ಮನದ ನೋವುಗಳು ಮನೆ ಮಾಡದಂತೆ ಹಚ್ಚಿಡು ಹಣತೆ ಸಖಿ
ಇರುಳ ಬಾನಲಿ ಆರದ ಬೆಳಕಿನಂತೆ ಹಚ್ಚಿಡು ಹಣತೆ ಸಖಿ

ಜನನ ಮರಣಗಳು ಅಚ್ಚಳಿಯದ ಪಟಗಳು ಬಾಳ ಕ್ಯಾನವಾಸಿನೊಳಗೆ,
ಕುಂಚದಲದ್ದಿ ಬರೆಯದ ನಾಳೆಗಳ ಎಣಿಸ ದಂತೆ ಹಚ್ಚಿಡು ಹಣತೆ ಸಖಿ

ನೆನಪ ಸುಮವು  ಕತ್ತಲೆಯಲರಳಿ   ಪರಿಮಳಿಸಿ ಕಾಡುವಂತೆ,
ಮರೆವ ವರವು ಬೈಗು ಜಾವವ ಕಾಣುವಂತೆ ಹಚ್ಚಿಡು ಹಣತೆ ಸಖಿ

ಅರಿಯದ ನಿಟ್ಟುಸಿರ ನರ್ತನ ಬೆಳದಿಂಗಳ ಚಾವಣಿಯಲಿ,
ಮನದ  ಭರವಸೆಯು  ಹೊಸ್ತಿಲಲಿ  ಬೆಳಗು ವಂತೆ ಹಚ್ಚಿಡು ಹಣತೆ ಸಖಿ

ಶಾರು ಭಾವಯಾನ ನೆನ್ನೆ ನಾಳೆಗಳು ದನಿ ಪದದಿ ಮೂಡುವಂತೆ
ನಂಬಿಕೆಯೆ ಜೀವನದ ಜೀವಾಳವಿರುವಂತೆ ಹಚ್ಚಿಡು ಹಣತೆ ಸಖಿ…

                     🔆🔆🔆
✍🏻ಶಾಲಿನಿ ರುದ್ರಮುನಿ,ಹುಬ್ಬಳ್ಳಿ