ಮಾದಕದ ವಸ್ತುಗಳ ಸೇವಿಸುವ ದುಶ್ಚಟದೆ
ಹಾದಿಯಲಿ ಬೀಳದಿರಿ ತಮ್ಮಗಳಿರ 
ಸಾಧುವೇ ಯೋಚಿಸಿರಿ ಹೆತ್ತವರ ನೋಯಿಪುದು
ಸಾಧನೆಯ ನಾಶಿಪುದು ನರಹರಿಸುತೆ

ನಶೆಯೆಂಬ ಜಾಲದಲ್ಲಿ ಸಿಲುಕದಿರಿ ಮೈಮರೆತು
ದಿಶೆಯನ್ನೇ ಮರೆಸುವುದು ಮಾಯೆಯದುವೆ 
ನಿಶೆಯಾಗಿ ಕವಿಯುತಲಿ ಕ್ಷಣಿಕದ ಸುಖವಿತ್ತು
ಖುಷಿಯನ್ನು ಕಸಿಯುವುದು ನರಹರಿಸುತೆ 

ಮತ್ತಿನಲ್ಲಿ ಬೀಳದಿರಿ ಚಟಗಳಿಗೆ ಮನಸೋತು
ಕುತ್ತಹುದು ಜೀವನಕೆ ತಿಳಿಯುತಲಿರಿ  
ತುತ್ತನ್ನೇ ಕಸಿಯುವುದು ಹೊತ್ತಾಗಿತಿಳಿಯುವುದು
ತೊತ್ತಾಗಿ ಬಾಳದಿರಿ ನರಹರಿಸುತೆ   

✍️ಸುಜಾತಾ ರವೀಶ್,ಮೈಸೂರು