ಕಬ್ಬನ್ನು ಜಗಿ-ಜಗಿದು ತಿನ್ನುವಾಗ ಎಷ್ಟು ರುಚಿ ಸಿಗುವುದೊ ಅಷ್ಟೆ ರುಚಿ ಮತ್ತು ಆನಂದ ಯಾವುದೇ ಭಾಷೆಯ ಸಾಹಿತ್ಯ ಓದುವುದರಲ್ಲಿ ಸಿಗುವುದು.ಸಾಹಿತ್ಯ ಸಮಾಜದ ದರ್ಪಣವೆಂದರೆ ತಪ್ಪಾಗಲಿಕ್ಕಿಲ್ಲ.ಸಮಾಜದ ಅಂಕು -ಡೊಂಕುಗಳ ನ್ನು, ಒಳಿತು-ಕೆಡಕುಗಳನ್ನು ತಿಳಿದು ಅದನ್ನು ಜನತೆಯ ಗಮನಕ್ಕೆ ತರುವುದೆ ಸಾಹಿತ್ಯದ ಪ್ರಮುಖ ಕೆಲಸ.ಸಸಿ ನೆಟ್ಟ ಕೂಡಲೆ ಹಣ್ಣು ದೊರೆ ಯುವದಿಲ್ಲ, ಅದಕ್ಕೆ ನಿತ್ಯ ನೀರೆರೆದು ಪೋಶಿಸ ಬೇಕು ನಂತರ ಹಣ್ಣು ಬಿಡುವವರೆಗೆ ಮಕ್ಕಳನ್ನು ನೋಡಕೊಂಡ ಹಾಗೆ ನೋಡಿಕೊಳ್ಳಬೇಕು. ಹಾಗೆ ಯಾವುದೆ ಭಾಷೆಯಾಗಲಿ ಒಮ್ಮಿಂದೊಮ್ಮಲೆ ಉತ್ಪತ್ತಿಯಾಗುವುದಿಲ್ಲ. ಅದಕ್ಕೆ ಹಲವಾರು ವಸಂತಗಳು ಕಳೆಯಬೇಕು ಆಗ ವಸಂತದ ಸೋಬಗು ಮನಕೆ ಉಲ್ಲಾಸ ನೀಡುವುದು.ಉದಾ ಹರಣೆಗೆ ಸಂಸ್ಕೃತ ಅಥವಾ ಪ್ರಾಕೃತ ಭಾಷೆಗಳು ಒಂದೆ ಭಾಷೆಯಾಗಿ ಪರಿಗಣಿಸಲ್ಪಟ್ಟರು ನಂತರ ಅವೇ ವೈದಿಕ ಸಂಸ್ಕೃತ, ಪ್ರಾಕೃತ, ಅಪಭ್ರಂಶ ಮುಂತಾದ ಭಾಷೆಗಳಾಗಿ ವಿಕಾಸಗೊಂಡವು. ಸಾಮಾನ್ಯವಾಗಿ ಆಧುನಿಕ ಬಂಗ್ಲಾ ಒಡಿಯಾ, ಹಿಂದಿ,ಮರಾಠಿ,ಗುಜರಾತಿ,ರಾಜಸ್ಥಾನಿ,ಪಂಜಾಬಿ ..ಮುಂತಾದ ಉತ್ತರ ಭಾರತೀಯ ವಿಭಿನ್ನ ಭಾಷೆ ಗಳು, ಒಂದೇ ಮೂಲ ಭಾಷೆಯ ವಿಭಿನ್ನ ರೂಪ ಗಳು. ಆಯಾ ಸ್ಥಾನದ ಭಾಷಾ ಉಚ್ಛಾರಣೆಗೆ ಅನುಗುಣವಾಗಿ ಅನೇಕ ಸ್ವರೂಪಗಳಲ್ಲಿ ಅಂತರ ಕಾಣುತ್ತದೆ.ಇದು ಭಾಷೆಯ ಒಂದುರೂಪವಾದರೆ, ಭಾಷೆಯ ಇನ್ನೊಂದು ರೂಪ ಯಾವಭಾಷೆಯಲ್ಲಿ ಸಾಹಿತ್ಯ ಸೃಜನವಾಗುವುದೊ ಕಾಲಾಂತರ ಅದು ಲಿಖೀತ ರೂಪದಲ್ಲಿ ಪ್ರಯೋಗಿಸಲ್ಪಡುವುದು. ಹೀಗೆಯೆ ನಂತರದ ದಿನಗಳಲ್ಲಿ ಆ ಸಾಹಿತ್ಯ ಸಮೃದ್ದವಾಗಿ ವಿಕಾಸಗೊಳ್ಳುವುದು. ಹೀಗೆ ವಿಕಾಸಗೊಂಡ ಭಾಷೆಗಳಲ್ಲಿ ಹಿಂದಿ ಭಾಷೆಯು ಒಂದು.

ಹಿಂದಿ ಭಾಷೆಯ ಹುಟ್ಟು ಮತ್ತು ವಿಕಾಸ ಕುರಿತು ಅನೇಕ ಭಾಷಾ ವಿದ್ವಾಂಸರು ವಿಮರ್ಶಕರುತಮ್ಮ ಅಧ್ಯಯನದ ಆಳದಿಂದ ಭಿನ್ನ -ಭಿನ್ನ ವಿಚಾರಗ ಳನ್ನು ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಗಿಂತ ಅನೇಕ ಭಾಷೆಗಳು ಪ್ರಚಲಿತ ಇದ್ದವು ಎಂದು ಹೇಳಬಹುದು ಅವುಗಳಲ್ಲಿ, ವೈದಿಕ ಸಂಸ್ಕೃತ, ಸಂಸ್ಕೃತ, ಮೊದಲ ಪ್ರಾಕೃತ ಅಥವಾ ಪಾಲಿ, ಎರಡನೆ ಪ್ರಾಕೃತ -ಇದನ್ನು ಸಾಹಿತ್ಯಿಕ ಪ್ರಾಕೃತ ಎಂದು ಕರೆಯುವರು. ನಂತರ ಅಪಭ್ರಂಶ ಅಂದರೆ ಸಾಹಿತ್ಯಿಕ ಪ್ರಾಕೃತದ ಜೊತೆಗೆ ಜನಸಾ ಮಾನ್ಯರ ಆಡುಭಾಷೆಯನ್ನು ಅಪಭ್ರಂಶ ಎಂದು ಕರೆಯುವರು. ಗುಜರಾತದ ಜೈನಾಚಾರ್ಯರು ಈ ಭಾಷೆಯಲ್ಲಿಯೆ ಗ್ರಂಥ ರಚಿಸಿರುವರು. ಸಾಹಿತಿ ಹೇಮಚಂದ ಜಿಯವರು ಇದರ ವ್ಯಾಕರಣ ರಚಿಸಿದ್ದಾರೆ. ಅಪಭ್ರಂಶದ ಅನೇಕ ವಿಧಗಳು- ನಾಗರ (ಗುಜರಾತ ಮತ್ತು ರಾಜಸ್ಥಾನದಲ್ಲಿ ಪ್ರಚ ಲಿತವಿತ್ತು) ಬ್ರಾಚಡ (ಸಿಂಧ ಪ್ರಾಂತದಲ್ಲಿ ಪ್ರಚಲಿ ತವಿತ್ತು) ಉಪನಾಗರ ಇದು ನಾಗರ ಮತ್ತು ಬ್ರಾಚಡದ ಮಧ್ಯದಲ್ಲಿ ಪ್ರಚಲಿತವಿತ್ತು.ಶೌರಸೇನಿ -ಇದು ಸಮಸ್ತ ಉತ್ತರಭಾರತದ ಭಾಷೆಯಾಗಿ ಪ್ರಚಲಿತವಾಗಿತ್ತು. ಅನೇಕ ವಿದ್ವಾಂಸರು ಬ್ರಜ ಭಾಷೆ ಮತ್ತು ಖಡಿಬೋಲಿ ಉತ್ಪತ್ತಿಯನ್ನು ಶೌರಸೇನಿ ಭಾಷೆಯಿಂದ ಎಂದು ಹೇಳಿದ್ದಾರೆ. ಅಲ್ಲದೆ ವಿದ್ವಾನರು ಭಾಷೆಯ ಇನ್ನೊಂದು ರೂಪ “ಪ್ರಾಚೀನ ಹಿಂದಿ” ಎಂದು ತಿಳಿಸಿದ್ದಾರೆ. ಅಪ ಭ್ರಂಶ ಮತ್ತು ಆಧುನಿಕ ಹಿಂದಿಯ ಮಧ್ಯಭಾಗ ದಲ್ಲಿದ್ದ ಭಾಷೆ ಪ್ರಾಚೀನ ಎಂದು ವ್ಯಕ್ತಪಡಿಸಿದ್ದಾ ರೆ. ಇದನ್ನು ಸಾಹಿತ್ಯಕಾರರು ಅವಹಟ್ಟ ಎಂದು ಕರೆದಿದ್ದಾರೆ. ಈ. ಭಾಷೆಯ ರಚನಾಕಾರರಲ್ಲಿ ವಿದ್ಯಾಪತಿ ಪ್ರಮುಖರು.ಈ ಪ್ರಾಚೀನ ಹಿಂದಿಯ ವಿಕಾಸ ರೂಪವೇ ವರ್ತಮಾನ ಹಿಂದಿ. ಹಿಂದಿ ಭಾಷೆಯ ಪ್ರಸಿದ್ದ ಭಾಷಾ ವಿದ್ವಾನ ಡಾ. ರಾಮ ವಿಲಾಸ ಶರ್ಮಾ ಮತ್ತು ಕಿಶೋರಿದಾಸ ವಾಜಪೇಯಿ ಯವರ ಪ್ರಕಾರ-ಹಿಂದಿ ಸಂಸ್ಕೃತ ಭಾಷೆಯ ಮಗಳಲ್ಲ, ಕಾಳಿದಾಸನ ಕಾವ್ಯ ಭಾಷೆ ಯಲ್ಲಿನ ಸಂಸ್ಕೃತ ಭಾಷೆಯಿಂದಲ್ಲ.ಹಿಂದಿ ಮತ್ತು ಸಂಸ್ಕೃತ ಭಾಷೆ ಎರಡು ಸ್ವತಂತ್ರವಾಗಿ ವಿಕಾಸ ಗೊಂಡಿವೆ. ಹಿಂದಿ ಭಾಷೆಯು ಆಧುನಿಕ ಉತ್ತರ ಭಾರತದ ಭಾಷೆಗಳ ವಿಕಾಸ ಅಪಭ್ರಂಶ ಭಾಷೆ ಯಿಂದಲ್ಲ, ತಮ್ಮ-ತಮ್ಮ ಕ್ಷೇತ್ರದಲ್ಲಿ ಪ್ರಚಲಿತವಿದ್ದ ಆಡು ಭಾಷೆಗಳಿಂದ ವಿಕಾಸಗೊಂಡಿದೆ ಎನ್ನುವು ದನ್ನು ಭಾಷಾ ವಿದ್ವಾಂಸರು ಖಚಿತಪಡಿಸಿದ್ದಾರೆ.

ಹಿಂದಿ ಭಾಷೆಯ ವಿಕಾಸ 1000 ಇಸ್ವಿಯ ಆಸು -ಪಾಸು ಎಂದುಸ್ಪಷ್ಟವಾಗಿ ಒಪ್ಪಿಕೊಳ್ಳಲಾಗುವು ದಿಲ್ಲ..ಎಳನೇಯ ಶತಮಾನದ ಪುಷ್ಯ ಎನ್ನುವ ಕವಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಪಶ್ಚಿಮ ಭಾರತದಲ್ಲಿ ಜೈನಸಾಧುಗಳ ಮತ್ತು ಪೂರ್ವ ಭಾರತದಲ್ಲಿ ವಜ್ರಯಾನಿ ಸಂತರ ಅಪಭ್ರಂಶ ಭಾಷೆಯಲ್ಲಿ ಕೃತಿಯಲ್ಲಿ ಹಿಂದಿ ಭಾಷೆಯ ಕಂಡು ಬಂದಿದೆ ಎಂದು ಹೇಳಲಾಗಿದೆ. ಸಿದ್ಧಕವಿ ಸರಹಪಾ ಕವಿಯ ದೋಹಾಗಳು ಪುರಾನಿ ಹಿಂದಿ ಯಲ್ಲಿದ್ದರು ಅಲ್ಲಲ್ಲಿ ಮತ್ತು ಅಪಭ್ರಂಶ ಭಾಷೆಯ ಶಬ್ದಗಳ ಪುರಾವೆ ಇದೆ ಎಂದು ಭಾಷಾ ತತ್ಞರು ಹೇಳಿದ್ದಾರೆ. ಹೀಗೆ ಹಿಂದಿ ಭಾಷೆಯ ವಿಕಾಸ ಕ್ರಮವಾಗಿ ಆಯಿತು ಎಂದು ಹೇಳಬಹುದು. ಹಿಂದಿ ಭಾಷೆಯ ವಿಕಾಸವನ್ನು ಮೂರು ಹಂತಗ ಳಲ್ಲಿ ಕಾಣಬಹುದು.
1) ಪ್ರಾಚೀನ ಕಾಲ (ಇಸ್ವೀ 1000 – 1500 )
2)ಮಧ್ಯಕಾಲ (ಇಸ್ವೀ 1500- 1800 )
3)ಆಧುನಿಕ ಕಾಲ (ಇಸ್ವೀ 1800 – ಇಂದಿನವ ರೆಗೆ)
ಪ್ರಾಚೀನಕಾಲದಲ್ಲಿ ಮುಸಲ್ಮಾನರ ಆಕ್ರಮಣ ಕಾಲವಾದುದರಿಂದ ಅಡ್ಡಿ -ಆತಂಕಗಳ ಕಾರಣ ದಿಂದ ಸಾಹಿತ್ಯ ಸೃಜನತೆಗೆ ಅಷ್ಟೊಂದು ಪ್ರೋತ್ಸಾ ಹ ಸಿಗಲಿಲ್ಲ ಎಂದು ತಿಳಿಯಬಹುದು. ಸಾಧು ಗೋರಖನಾಥರನ್ನು ಹೊರತುಪಡಿಸಿದರೆಅಮೀರ ಖುಸರೊ ಕೃತಿಗಳಲ್ಲಿ ಖಡಿಬೋಲಿಯ ವಿಕಾಸ ಕಂಡುಬಂದಿದೆ. ಆರಂಭದಲ್ಲಿ ಹಿಂದಿ ಮಧ್ಯಪ್ರದೇ ಶದಲ್ಲಿ ಜನಭಾಷೆಯಾಗಿ ಬಳಕೆಯಿಲ್ಲಿದ್ದು ಕ್ರಮೇಣ ಬ್ರಜ,ಅವಧಿ, ಖಡಿಬೋಲಿ ಈ ಹೆಸರು ಗಳಿಂದ ಪಲ್ಲವಗೊಂಡಿತು ಎನ್ನುವ ಮಾತಿನ ಉಲ್ಲೇಖವಾಗಿದೆ.ಈ ಕಾಲದ ಪ್ರಸಿದ್ದ ಕವಿಗಳಲ್ಲಿ -ನರಪತಿ ನಾಲ್ಹಾ, ಚಂದಬರದಾಯಿ, ಜಗನಿಕ, ಗೋರಖನಾಥ ಅಮೀರ ಖುಸ್ರೋ ಮತ್ತು ಕಬೀರರು .
ಮಧ್ಯಕಾಲದ ಮೂರು ಪ್ರಮುಖ ಭಾಷೆಗಳಾದ ಖಡಿಬೋಲಿ, ಅವಧಿ ಮತ್ತು ಬ್ರಜಭಾಷೆ. ರಾಮಜನ್ಮ ಭೂಮಿಯ ಅವಧಿ ಭಾಷೆ, ಕೃಷ್ಣ ಜನ್ಮಭೂಮಿಯ ಬ್ರಜ ಭಾಷೆ, ಜನಮನ ಭಾಷೆ ಯಾಗಿರುವಾಗ ಮೊಗಲ ಶಾಸಕರು ಜನರ ಮನ ಸ್ಸನ್ನು ಗೆಲ್ಲಲು ರಾಜಧಾನಿ ದಿಲ್ಲಿಯ ಆಸು- ಪಾಸಿ ನಲ್ಲಿ ಖಡಿಬೋಲಿಗೆ ಪ್ರೊತ್ಸಾಹ ನೀಡತೊಡಗಿದ ರು. ಅವಧಿಯ ಪ್ರಥಮ ರೂಪ ಕಬೀರ ಮತ್ತು ಇತರ ಸಂತ ಕವಿಗಳ ಸಧುಕ್ಕಡಿ ಭಾಷೆಯಲ್ಲಿ ಕಂಡುಬಂದಿದ್ದು ನಂತರ ಜಾಯಸಿ ಮತ್ತು ತುಲಸಿ ಸೂರದಾಸ ಮತ್ತು ಅವರ ನಂತರ ನಂದದಾಸ, ಕುಂಭನದಾಸ, ಪರಮಾನಂದ ವ್ಯಾಸ ಮುಂತಾದ ಕವಿಗಳು ಬ್ರಜ ಭಾಷೆಯಲ್ಲಿ ಸಾಹಿತ್ಯ ಸೃಜನ ಮಾಡಿದ್ದಾರೆ. ಕೃಷ್ಣ ಭಕ್ತಿಯ. ಜೊತೆಗೆ ಸಮಸ್ತ ಉತ್ತರ ಭಾರತದಲ್ಲಿ ಬ್ರಜ ಭಾಷೆ ಪ್ರಮುಖ ಭಾಷೆ ಯಾಯಿತು. ರೀತಿ ಕಾಲದಲ್ಲಿ ಬಿಹಾರಿ, ಘನಾನಂ ದ, ಪರಮಾನಂದ ಮುಂತಾದ ಕವಿಗಳಿಂದ ಬ್ರಜ ಭಾಷೆಯಲ್ಲಿ ಶ್ರೇಷ್ಠ ಕೃತಿಗಳು ರಚಿಸಲ್ಪಟ್ಟವು.
*ಖಡಿಬೋಲಿ ಅಪಭ್ರಂಶ ಕಾಲದಲ್ಲಿ ಕಂಡು ಬಂದರು ಕೂಡ ಉತ್ತರ ಭಾರತದಲ್ಲಿ ಅಷ್ಟೊಂದು ವಿಕಾಸಗೊಳ್ಳದೆ ಮುಂದೆ ರೇಖತಾ ಅಥವಾ ದಕ್ಖಿನಿ ಹಿಂದಿಯಾಗಿ ದಕ್ಷಿಣ ಭಾರತದಲ್ಲಿ ಪ್ರಚಾರ ಹೆಚ್ಚಿತು. ದಕ್ಖಿನಿಯ ಅನೇಕ ಕವಿಗಳಿಂದ ಈ ಭಾಷೆಯ ಮೆರಗು ಹೆಚ್ಚಿತು. ತದನಂತರ ಖಡಿ ಬೋಲಿಯು ಮುಸಲ್ಮಾನ ಸೈನಿಕರ, ಫಕೀರರ ಮತ್ತು ವ್ಯಾಪಾರಿಗಳ ಆಡುಭಾಷೆಯಾಗಿ ಬಳಕೆ ಯಾಗತೊಡಗಿತು. ನಂತರದ ದಿನಗಳಲ್ಲಿ ದಕ್ಷೀಣ ಭಾರತ ಮತ್ತು ಉತ್ತರ ಭಾರತದಲ್ಲಿ ವಿಕಾಸವಾ ತೊಡಗಿತು. ಉತ್ತರ ಭಾರತದಲ್ಲಿ ಇಂಶಾ ಅಲ್ಲಾ ಖಾ ಅವರು ಬರೆದ ರಾಣಿ ಖೇತಕಿ ಕಿ ಕಹಾನಿ ಕೃತಿಯಲ್ಲಿ ಖಡಿಬೋಲಿ ಭಾಷೆ ಪ್ರಯೋಗವಾದರೆ ನಂತರದ ದಿನಗಳಲ್ಲಿ ಅಂದರೆ ಅಂಗ್ರೇಜರ ಪ್ರವೇಶದ ನಂತರ ಖಡಿಬೋಲಿ ವ್ಯಾಪಕವಾಗಿ ವಿಕಾಸಗೊಂಡಿತು.
ಶ್ರೀದುರ್ಗಾ (ಸರೋಜಾ ಮೇಟಿ) ಹುಬ್ಬಳ್ಳಿ