ರೇಣುಕಾ ಕೋಡಗುಂಟಿ ಅವರದು ರಾಯಚೂರು ಜಿಲ್ಲೆಯ ಮಸ್ಕಿ. ಸಧ್ಯ ಬೆಂಗಳೂರಿನಲ್ಲಿ ವಾಸವಾ ಗಿದ್ದಾರೆ. ಸಾಹಿತ್ಯಿಕ ಮತ್ತು ಸಂಶೋಧನಾತ್ಮಕ ಕ್ರಿಯೆಗಳಲ್ಲಿ ತೊಡಗಿಕೊಂಡಿರುವ ಇವರು ಹಲವಾರು ಗ್ರಂಥಗಳನ್ನು ಪ್ರಕಟಿಸಿದ್ದಾರೆ.
‘ಕರ್ನಾಟಕದಲ್ಲಿ ಶವಸಂಸ್ಕಾರ’ ಎನ್ನುವ ಹೆಸರಿ ನಲ್ಲಿ ೨೦೦೯ ರಲ್ಲಿ ಮೊದಲ ಸಂಪುಟ ಪ್ರಕಟ ವಾಗಿದೆ. ಇದು ಬಂಡಾರ ಪ್ರಕಾಶನ, ಮಸ್ಕಿ ಇವರಿಂದ ಪ್ರಕಟವಾಗಿದೆ. ‘ಕರ್ನಾಟಕದ ಹಿಂದು ಳಿದ ಮತ್ತು ಬುಡಕಟ್ಟು ಸಮುದಾಯಗ ಳಲ್ಲಿ ಶವಸಂಸ್ಕಾರ’ ಎಂಬುದು ಎರಡನೇ ಸಂಪುಟ ವಾಗಿದ್ದು, ಇದು ೨೦೨೦ ರಲ್ಲಿ ಸಾಧನ ಪ್ರಕಾಶನ ಬೆಂಗಳೂರು ಇವರಿಂದ ಪ್ರಕಟಗೊಂಡಿದೆ.
ಮನುಷ್ಯ ಮೊದಮೊದಲು ಶುರುಮಾಡಿದ ಆಚರಣೆಗಳಲ್ಲಿ ಈ ಶವಸಂಸ್ಕಾರವೂ ಒಂದು. ಇದು ಎಲ್ಲೆಡೆಒಂದೇ ರೀತಿಯದಲ್ಲ. ಭಿನ್ನ ಪ್ರದೇಶ ಗಳ ಭಿನ್ನ ಸಮುದಾಯಗಳು ತಮಗೆ ಅನುಕೂಲ ವೆನಿಸುವ ಮತ್ತು ತಮ್ಮ ಧಾರ್ಮಿಕ/ಸಾಮಾಜಿಕ/ಪ್ರಾಕೃತಿಕ ಸನ್ನಿವೇಶ ಅಥವಾ ಭಾವನೆಗಳಿಗೆ ಅನುಗುಣವಾಗಿ ವಿವಿಧ ಪದ್ಧತಿಗಳನ್ನು ಅಳವಡಿ ಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಹೂಳು ವುದು, ಸುಡುವುದು, ನೀರಿನಲ್ಲಿ ಬಿಡುವುದು, ಬಯಲಿಗೆ ಇರಿಸುವುದು ಮುಂತಾದ ವಿಧಾನಗ ಳನ್ನು ಈ ಶವಸಂಸ್ಕಾರದಲ್ಲಿ ಕಾಣಬಹುದು.
ಮಾನವನ ಸಾಮಾಜಿಕ ಇತಿಹಾಸದ ಅಧ್ಯಯನ ದಲ್ಲಿ ಶವಸಂಸ್ಕಾರ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದೊಂದು ಜನಪದ ಆಚರಣೆಯಂ ತೆಯೂ ಅಧ್ಯಯನಕ್ಕೆ ಒಳಪಟ್ಟಿದೆ.ಅದರಂತೆಯೇ ಈ ಗ್ರಂಥದಲ್ಲಿ ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಕುರಿತಂತೆ ಸುಮಾರು ೨೧ ಲೇಖನಗಳಿದ್ದು ವಿವಿಧ ಮಾದರಿಯಲ್ಲಿ ಅಧ್ಯಯ ನಕ್ಕೆ ಒಳಪಡಿಸಲಾಗಿದೆ. ಈ ಪುಸ್ತಕದಲ್ಲಿರುವ ೨೧ ಲೇಖನಗಳು, ೨೧ ವಿವಿಧ ಸಮುದಾಯಗಳ ಕುರಿತು ಮಾತನಾಡುತ್ತವೆ. ಅವುಗಳೆಂದರೆ ಇರುಳಿ ಗ, ಕರ್ ಕರ್ ಮುಂಡ, ಕಾಡುಕುರುಬ, ಕಾಡುಗೊ ಲ್ಲ,ಕುಡುಬಿ, ಕೊರಚ, ಗಂಟಿಚೋರ್, ಗೊರವ, ಗೊಂದಲಿಗ, ಚೆನ್ನದಾಸ್, ಜೇನು ಕುರುಬ, ತಿಗಳ, ದುರುಗಿ ಮರಗಿ, ಮ್ಯಾಸಬೇಡ, ಪಾರ್ದಿ, ಪುರಾಣಿ ಸೋಲಿಗ, ಲಂಬಾಣಿ, ವಡ್ಡ (ಭೋವಿ), ಹಂಡಿಜೋಗಿ, ಹಕ್ಕಿಪಿಕ್ಕಿ, ಮಾಂಗ್ ಗಾರುಡಿ.
ಇವುಗಳಲ್ಲದೆ ಇನ್ನುಳಿದ ಎಲ್ಲಾ ಬುಡಕಟ್ಟುಗಳ ಪಟ್ಟಿಯನ್ನು ಪುಸ್ತಕದ ಕೊನೆಯಲ್ಲಿಕೊಡಲಾಗಿದೆ. ಮೊದಲ ಮತ್ತು ಈ ಸಂಪುಟ ಸೇರಿ ಬಹುತೇಕ ಸಮುದಾಯಗಳನ್ನು ಅಧ್ಯಯನದ ಅಡಿಯಲ್ಲಿ ತರಲಾಗಿದೆ. ಉಳಿದಂತೆ ಈ ಯೋಜನೆಯನ್ನು ಇನ್ನೂ ಸಹ ಮುಂದುವರೆಸುವ ಸುಳಿವನ್ನು ಸಂಪಾದಕರು ನೀಡಿದ್ದಾರೆ. ಅಲ್ಲದೆ ಒಂದು ಲೇಖನದಿಂದ ಒಂದು ಸಮುದಾಯದ ಶವಸಂಸ್ಕಾರ ಪದ್ಧತಿಯನ್ನು ಸಂಪೂರ್ಣವಾಗಿ ಹಿಡಿದಿಡುವುದು ಕಷ್ಟ. ಅಲ್ಲದೇ ಸಮುದಾಯ ಒಂದೇ ಆಗಿದ್ದರೂ ಬೇರೆ ಬೇರೆ ಆಚರಣೆಗಳು ಇರುವುದನ್ನು ಕಾಣಬಹುದು. ಅದನ್ನೂ ಸಹ ಪ್ರಸ್ತುತ ಗ್ರಂಥದಲ್ಲಿ ಚರ್ಚಿಸಲಾಗಿದೆ.
ಬಹುತೇಕ ಸಿನಿಮಾಗಳು, ಅಥವಾ ಇನ್ನಿತರ ಜನಪ್ರೀಯ ಮಾಧ್ಯಮಗಳಲ್ಲಿ ನಾವು ಕಾಣುವು ದು ಸುಡುವುದು, ಇಲ್ಲವೆ ಹೂಳುವುದು. ಅದೂ ಸಹ ಒಂದೇ ರೀತಿಯ ಆಚರಣೆಗಳನ್ನು ತೋರಿಸು ವುದರಲ್ಲಿ ಅವು ಸುಮ್ಮನಾಗಿಬಿಡುತ್ತವೆ.ಅಷ್ಟಕ್ಕೂ ಶವಸಂಸ್ಕಾರವನ್ನು ವಿವರವಾಗಿ ತೋರಿಸಲಿಕ್ಕೆ ಅದೇನೂ ಅವುಗಳ ಮೂಲ ಉದ್ದೇಶವಲ್ಲ. ಕಾಲ ಬದಲಾದಂತೆ ಎಲ್ಲಾಆಚರಣೆಗಳು ಬದಲಾವಣೆಗೆ ಒಳಪಡುತ್ತಿರುವುದನ್ನು ನಾವು ಕಾಣುತ್ತೇವೆ. ಇದೂ ಸಹ ಅದರಿಂದ ಹೊರತೇನಲ್ಲ. ಆದರೆ ಬೇರೆ ಆಚರಣೆಗಳಿಗೆ ಹೋಲಿಸಿದರೆ ಇದರ ಬದಲಾವಣೆಯ ವೇಗ ಕಡಿಮೆಯಷ್ಟೆ. ಮಹಾನಗ ರಗಳ ಆಧುನಿಕ ಜೀವನದ ಗತಿಯಲ್ಲಿ ಶವಸಂಸ್ಕಾ ರವು ಶವಾಗಾರ/ಚಿತಾಗಾರಗಳ ಮೂಲಕವೇ ನೆರವೇರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ವೇ ಈಆಚರಣೆಗಳು ತಮ್ಮ ಅಸ್ತತ್ವವನ್ನು ಉಳಿಸಿ ಕೊಂಡಿವೆ. ಅದೂ ಸಹ ಕಣ್ಮರೆಯಾಗುವ ದಿನ ಗಳು ಸಹ ಬರಬಹುದು. ಆ ಕಾಲ ಬರುವ ಮುನ್ನವೇ ಇಂತಹ ಅಧ್ಯಯನಗಳ ಮೂಲಕ ಆ ಆಚರಣೆಗಳನ್ನು ದಾಖಲು ಮಾಡುವುದು ಮಹತ್ತ ರವಾದ ಮತ್ತು ಅನಿವಾರ್ಯವಾದ ಕಾರ್ಯವಾ ಗಿದೆ. ಮತ್ತದನ್ನು ಈ ಸಂಪುಟಗಳು ಮಾಡಿವೆ ಎಂದು ಹೇಳಬಹುದು.

ಬಹುಸಂಸ್ಕೃತಿಯನ್ನು ನಿರಾಕರಿಸುತ್ತಿರುವ ಈ ಹೊತ್ತಿನಲ್ಲಿ ಅದನ್ನು ಕಾಪಿಡುವುದು ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಒಂದೊಂದು ಆಚರಣೆಯೂ ಸಹ ತನ್ನದೇಯಾದ ಹಿನ್ನೆಲೆಯ ನ್ನು ಒಳಗೊಂಡಿರುತ್ತದೆ. ಅದನ್ನು ಹುಡುಕಿ ತೆಗೆಯುವುದು ಸಂಶೋಧನೆಯ ಮುಖ್ಯ ಕೆಲಸ. ಪ್ರತಿ ಸಮುದಾಯವೂ ಸಹ ತನ್ನ ಸುತ್ತಮುತ್ತಲ ಪರಿಸ ರದ ಸಸ್ಯಗಳೊಂದಿಗೆ, ಪ್ರಾಣಿಗಳೊಂದಿಗೆ ಅವಿನಾ ಭಾವ ಸಂಬಂಧವನ್ನು ಹೊಂದಿರುತ್ತದೆ. ಅದನ್ನು ಶವಸಂಸ್ಕಾರದಲ್ಲಿಯೂ ಕಾಣಬಹುದು. ತಮ್ಮ ಪುರಾತನರಿಗೆ ಪೂಜಿಸಲು ಕುರಿ,ಕೋಳಿ ಮುಂತಾದವನ್ನು ಬಲಿಕೊಡುವ ಪದ್ಧತಿಗಳು ಸಹ ಇದರ ಹಿನ್ನೆಲೆಯಲ್ಲಿವೆ. ಉದಾಹರಣೆಗೆ ಇರುಳಿ ಗರು ಸತ್ತವರ ಶವವನ್ನು ಕಲ್ಲುಗಳಿಂದ ಮುಚ್ಚಿಡು ತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಇತರ ಸಮುದಾಯದವರೊಂದಿಗೆ ಕೂಡಿ ಬದುಕ ಬೇಕಾಗಿರುವುದರಿಂದ, ಹಾಗೆ ಕಲ್ಲುಗಳಿಂದ ಮುಚ್ಚಿಡುವುದರಿಂದ ಶವವಾಸನೆಬರುವುದರಿಂದ ಆಚರಣೆಯಲ್ಲಿ ಬದಲಾವಣೆ ಮಾಡಿಕೊಳ್ಳ ಬೇಕಾದ ಅನಿವಾರ್ಯ ಸ್ಥಿತಿ ಉಂಟಾಗುತ್ತದೆ.
ಆತ್ಮದ ಇರುವಿಕೆ ಮತ್ತು ಮರುಜನ್ಮದ ಮೇಲಿನ ನಂಬಿಕೆಗಳಿಗನುಗುಣವಾಗಿ ಸಗ ಆಚರಣೆಗಳು ರೂಢಿಯಲ್ಲಿರುತ್ತವೆ. ಸೂತಕದ ಹಿನ್ನೆಲೆಯೂ ಸಹ ಇದರ ವ್ಯಾಪ್ತಿಯಲ್ಲಿದೆ. ಸಾಮಾನ್ಯವಾಗಿ ಗಂಡ ಸತ್ತರೆ ಹೆಣ್ಣನ್ನು ವಿಧವೆ ಮಾಡುವ ಪದ್ಧತಿಯನ್ನು ಎಲ್ಲೆಡೆ ಕಾಣುತ್ತದೆ. ಆದರೆ ಕಾಡುಗೊಲ್ಲರಲ್ಲಿ ಇದು ಬೇರೆಯದೇ ರೀತಿಯಲ್ಲಿದೆ. ಗಂಡ ಸತ್ತರೂ ಕೃಷ್ಣನೇ ಅವರ ಗಂಡ ಎನ್ನುವ ನಂಬಿಕೆ ಅವರಲ್ಲಿ ರುವುದರಿಂದ, ಹೆಣ್ಣಿನ ತಾಳಿ ಕೀಳುವುದಾಗಲಿ, ಕುಂಕುಮ ಅಳಿಸುವುದಾಗಲಿ, ಬಳೆ ಒಡೆಯುವು ದಾಗಲಿ ಮಾಡುವುದಿಲ್ಲ.ಒಟ್ಟಿನಲ್ಲಿ ಶವಸಂಸ್ಕಾರ ಕುರಿತು ವಿವಿಧ ವಿಷಯಗಳನ್ನು ಈ ಗ್ರಂಥದಲ್ಲಿ ದಾಖಲು ಮಾಡಲಾಗಿದೆ. ಬಿಡಿಬಿಡಿಯಾದ ಜೊತೆಗೆ ಸಮಗ್ರವಾದ ವಿವರಗಳನ್ನು ಈ ಕೃತಿಯಲ್ಲಿ ಕಟ್ಟಿ ಕೊಡಲಾಗಿದೆ.
