2021ರಜೂನ್11ರಂದು ನಿಧನ ಹೊಂದಿದ ಕವಿ ಸಿದ್ಧಲಿಂಗಯ್ಯನವರು  ಕನ್ನಡ ಸಾಹಿತ್ಯ ಲೋಕಕ್ಕೆ  ಹೊಸ ಹರಿವನ್ನು  ತಂದು  ದಲಿತ ಬಂಡಾಯದ   ಸಾಹಿತ್ಯ   ಘಟ್ಟದಲ್ಲಿ  ಗಟ್ಟಿ ಧ್ವನಿಗಳನ್ನು  ಬಿಟ್ಟು  ಹೋದವರು.  ಈ ಸಂದರ್ಭದಲ್ಲಿ ಅವರ ಸಾಹಿತ್ಯ ಸಾಧನೆಯ ನ್ನು ಮತ್ತು ಈನಾಡು ಅವರನ್ನು ಗೌರವಿಸಿದ ಪರಿಯನ್ನು ಮೆಲಕು ಹಾಕಲು ಸಕಾಲವಾ ಗಿದೆ  ಎಂಬುದನ್ನು  ಅರಿತು  ಅವರ ಬಗ್ಗೆ ತಿಳಿಯುವ  ಮೂಲಕ ಅವರನ್ನು ಗೌರವಿ ಸುವ ಕಾರ್ಯ ಮಾಡೋಣ ಎನ್ನುತ ಅವರ ಸಾಧನೆಯ ಲೋಕವನ್ನು ನಿಮ್ಮೆದರಿಗೆ ತೆರೆದು ಇಡುತ್ತಿದ್ದೇನೆ.


೨೦೧೫ರಲ್ಲಿ  ಶ್ರವಣ  ಬೆಳಗೊಳದಲ್ಲಿ  ಜರು ಗಿದ ಎಂಭತ್ತೊಂದನೆಯ  ಅಖಿಲ  ಭಾರತ ಕನ್ನಡ ಸಾಹಿತ್ಯ  ಸಮ್ಮೇಳನದ  ಅಧ್ಯಕ್ಷರಾಗಿ ದ್ದ ಸಿದ್ಧಲಿಂಗಯ್ಯನವರು ದಲಿತ ಸಾಹಿತ್ಯ ಚಳುವಳಿಯಲ್ಲಿ   ಉದಯಿಸಿದ   ತಾರೆ, ಇವರನ್ನು ದಲಿತ ಕವಿ ಸಿದ್ದಲಿಂಗಯ್ಯ ಎಂಬ ವಿಶೇಷಣದೊಂದಿಗೇ ಕನ್ನಡಿಗರು ಗುರುತಿಸು ವಷ್ಟು ಛಾಪನ್ನು ತಮ್ಮ ಕವಿತೆಗಳ ಮೂಲಕ ಒತ್ತಿದ್ದಾರೆ.’ಬಡವರ ನಗುವಿನ ಶಕ್ತಿ’ ಎಂದೂ ಇವರನ್ನು ಗುರುತಿಸಲಾಗುವುದು. ರಾಮನ ಗರ ಜಿಲ್ಲೆಯ  ಮಾಗಡಿ  ತಾಲ್ಲೂಕಿಗೆ ಸೇರಿದ ‘ಮಂಚನಬೆಲೆ’ ಎಂಬ  ಪುಟ್ಟ. ಊರಿನಲ್ಲಿ ೧೯೫೪ರಲ್ಲಿ  ಸಿದ್ದಲಿಂಗಯ್ಯನವರು  ಜನಿಸಿ ದರು.ಕಿತ್ತು ತಿನ್ನುವ ಬಡತನ, ಅವಿದ್ಯಾವಂತ ಕೌಟುಂಬಿಕ  ಹಿನ್ನೆಲೆಯಿಂದ  ಬಂದ ಇವರು ಅಕ್ಷರದ ಸಂಪರ್ಕಕ್ಕೆ ಬಂದು ಸ್ನಾತಕೋತ್ತರ ಪದವಿ  ಪಡೆದುದೇ  ಒಂದು  ಸಾಹಸಗಾಥೆ. ಇದನ್ನು  ಅವರು  ತಮ್ಮ  ‘ಊರು ಕೇರಿ’ ಎಂಬ ಆತ್ಮಕಥೆಯಲ್ಲಿ ವಿವರವಾಗಿ ಚಿತ್ರಿಸಿ ದ್ದಾರೆ. ಕನ್ನಡ ಎಂ.ಎ. ಪದವಿಯನಂತರ ಡಾ.ಜಿ.ಎಸ್.ಶಿವರುದ್ರಪ್ಪನವರ  ಮಾರ್ಗದ ರ್ಶನದಲ್ಲಿ  ‘ಗ್ರಾಮದೇವ ತೆಗಳು’  ಎಂಬ   ಪ್ರೌಢಪ್ರಬಂಧ   ರಚಿಸಿ ಪಿಎಚ್.ಡಿ. ಪದವಿ ಪಡೆದರು.ಸ್ವಲ್ಪಕಾಲ ಬೆಂಗಳೂರುವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ   ಸಂಶೋಧ ನಾ ಸಹಾಯಕರಾಗಿ ದುಡಿದು,  ಬಳಿಕ  ಅಲ್ಲಿಯೇ  ಅಧ್ಯಾಪಕ, ಪ್ರಾಧ್ಯಾಪಕ ಮತ್ತು ನಿರ್ದೇಶಕ ಹುದ್ದೆಗಳನ್ನು ಅಲಂಕರಿಸಿದರು. ಸ್ವಲ್ಪ ಕಾಲ ಮಾನವಿಕ ವಿಭಾಗಗಳ ಡೀನ್ ಆಗಿಯೂ ಸೇವೆ ಸಲ್ಲಿಸಿದರು.


ನವ್ಯೋತ್ತರ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಡಾ. ಸಿದ್ಧಲಿಂಗಯ್ಯ ತಮ್ಮ ವಿಶಿಷ್ಟ ಸಾಹಿತ್ಯ ರಚನೆಯ ಮೂಲಕ ಬಹು ಮಹತ್ವದ ಕವಿ, ಲೇಖಕರೆನಿಸಿದ್ದಾರೆ. ಕನ್ನಡ ದಲಿತ ಸಾಹಿತ್ಯ ಕ್ಕೆ  ಹೊಸ ದೃಷ್ಟಿ,  ಹೊಸ ಶಕ್ತಿ,  ಸಾಮರ್ಥ್ಯ ಗಳನ್ನು ನೀಡಿರುವ ಇವರು ಶತಶತಮಾನ ಗಳಿಂದ ಶೋಷಿತರಾದ ದಲಿತ ಜನಾಂಗದ ವೇದನೆ-ಸಂವೇದನೆಗಳನ್ನು ತಮ್ಮ ಕೃತಿಗಳ ಲ್ಲಿ  ವಿನೂತನವಾಗಿ  ಚಿತ್ರಿಸಿದ್ದಾರೆ.   ದಲಿತ- ಬಂಡಾಯ  ಚಳುವಳಿಗಳ ದೃಷ್ಟಿ- ಧೋರಣೆ ಗಳನ್ನು ಆತ್ಮಸಾತ್ ಮಾಡಿಕೊಂಡುಕನ್ನಡದ ಸಾಹಿತ್ಯಿಕ, ಸಾಂಸ್ಕೃತಿಕ  ಕ್ಷೇತ್ರಗಳಲ್ಲಿ ತಮ್ಮ ನ್ನು ಗುರುತಿಸಿಕೊಂಡಿದ್ದಾರೆ. ಕಾವ್ಯ, ನಾಟಕ, ಪ್ರಬಂಧ,ವಿಮರ್ಶೆ, ಸಂಶೋದನೆ, ಆತ್ಮಕಥೆ – ಮೊದಲಾದ ಕ್ಷೇತ್ರಗಳಲ್ಲಿ ಆಮೂಲ್ಯವಾದ ಕೃತಿಗಳನ್ನು ನೀಡಿದ್ದಾರೆ,“ಹೊಲೆಮಾದಿಗರ ಹಾಡು,  ಸಾವಿರಾರು  ನದಿಗಳು,  ಕಪ್ಪ ಕಾಡಿನ ಹಾಡು” ಎಂಬುವು ಇವರ ಕವನ ಸಂಕಲನಗಳು. ಇವರ ಕವಿತೆಗಳು ಕನ್ನಡ ಓದುಗರಲ್ಲಿ   ಸಂಚಲನ     ಮೂಡಿಸುವುದ ರೊಂದಿಗೆ  ಘೋಷವಾಕ್ಯಗಳಾಗಿ  ಚಳುವಳಿ ಯನ್ನು  ಪ್ರವೇಶಿಸಿವೆ.  ಇವರ  ಒಟ್ಟು ಕವಿತೆ ಗಳು “ಮೆರವಣಿಗೆ” ಎಂಬ ಹೆಸರಿನಲ್ಲಿ ಪ್ರಕಟಗೊಂಡಿವೆ. ‘ಪಂಚಮ, ನೆಲಸಮ, ಏಕವಲ್ಯ’  ಎಂಬುವು  ಇವರ   ರಚಿಸಿದ ನಾಟಕಗಳು, ಇದರೊಂದಿಗೆ ಊರುಕೇರಿ (ಎರಡು ಭಾಗಗಳಲ್ಲಿ ಹೊರ ಬಂದಿರುವ ಆತ್ಮಕಥೆ),ಅವತಾರಗಳು(ಲಲಿತಪ್ರಬಂಧ)  ಗ್ರಾಮದೇವತೆಗಳು (ಮಹಾಪ್ರಬಂಧ) ಮುಂತಾದ ಕೃತಿಗಳನ್ನು ಹೊರತಂದಿದ್ದಾರೆ. ೧೯೯೦ ರಿಂದ ೨೦೦೨ರವರೆಗೆ  ಎರಡು ಅವಧಿಯಲ್ಲಿ  ವಿಧಾನ  ಪರಿಷತ್ತಿನ  ಸದಸ್ಯ ರಾಗಿ ಸೇವೆ ಸಲ್ಲಿಸಿದ್ದಾರೆ. ವಿಧಾನ ಪರಿಷತ್ತಿ ನಲ್ಲಿ ಇವರುಮಾಡಿದ ಭಾಷಣಗಳು ‘ಸದನ ದಲ್ಲಿ ಸಿದ್ಧಲಿಂಗಯ್ಯ’ಎಂಬ ಪುಸ್ತಕ ರೂಪ ದಲ್ಲಿ ಪ್ರಕಟಗೊಂಡಿದೆ.


ಸಿದ್ಧಲಿಂಗಯ್ಯನವರಿಗೆ  ಸಂದಿರುವ  ಪ್ರಶಸ್ತಿ ಗಳು:-
*೧೯೮೬ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ.
*೧೯೯೨ ರಲ್ಲಿ  ಅಂಬೇಡ್ಕರ್ ಶತಮಾನೋ ತ್ಸವ ಪ್ರಶಸ್ತಿ.
*೧೯೮೪ ರಲ್ಲಿ ಅತ್ಯುತ್ತಮ ಚಲನಚಿತ್ರ ಗೀತೆ ರಚನೆ ಪ್ರಶಸ್ತಿ.
*ಕರ್ನಾಟಕ   ಸಾಹಿತ್ಯ   ಅಕಾಡೆಮಿಯ ಗೌರವ ಪ್ರಶಸ್ತಿ.
ಮತ್ತಿತರ  ಗೌರವಗಳಿಗೆ   ಪಾತ್ರರಾಗಿರುವ ಸಿದ್ದಲಿಂಗಯ್ಯನವರನ್ನು  ಕನ್ನಡದ  ಜನತೆ ಎಂಭತ್ತೊಂದನೇಯ ಅಖಿಲ ಭಾರತ ಕನ್ನಡ ಸಾಹಿತ್ಯ – ಸಮ್ಮೇಳನದ   ಅಧ್ಯಕ್ಷರನ್ನಾಗಿಸಿ ತನ್ನ ಪ್ರೀತಿ-ಗೌರವಗಳನ್ನು  ಸೂಚಿಸಿದೆ.

                ಪ್ರಭಾವ, ಪ್ರೇರಣೆ;


ಕಿ.ರಂ.ನಾಗರಾಜ,   ಡಿ.ಆರ್. ನಾಗರಾಜ, ಕಾಳೇಗೌಡ  ನಾಗವಾರ,    ಜಿ.ಎಸ್. ಶಿವರು ದ್ರಪ್ಪ, ಕೆ.ಮರುಳಸಿದ್ದಪ್ಪ  ಮುಂತಾದ   ಹಿರಿ ಯರ ಪ್ರೋತ್ಸಾಹದಿಂದ   ಸಿದ್ದಲಿಂಗಯ್ಯನ ವರು   ಕವಿಯಾಗಿ   ಅರಳಿದ್ದಾರೆ.ಸಿದ್ಧಲಿಂಗ ಯ್ಯ  ಅವರ   ಸಾಹಿತ್ಯದ  ಒಳನೋಟಗಳು ನನ್ನ ಜನಗಳು– ಕವನ  ಕನ್ನಡ  ಕಾವ್ಯ ಕ್ಷೇತ್ರ ದಲ್ಲಿ ಸಿದ್ಧಲಿಂಗಯ್ಯನವರ ಸಾಧನೆ ಅಪಾರ ವಾದುದು. ‘ಅವರು ನನ್ನಜನಗಳು’ ಕವನ ದಲ್ಲಿ ದಲಿತರನ್ನು ತನ್ನವರನ್ನಾಗಿ ಗುರುತಿಸಿ, ಅವರನೋವು,ಕಷ್ಟ,ಕಾರ್ಪಣ್ಯಗಳಿಗೆ ಸ್ಪಂದಿ ಸಿದ್ದನ್ನು ಕಾಣುತ್ತೇವೆ. ಇಲ್ಲಿ ಅವರು ಶೋಷಿ ತ  ಜನಾಂಗವೊಂದರ ಪ್ರತಿನಿಧಿಯಾಗಿ ತಮ್ಮ ಧ್ವನಿಯೆತ್ತಿದ್ದಾರೆ. ದಲಿತರ ಮೂಕ ವೇದನೆಗೆ    ಧ್ವನಿಯಾಗಿದ್ದಾರೆ.   ದಲಿತಕವಿ ಯಾದ  ಈ ಕವಿಗೆ  ಶೋಷಣೆಗೆ  ಒಳಗಾದ ದಲಿತರ    ಬಗೆಗೆ   ಅಪಾವಾದ    ಕಾಳಜಿ ಇರುವುದನ್ನು   ಕಾಣುತ್ತೇವೆ.

        ಹೊಲೆಮಾದಿಗರ ಹಾಡು :


೧೯೬೫ ರಲ್ಲಿ  ಪ್ರಕಟಗೊಂಡ   ಈ ಕವನ ಸಂಕಲನದಲ್ಲಿ ನನ್ನ ಜನಗಳು”, “ಒಂದು ಮೂಳೆಯ ಹಾಡು”, “ಒಂದುಪದ”, “ಸತೋಗೋರಾ”, “ಕ್ರಾಂತಿಪದ”, “ಗಳ್ಡಗಳು” “ಕನ್ನಡವ್ವನಿಗೆ”  “ನನ್ನವಳಿಗೆ”, “ಭವಿಷದ್ಗೀತೆ”,  “ಮಸಣದ  ಚೆಲುವಿಗೆ” “ನಾವು”, “ಅಂಬೇಡ್ಕರ”,  “ಒಂದು ದನದ ಪದ”,  “ಹಾವುಗಳೇ  ಕಚ್ಚಿ” -ಹೀಗೆ  ೨೦ ಹಾಡುಗಳಿವೆ. ಈ ಸಂಕಲನ ಕನ್ನಡದ ಬರವ ಣಿಗೆಗೆ ಅರ್ಥಪೂರ್ಣವಾದ ಹೊಸ ದಿಕ್ಕನ್ನು ತೋರಿಸಿಕೊಟ್ಟ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ತನ್ನೆಲ್ಲನೋವು ಹಾಗೂ ಚಾರಿತ್ರಿ ಕವಾದ ದೀರ್ಘ  ಕಾಲದ. ಸುಲಿಗೆಯ ಪೂರ್ಣ ಕಥನವನ್ನು ತಟ್ಟನೆ ವ್ಯವಸ್ಥೆಯ ಮುಖಕ್ಕೆ ಒಡ್ಡಿಹೇಳುವ ರೊಚ್ಚು ಮತ್ತು ಎದೆ ಗಾರಿಕೆಯ ಸಂಕೇತವಾಗಿ ಈ ಸಂಕಲನದ ಶೀರ್ಷಿಕೆಯು  ಕಾಣಿಸಿಕೊಂಡಿದೆ.  ಓದುವ ಕಣ್ಣು, ಕೇಳುವ ಕಿವಿ, ತಿಳಿಯುವ ಮನಸ್ಸು ಗಳನ್ನು  ಸಮುದಾಯದ  ಮಟ್ಟದಲ್ಲಿ  ದಟ್ಟ ವಾಗಿ  ಸೆರೆಹಿಡಿಯಬಲ್ಲ  ಇಲ್ಲಿನ   ಅನೇಕ ಸಾಲುಗಳಿಗೆ  ಅರ್ಥಪೂರ್ಣವಾದ   ಚೈತನ್ಯ ವಿದೆ. ನಾಡಿನಾದ್ಯಂತ  ಚಿಂತನಶೀಲ  ಸಾಹಿ ತ್ಯಾಭ್ಯಾಸಿಗಳೆಲ್ಲರ ಗಮನವನ್ನು ಸೆಳೆದ ಈ ಕೃತಿ ಚಾರಿತ್ರಿಕವಾಗಿಯೂ ಕೂಡಾ ಕನ್ನಡ ಕಾವ್ಯಮಾರ್ಗದಲ್ಲಿ ಹೊಸ ಆಶೆ,ಭರವಸೆಗಳ ನ್ನು ಮೂಡಿಸಿದ ಪ್ರಮುಖ ಕವನ ಸಂಕಲನ ವೆನಿಸಿದೆ. ‘ಹೊಲೆ ಮಾದಿಗರ ಹಾಡು’ ತಲೆ ಬರಹವೇ ಸೂಚಿಸುವಂತೆ ಇವು ಅಸ್ಪೃಶ್ಯರ ಹಾಡು,  ಈ  ಹಾಡುಗಳಲ್ಲಿ ಮುಖ್ಯವಾಗಿ ಕಂಡುಬರು ವುದು ಸಿಟ್ಟು. ‘ಈ ಹಾಡುಗಳನ್ನ ಗಟ್ಟಿಯಾಗಿ ಲಯಬದ್ಧವಾಗಿ ಹಾಡಿದಾಗ, ಓದಿಕೊಂಡಾಗ ಮಾತ್ರ  ನನ್ನ  ರಚನೆಯ ಉದ್ದೇಶ  ಸ್ಪಷ್ಟವಾಗುತ್ತದೆ”  ಎಂದು  ಕವಿ ಸಿದ್ದಲಿಂಗಯ್ಯ ಸಂಕಲನದ ಬಗ್ಗೆ ಹೇಳಿಕೊಂ ಡಿದ್ದಾರೆ.

            ಸಾವಿರಾರು ನದಿಗಳು


೧೯೬೯ರಲ್ಲಿ ಪ್ರಕಟಗೊಂಡ ಈ ಕವನ ಸಂಕ ಲನದಲ್ಲಿ  ಸಾವಿರಾರು  ನದಿಗಳು”,     “ಬೆಲ್ಜಿಯಾಹಾಡು”, “ಕೆಂಪುಸೂರ್ಯ”, “ದಲಿತರು ಬರುವರು’,’ಬಿದ್ದಾವುಮನೆಗಳು, ‘ಕರಾಳ ರಾಣಿಯ  ಕಥೆ’, ”ಕತ್ತೆ  ಮತ್ತು ಧರ್ಮ”, ”ಈ ದೇಶದ ಸೆರೆಮನೆ”, ”ಕಂಡ ನನ್ನವಳ ಒಂದು ದಿವಸ”, ”ಹೋರಾಟವೇ ದಾರಿ’, ಚೋಮನ ಮಕ್ಕಳ ಹಾಡು’, “ನಿನ್ನ ಮಗನ ಕೊಂದರು”, ‘ಮಾತಾಡ್ಬೇಕು”, “ಮೆರವಣಿಗೆ”,”ಬಂದಿರುವರು ಹುಲಿಗಳಾಗಿ, ‘ಅಲ್ಲೇ ಕುಂತವರೆ’ ಎಂಬ ಹದಿನೇಳು  ಕವನ ಗಳಿವೆ. ಈಸಂಕಲನದ  ಅವರ ಹಾಡುಗಳು  ತಮ್ಮ ಏಕಾಂತದಲ್ಲಿ  ಬರೆದ ಅಂತರಮುಖಿ ಕವನಗಳಲ್ಲ, ಕಾವ್ಯವನ್ನು ಬೇರೆಬೇರೆ  ಚಳು ವಳಿಗಳಲ್ಲಿ ಅವರು ದುಡಿಸಿಕೊಂಡಿದ್ದಾರೆ. ದಲಿತ ಹೋರಾಟದ ಮುಖವಾಣಿಯಾಗಿ ರುವ   ಹಾಡುಗಳು, ನಾಟಕಗಳಿಗೆ ಹಾಡು ಗಳು, ಸರ್ವಾಧಿಕಾರಿ ವಿರೋಧಿ  ಚಳುವಳಿಗ ಳಲ್ಲಿ ಬರೆದ ಹಾಡುಗಳು ಈ ಕವನಸಂಕಲನ ದಲ್ಲಿವೆ. “ಅಲ್ಲೆಕುಂತವರೆ”  ಕನ್ನಡದ  ಕಾವ್ಯ ಕ್ಷೇತ್ರದಲ್ಲಿ   ಪ್ರಮುಖ ಬೆಳವಣಿಗೆ. ಹೊಸ ಕಾವ್ಯದಲ್ಲಿ  ಮತ್ತೊಮ್ಮೆ “ಎಫಿಕ್” ಲಕ್ಷಣ ಗಳನ್ನು ಅಳವಡಿಸಿದ ಹಿರಿಮೆ ಈ ಖಂಡಕಾ ವ್ಯಕ್ಕೆ ಸಲ್ಲುತ್ತದೆ.

         ಪಂಚಮ ಮತ್ತುನೆಲಸಮ

ಇವೆರಡೂ ಪ್ರತ್ಯೇಕ ನಾಟಕಗಳಾದರೂ ಸಹ ಒಂದೇ  ಸಂಕಲನದಲ್ಲಿ  ಬೆಳಕು   ಕಂಡಿವೆ.
‘ಪಂಚಮ’ ನಾಟಕವು ಒಂದು ಸಂದರ್ಶನದ ಮೂಲಕ   ಆರಂಭವಾಗುತ್ತದೆ.   ಸಂದರ್ಶ ಹಯವದನರಾವ್  ಅವರಲ್ಲಿಗೆ    ಅನೇಕ ಮಂದಿ    ಸಂದರ್ಶನಕ್ಕಾಗಿ    ಬರುತ್ತಾರೆ. ಮುಂದೆ   ಉದ್ಯೋಗಕ್ಕೆ    ಸೇರಬಯಸುವ ದಲಿತ ಅಭ್ಯರ್ಥಿಗಳಿಗೆ ಪೂರ್ವಭಾವಿಯಾಗಿ ತರಬೇತಿ ಕೊಡಿಸುವ ಉದ್ದೇಶದಿಂದ ಈ ಸಂದರ್ಶನವನ್ನು ಸಿದ್ಧಪಡಿಸಲಾಗಿದೆ.

                    ನೆಲಸಮ

ನಾಟಕದ ವಸ್ತು ಕೊಳಚೆ ನಿರ್ಮೂಲನ ಕಾರ್ಯಕ್ಕೆ ಸಂಬಂಧಿಸಿದ್ದಾಗಿದೆ. ಚಂದ್ರಮಾ ಣಿಯ  ಮಗ  ವಿಜಯ    ಅರಮನೆಯಿಂದ ಹೊರ ಬರುವಾಗ ಅವನ ಮೂಗಿಗೆ ಏನೋ ವಾಸನೆ   ಬಡಿಯುತ್ತದೆ,   ಈ ವಾಸನೆಯ ಮೂಲ ಎಲ್ಲಿದೆ ಎಂದು ತಿಳಿದುಕೊಂಡು ಬರಲು   ಆಳುಗಳನ್ನು   ಕಳಿಸುತ್ತಾನೆ.  ಈ ವಾಸನೆ ಪಕ್ಕದ ಕೊಳಗೆರೆಯಿಂದ ಬರುತ್ತಿರು ವುದಾಗಿ ತಿಳಿದು ಬರುತ್ತದೆ. ವಿಜಯ ಈ ವಿಷಯವನ್ನು ತನ್ನ ತಾಯಿ ಚಂದ್ರಮ್ಮನಿಗೆ ತಿಳಿಸುತ್ತಾನೆ. ಭಾರತದ ಸೌಂದರ್ಯವನ್ನು ಕಾಪಾಡಲು, ಶ್ರೀಮಂತರು ಆರೋಗ್ಯದಿಂದಿ ರಲು ಹಾಗೂ ವಿಜಯನ ಮೂಗುಳಿಯಲು ಕೊನೆಗೆ ಅಲ್ಲಿಯ ಗುಡಿಸಲುಗಳನ್ನು ನಾಶ ಮಾಡುವದರೊಂದಿಗೆ  ಈ  ನಾಟಕ    ಕೊನೆ ಗೊಳ್ಳುತ್ತದೆ. ಇದು ಶ್ರೀಮಂತರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಅವರು ಚೆನ್ನಾಗಿ ಬದುಕಲು ಬಡವರ ದಲಿತರ ಜೀವನವನ್ನಾ ದರೂ ಸರ್ವನಾಶ ಮಾಡಬಲ್ಲರು.

                         ಏಕಲವ್ಯ


ಏಕಲವ್ಯ‌ ಮಹಾಭಾರತದ ‘ಏಕಲವ್ಯ’ನಿಗೆ ಸಂಬಂಧಿಸಿದ ಕಥೆಯನ್ನಾಯ್ದುಕೊಂಡು ೧೯೮೪ ರಲ್ಲಿ ರಚಿಸಿದ್ದಾರೆ.’ಏಕಲವ್ಯ’ ತನ್ನ ತಾಯಿಯ  ಸಲಹೆಯ  ಮೇರೆಗೆ   ದ್ರೋಣಾ ಚಾರ್ಯರಲ್ಲಿ ಬಿಲ್ವಿದ್ಯೆಯನ್ನು ಕಲಿಯವುದ ಕ್ಕಾಗಿ ಹಸ್ತಿನಾವತಿಗೆ ಹೋಗುತ್ತಾನೆ. ಆದರೆ ದ್ರೋಣಾಚಾರ್ಯರು ಆತ ಕೀಳು ಕುಲದವ ನೆಂದು ಸಮ್ಮತಿಸದೆ ಹಿಂದಕ್ಕಟ್ಟುತ್ತಾರೆ, ಆಗ ಏಕಲವ್ಯ ದ್ರೋಣನ ಮಣ್ಣಿನ   ಮೂರ್ತಿಯ ನ್ನು ಮಾಡಿ, ಅದರ ಸ್ಫೂರ್ತಿಯಿಂದ ಬಲ್ವಿದ್ಯೆ ಯಲ್ಲಿ   ಪ್ರವೀಣನಾಗುತ್ತಾನೆ.     ಮುಂದೆ ಅರ್ಜುನನೇ  ಮೊದಲಾದ  ಕ್ಷತ್ರೀಯ  ರಾಜ ಕುಮಾರರು ಬೇಟೆಗೆ ಬಂದಾಗ ಅವರ ಬೇಟೆ ನಾಯಿಯ ಬಾಯಿಗೆ ಏಕಲವ್ಯ ಬಾಣ ಬಿಡು ತ್ತಾನೆ: ಇಂಥಹ ಕೌಶಲ್ಯ ಶಬ್ದವೇದಿ ವಿದ್ಯೆ ಗೊತ್ತಿದ್ದವರಿಗೆ  ಮಾತ್ರ  ಕೈವಶವಾಗುವಂಥ ಹದ್ದು. ಇದು  ಕ್ಷತ್ರೀಯ   ರಾಜಕುಮಾರರಿಗೆ ತಿಳಿದಾಗ ಅವರು ದ್ರೋಣನಿಗೆದೂರುತ್ತಾರೆ. ದ್ರೋಣಾಚಾರ್ಯ  ಈಗಾಗಲೇ ಅರ್ಜುನನ ನ್ನು  ಶ್ರೇಷ್ಠ  ಬಿಲ್ಲುಗಾರನನ್ನಾಗಿ   ಮಾಡುತ್ತೇ ನೆಂದು  ಅವನಿಗೆ  ಮಾತು ಕೊಟ್ಟಿದ್ದ. ಆದರೆ ಏಕಲವ್ಯನಿಗೆ ಈ ಕೌಶಲ್ಯ ದಕ್ಕಿರುವುದಕ್ಕೆ ಮರುಗಿದ  ಅರ್ಜುನ   ಇದನ್ನು   ಆಕ್ಷೇಪಿಸು ತ್ತಾನೆ.   ಇದರಿಂದಾಗಿ    ದ್ರೋಣಾಚಾರ್ಯ ಏಕಲವ್ಯನ  ಬಲಗೈ  ಹೆಬ್ಬೆರಳನ್ನು ಗುರುದಕ್ಷಿ ಣೆಯಾಗಿ  ಪಡೆಯುತ್ತಾರೆ. ಹೀಗಿರಲು ಕುರು ಕ್ಷೇತ್ರ  ಯುದ್ಧದ  ಸಿದ್ಧತೆಯಾಗುತ್ತದೆ.  ಆಗ ಪಾಂಡವರು  ಮತ್ತು ಕೌರವರು ಏಕಲವ್ಯನ ನ್ನು  ಚತಮಗೆ  ನೆರವಾಗಲು  ಕೇಳುತ್ತಾರೆ. ಏಕಲವ್ಯ.  ಅವರೀರ್ವರನ್ನು  ತಿರಸ್ಕರಿಸಿ ಕುರು- ಪಾಂಡವರು ಇರ್ವರ ವಿರುದ್ಧವೂ ತಾನು ಹೋರಾಟ  ಮಾಡುತ್ತೇನೆಂದು   ನಿರ್ಧಾರ ಮಾಡುವುದರೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ.
                ಹಕ್ಕಿನೋಟ
೧೯೯೦ರಲ್ಲಿ  ಪ್ರಕಟವಾದ.   ಸಿದ್ಧಲಿಂಗಯ್ಯ ನವರ  ವಿಮರ್ಶಾ  ಕೃತಿಯಲ್ಲಿ   ಹಲವಾರು ವೈಶಿಷ್ಟ್ಯಪೂರ್ಣವಾದ ಲೇಖನಗಳಿವೆ. ಸಾಹಿತ್ಯಾಭಿವ್ಯಕ್ತಿಯಲ್ಲಿ ಸಾಮಾನ್ಯಮನುಷ್ಯ ಕ್ರಾಂತಿಕಾವ್ಯ,   ಜನಪದೀಕರಣ,   ಸಾಹಿತ್ಯ ಮತ್ತು  ಮಾನವೀಕರಣ,  ದಲಿತ   ಸಾಹಿತ್ಯ, ನಿರಂಜನರ  ‘ಚಿರಸ್ಮರಣೆ’, ಕರಗ  ಸಂಪ್ರದಾ ಯ ಮತ್ತು ಆಚರಣೆಗಳು,ಕೆಲವು ಆರಾಧನೆ ಗಳು   ಮತ್ತು   ಆಚರಣೆಗಳು, ಅಸ್ಪೃಶ್ಯತೆ ಮತ್ತು  ಸಮಾಜದ  ಹೊಣೆಗಾರಿಕೆ   ದಲಿತ ಸಂಸ್ಕೃತಿ, ವಚನ   ಚಳುವಳಿ ಮತ್ತು ದಲಿತ ತರು,ಬಂಡಾಯ ಕವಿ ಡೇವಿಡ್ ಡಿಯೋಪ್, ಕನಕದಾಸರ   ಸಾಮಾಜಿಕ   ಆಶಯಗಳು, ಕೈವಾರ ತಾತಯ್ಯನ ವೈಶಿಷ್ಟ್ಯ ಮುಂತಾದವು ಗಳು.

‘ಸಿದ್ದಲಿಂಗಯ್ಯನವರು ಸಾಹಿತ್ಯವನ್ನುಮಾನ ವೀಕರಣದ  ಒಂದು ಮಾಧ್ಯಮವಾಗಿ ಪರಿಗ ಣಿಸುತ್ತಾರೆ. ಈಪ್ರಕ್ರಿಯೆ ತುಳಿತಕ್ಕೆ ಒಳಗಾದ ವರಿಂದ.  ಆರಂಭವಾಗಬೇಕು  ಎನ್ನುವುದು ಅವರ  ನಿಲುವು. ಮೇಲುವರ್ಗದ    ಮೌಲ್ಯ ಗಳು   ದಲಿತರನ್ನು   ನಿಸ್ತೇಜಗೊಳಿಸುವ   ಸಾಧ್ಯತೆಯಿರುವುದರಿಂದ, ಈಪ್ರಕ್ರಿಯೆ ತುಳಿ ತಕ್ಕೆ ಒಳಗಾದವರಿಂದ ಆರಂಭವಾಗಬೇಕು ಎನ್ನುವುದು ಅವರ ನಿಲುವು. ಮೇಲುವರ್ಗ ದ ಮೌಲ್ಯಗಳು ದಲಿತರನ್ನು  ನಿಸ್ತೇಜಗೊಳಿ ಸುವ   ಸಾಧ್ಯತೆಯಿರುವುದರಿಂದ   ದಲಿತ ಸಂಸ್ಕೃತಿಯ   ಶೋಧನೆ  ಅನಿವಾರ್ಯವಾ ದುದು ಎಂಬುದು  ಅವರ ಖಚಿತ ಧೋರಣೆ. ದಲಿತರ   ಮತ್ತು  ಜನಸಾಮಾನ್ಯರ  ಬದುಕಿ ನಲ್ಲಿ ಬೆರೆತಿರುವ ಆಚರಣೆಗಳ ಬಗೆಗೆ ಆಸಕ್ತಿ ಯಿರುವವರಿಗೆ   ಇದೊಂದು    ಉಪಯುಕ್ತ ಕೃತಿಯಾಗಿದೆ.ವಿಶ್ವವಿದ್ಯಾಲಯಗಳ ಸಮಾಜ ಶಾಸ್ತ್ರ ವಿಭಾಗಗಳ ಮಂದಿ ನಮ್ಮ ಸಮಾಜ ದ   ಪ್ರಕ್ರಿಯೆಗಳ  ಬಗೆಗೆ  ಕನ್ನಡ  ಜನರಲ್ಲಿ ತಿಳುವಳಿಕೆಯನ್ನು  ಬೆಳೆಸಲು  ವಿಫಲವಾಗಿ ರುವುದರಿಂದ  ಇಂತಹ ಪ್ರಸ್ತಕಗಳು ಮಹತ್ವ ವಾಗುತ್ತವೆ.  ಅಂಬೇಡ್ಕರ್,ಮಾರ್ಕ್ಸ್ ಸಿದ್ಧಾಂ ತಗಳಲ್ಲದೆ   ತಮ್ಮ ಸ್ವಂತ  ಅನುಭವವದ    ಮೂಲಕವೂ  ಸಿದ್ದಲಿಂಗಯ್ಯ  ಈ  ವಿಚಾರ ಗಳನ್ನು  ಹೇಳಿದ್ದಾರೆ.
                ಅವತಾರಗಳು:


ಇದು    ಪ್ರಬಂಧಗಳ   ಸಂಕಲನವಾಗಿದೆ. ಅಲ್ಲದೇ  ವೈಚಾರಿಕ  ಕೃತಿಯೂ   ಆಗಿದೆ. ದೇವರು, ಮೂಡನಂಬಿಕೆಗಳನ್ನು ತೀಕ್ಷವಾಗಿ ಒರೆಗಲ್ಲಿಗೆ ಹಚ್ಚುವ ಈ ಕೃತಿ ತರ್ಕದಲ್ಲಿ ವಸು ದೇವ ಭೂಪಾಲಂ ಅವರ ‘ದೇವರು ಸತ್ತ’ ಕೃತಿಯ ಮಾದರಿಯದಾಗಿದೆ. ತಮಿಳುನಾಡಿ ನ ಪೆರಿಯಾರರನ್ನೂ ನೆನಪಿಗೆ ತರುವಇಲ್ಲಿನ ಸುಂದರ  ಪ್ರಬಂಧಗಳು  ಸಮಾಜದ ಕುರೂ ಪವನ್ನು  ಅತ್ಯಂತ ಮನಮುಟ್ಟುವಂತೆ ಚಿತ್ರಿ ಸಬಲ್ಲವಾಗಿವೆ ಒಟ್ಟಿನಲ್ಲಿ ಸಿದ್ಧಲಿಂಗಯ್ಯ ನವರ ಕವನಗಳು ಕರ್ನಾಟಕದ ದಲಿತ ಮತ್ತು   ರೈತರ ಹೋರಾಟದ ಹಾಡುಗಳಾಗಿ ಪರಿವರ್ತಿತವಾಗುವ ಮೂಲಕ ಯುವಕ್ರಿಯೆ ಪರಿಣಾ ಮಕಾರಿಯಾಗಿ ನಿರೂಪಿತವಾಗಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ”ದಲಿತ ಸಾಹಿತ್ಯ’ ಪ್ರಕಾರವೊಂದು ತನ್ನ ಸ್ಪಷ್ಟವಾದ ನಿಲುವುಗಳನ್ನು ಪಡೆದುಕೊಳ್ಳಲು ಸಿದ್ಧಲಿಂಗಯ್ಯ ಕಾರಣಕರ್ತರಾಗಿದ್ದಾರೆ. ಸಾಹಿತ್ಯಕ್ಷೇತ್ರದಲ್ಲಿ ಅಪಾರ ಸೇವೆ  ಸಲ್ಲಿಸಿದ  ಸಿದ್ಧಲಿಂಗಯ್ಯ  ಅವರ  ಸೇವೆ ಅವಿಸ್ಮರಣೀ ಯವಾದುದು.

                         🔆🔆🔆          

✍️ಶ್ರೀಪರಸಪ್ಪ ತಳವಾರ     ಸಹಾಯಕಪ್ರಾಧ್ಯಾಪಕರು ಸಿ.ಎಂ.ಪಂಚಕಟ್ಟಿಮಠ ಸರಕಾರಿ ಪ್ರಥಮ ಕಾಲೇಜು, ಲೋಕಾಪುರ ತಾ:ಮಧೋಳ ಜಿ:ಬಾಗಲಕೋಟೆ.