ನಾನು ತೇರಳಿ ಎನ್ ಶೇಖರ್ ಅನುವಾದಿಸಿದ ವಿಶ್ವ ಪ್ರಸಿದ್ಧ ಕವಯಿತ್ರಿ ಕಮಲಾದಾಸ್ ಅವರ ಕೆಲವೇ ಕವಿತೆಗಳನ್ನು ಓದಿರುವೆ. ಅದರ ಪ್ರಕಾರ ನನಗನಿಸಿದ್ದು ಅವರ ಅನುಭವದ ಆಳ, ಅಧ್ಯ ಯನ ಭಾಷೆಯನ್ನು ಸಶಕ್ತವಾಗಿ ಬಳಸಿಕೊಂಡ ಅಭಿವ್ಯಕ್ತಿ ಇಲ್ಲಿಯ ಕವಿತೆಗಳು ಗಮನ ಸೆಳೆಯು ತ್ತವೆ.ಮತ್ತು ಅಂತಹ ವೇದನಾತ್ಮಕ ಸಂವೇದನೆ ಗಳನು ಸೂಕ್ಷ್ಮಗ್ರಾಹಿಗಳಾದ ಅವರು ಹೇಳಿಕೊಳ್ಳುವ ಅನಿವಾರ್ಯತೆ ಮನದ ದುಗುಡ ಗಳ ಅನಾವರಣದ ಬಯಕೆ, ಆಂತರ್ಯದ ಭಾವಕೋಶದಲಿ ಕೊರೆಯುವ ಅದರೊಂದಿಗೆ ಅರಳುವ ಕೆರಳುವ ಭಾವ ತುಡಿತಗಳನು ಕವಿತೆ ಯಾಗಿಸುವ ರೀತಿ ಹೊಸ ಅರ್ಥ, ಹೊಳಹನ್ನು ಬಿಂಬಿಸುತ್ತವೆ. ಈ ತೆರನಾದ ಭಾವದಲಿ ಅರಳಿರು ವುದರಿಂದ ಅವು ಸಶಕ್ತ ವಿಭಿನ್ನ ನೆಲೆಯ ಮತ್ತೊಂದು ಮಗ್ಗುಲಿನ ಶೋಧನೆಯ ಕವಿತೆಗಳಾ ಗುತ್ತವೆ. ಹೇಳುವ ಉತ್ಕಟತೆಯಿಂದ ಅವು ಭಾವ ತೀವ್ರತೆ ಪಡೆಯುತ್ತವೆ. ಮತ್ತು ಆ ಸಂವೇದನೆ ಭಾಷೆಯನ್ನು ಗಡುಸಾಗಿ ಸಶಕ್ತವಾಗಿಸುತ್ತದೆ. ಬಹು ಧೈರ್ಯದಿ ಬರೆದು ಹಗುರಾಗುವ ಸೂಕ್ಷ್ಮತೆ ಅನಿವಾರ್ಯತೆಯನು ಕವಯತ್ರಿ ಅನುಭವಿಸಿ ಬರೆಯುತ್ತಾರೆ. ಅನುಭವಗಳು ಸ್ವಂತವೋ ಎರ ವಲೋ ಅದು ಬೇರೆಯ ವಿಷಯ.. ಆದರೆ ಕವಿತೆಯಾಗಿಸುವಾಗ ಪದ ಪದವೂ ಅನುಭವಿ ಸಿದಲ್ಲಿ, ಪರಕಾಯ ಪ್ರವೇಶಿಸಿ ಆ ಮೆಹಸೂಸಿ ನಲಿ ಬರೆದಲ್ಲಿ ಆ ಕವಿತೆಗಳು ಬಹುಕಾಲ ಸಹೃದ ಯರಲಿ ನಿಲ್ಲುತ್ತವೆ ಅಂತಹ ಭಾವತೀವ್ರತೆ ಸತ್ಯ ಶೋಧನೆ ಮತ್ತು ಮನೋವೈ ಜ್ಞಾನಿಕ ಹಿನ್ನೆಲೆಯ ಲ್ಲಿನ ಸತ್ಯದ ಅನಾವರಣ ಅವರ ಕವಿತೆಗಳಲ್ಲಿ ಇದೆ. ಅಲ್ಲದೆ ಅವರ ಕವಿತೆಗಳಲಿ ಕೌಟುಂಬಿಕ ಬದುಕಿನ ತಲ್ಲಣಗಳಿವೆ ತೊಳಲಾಟಗಳಿವೆ.

ಕಮಲಾದಾಸ್ (ಮಾಧವಿ ಕುಟ್ಟಿ)

“ಕುರುಡಿಯಾದ ಮಡದಿ ಕಳೆದು ಹೋದ ತನ್ನ ಗಂಡನನ್ನು ಹೇಗೆ ಹುಡುಕಿಯಾಳು”

ಅನ್ನುವ ಹಲ ಪ್ರಶ್ನೆಯ ಜೊತೆಗೆ ಹೆಣ್ಣಿನ ಸಂದಿಗ್ಧ ಸ್ಥಿತಿಯನ್ನು ನೆನಪಿ ಸುತ್ತದೆ ಮುಂದುವರೆದು..

“ಕಿವುಡಿಯಾದ ಮಡ ದಿ ತನ್ನ ಗಂಡನ ದನಿಯನ್ನು ಹೇಗೆ ಕೇಳಿಯಾ ಳು”

ಬಹುಶಃ ಇವು “ಅತ್ಯಂತ ಜೀವಿತ ಸಶಕ್ತ ರೂಪಕ ಗಳು” ಅತಿಯಾದ ನಿರ್ಲಿಪ್ತತತೆ ಜಡತ್ವಕ್ಕೆಸಮಾನ ಅನ್ನುವುದನ್ನು ನಿರೂಪಿಸುವ ಸಾಲುಗಳು.ಹೆಣ್ಣಿನ ಲೈಂಗಿಕ ಅತೃಪ್ತತೆಯನ್ನು, ವಾಂಛೆಯ ತುಡಿತ ಮಿಡಿತಳನ್ನು ವಿವಾಹೇತರ ಸಂಬಂಧಗಳಲಿ ಪುನ ರ್ಬಲನವಾಗಿಸುವ,ಪೂರೈಸಿಕೊಳ್ಳುವ ನಿಲುವನ್ನು ಪುಷ್ಟೀಕರಿಸುತ್ತವೆ. ಅದಕೆ ಪ್ರಮುಖ ವಾಗಿ ಅವರ ಅನುಭವದ ಸಂವೇದನೆಯೂ ಇರಬಹುದು. ಮಡಿವಂತ ಸಮಾಜ ಇದನ್ನು ಒಪ್ಪದಿರಬಹುದು. ಆದಾಗ್ಯೂ ಅವರು ದಿಟ್ಟತನದಿಂದ ಬರೆದು ಬಹು ಜನರ ಹುಬ್ಬೇರಿಸುವಂತೆ ಮಾಡಿದ್ದರು. ಕೆಲಸತ್ಯ ಗಳ ಅನಾವರಣಮಾಡಲು ಅವರು ಹಿಂದೆ ಮುಂದೆ ನೋಡದೆ ಪಲಾಯನವಾದದ ಪರಿಯ ಲ್ಲಿ ದಾಖಲಿಸದೆ ನಿಗಧರಿತ ದಿಟ್ಟ ಜಿಜ್ಞಾಸೆಯಲಿ ಮಾನವ ಪ್ರೇಮ ಬಂಧ ಸಂಬಂಧ ಗಳನು ತಮ್ಮ ಕೃತಿಗಳಲಿ ಅನಾವರಣ ಮಾಡಿದರು. ಹಾಗೆಂದು ಅನುಬಂಧಗಳನು ಕೇವಲ ಶಾರೀರಿಕವೆಂದಾಗಿಸ ದೆ ಆತ್ಮಿಕ, ಹೃದಯದ, ಸಂಬಂಧಗಳೂ ತೃಪ್ತಿ ಕಂಡುಕೊಳ್ಳುವ ಮಾರ್ಗವೆಂಬುದು ಅವರ ಜಿಜ್ಞಾಸೆ. ಕನ್ನಡಿ ಕವಿತೆಯಲ್ಲಿ ಸ್ವ ಅವಲೋಕನ ಇದೆ ಅಲ್ಲಿ ವ್ಯಕ್ತಿಯ ಮನಸ್ಸೇ ಕನ್ನಡಿ.. ಅಂತರಾವ ಲೋಕನದ ಕವಿತೆ ಅದು..ಪ್ರೀತಿಯ ಭದ್ರತೆಯನ್ನ ಚಿರಕಾಲ ಅಥವಾ ಜೀವಿತ ಅವಧಿಯುದ್ದಕ್ಕೂ ಬಯಸುವಂತಹ ಹಂಬಲ ಹಾಗೂಅದರ ಸಾಧ್ಯಾ ಸಾಧ್ಯತೆಗಳ ವಿಶ್ಲೇಷಣಾತ್ಮಕ ಅವಲೋಕನ ಈ ಕವಿತೆಯಲ್ಲಿದೆ. “ಈ ರೀತಿಯ ಸಶಕ್ತ ರೂಪಕಗಳ ಜೀವಂತಿಕೆಯ ಸಂವೇದನೆ ಅವರ ಕವಿತೆಗಳಲ್ಲಿ ಸಹಜ ಅನ್ನುವ ರೀತಿಯಲ್ಲಿ ಬಹು ಸಧೃಡ ಭಾಷೆ ಯಲ್ಲಿ ವ್ಯಕ್ತವಾಗುತ್ತದೆ. ಮತವೆಂಬ ಕೊಲೆಗಡು ಕ ಕವಿತೆಯಲ್ಲಿ ಇಡೀ ಜಗತ್ತಿನ ಮಾನವೀಯತೆ ಯ ತೊಟ್ಟಿಲನ್ನು ತೂಗುವ ತಾಯಿ ಕಂಡುಬರು ತ್ತಾಳೆ.

“ನನ್ನ ಮಕ್ಕಳು ಸುಖವಾಗಿ ನಿದ್ರಿಸಲಿ, ನನ್ನ ಕೈಗೆ ಬಂದೂಕು ಕೊಡಿ ಆ ತರಬೇತಿ ಕೊಡಿ”

ಅನ್ನುವಲ್ಲಿ ಅಂತಃಕರಣದ ಕಟ್ಟೆ ಒಡೆದು ಭರಪೂ ತ ಸೆಲೆಯಾಗಿ ಹರಿದಿದೆ. ಮಿಲಿಟಂಟ್ಸಗಳ ತಯಾ ರಿಯ ಫ್ಯಾಕ್ಟರಿಯಾಗಿದ್ದ, ಕೆಲ ರಾಜ್ಯಗಳಲ್ಲಿಆಗಿನ ಪ್ರಸಕ್ತ ವಿದ್ಯಮಾನಗಳಲಿ ಬರೆದ ಸಂವೇದಿಸಿದ ತುಡಿತ ಮಿಡಿತವಾಗಿರಬಹುದು ಹಾಗು ಇಂತಹ ಚಟುವಟಿಕೆಗಳು ಸಾರ್ವಕಾಲಿಕವಾಗಿಯೂ ಜಾಗ ತಿಕವಾಗಿಯೂ ಅಲ್ಲಗಳೆಯುವಂಥದ್ದೇ.. ಅದರ ಲ್ಲಿ ಎರಡು ಮಾತಿಲ್ಲ. ಭವಿಷ್ಯದಲ್ಲಿ ಬದುಕಬೇಕಾ ದ ಜೀವಗಳು ಅವರ ಕಣ್ಣಲ್ಲಿ ಇನ್ನೂ ಬಣ್ಣದ ಹಸಿಗನಸು ಇರುವಾಗಲೇ ಬಣ್ಣರಹಿತ ವಿವರ್ಣ ಗೊಳಿಸಿದ ಸಾವಿನ ದವಡೆಯ ಬದುಕನ್ನು ಅವರಿಗೆ ನೀಡುವುದು ಯಾವ ಪುರುಷಾರ್ಥ ಎಂಬ ಪ್ರಶ್ನೆ ಇಂತಹ. ಕವಿತೆಗಳಲ್ಲಿ ನಿರಂತರ ಕಾಡುವಂಥದ್ದು.. ಒಂದೊಂದು ಋತು ಒಬ್ಬೊ ಬ್ಬ ಗಂಡಸು” ಈ ಕವಿತೆ ಗಂಡಿನ ವಿಭಿನ್ನ ಮುಖ ಗಳನ್ನು ಅರ್ಥಾತ್ ಸ್ವಭಾವಗಳನ್ನು ಪರಿಚಯಿಸು ತ್ತದೆ. ಋತುಮಾನಗಳ ಏರು ಪೇರು ಪ್ರಕೃತಿಯಲ್ಲಿ ಕಾಣಸಿಗುವಂತೆ ಮಾನವ ಸಹಜ ಪ್ರಕೃತಿಯೂ ಏರುಪೇರಿನದೇ..!! ಒಬ್ಬ ವ್ಯಕ್ತಿ ಹಲವರ ಪ್ರತೀಕ ಅರ್ಥಾತ್ ಹಲವು ಸ್ವಭಾವಗಳ ಪ್ರತೀಕ ಅಥವಾ ಉಪಮೆಯಾಗಬಲ್ಲ ಗಂಡಿನ ಸ್ವಭಾವಗಳ,ಪ್ರಕೃತಿ ಪುರುಷ ನಿಸರ್ಗದತ್ತ ಸ್ವಭಾವ, ವಿಕಾರಗಳ ಮೀಮಾಂಸೆ ಇಲ್ಲಿ ಅಡಗಿದೆ. “ಆಮ್ಲತ್ವ ಪ್ರತಿಮೆ ನನ್ನ ಬಟ್ಟಲಲಿ” ಎಂತಹ ಡೇರಿಂಗ್ ವಾಕ್ಯ ವಿದು ..! ಸಹಜತೆ ಅದರ ಬೆನ್ನ ಹಿಂದೆಯೇ ಅಸಹಜತೆ, ಪ್ರಕೃತಿ ಅದರ ಹಿಂದೆಯೇ ವಿಕೃತಿಗಳ ಹಾಗೂ ಅದರೊಂದಿಗೆ ಬದುಕುವುದರ ಅನಿವಾ ರ್ಯತೆ ಮಾನಸಿಕ ಅಸಮತೋಲನವನ್ನು ಹೊರ ಹಾಕುವ ಪರಿಸ್ತಿಮಿತಕ್ಕೆ ಎಳೆದುಕೊಳ್ಳುವಮನೋ ದೌರ್ಬಲ್ಯ ಮತ್ತು ವಿಕಾರತೆ, ಆಳದಲಿ ಕಾಲಾಗ್ನಿ ಹೊಂದಿದ ಕಡಲಿನ ಅಲೆಯ ಹೊಯ್ದಾಟಗಳನು ಇವರ ಕವಿತೆಗಳಲಿ ಕಾಣುತ ಅವರ ಅಪರಾಧಿ ಗಳು’ ಕವಿತೆಯಲಿ ಪ್ರಣಯದ ಉತ್ಕಟ ಉನ್ಮಾ ದವೂ, ವಿರಹಾಗ್ನಿಯ ತಣಿಸುವ ಮಿಲನೋತ್ಸಾಹ ವನು ಬೆಚ್ಚಿಬೀಳಿಸುವ ಅಭಿವ್ಯಕ್ತಿಯಲಿ ವ್ಯಕ್ತಪಡಿ ಸುತ್ತಾರೆ. ಸಂಪೂರ್ಣ ಹೆಣ್ತನ ಸಂವೇದನೆ ಎಂದರೆ ಅವಳ ದೇಹ, ಮನಸ್ಸು, ಭಾವನೆ, ಅನು ಭವಗಳೇ ಆಗಿವೆ. ಮುಚ್ಚಿಡದ ಸಂವೇದನೆಗಳನು ನಿರ್ಭಯವಾಗಿ ಹೇಳುತ್ತಾರೆ. ಕಾಮದ ಅಗತ್ಯತೆ ಬಗ್ಗೆ ಮನುಷ್ಯ ಸಂಬಂಧಗಳ ಬಗ್ಗೆ ಕಾಮಗಳಲಿ ಪರ್ಯವಸಾನಗೊಂಡ ಸಂಬಂಧಗಳ ಬಗ್ಗೆಯೂ ಅವರ ಕವಿತೆಗಳಿವೆ.

“ಪ್ರೀತಿಸಲು ನೂರಾರು ಗಂಡಸು ಸಿಗಬಹುದು ಅದಕೆ ಕೊರತೆಯೇನೂ ಆಗದು.. ಆದರೆ ಅದರ ಮುಂದಿನ ಜೀವನ ನೀನು ಒಂಟಿಯಾಗಿ ಕಳೆಯಬೇಕಾಗುತ್ತದೆ. ಬಣ್ಣಗೆಟ್ಟ ಬದುಕು ನಿನ್ನದಾಗುತ್ತದೆ..”

ಅನ್ನುವ ಸಾಲು ಬಹು ಅರ್ಥಪೂರ್ಣ.., ಇದನ್ನು ಯೌವನ ಮುಗಿದ ಬಳಿಕ, ಅಥವಾ ದೇಹದ ಅಹಂ ಮುಗಿದ ಬಳಿಕ ಅಥವಾ ಕೆಲಸ ಮುಗಿದ ಬಳಿಕ ಕೈತೊಳೆದುಕೊಳ್ಳುವ ಸ್ವಾರ್ಥ, ಸಮಯ ಸಾಧಕ ಬುದ್ಧಿ, ಅಥವಾ ದುಡುಕು ನಿರ್ಧಾರಗಳು, ಬದುಕುವ ಅನಿವಾರ್ಯತೆ, ಮೋಸದ ಜಾಲ, ಕಟ್ಟಕಡೆಯ ಸತ್ಯ ಅದುವೇ ಸಂಬಂಧಗಳ ಶಿಥಿ ಲತೆ, ಇದ್ದಾಗಿನ ನಮ್ಮದು ಇಲ್ಲದಾಗಿನ ಪರಾ ಧೀನ ಬದುಕು ಹೀಗೆ…., ಬಹುಶಃ ಇದು ನನ್ನ ಪ್ರಕಾರ ಬಹು ಅರ್ಥವುಳ್ಳ ಮಲ್ಟಪಲ್ ದೃಷ್ಟಿ ಕೋನವುಳ್ಳ ಬಹು ಪ್ರತಿಫಲಿತ ಸಾಲು ಮತ್ತು ಇದು ಜೀವನದ ಅಂತಿಮ ಸತ್ಯ.. ಇಂತಹ ಸಾಲುಗಳಿಂದ ಕವಿತೆ ಜೀವಂತಿಕೆ ಕಾಯ್ದುಕೊಳ್ಳು ತ್ತದೆ. ಮನೋವೈಜ್ಞಾನಿಕ ಹಿನ್ನೆಲೆಯಲ್ಲೂ, ಲೈಂಗಿ ಕತೆಯ ಆಧರಿಸಿ ಮನುಜ ಸ್ವಭಾವಗಳನ್ನು ಚಿತ್ರಿ ಸುವ ಸಹಜತೆಯಲ್ಲೂ ಕವಿತೆಗಳು ಅಭಿವ್ಯಕ್ತಿ ಗೊಂಡಿವೆ. ಮನುಷ್ಯನ ವಾಂಛೆ, ಆಸೆ, ಭಾವನೆ ಸಾಮಾನ್ಯ ಮತ್ತು ಸಹಜ ಅನ್ನುವ ರೀತಿಯಲಿ ಅವರ ಕವಿತೆಗಳು ಬಿಂಬಿತವಾಗಿವೆ. ನಿರ್ಭಯ ವಾಗಿ ಸಶಕ್ತ ಅಭಿವ್ಯಕ್ತಿಯಲಿ ನಿರೂಪಿಸುತ್ತವೆ. ತೇರಳಿ ಎನ್ ಶೇಖರ್ ರ ಅನುವಾದ ಕೂಡ ಸಶಕ್ತ ಎಂದು ಬೇರೆ ಹೇಳಬೇಕಾದ್ದಿಲ್ಲ..!!

ತೇರಳಿ ಎನ್ ಶೇಖರ್

🔆🔆🔆

✍️ ಅನಸೂಯ ಜಹಗೀರದಾರ. ಕೊಪ್ಪಳ