ಮೊದ ಮೊದಲು ಗುಡ್ಡ, ಗುಹೆಗಳಲ್ಲಿ ಬದುಕು ವಂತಹ ಮಾನವ ಇಂದು ನಾಗರಿಕತೆಯ ಶಿರೋ ರತ್ನ ಎನಿಸಿಕೊಂಡಿರುವನು. ಇಷ್ಟೆಲ್ಲಾ ಆತ ಬೆಳೆ ಯಬೇಕಾದರೆ, ಅವನಲ್ಲಿನ ಆಸೆಯೇ ಕಾರಣ. ಬದುಕು ಬಂಗಾರವಾಗಿಸಬೇಕಾದರೆ ವ್ಯಕ್ತಿ ಆಶಾವಾದಿಯಾಗಿರಬೇಕು. ಕೇವಲ ಆಶಾವಾದಿ ಯಾಗಿದ್ದಾರೆ ಪ್ರಯೋಜನವೆನು? “ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ” ಎಂಬ ಗಾದೆಯಂತೆ ಬರೀ ಬದುಕಿನಿಡೀ ಕನಸುಗಳನ್ನೇ ಕಾಣುತ್ತಿದ್ದರೆ ಸಾಲದು. ಅದನ್ನು ನನಸಾಗಿಸುವ ಛಲ ಆತನಲ್ಲಿ ಬಂದಾಗ ಮಾತ್ರ ಬಯಸಿದ ಭಾಗ್ಯ ಬಂದೊದಗುವುದು.
ವ್ಯಕ್ತಿಯಾದವನು ಛಲಗಾರನಾಗಿರಬೇಕು. ಏನೇ ಬಂದರೂ ಎದುರಿಸುವೆನೆಂಬ ಕೆಚ್ಚೆದೆ ಇರಬೇಕು. ಆಗಲೇ ಬದುಕಿಗೊಂದು ಅರ್ಥ ಬರುವುದು. “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸ್ಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕೆಂದೆಂದು”… ಎಂಬಂತೆ ಅದು ನನ್ನಿಂದಾಗದು, ಇದು ನನ್ನಿಂದಾಗದು ಎಂದು ಕುಳಿತರೆ ಜೀವನದಲ್ಲಿ ಏನೂ ಸಾಧಿಸಲಾ ಗದು. ಹೀಗಾಗಿ ಮಾನವನಿಗೆ ಆತ್ಮಸ್ಥೈರ್ಯ ಮುಖ್ಯ. ಅದೊಂದೇ ಬದುಕಿಗೆ ದಾರಿ.
ಒಬ್ಬ ವ್ಯಕ್ತಿಯ ಸಿರಿವಂತಿಕೆಯನ್ನು ಮೀರಿಸ ಬೇಕು ಎಂದು ಇನ್ನೊಬ್ಬ ವ್ಯಕ್ತಿ ಛಲ ತೊಡುವುದರಲ್ಲಿ ತಪ್ಪೇನಿಲ್ಲ. ಆದರೆ ಮಾನವೀಯತೆಯನ್ನು ಮರೆತು, ಪಶುಸದೃಶನಾಗಿ ಗಳಿಸಿದ ಗಳಿಕೆಗೆ ಬೆಲೆ ಯಿಲ್ಲ. ತನ್ನ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ ಸಂಪಾದಿಸುವುದು ಉಚಿತ. ಇನ್ನೊಬ್ಬರನ್ನು ತುಳಿದು ಬದುಕುವ ಪ್ರವೃತ್ತಿಯಾಗಬಾರದು. “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ಗಾದೆ ಯಂತೆ ನಮ್ಮ ಸಾಮರ್ಥ್ಯವನ್ನರಿತು ಅಷ್ಟರಲ್ಲಿ ಯೇ ಇರುವುದು ಗೌರವಾರ್ಹವಾಗಿದೆ. ಎಷ್ಟೋ ಜನರಿಗೆ ಧನ ಪಿಶಾಚಿ ಬಡಿದಿರುವುದು. ಅವರು ಅಂದು ಕೊಂಡಂತೆ ಎಲ್ಲವನ್ನೂ ಹಣದಿಂದಲೇ ಪಡೆಯಲು ಅಸಾಧ್ಯ.
“ವ್ಯಕ್ತಿಯಾದವನಿಗೆ ಆಸೆಯಿರಬೇಕು ಆದರೆ ದುರಾಸೆಯಿರಬಾರದು”. ಅಕ್ರಮವಾಗಿ ಗಳಿಸಿದ ಗಳಿಕೆಯು ಕಾಲೊಳಗಿನ ಎಕ್ಕಡಕ್ಕೆ ಸಮ. ವ್ಯಕ್ತಿ ಯಾದವನು ಸುಖವಾಗಿರಬೇಕು. ಆ ಸುಖ ಎಲ್ಲಿದೆ? ಹಣ, ಆಸ್ತಿ, ಅಂತಸ್ತು… ಇವುಗಳಲ್ಲಿದೆ ಯೇ? ಕಾರು, ಬಂಗಲೆಗಳಲ್ಲಿದೆಯೇ? ಖಂಡಿತ ಇಲ್ಲ. ಆ ಸುಖವಿರುವುದು ನಮ್ಮ ಅಂತಾರಾಳ ದಲ್ಲಿ. ಇಂದು ಅದೆಷ್ಟೋ ಸಿರಿವಂತ ಕುಟುಂಬಗ ಳಲ್ಲಿ ನೆಮ್ಮದಿ ಎಂಬು ದು ಮರೀಚಿಕೆಯಾಗಿದೆ. ಎಷ್ಟೇ ಐಶ್ವರ್ಯ ಹೊಂದಿದ್ದರೂ ಕೂಡ ನೆಮ್ಮದಿ ಯಿಂದ ಬದುಕದ ಸ್ಥಿತಿಯಲ್ಲಿ ಅನೇಕ ಶ್ರೀಮಂತರಿ ದ್ದಾರೆ. ಆದರೆ ನಾಳೆಹೇಗೆ ಎಂಬುದರ ಪರಿವೆಯೆ ಇಲ್ಲದ ಕೋಟ್ಯಾನುಕೋಟಿ ಬಡತನದ ಜನ ನೆಮ್ಮದಿ, ಸಂತೋಷದಿಂದ ಬದುಕಿದ್ದಾರೆ.” ಆಸೆಯೇ ದುಃಖಕ್ಕೆ ಮೂಲ” ಎಂಬ ಬುದ್ಧನ ಮಾತು ಇಲ್ಲಿ ಸ್ಮರಣಾರ್ಹವಾಗಿದೆ. ವ್ಯಕ್ತಿಗೆ ತನ್ನ ಅವಶ್ಯಕತೆ ಹಾಗೂ ಸಾಮರ್ಥ್ಯಗಳಿಗನುಗುಣ ವಾದ ಆಸೆಗಳಿರಬೇಕು. ನಿಲುಕದ ನಕ್ಷತ್ರಕ್ಕೆ ಕೈ ಹಾಕಬಾರದು. ಹಾಗೇನಾದರೂ ಮಾಡಿದರೆ ನಿರಾಸೆಯೇ ಆತನಿಗೆ ಸಿಗುವುದು. ಆದ್ದರಿಂದ ವ್ಯಕ್ತಿ ಬಯಸುವ ಆಸೆಯಲ್ಲಿ ಮಿತಿಯಿದ್ದರೆ ಖಂಡಿತ ಆತನಿಗೆ ಹಿತವಾದ ಮನಸ್ಸು ಇರುವುದು. ನವಿಲು ಕುಣಿಯುವುದು ನೈಸರ್ಗಿಕ, ಆದರೆ ಅದನ್ನು ಕಂಡು ಕೆಂಭೂತ ಕುಣಿಯಬಾರದು. ಹಾಗೇನಾದರೂ ಆದರೆ ಹಾಸ್ಯಾಸ್ಪದವಾಗುವು ದು. ಅದೇ ತೆರನಾಗಿ ಒಬ್ಬರ ಕಂಡು ಅದರಂತೆ ನಾವೂ ಮಾಡಬಾರದು. ಒಂದು ವೇಳೆ ಮಾಡ ಬೇಕೆನಿಸಿದರೆ ಅದು ತನ್ನ ಸಾಮರ್ಥ್ಯಕ್ಕೆ ಅನು ಕೂಲವೇ ಎಂಬುದರ ಅರಿವು ಇರಲೇಬೇಕಾಗು ವುದು.
ಇಂದು ಅತಿಯಾಸೆಯಿಂದ ಅದೆಷ್ಟೋ ಜನ ತಮ್ಮ ಸುಂದರ ಬದುಕಿನ ಸೌಂದರ್ಯವನ್ನೇ ಕಳೆದುಕೊಂಡಿದ್ದಾರೆ. ಸುಖವೆಂಬುದು ಮನಸ್ಸಿನ ಆಕಾಂಕ್ಷೆಗಳ ಮೇಲೆ ಅವಲಂಬಿತವಾಗಿದೆ. ಆದ್ದ ರಿಂದ ನಾವು ನಮ್ಮ ಯೋಗ್ಯತೆಗೆ ಅನುಗುಣ ವಾಗಿ ಬಾಳಬೇಕು. ಆಗಲೇ ಸೌಖ್ಯದಿಂದ ಇರಲು ಸಾಧ್ಯ. “ಮಿತಿಯಿರದ ಆಸೆಯಲ್ಲಿ ಖಂಡಿತ ಹಿತವಿಲ್ಲ”.
✍️ಶಿವಾನಂದ ನಾಗೂರ, ಶಿಕ್ಷಕರು ಧಾರವಾಡ