ಕಳೆದ  ಎರಡು  ದಶಕಗಳ  ಕನ್ನಡ ರಂಗಭೂ ಮಿಯ ಬೆಳವಣಿಗೆ  ಮತ್ತು ಅಭಿವೃದ್ಧಿ ದಿಕ್ಕು ಗಳನ್ನು   ಗಮನಿಸಿದರೆ    ಇತಿಹಾಸದಿಂದ ಯಾವ  ಪಾಠ  ಕಲಿಯದೆ  ಮತ್ತೆ   ಹೊಸ ಕಂದಕಗಳನ್ನು ನಿರ್ಮಿಸುತ್ತ ವೃತ್ತಿಪರ, ನವ ವೃತ್ತಿಪರ,   ಹವ್ಯಾಸಿ,   ಸರ್ಕಾರಿ  ಆಶ್ರಿತ, ಪ್ರಕಾರಗಳನ್ನು   ಹುಟ್ಟಿಸುತ್ತ,   ಪ್ರದರ್ಶಕ ಕಲೆಯ   ಜಲಾನಯನ    ಪ್ರದೇಶಗಳನ್ನೇ   ಅಂದರೆ  ಶಿಕ್ಷಣ ಕ್ಷೇತ್ರಗಳನ್ನೇ  ಉಪಯೋಗಿ ಸದೆ,  ಅವುಗಳನ್ನು ಕೇವಲ ಅಂಕಗಳಿಸುವ ಕುರುಕ್ಷೇತ್ರಗಳನ್ನಾಗಿ ಮಾಡಿ,ಇಂದು ಕರೊನ ಕಾಲಘಟ್ಟದ   ಸಮಯಕ್ಕೆ   ಪ್ರಪಾತದ ಅಂಚಿಗೆ ಬಂದುನಿಂತಿದೆ. ಜನಾಶ್ರಯವಿಲ್ಲದ ಹಲವು ತರಬೇತಿಯ  ರಂಗಾಯಣ ಕೇಂದ್ರ ತೆಗೆಯುತ್ತಾ, ಸುಸ್ಥಿರತೆಯ ಕಲ್ಪನೆ ಇಲ್ಲದೆ ಎಲ್ಲದಕ್ಕೂ ಸರ್ಕಾರಿ ಆಶ್ರಯ ಪಡೆಯುತ್ತಾ, ಸರ್ಕಾರದ ಸಹಾಯವಿರದಿದ್ದರೆ ಸಾಂಸ್ಕ್ರತಿಕ ಜೀವನವಿಲ್ಲ  ಎನ್ನುವ  ಅನಿವಾರ್ಯತೆಯ ಹಂತಕ್ಕೆ ರಂಗಭೂಮಿ  ತಲುಪಿದೆ. 

ಇಂದು   ಸ್ಕೂಲು,ಕಾಲೇಜುಗಳಲ್ಲಿ   ರಂಗ-  ಭೂಮಿ  ಚಟುವಟಿಕೆಗಳು,  ಸಾಂಸ್ಕೃತಿಕ  ಚಟುವಟಿಕೆಗಳು ತಮ್ಮ ಅರ್ಥವನ್ನು ಕಳೆದು ಕೊಂಡಿವೆ. 90ಪ್ರತಿಶತ ಶಾಲೆಗಳಲ್ಲಿ ಇಲ್ಲವೇ ಇಲ್ಲ.  ಉಳಿದ  10 ಪ್ರತಿಶತ   ಶಾಲೆಗಳಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ  ಜಿಲ್ಲೆಗಳಲ್ಲಿ   ಅಥವಾ   ಗ್ರಾಮೀಣ  ಶಾಲೆಗಳಲ್ಲಿ  ಇನ್ನು   ಆಸಕ್ತ  ಶಿಕ್ಷಕರಿದ್ದಲ್ಲಿ ನಡೆದಿರಬಹುದಾಗಿದೆ.  ಇನ್ನೂ  ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ದುಡ್ಡು  ವೆಚ್ಚಮಾಡಲು  ಅವು  ಅವಕಾಶ  ಒದಗಿಸಿವೆ. ಖಾಸಗಿ, ವೃತ್ತಿಪರ   ಕಾಲೇಜುಗ ಳಲ್ಲಿ  ಸಿನಿಮಾ ನಟ- ನಟಿ  ಅಥವಾ  ಖ್ಯಾತ ಸಿನಿಮಾ  ಗಾಯಕರನ್ನು  ಕರೆಸಿ   ಹುಚ್ಚೆದ್ದು ಕುಣಿದು ಕುಪ್ಪಳಿಸಿ  ಮಜಾ   ಮಾಡುವದೇ  ಸಾಂಸ್ಕೃತಿಕ  ಪ್ರದರ್ಶಕ  ಕಲೆ ಅಂತ ತಿಳಿದು ಕೊಳ್ಳುವದು ಆಗಿದೆ.  ಎಲ್ಲೋ   ಶ್ರೀಮಂತ ಕುಟುಂಬವರ್ಗದ  ಮಕ್ಕಳು  ನೃತ್ಯ  ಮಾಡು ವುದೇ ಒಂದು ಕ್ಲಾಸ್ ಕಾರ್ಯಕ್ರಮವಾಗಿದೆ. ನಾಟಕ ಕೇಳುವರಾರು? ನೋಡುವರಾರು?   ಯುವ.   ಪ್ರತಿಭೆಗಳು  ಕ್ಯಾಂಪಸ್ ಗಳಿಂದ   ಬಿಟ್ಟರೆ    ಬೇರೆ  ಎಲ್ಲಿಂದ   ಬರಬೇಕು? ನಾಟಕಮಾತ್ರ ಯುವ. ಸಮುದಾಯದಲ್ಲಿ  ಸಂಪೂರ್ಣ ಸಂವಹನ  ಕೌಶಲ್ಯತರುವದು. ಅದಕ್ಕಾಗಿ ಅಂತರವರ್ಗ ಏಕಾಂಕ ನಾಟಕ ಸ್ಪರ್ಧೆಗಳನ್ನು    ಕಾಲೇಜು    ಮಟ್ಟದಲ್ಲಿ,      ಅಂತರ್ಕಾಲೇಜು ಮಟ್ಟ, ವಿಶ್ವವಿದ್ಯಾಲಯ ಮಟ್ಟದಲ್ಲಿ ನಿಯಮಿತವಾಗಿ ನಡೆಯಬೇಕು ಹಾಗೂಖಾಸಗಿ ವಲಯದಲ್ಲಿ, ಸಾರ್ವಜನಿಕ ಗಣೇಶೋತ್ಸವಗಳಲ್ಲಿ  ಸಹ     ಆಯೋಜಿಸ ಬಹುದು. 

ಏಕಾಂಕಗಳೇ ಏಕೆಂದರೆ ಅವುಗಳಲ್ಲಿ ಪಾತ್ರ  ವೆಚ್ಚ ಕಡಿಮೆ,ಹೆಚ್ಚು ಜನರಿಗೆ ಹೆಚ್ಚು ನಾಟಕ ಗಳ  ಮೂಲಕ  ಅವಕಾಶ  ಸಾಧ್ಯ. ಈ ದಿಕ್ಕಿ ನಲ್ಲಿ  ಏಕಾಂಕಗಳ  ಪರಿಚಯ, ಬರೆಯುವ ಸಾಧ್ಯತೆ ಇರುತ್ತದೆ.  ಇದೊಂದು   ಕಲಾವಿದ ರನ್ನು ತಯಾರು ಮಾಡುವ, ಹೊಸ ಸಾಮಾ ಜಿಕ ಸಮಸ್ಯೆಗಳಿಗೆ ಪರಿಹಾರವನ್ನ  ಸೂಚಿಸ ಬಹುದಾದ. ವಿದ್ಯಾರ್ಥಿಗಳ  ಸಂವಹನಶೀಲ ತೆಯನ್ನು,  ಕೌಶಲ್ಯವನ್ನು  ಹೆಚ್ಚಿಸಬಹುದು.  ಇವೆಲ್ಲ‌  ಸಾಧ್ಯವಿದ್ದರೂ    ಇತ್ತೀಚಿನ   ದಶಕ ಗಳಲ್ಲಿ   ಯಾಕೆ    ಆಗಿಲ್ಲವೆಂದರೆ,ಸಂಬಂಧ ಪಟ್ಟ  ಎಲ್ಲ  ಜನರ   ಅನಾಸ್ಥೆ.   ಈಗಂತೂ  ಲಾಕ್ಡೌನ್  ಅನ್ನೋದು  ವಿದ್ಯಾಸಂಸ್ಥೆಗಳನ್ನು ಆನ್ ಲೈನ್,ಆಫ್ ಲೈನಗಳಿಂದನೋ ಲೈನಿಗೆ ತಂದು  ಹಚ್ಚಿದೆ.    “ದಾರಿಯಾವುದಯ್ಯ ರಂಗಭೂಮಿಗೆ  ಭಗವಂತಾ”   ಎನ್ನುವಂತಾ ಗಿದೆ.  ಹೀಗೆ  ಇದ್ದಾಗ  ಕತ್ತಲೆಯಲ್ಲಿ ಬೆಳ್ಳಿಗೆರೆ ಯೊಂದು  ಮೂಡಿದೆ.  ಅಭಿನಯ   ಭಾರತಿ ಯಿಂದ ಮತ್ತೊಂದು ದಾಖಲೆಯ ಸಾಧನೆ.

ಲಾಕ ಡೌನ್   ಅವಧಿಯಲ್ಲಿ     ಪ್ರತಿ ನಿತ್ಯ  ಸಂಜೆ 4 ಗಂಟೆಗೆ ಶ್ರೀರಂಗ ರಚಿತ ಏಕಾಂಕ ನಾಟಕಗಳನ್ನು ಓದುವ ಮೂಲಕ  ಹೊಸ ದಾಖಲೆ  ಬರೆಯಿತು  ಅಂದರೆ  ಉತ್ಪ್ರೇಕ್ಷೆ  ಆಗಲಿಕ್ಕಿಲ್ಲ.  ಮೊಟ್ಟಮೊದಲ    ಬಾರಿಗೆ  ಶ್ರೀರಂಗರ  39 ನಾಟಕಗಳನ್ನ (ಅವರು  77 ಕ್ಕೂ  ಹೆಚ್ಚು ಏಕಾಂಕಗಳನ್ನ ಬರೆದಿದ್ದಾರೆ) 47 ದೀರ್ಘಾವಧಿ  ನಾಟಕಗಳನ್ನೂ   ಬರೆದಿ ದ್ದಾರೆ) ಅಭಿನಯ ಭಾರತೀಯ ಫೇಸ್ಬುಕ್ ಮೂಲಕ   ಜಗತ್ತಿನಾದ್ಯಂತ   ಸುಮಾರು 4500 ಜನ ರಂಗಾಸಕ್ತರು   ಕೇಳಿದ್ದಾರೆ, ನೋಡಿದ್ದಾರೆ.  ಈ ರೀತಿಯ ಪ್ರಯತ್ನಗಳು ಹಿಂದೆಂದೂ ಆಗಿರಲಿಲ್ಲ.

ಲಂಡನ್,       ಸ್ವೀಡನ್,          ಬೆಳಗಾವಿ, ಬೆಂಗಳೂರು,    ಮೈಸೂರು,     ಶಿವಮೊಗ್ಗ, ಹುಬ್ಬಳ್ಳಿ,  ಧಾರವಾಡಗಳಿಂದ  29 ಜನ   ಭಾಗವಹಿಸಿದ್ದರು. ಕೆಲವರು ಅನಿವಾರ್ಯ ಕಾರಣಗಳಿಗಾಗಿ  ಎರಡು, ಮೂರು  ನಾಟಕ‌ ಗಳನ್ನು ಓದಿದ್ದಾರೆ. ವಾಚನ ಮಾಡಿದಂತಹ ನಾಟಕಗಳು:-

ಮೂಹರ್ಥ,    ನನ್ನದಲ್ಲ,    ಪ್ರಾರಬ್ಧ,  ಏಕೀಕರಣ ಪ್ರಸಂಗ,    ನಿರುತ್ತರ ಕುಮಾರ, ದಾಂಪತ್ಯದ ದೊಂಬಿ,ಮದನನ ಮೆಟ್ಟಿಲಲ್ಲಿ, ನೆನಪಿನ ನೇಣು,    ಸ್ವರ್ಗಿಯ ಸರಕಾರ,    ಹರಹರ ಮಹಾದೇವ,  ಪ್ರಪಂಚ  ಪ್ರವಾಹ, ಹನ್ನೊಂದುವರೆ,    ಗಣ ಗಣ ರಾಜ್ಯ, ಮೈರಾವಣ,ಶುದ್ಧಿಸಪ್ತಾಹ ಸಹಣಾಭುನತ್ತು, ತ್ಭೂತ ಕನ್ನಡಿ,   ಶರಪಂಜರ, ಪೂರ್ವರಂಗ, ತ್ರಿಶೂಲ,     ಕಾಮದಹನ,      ಸಂಪುಷ್ಟ,   ವೋಟಮ್  ಬಾಂಬ್,  ರಾಮಾಯಣ,       ಯಮನ ಸೋಲು, ಅಹಲ್ಯೊದ್ಧಾರ, ಗಾಳಿಗೆ ಗಿರಿ  ನಡಗುವದೇ?  ಅಶ್ವಮೇಧ   ಸ್ವಗತ-  ಸಂಭಾಷಣೆ,   ಬರಹಗಾರನ  ಭಗವದ್ಗೀತೆ,   ಶಬ್ದಗುಣಂ ಆಕಾಶಮ್ ಮಂಗಲಾರ್ಪಣಂ   ಇತ್ಯಾದಿ.

ಶ್ರೀರಂಗರ  ಏಕಾಂಕ   ವಾಚನವನ್ನೇ  ಇಟ್ಟು ಕೊಂಡಿರುವ ಉದ್ದೇಶಗಳು:

1)ಲಾಕ್ಡೌನ್ ಅವಧಿಯಲ್ಲಿ ಎಲ್ಲರೂ ಮನೆ ಯಲ್ಲಿ ಇದ್ದಾಗ ವಾಚನವನ್ನು ಕೇಳುವದು, ಮತ್ತು ನೋಡುವದು ಸುಲಭ.

2)ಅಗ್ರಗಣ್ಯ ನಾಟಕಕಾರರಾದ  ಶ್ರೀರಂಗರು ಯುವ ಜನತೆ  ಮತ್ತು  ಹಿರಿಕರಲ್ಲೂ  ನೆನಪಿ ನಿಂದ ಸಾವಕಾಶವಾಗಿ ಮರೆಯಾಗುತ್ತಿದ್ದಾರೆ ಅನ್ನುವ ಭಾವನೆ

3)ಪುಸ್ತಕ ರೂಪದಲ್ಲಿದ್ದಾಗ  ಗೆದ್ದಲು  ಹತ್ತಿ ಹಾಳಾಗಬಹುದು ಮತ್ತು  ಎಲ್ಲರ  ಹತ್ತಿರ ಪುಸ್ತಕ ಇರುವದಿಲ್ಲ.

4)ಬಾನುಲಿ ನಾಟಕಗಳು  ಪ್ರಸಾರ ಭಾರತಿ ಆದನಂತರ ಕಡಿಮೆಯಾಗಿ ಬಾನುಲಿನಾಟಕ ಕೇಳಿದ ಅನುಭವ ಹುಟ್ಟಿಸುವದು.

5) ಕಡಿಮೆ  ಪಾತ್ರದ  ನಾಟಕಗಳು,  ಕಡಿಮೆ ವೆಚ್ಚ,ಕಡಿಮೆ  ರಿಹರ್ಸಲ್,ಸಾಮಾನ್ಯ ಪ್ರಸಾ ಧನ  ಎಲ್ಲವನ್ನೂ  ಹೆಚ್ಚಿನ  ಏಕಾಂಕಗಳಲ್ಲಿ  ತುಂಬಿ ಶ್ರೀರಂಗರು  ರಚಿಸಿರುವ   ಕಾರಣ ಹವ್ಯಾಸಿಗಳಿಗೆ ಅನುಕೂಲಕರ.

6)ಕರೊನಾ ನಂತರದ ನಾಟಕ ಚಟುವಟಿಕೆ ಗಳಿಗೆ   ಹೊಂದುವಂಥಹವು   ಈ  ಏಕಾಂಕ ಗಳು.

7) ವೃತ್ತಿಪರ   ನಿರ್ದೇಶಕರು ಬೇಕೇ ಬೇಕು   ಅಂತ ಇಲ್ಲ. ಶ್ರೀರಂಗರು  ಎಲ್ಲವನ್ನು  ವಿವರ ವಾಗಿ ಏನೆಲ್ಲ ಮಾಡಬೇಕೆಂದು ಕಂಸುಗಳಲ್ಲಿ ಹೇಳಿರುವ ಕಾರಣಕ್ಕಾಗಿ ಅವುಗಳೆಲ್ಲಒಂದು ರೀತಿಯಿಂದ Do it yourself   ಮ್ಯಾನು-  ವೆಲ್  ಇದ್ದ ಹಾಗೆ,  ಅಷ್ಟು   ಮಾಡಿದರೂ ಕನಿಷ್ಠ ಯಶಸ್ಸು ಸಾಧ್ಯ.

8) ಹೆಚ್ಚು  ಜನ  ತಾವು  ಇದ್ದ  ಸ್ಥಳ,  ಊರಿ ನಿಂದಲೇ ಓದಬಹುದು ಅನ್ನೋದು.

9)ಯಾವ  ಏಕಾಂಕವೂ  ಸಾಮಾನ್ಯವಾಗಿ 45 ನಿಮಿಷಗಳಿಗಿಂತ ಹೆಚ್ಚಿಗೆ  ಇಲ್ಲ. ಹೆಚ್ಚಿನವು 20 ರಿಂದ 45 ನಿಮಿಷಗಳವರೆಗೆ.

10)ಹೆಚ್ಚಿನ  ಎಲ್ಲಾ ಏಕಾಂಕಗಳು  ಒಂದೆಡೆ ಲಭ್ಯ. ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿಸಿದ ಶ್ರೀರಂಗ ಸಾರಸ್ವತದ 7ನೇ ಸಂಪುಟ ಒಟ್ಟು 836 ಪುಟ, 50 ರೂ.

ಲಾಕ ಡೌನ್  ಅವಧಿಯಲ್ಲಿ  ರಂಗ ಮಂದಿರ ದಲ್ಲಿ   ನಾಟಕ    ಪ್ರದರ್ಶನ   ಸಾಧ್ಯವಿರದ ಕಾರಣ  ಫೇಸ್ಬುಕ್  ತಂತ್ರಜ್ಞಾನದ  ಮೂಲಕ ಅಭಿನಯ ಭಾರತಿ ನಾಟಕ ವಾಚನ  ಮಾಡಿ ಜನ ಮನರಂಜನೆ, ತನ್ನ  ಪ್ರಭಾವ  ಇರುವ ಊರುಗಳಲ್ಲಿ  ತನ್ನದೇ  ಆದ   ರೀತಿಯಲ್ಲಿ ನಾಟಕಾಸಕ್ತ     ಜನ   ಸಮುದಾಯಗಳನ್ನ  ಸೃಷ್ಟಿಸುತ್ತ,   ದಾಖಲೆಗಳನ್ನು    ಮಾಡುತ್ತ,  ಕ್ರಿಯಾಶೀಲತೆಯ   ಚಾಪುಗಳನ್ನ ಅಂತರಾ ಷ್ಟ್ರೀಯ ಮಟ್ಟದಲ್ಲಿ  ಹೆಚ್ಚು ಸದ್ದು, ಗದ್ದಲ ವಿಲ್ಲದೆ ಮಾಡ್ತಾ ಇದೆ.

                      🔆🔆🔆

✍️ ಅರವಿಂದ ಕುಲಕರ್ಣಿ, ರಂಗಭೂಮಿಚಿಂತಕರು, ಧಾರವಾಡ