ಶಿವ್ಲಿ ಹಾಗೂ ಶಶಿ ಒಂದೇ ತರಗತಿಯಲ್ಲಿ ಓದುತ್ತಿ ರುವ ಮಕ್ಕಳು. ಇಬ್ಬರು ತುಂಬಾ ಆತ್ಮೀಯ ಸ್ನೇಹಿತರಾಗಿದ್ದು, ಎರಡನೇ ತರಗತಿಯಲ್ಲಿ ಓದು ತ್ತಿದ್ದರು. ಶಿವ್ಲಿ ಮನೆಯ ಪಕ್ಕದಲ್ಲಿ ಶಶಿಯ ಮನೆ.ಆದರೆ ಎರಡೂ ಮನೆಯವರ ನಡುವೆ ಬಹಳಷ್ಟು ವರ್ಷಗಳಿಂದ ವೈರತ್ವವಿರುವುದರಿಂದ ಎರಡೂ ಮನೆಯ ಮದ್ಯದಲ್ಲಿ ಆಳೆತ್ತರರ ಬೇಲಿ ಹಾಕಲಾ ಗಿತ್ತು. ಒಮ್ಮೆ ಶಶಿಯ ಮನೆಯಲ್ಲಿ ಬೆಳೆಸಿದ ಹೂಬಳ್ಳಿ ಬೇಲಿ ದಾಟಿ ಆಕಡೆ ಹಬ್ಬಿದಾಗ ಮುಲಾ ಜಿಲ್ಲದೆ ಶಿವ್ಲಿಯ ಮನೆಯವರು ಕತ್ತರಿಸಿ ಹಾಕಿ ದ್ದರು. ತನ್ನ ಮನೆಯವರ ವರ್ತನೆ ಶಿವ್ಲಿಗೆ ಬೇಸರ ತರಿಸಿತ್ತು. ಎರಡೂ ಮನೆಯವರ ನಡುವೆ ಪರಸ್ಪರ ಮಾತುಗಳಿರಲಿಲ್ಲ. ಮಕ್ಕಳಿಗೂ ಅದೇ ರೀತಿ ತಾಕೀತು ಮಾಡಿರುವುದರಿಂದ ಶಾಲೆಯಲ್ಲಿ ನಡೆಯುತ್ತಿದ್ದಚ ಶಿವ್ಲಿ ಮತ್ತು ಶಶಿಯ ಮಾತುಕತೆ, ಆಟಗಳು ಇನ್ನೇನು ಮನೆ ಸಮೀಪದಲ್ಲಿದೆ ಎನ್ನುವಾಗ ನಿಂತು ಹೋಗುತ್ತಿತ್ತು. ಮನೆ ಹತ್ತಿರ ಬಂದಾಗ ಇಬ್ಬರೂ ಅಪರಿಚಿತರಂತೆ ಸಾಗಬೇಕಾ ದುದು ಅವರಿಗೆ ಅನಿವಾರ್ಯವಾಗಿತ್ತು.

ಆ ದಿನ ಶಶಿ ತುಂಬಾ ಖುಷಿಯಿಂದ ಶಾಲೆಗೆ ಬಂದಿದ್ದಳು. ಶಿವ್ಲಿಯನ್ನು ಕಂಡ ಒಡನೆಯೇ “ನಮ್ಮನೆಯ ನಾಯಿ ಮರಿ ಹಾಕಿದೆ ಗೊತ್ತಾ…ಮರಿ ತುಂಬಾ ಮುದ್ದಾಗಿದೆ.” ಎನ್ನುತ್ತಾ, ಅದು ಕಪ್ಪು, ಕೇಸರಿ ಮತ್ತು ಬಿಳಿ ಈ ಮೂರು ಬಣ್ಣಗಳ ನ್ನು ಹೊಂದಿರುವ ಬಗ್ಗೆ ವರ್ಣನೆ ಮಾಡಿದಳು. ಶಿವ್ಲಿ ಕೂಡ ಅವಳ ಸಂತಸದಲ್ಲಿ ಪಾಲ್ಗೊಂಡಳು. ಹೀಗೆ ನಿತ್ಯ ಶಶಿ ತನ್ನ ನಾಯಿಮರಿಯ ವಿವರವನ್ನ ಹಂಚಿಕೊಳ್ಳುತ್ತಿದ್ದಳು. ಒಂದು ದಿನ ತಾನು ನಾಯಿ ಮರಿಗೆ ಪುಟ್ಟ ಗೆಜ್ಜೆಗೊಂಚಲು ಕಟ್ಟಿರುವುದಾಗಿ ಹೇಳುತ್ತಾ ಅದು ಪುಟುಪುಟು ನಡೆಯುವಾಗ ಗೆಜ್ಜೆಯ ಸದ್ದು ಕೇಳಲು ಎಷ್ಟು ಖುಷಿ ಗೊತ್ತಾ ಎಂದೆಲ್ಲಾ ಬಣ್ಣಿಸಿದ್ದಳು.

ಹೀಗೆ ನಾಲ್ಕಾರು ದಿನಗಳು ಕಳೆದಾಗ ಒಂದು ದಿನ ಸಂಜೆಯ ಹೊತ್ತಿನಲ್ಲಿ ಶಿವ್ಲಿ ಮಲ್ಲಿಗೆ ಹೂ ಬಿಡಿಸು ತ್ತಿದ್ದಾಗ ಮನೆಯ ಗೇಟಿನ ಆಚೆ ಗೆಜ್ಜೆಯ ಸದ್ದು ಕೇಳಿಸಿತು. ಹೋಗಿ ನೋಡಿದಾಗ ರಸ್ತೆಯ ಪಕ್ಕದ ಕಾಲುವೆಯಲ್ಲಿ ನಾಯಿಮರಿಯೊಂದು ಬಿದ್ದಿತ್ತು.. ಕತ್ತಿಗೆ ಕಟ್ಟಿದ ಗೆಜ್ಜೆ.. ನಾಯಿಮರಿಯ ಬಣ್ಣ ನೋಡಾದಾಗ ಒಹ್ ಇದು ಶಶಿಯ ಮನೆಯ ನಾಯಿಮರಿ..!. ಎಂದು ಉದ್ಘರಿಸಿ ಬಟ್ಟಲುಅಲ್ಲೇ ಬಿಟ್ಟು ಓಡಿ ಬೇಗ ನಾಯಿಮರಿಯನ್ನು ಎತ್ತಿಕೊಂ ಡಳು. ಅದನ್ನು ಒಯ್ದು ಶಶಿಯ ಮನೆಯ ಹತ್ತಿರ ಬಿಡಬೇಕೆಂದುಕೊಳ್ಳುವಷ್ಟರಲ್ಲಿ ಶಿವ್ಲಿಯದೊಡ್ಡಪ್ಪ ಬರುತ್ತಿರುವುದು ಕಾಣಿಸಿತು. ದೊಡ್ಡಪ್ಪ ಶಶಿಯ ಮನೆ ಕಡೆ ಹೋದರೆ ಬೈತಾರೆ ಎಂದು ಶಿವ್ಲಿಗೆ ಅರಿವಿತ್ತು. ಇದು ಪಕ್ಕದ ಮನೆಯ ನಾಯಿಮರಿ ಎಂದು ಗೊತ್ತಾದರೆ ಹೂಬಳ್ಳಿ ಕತ್ತರಿಸಿದಂತೆ ನಾಯಿಮರಿಗೂ ತೊಂದರೆ ಮಾಡಬಹುದು ಎಂದು ಭಾವಿಸಿದ ಶಿವ್ಲಿ ಆ ನಾಯಿಮರಿಯನ್ನು ಎತ್ತಿಕೊಂಡು ಸೀದಾ ಸ್ಟೋರ್ ರೂಂ ಗೆ ಓಡಿದಳು. ಅಲ್ಲೇ ಒಂದು ಬಾಕ್ಸ್ ಒಳಗೆ ನಾಯಿಮರಿಯನ್ನು ಮಲಗಿಸಿ ಬಾಗಿಲು ಹಾಕಿ ಮನೆಯೊಳಗೆ ಬಂದರೂ ಮನಸ್ಸು ಸ್ಟೋರ್ ರೂಂ ಕಡೆಗೆ ಇತ್ತು. ಅಡುಗೆ ಮನೆಗೆ ಹೋಗಿ ಡಬ್ಬದಿಂದ ಹಾಲು ಬಿಸ್ಕತ್ ಯಾರಿಗೂ ಕಾಣದಂತೆ ತೆಗೆದುಕೊಂಡು ಹೋಗಿ ನಾಯಿಗೆ ಹಾಕಿ ಗಜ್ಜೆ ಸಪ್ಪಳ ಕೇಳಬಾರ ದೆಂದು ಅದರ ಕತ್ತಿನಲ್ಲಿರುವ ಗೆಜ್ಜೆ ಬಿಚ್ಚಿ ಬಾಗಿಲು ಭದ್ರಪಡಿಸಿ ಬಂದಳು. ಮನೆಯವರು ಸ್ಟೋರ್ ರೂಂ ಕಡೆ ಹೋಗದಿದ್ದರೆ ಸಾಕು ಎಂದು ದೇವರಲ್ಲಿ ಬೇಡಿಕೊಂಡಳು. ರಾತ್ರಿಪೂರ ಕಣ್ಣು ಮುಚ್ಚಿ ಮಲಗಿದ್ದರೂ ಕಿವಿ ಸ್ಟೋರ್ ರೂಂ ಕಡೆಗೆ ಇತ್ತು. ಆ ಕಡೆಯಿಂದ ಯಾವುದೇ ಧ್ವನಿ ಬರದಿ ದ್ದಾಗ ನಾಯಿಮರಿ ನಿದ್ರೆಯಲ್ಲಿದೆ ಎಂದು ಸಮಾಧಾನ ಪಟ್ಟಳು.
ಬೆಳಿಗ್ಗೆ ಬೇಗ ಎದ್ದು ಸ್ಟೋರ್ ರೂಂ ಗೆ ಧಾವಿಸಿ ದಾಗ ನಾಯಿ ಮರಿ ಕೂಗಿ ಸುಸ್ತಾಗಿ ಮಲಗಿದಂತಿ ತ್ತು. ಈ ನಾಯಿ ಮರಿಗೆ ಅದರ ಅಮ್ಮನ ಅವಶ್ಯ ಕತೆ ಇದೆ ಎಂದರಿತ ಶಿವ್ಲಿ ನಾಯಿಮರಿಯನ್ನು ಎತ್ತಿಕೊಂಡು ಧೈರ್ಯವಾಗಿ ಶಶಿಯ ಮನೆಯ ಗೇಟ್ ತೆರೆದು ಒಳಹೋದಳು. ನಾಯಿ ಮರಿಗಾಗಿ ಆಗಲೇ ಹುಡುಕುತ್ತಿದ್ದ ಶಶಿಯ ಅಮ್ಮ ಖುಷಿ ಯಿಂದ ನಾಯಿಮರಿಯನ್ನು ಎತ್ತಿಕೊಂಡರು. ಶಿವ್ಲಿ ನಡೆದ ಘಟನೆ ವಿವರಿಸಿದಳು. ಶಶಿ ಓಡಿ ನಾಯಿ ಮರಿಯನ್ನು ತಬ್ಬಿಕೊಂಡಳು. ಶಿವ್ಲಿಗೆ ಪ್ರೀತಿಯ ಧನ್ಯವಾದ ಹೇಳಿದಳು. ಅಷ್ಟರಲ್ಲಿ ಶಿವ್ಲಿಯನ್ನು ಹುಡುಕಿಕೊಂಡು ಬಂದ ಅವಳ ಅಮ್ಮ ಗೇಟಿನ ಬಳಿ ಬಂದು ಎಲ್ಲಾ ವಿಷಯ ಅರಿತುಕೊಂಡಾಗ ಮಗಳ ಕಾರ್ಯ ಕಂಡು ಅಚ್ಚರಿ ಪಟ್ಟರು.ಶಿವ್ಲಿಯ ಅಮ್ಮ ಮತ್ತು ಶಶಿಯ ಅಮ್ಮ .. ಮಕ್ಕಳ ಪರಸ್ಪರ ಪ್ರೀತಿ ಮತ್ತು ಪ್ರಾಣಿಗಳ ಕುರಿತಾದ ಸಂವೇದನೆ ಯನ್ನು ಕಂಡು ಅವರ ಖುಷಿಗೆ ತಡೆಗೋಡೆ ಹಾಕೋದು ಬೇಡ ಎಂದು ನಿರ್ಧರಿಸಿದರು. ಅತ್ತ ಶಶಿ ಶಿವ್ಲಿ ಇಬ್ಬರೂ ನಾಯಿಮರಿಯನ್ನು ಅದರ ತಾಯಿಯ ಹತ್ತಿರ ಬಿಟ್ಟು ಅವು ಆಡುವು ದನ್ನು ನೋಡಿ ಸಂಭ್ರಮ ಪಡುತ್ತಿದ್ದರು.
✍️ರೇಖಾ ಭಟ್ ಹೊನ್ನಗದ್ದೆ