ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ದ ಕಥಾವಸ್ತುನಲ್ಲಿ ಕಂಡು ಬರುವ ಗುರುಕುಲ ಪದ್ದತಿಯ ಬಗ್ಗೆ ತಿಳಿದಿ ದ್ದೆವೆ. ಗುರುವೆಂದರೆ ಜ್ಞಾನದ ಆತ್ಮನಿದ್ದಂತೆ. ಅವನರಸಿಬರುವ ಶಿಷ್ಯಂದಿರು ಸಾಮಾನ್ಯ ರೇ. ಹಿಂದೆಲ್ಲ ಗುರುವೇ ಕೇಂದ್ರಬಿಂದು. ಆ ಗುರುವಿಗೆ ವಿಶೇಷವಾದ ಸ್ಥಾನಮಾನ. ರಾಜಾಶ್ರಯ ರಾಜಮನೆತನದ ಮಕ್ಕಳಿಗಾಗಿ ನೇಮಿಸಲ್ಪಟ್ಟವರು. ಗುರುವಿನ ಸಂಪೂರ್ಣ ಹೊಣೆ ರಾಜನದ್ದು. ಕಲಿಸುವ ಹೊಣೆ ಗುರು ವಿನದ್ದು, ಕಲಿಯುವ ಹೊಣೆ ಶಿಷ್ಯಂದಿರದ್ದು. ಒಂದು ರೀತಿಯಲ್ಲಿ ಒಂದಕ್ಕೊಂದು ಬೆಸೆದ ಕೊಂಡಿಯಂತೆ. ಕಲಿಕೆಗೆ ಹೆಚ್ಚು ಪ್ರಾಧಾನ್ಯತೆ‌. ಅಲ್ಲಿ ಸೇರಿದ ಪ್ರತಿಯೊಬ್ಬರೂ ಗುರುವಿನ ಆಜ್ಞೆಯನ್ನು ಶಿರಸಾವಹಿಸಿಕೊಂಡು ಮಾಡು ವುದು ಅನಿವಾರ್ಯವಾಗಿತ್ತು.

“ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರಾ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೆನಮಃ

ಯಜ್ಞಕ್ಕೆ ಬೇಕಾದ. ಸಿದ್ದತೆ, ಫಲ ಪುಷ್ಪ, ಅಡುಗೆಗೆ ಬೇಕಾದ ಸೌದೆ, ಗೆಡ್ಡೆ, ಗೆಣಸು ಹುಡುಕಿ ತರುವುದು.ಗುರು ಕೊಡುವ ಎಲ್ಲ ರೀತಿಯಜ್ಞಾನಕ್ಕೂ,ದಂಡನೆಗೂ,ಒಳಗಾಗುವುದು ಕಲಿಕಾರ್ಥಿಯಾದ ರಾಜಕುಮಾರ ಮುಖ್ಯ ಕರ್ತವ್ಯವಾಗಿತ್ತು. ವಜ್ರದ ಮೌಲ್ಯ ಬಲ್ಲವನಿಗೆ ಗೊತ್ತು. ಗುರುವಿನ ಕಂಗಳ ಭಾಷೆ, ಯೋಗದ ಮಹತ್ವ, ಶರೀರ ದಂಡನೆ ಯ ಹಿಂದಿನ ರಹಸ್ಯ‌ವನ್ನು ಅರಿವು ಮೂಡಿ ಸುವ ಕೆಲಸದೊಂದಿಗೆ ಅವರಲ್ಲಿಯ ಅಂತರ ಶಕ್ತಿ ಜಾಗೃತಗೊಳಿಸುವುದು ಅಂದರೆ ಪುಟ ಕ್ಕಿಟ್ಟ ಬಂಗಾರದಂತೆ.

ಗುರು ಸೇವೆಯೇ ಮೊದಲ ಆದ್ಯತೆ. “ಗುರುವಿನ ಗುಲಾಮನಾಗುವ ತನಕ ದೊರೆ ಯದಣ್ಣ ಮುಕುತಿ”ಎಂಬಂತೆ ದೇಹದಂಡನೆ ಯಿಂದ‌ ಗರ್ವ ತ್ಯಜಿಸಿ,ತಾಳ್ಮೆ ಬೆಳೆಸಿಕೊಳ್ಳು ತ್ತ, ಸಮಚಿತ್ತದಿಂದ ವಿಚಲಿತನಾಗದೇ, ಒಮ್ಮನಸ್ಸಿನಿಂದ ಬೆರೆಯುವ ಮನೋಭಾವ ಹಂತಹಂತವಾಗಿ ಬರಬೇಕು. ತಿದ್ದಿ ತೀಡಿ, ಯೋಗ್ಯ ಯೋಧರನ್ನಾಗಿ ಮಾಡಿ ಕಳಿಸುವ ಸಂಪೂರ್ಣ ಜವಾಬ್ದಾರಿ ಗುರುವಿನದು ಹಸ್ತ ಕ್ಷೇಪವಿಲ್ಲ‌. ಗುರು‌ ಸ್ವತಂತ್ರ. ಯಾವ ಮಗು ವಿನ ಗ್ರಹಣ ಶಕ್ತಿ ಎಷ್ಟಿದೆಯೋ ಅದನ್ನು ಗ್ರಹಿಸಿ ಸೂಕ್ತ ಶಿಕ್ಷಣ ನೀಡುವುದರೊಂದಿಗೆ ಪ್ರೋತ್ಸಾಹ ನೀಡುವ ಗುರುತರ ಹೊಣೆ ಇವರದ್ದು. ಇಲ್ಲಿ ಬೆಳೆದ ಮಕ್ಕಳಿಗೆ ರಾಜ ವೈಭವ ದೊರೆತರೂ, ದೊರೆಯದಿದ್ದರೂ ಬದುಕುವ ಕಲೆ ಒದಗಿರುವುದು ಇದೇ ಕಾರಣಕ್ಕೆ.

ರಾಜಾಶ್ರಯದಲ್ಲಿರುವ ಗುರುಗಳಿಗೆ ರಾಜರ ಮಕ್ಕಳಿಗೆ ಮಾತ್ರ ಅವಕಾಶ.ವಿದ್ಯೆ ಯಾರ ಸೊತ್ತು? ಕಲಿವವನ ಸೊತ್ತು. ಅದಕ್ಕೆ ಕಾಯಾ, ವಾಚಾ ಮನಸಾ ಆರಾಧಿಸುವ ವರಿಗೆ ಒಲಿಯುವುದು. ಪುರಾಣಗಳು ಬಿಚ್ಚಿ ಟ್ಟ ದಂತ ಕಥೆಗಳು. ಅದರಲ್ಲಿ ಏಕಲವ್ಯ ನೆಂಬುವನು ನತದೃಷ್ಟ ಕಲಿಕಾರ್ಥಿಯಾಗಿ ದ್ದನ್ನು ಪುಟ ತಿರುವುವಿದಷ್ಟು ಗೋಚರಿಸು ತ್ತದೆ. ಹೆಬ್ಬೆರಳನ್ನು ಗುರು ದಕ್ಷಿಣೆಯನ್ನಾಗಿ ಪಡೆದ  ಗುರುವಿನ  ಅಂತರಂಗ   ಎಷ್ಟು   ಮರುಗಿರಬೇಕು? ಅರ್ಜುನನಿಗಿಂತ   ಅಚಲ ವಾದ ಅವನ ಪ್ರತಿಭೆ ಬೆಳಗಲೇ ಇಲ್ಲ.ಆದರೆ ಅವನ ಗುರುಭಕ್ತಿ ಇಂದಿಗೂ ಮಾನ್ಯ. ಇದ್ದರೆ ಇಂಥ ಶಿಷ್ಯ ಇರಬೇಕು ಏಕಲವ್ಯನ ಹಾಗೆ.

ಶಿಕ್ಷಣದ ಪರಿಕಲ್ಪನೆ ಬದಲಾದಂತೆ ಕಲಿಕೆಯ ಮಾನದಂಡಗಳು ಬದಲಾಗಿದೆ. ಮಗು ಕೇಂದ್ರಿಕೃತ. ಜಗತ್ತಿನ ಉಳಿವಿಗೆ ಸೂರ್ಯ ನೊಬ್ಬನೆ ಆಶಾ ಕಿರಣ. ಕಲಿಕೆಯ. ರಸಾನು ಭವ ಸವಿಯದ ಕಲಿಕೆ ಮಗುವನ್ನು ಉನ್ನತ ಉದಾತ್ತ ಮೌಲ್ಯಗಳತ್ತ ಸೆಳೆಯಲಾರದು. ಪಾಲಕರು ಗುರುಶಿಷ್ಯರ ಸಂಬಂಧಕ್ಕೆಕೊಂಡಿ ಯಾಗಿ ಬೆಸೆಯುವಂತಹ ಕೆಲಸವಾಗಬೇಕಿ ದೆ. ಗುರುವನ್ನು ಆಧರಿಸಿದಷ್ಟು ಜ್ಞಾನ. ಸರಸ್ವತಿ ಒಲಿಯುವಳು. ಮಗು  ಜನಿಸುವಾ ಗಲೇ ತನ್ನಲ್ಲಿ ‌ಅಧ್ಬುತ‌ ಜ್ಞಾನ ಬಂಢಾರ ವನ್ನು ಹೊತ್ತು ತಂದಿರುತ್ತದೆ.ಅದಕೆ ಸೂಕ್ತ ಮಾರ್ಗ ದರ್ಶನ ನೀಡುವ ಸುಗಮಕಾರನಾಗಿ ಇಂದು ಗುರು ಹೊಸರೂಪ ತಾಳಿದ್ದಾನೆ. ಅವನ ಚಿತ್ತ ಮಗುವಿನಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣ ಮಾಡುವುದಕ್ಕೆ ವೇದಿಕೆಕಲ್ಪಿಸು ವುದು.

ಪಾಲಕರು‌ ಮಗುವಿನ‌ ಸಾಮರ್ಥ್ಯದ ಅರಿವಿ ನೊಂದಿಗೆ ಕಲಿಕೆಗೆ ಪ್ರೋತ್ಸಾಹ ನೀಡುವ ಮನಸ್ಸುಳ್ಳವರಾಗಬೇಕು. ಅದಕ್ಕೆ ನಮ್ಮ ಹಿರಿಯರು ಸಂಸ್ಕಾರಗಳನ್ನು ನಮ್ಮ ನಡೆ ನುಡಿಯಲ್ಲಿ ಬಿತ್ತಿರುವುದು. ಗುರುವೆಂಬ ನಾವಿಕ ನಮ್ಮ ಜೊತೆಗಿರಬೇಕು. ಆದಿಯು‌ ಅವನೇ ಅಂತ್ಯವು ಅವನೇ.. ಜ್ಞಾನದ ಮುಂದೆ ಎಲ್ಲವೂ ನಗಣ್ಯ.
                     🔆🔆🔆

✍️ಶ್ರೀಮತಿ.ಶಿವಲೀಲಾ ಹುಣಸಗಿ ಶಿಕ್ಷಕಿ,ಯಲ್ಲಾಪೂರ