅದೇ ವೇಗದಿಂದ ದೋಣಿಯತ್ತ   ಬಂದಳು. ಬಾಲಕರ   ಜೀವ ಉಳಿಸಿದ   ವೀರ ಬಾಲಕಿ   ಎಲ್ಲರ   ಪ್ರಶಂಸೆಗೆ ಪಾತ್ರಳಾ ಗಿದ್ದಳು.

ಅಪ್ಪನ ಕಂಗಳಲ್ಲಿ ಆನಂದಭಾಷ್ಪ..ಅಪ್ಪಾ ಇದು ನೀವು  ಕಲಿಸಿ ಕೊಟ್ಟ  ಪಾಠ.  ಕಷ್ಟ    ಬಂದಾಗ ಅದನು   ಎದುರಿಸುವ   ಸಾಮರ್ಥ್ಯ,  ಧೈರ್ಯ ಎಂದಾಗಂತೂ  ಅಲ್ಲಿದ್ದ  ಎಲ್ಲರಿಗೂ   ತಂದೆಯ ಮೇಲೆ ಗೌರವ ಹೆಚ್ಚುವಂತೆ ಮಾಡಿತ್ತು. ಮುಂದೆ ಇತಿಹಾಸದಲ್ಲಿ ಅಜರಾಮರವಾಗಿ  ಉಳಿಯುವಂತಹ  ದಿಟ್ಟಮಹಿಳೆಯಾಗಲು  ಮುನ್ನಡಿ    ಬರೆದಾಗಿತ್ತು. ಬ್ರಿಟಿಷ್ ರನ್ನು ದಿಗ್ಭ್ರಮೆಗೊಳಿಸಿದ ಆವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಈ ಬಾಲಕಿಯ.   ತಂದೆಯೇ  ಭಾರತದ   ದೇಶಪ್ರೇಮಿಗಳಲ್ಲಿ ಒಬ್ಬರಾದ ಮೋರೋಪಂತ.

ಇವನ್ನೆಲ್ಲ ಓದುತ್ತಿದ್ದಂತೆ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ನಮ್ಮ ಮಕ್ಕಳಲ್ಲಿ  ಧೈರ್ಯ, ಸಾಹಸಗಳನ್ನು ಬಿತ್ತುವಾಸೆ. ಯಶೋಗಾ ಥೆಗಳ  ಮೂಲಕ  ಅವರಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸಲು   ಸ್ವಯಂಪಾಲಕರು   ಮುಂದಾಗ ಬೇಕು.  ಗಿಡ  ಬೆಳೆಸುವುದಿರಬಹುದು, ಪ್ರಾಣಿ ಪಕ್ಷಿಗಳ ಅನುಕರಣೆ, ಮೌಲ್ಯಾಧಾರಿತ ಪುಸ್ತಕಗಳ ಓದು,ಆಪತ್ತಿನಲ್ಲಿ ನೇರವಾಗುವುದು. ಪ್ರಥಮ ಚಿಕಿತ್ಸೆ ಮಾಡುವ ಕ್ರಮ,ಚಿತ್ರಕಲೆ, ನಾಟಿ ಮಾಡುವುದು,  ಮೀನು   ಹಿಡಿಯುವುದು,   ಕರಕುಶಲ ಕಲೆಗಳು, ಮಣ್ಣಿನಾಕೃತಿಗಳು   ಹೀಗೆ   ನಿಮ್ಮಲ್ಲಿ ಯಾವ  ಪ್ರತಿಭೆಯಿದೆಯೋ  ಅದನ್ನು  ನಿಮ್ಮ ಮಗುವಿಗೆ  ಧಾರೆಯೆರೆ ಯುವ  ಕಾರ್ಯ  ಮಾಡಿದ್ದಲ್ಲಿ ಪ್ರತಿಭಾನ್ವಿತ ಮಗು ಸೃಜಿಸಲು ನಾವುಗಳು ಬುನಾದಿ ಹಾಕಿಕೊಟ್ಟಂತಾಗುತ್ತದೆ.

ನಮಗೆ  ಸಮಯವೆಲ್ಲಿ?   ಮಕ್ಕಳು   ಮೊಬೈಲ್ ಗೆಮ್ ನಲ್ಲಿ ಕಾಲಹರಣ ಮಾಡುವುದನ್ನು ತಪ್ಪಿಸಿ, ಇತರ.  ಕಾರ್ಯದಲ್ಲಿ   ತೊಡಗುವಂತೆ     ಮಾಡುವುದು ಶ್ರೇಷ್ಠವಲ್ಲವೇ? ಸಮಸ್ಯೆ ಗಳನ್ನು ಮೆಟ್ಟುತ್ತ ಪರಿಹಾರದತ್ತ   ಮುಖಮಾಡುವುದು    ಮುಖ್ಯ. ಎಲ್ಲ ತಂದೆತಾಯಿಯರು ನಮ್ಮ ಮಗು ಅನ್ವಯಿಕ ಮನೋಭಾವವನ್ನು   ಬೆಳೆಸಿಕೊಳ್ಳಬೇಕು.  ಮನೆಯಲ್ಲಿ ದೇಶಪ್ರೇಮ, ಗೌರವ,  ದೇಶಕ್ಕಾಗಿ   ನಮ್ಮ ಅಳಿಲುಸೇವೆ ಯೇನು ಎಂಬುದನ್ನು ಮನಗಾಣಿ ಸುವುದು ನಮ್ಮ ಹೊಣೆ. ಪ್ರತಿಮನೆಯಲ್ಲಿ  ಪುಟ್ಟ ಗ್ರಂಥಾಲಯ  ವ್ಯವಸ್ಥೆ ಮಾಡುವುದ ರಿಂದ ಅವರ ವಯೋಸಹಜ ಪುಸ್ತಕಗಳಿಂದ ಅವರಲ್ಲಿ ಜ್ಞಾನ ವರ್ಧನೆಯಾಗುವಂತೆ  ಪ್ರೇರೆಪಿಸುವುದು  ಎಷ್ಟು ಚಂದ ಹಾಗೂ ಸೂಕ್ತ.

ಭವಿಷ್ಯದಲ್ಲಿ ಅವರುಗಳು ದೇಶದ ಹೃದಯವಾಗಿ ಬೆಳೆದಾಗ   ಹೆಮ್ಮೆ  ಯಾರ ಪಾಲಿಗೆ? ಊಹಿಸುವಷ್ಟು ಬೆಳೆಸಬೇಕು. ಮಗು ಮಣ್ಣಿನ ಹಣತೆಯಾದರೆ ನಾವುಗಳು ಅದರ ಜ್ಞಾನ ಬಿತ್ತುವ ಬತ್ತಿಗಳಾ ಗಿ ಉರಿಯಲು ಸಿದ್ದವಿರಬೇಕು. ಅಂದಾಗ ನಾವು ದೇಶಕೆ ಸತ್ಪ್ರಜೆಯನ್ನು ನೀಡಲು ಸಾಧ್ಯ.  ಪ್ರಯತ್ನ ನಮ್ಮದು ಫಲ ಕೊಡುವುದು ಭಗವಂತನ ಇಚ್ಛೆ. ನೀರ ಮೇಲೆ ತೇಲುವ ದೋಣಿಗೆ ಹಾಯಿಗೋಲು ಅಂಬಿಗನ   ಆತ್ಮವಿಶ್ವಾ ಸದಂತೆ   ಮುನ್ನ   ನಡೆಸುತ್ತದೆ. ಯಾವ ಮಗುವಾದರೇನು ಅದರ  ಯೋಚ ನೆಯಲ್ಲಿ‌   ಸಕಾರಾತ್ಮಕ   ಚಿಂತನೆಯನ್ನು    ಸದಾ ಜಾಗ್ರತ ಮಾಡುವುದು ಮೊದಲ ಆದ್ಯತೆ.

☀☀☀

ಶ್ರೀಮತಿ.ಶಿವಲೀಲಾ ಹುಣಸಗಿ, ಶಿಕ್ಷಕಿ, ಯಲ್ಲಾಪೂರ