ಸೆರೆಯಾದ ರಸ ಗಳಿಗೆಯಿದು ನಲುಮೆಯ ಮಹೋತ್ಸವ
ಹರಿವ ಶೃಂಗಾರ ತೊರೆಯಿದು ಚಿಲುಮೆಯ ಮಹೋತ್ಸವ
ಉನ್ಮತ್ತ ಕಡಲ ಬಾಹುಬಂಧನದ ಭಾವೋನ್ಮಾದ
ಮೊರೆತವೂ ಮೌನವಾದ ಭಾವನೆಯ ಮಹೋತ್ಸವ
ಕಳಚಿಕೊಳ್ಳದ ಮೋಹದಲೆಯಹೊಯ್ದಾಟವಿದು
ಸೆಳೆದು ಮುಳುಗಿಸಿ ತೇಲಿಸುವ ಒಲುಮೆಯ ಮಹೋತ್ಸವ
ಮೋಹದ ಮೇರುಗಿರಿಯಲಿ ಕನಸು ಗರಿಗೆದರಿವೆ
ಉತ್ತುಂಗದಿ ಮೈ ಮರೆಸುವ ಮದಿರೆಯ ಮಹೋತ್ಸವ
‘ಆರಾಧ್ಯ’ನ ಮನ ಬೆಳಗುವ ಆರದ ಜ್ಯೋತಿ
ತೈಲ ತೀರದ ಪ್ರೇಮ ಚಂದ್ರಿಕೆಯ ಮಹೋತ್ಸವ
✍️ಶ್ರೀಮತಿ.ಗಿರಿಜಾ ಮಾಲಿಪಾಟೀಲ, ವಿಜಯಪೂರ