“ನಿನ್ನಲ್ಲಿಗೆ ಒಮ್ಮೆ ಬರುವೆ ಹಾಗೆ ಸುಮ್ಮನೆ”
ಕೇವಲ ಎರಡೇ ಎರಡು ಮಾತು ಅವಳು ಅವನ ಮಾತಲ್ಲಿ ತೋಯ್ದಳು.ಸೀರೆಯ ಅಂಚಿಗೆ ಕುಚ್ಚು ಕಟ್ಟುವ ನೆಪದಲ್ಲಿ ನೆನಪುಗಳ ಯಾವ ನೂಲು ಕುಣಿಕೆ ಹಾಕಿ ಹೆಣೆಯಿತೊ ? ಏಳು ಸ್ವರಗಳನ್ನ ಒಟ್ಟಿಗೆ ಪೋಣಿಸಿ ನುಡಿಸಿದ ರಾಗದಲಾಪನೆಯಲಿ ವೀಣೆಯ  ನಾದ  ಆಳದ  ಕಣಿವೆಯ   ನೀರವ ಮೌನವನ್ನ  ಕಂಪಿಸಿತೊ?  ರಾತ್ರಿಯಲ್ಲಿ  ಒಂಟಿ ಹಕ್ಕಿಯ  ಸ್ವರ  ಮೋಡದ  ಅಂಚಿನಲ್ಲಿ   ಸಾಗಿ ತೇಲಿತೊ?   ಇದಾವುದರ   ಪರಿವಿಲ್ಲದ  ಅವಳ ಮನದ ಲೋಚನೆ ಏನೋ ಹುಡುಕುವ ಧಾವಂತ.


ಸಹಜ ಆಗಸದ ಹಾದಿಯಲಿ ಮುಂಗಾರು ಮೋಡ ತೇಲುತ ಸುಮ್ಮನೆ ಸಾಗಿದೆ ಇದಾವುದರ ಅರಿವಿರ ದಂತೆ ಎಂದಿನಂತೆ.

ಅವಳ ಹಗಲ ಬೆರಗಿನಲಿ, ಇರುಳ ತುಂಬಾ ಮಲ್ಲಿ ಗೆ  ಹಂದರದ  ಹೂಗಳ  ಪರಿಮಳದ   ಮೆರಗಲಿ ಮಾರ್ಧನಿ.  ಅವ  ಹೇಳ್ತಾನೆ   “ನಿನ್ನಲ್ಲಿಗೆ   ಒಮ್ಮೆ ಬರುವೆ  ಹಾಗೆ   ಸುಮ್ಮನೆ”   ಆದರೆ  ದಿನಗಳೇ ಕಳೆದು ಹೋದವು, ವಾರಗಳುರುಳಿದವು,   ವರ್ಷ ಗಳು ಎಣಿಕೆಗೆ ಮುಗಿದು ಬಿದ್ದವು.  ಅವ    ಮಾತ್ರ ಬರಲೆ ಇಲ್ಲ.


ಪಾಪ   ಅವ  ಬರುವ   ಹೂ ತೋಟದ  ಮಧ್ಯೆ, ಚೆಲುವ  ಹೂ  ಮನಸೆಳೆದು  ನಿಂತನೊ  ಏನೊ? ಆಕಸ್ಮಿಕಗಳೆಲ್ಲ   ಅನಿವಾರ್ಯವಾದವೇನೋ? ಅನುಮಾನದ   ಹುತ್ತದಲ್ಲಿ   ಕಾಲಿರಿಸಿದನೋ? ಉತ್ತರ ಸಿಗದ   ಪ್ರಶ್ನೆಗಳ   ಹಡೆಯುವಿಕೆಯಲ್ಲಿ ದಿನಗಳ  ಉರುಳ  ಸೇವೆ.  ನೆನಪ   ಮುಗಿಲಲಿ ಮುಂಗಾರ ಛಾಯೆ. ಅವನ ಸಂಧಿಸುವ ಗಳಿಗೆಗ ಳಿಗೆಲ್ಲ ನೆಪದ ಹುಡುಕಾಟ. ಅವನೊಟ್ಟಿಗೆ ಹೆಜ್ಜೆಗೆ ಹೆಜ್ಜೆ ಸೇರಿಸಿ  ಮುಗ್ಗರಿಸದೆ  ಜೊತೆಯಾಗಿನಡೆವಾ ಗ ಏನೋ ಸಡಗರ ಸಂಭ್ರಮದ ಕ್ಷಣಗಳು. ಖರೆನೆ ಕಣ್ಣುಗಳಲಿ   ಮಿನುಗುವ   ಭರವಸೆ.   ಕೈ ಬೆರಳ ಬಂಧಿಸಿ   ನಡೆವಾಗ   ಗಾಢ  ಸ್ನೇಹ,   ಪ್ರೀತಿಯ ಮೆರವಣಿಗೆ.   ಮಾತು   ಮೌನಗಳ   ಜಾಲದಲಿ ತುಂಬು  ಮಮತೆಯ  ತೋರಣ. ದಾರಿ ಸವೆಯು ತಿದೆ, ಸುತ್ತಲಿನ ಮರಗಿಡಗಳ ನೆರಳು ದಟ್ಟವಾಗು ತಿದೆ.


ಕೆಳಗೆ ಬೀಳುವ  ಈ ಎಲೆಗಳಿಗೆ  ಮೊದಲ ನೆನಪು  ಉಳಿದಿರಲಾರದೋ  ಕಾಣೆ.   ಹ್ಞಾಂ ! ನದಿಯ  ತೀರದಲ್ಲಿ ಕುಳಿತುಕೊಂಡಾಗ   ಅವ ವಿನಾಕಾರಣ ಋಣದ ಕಲ್ಲೆಸೆದು ಅಲೆಯೆಬ್ಬಿಸೋ ನು, ಆಗೆಲ್ಲ ಸ್ನೇಹದ ಭಾರ  ಆ ಅಲೆಯ  ಸುಳಿಗೆ ಸಿಲುಕಿ ನಲು ಗ್ತಿತ್ತು. ಆಗ ಅಲ್ಲೊಂದು ನಿರ್ಲಿಪ್ತತೆ ಯ ಆ ತೀರ ದಿಂದ   ನೀಲಿ  ಪಾತರಗಿತ್ತಿ   ಹಾರಿ   ಅವಳ  ಬಳಿ ಕುಳಿತು   ಸಮಾಧಾನಿಸುತಿತ್ತು.  ಆಗ   ಬೀಳೋ ಮುಂಗಾರ  ಮೊದಲ  ಹನಿ  ತಪತಪನೆ  ಸುರಿದು ತಂಪೆರೆಯುತಿತ್ತು  ಜೊತೆಗೆ  ಇಳೆಯಂತೆ   ಅವಳು ತೋಯ್ದು  ತಣಿಯುತಿದ್ದಳು.  ಮಳೆಯೆಂದರೆ ಮಮತೆಯ ಸಂಕೋಲೆನೆ ಅಲ್ವಾ?


ಕಾಯುವ  ಅವಳಿಗೆ  ಇದೆಲ್ಲ ನಿತ್ಯ ಸಂಜೆ ಮಲ್ಲಿಗೆ ಯೇ,  ಮಾಲೆ ಕಟ್ಟೋ  ಉತ್ಸಾಹದಲ್ಲಿ,  ಬಾಡಿದ ಹೂಗಳನ್ನು   ಬದಿಗಿಡದೆ,  ಆಸ್ವಾಧಿಸುತ್ತ  ಅದರ ಪರಿಮಳ  ಪಸರಿಸಿದ  ಬೆರಗಿಗೆ   ಮುದಗೊಳುತ ದಿನದ ಕೊನೆ ಗಳಿಗೆಯ ಮದ್ದಂತೆ ಅವನ ಅಂಗಳ ದಲೊಂದು ಸುತ್ತು ಹಾಗೆ ಸುಮ್ಮನೆ ಸುತ್ತುತ್ತಿದ್ದಳು ಅವಳು.  ಅವನ  ಎರಡೇ  ಎರಡು   ಮಾತುಗಳ ಮುಂಗಾರಿನಲಿ   ತೋಯುತ  ನಿದ್ದೆಯಲಿ ಮಗ್ಗು ಲಾದಳು…🦋

✍🏻ಶಾಲಿನಿ ರುದ್ರಮುನಿ, ಹುಬ್ಬಳ್ಳಿ