ಉತ್ತಿ ಬಿತ್ತುವ
ರೈತ ನಿನ್ನ ಇರುವ
ಕಂಡು ನಮಿಸಿ
ಶಿರಬಾಗಿದೆ ತಂದೆ
ಭೂತಾಯಿಯ ಸುತ

ನಾಡಿನ ದೊರೆ
ನಿನಗಿಲ್ಲ ವಿರಾಮ
ಹಗಲಿರುಳು
ದುಡಿವೆ ಪರರಿಗೆ
ಹಸಿದ ಹೊಟ್ಟೆಗಾಗಿ

ಏನೇ ಇರಲಿ
ನಿಂಗಿಲ್ಲ ಅತೀ ಆಸೆ
ದುಡಿತ ಒಂದೇ
ತನುಮನದ ತುಂಬ
ನಿಶ್ವಾರ್ಥ ಜೀವಿ ರೈತ

ಲಾಕ್ ಡೌನಲ್ಲೂ
ಉತ್ತುವದ ಬಿಟ್ಟಿಲ್ಲ
ಶೀಲ್ ಡೌನಲ್ಲೂ
ಬಿತ್ತುವದ ಬಿಟ್ಟಿಲ್ಲ
ಬಿಟ್ಟಿಲ್ಲ್ಯಾವ ಕೆಲಸ

ಸಮಯಾರಿಲ್ಲ
ರೈತಪ್ಪ ನಿನ್ನೆಂದಗೂ
ಕೈ ಬಿಡಲೊಲ್ಲೆ
ಪ್ರಮಾಣವಿದೋ ಕೇಳು
ಭೂತಾಯಿಯ ಮಾತಿದು.

         ✍️ಜ್ಯೋತಿ ಕೋಟಗಿ                   ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಲ್ಲೂರು ತಾ:  ಸವದತ್ತಿ  ಜಿ:ಬೆಳಗಾವಿ