ಇನ್ನು ಇತಿಹಾಸ ಪುಟದಲ್ಲಿ ಹೊಯ್ಸಳ, ವಿಜಯನಗರ ಹಾಗೂ ನಂತರ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿ ಬೆಳೆದಿತ್ತು.ಶಾಸನ ಗಳಲ್ಲಿ ಬಾಚಹಳ್ಳಿ ಎಂದೇ ಉಲ್ಲೇಖವಾಗಿ ದ್ದು ಹೊಯ್ಸಳರ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿ ಇದ್ದ ಉಲ್ಲೇಖವಿದೆ. ಇಲ್ಲಿ 1503 ರಲ್ಲಿ ಸ್ಥಳೀಯ ದಂಡನಾಯಕ ಗೋಪಾಲದೇವ ತನ್ನ ತಂದೆಯ ಹೆಸರಿನಲ್ಲಿ ಇಲ್ಲಿನ ವೀರನಾರಯಣನಿಗೆ ದತ್ತಿ ನೀಡಿದ ಉಲ್ಲೇಕವಿದ್ದರೆ 1533 ರ ಶಾಸನದಲ್ಲಿ ಇಲ್ಲಿನ ವೀರಭದ್ರ ದೇವರಿಗೆ ದತ್ತಿ ನೀಡಿದ ಉಲ್ಲೇಖ ನೋಡಬಹುದು.
ಶ್ರೀ ಮಹಾಲಿಂಗೇಶ್ವರ ದೇವಾಲಯ :

ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಏಕಕೂಟ ದೇವಾಲಯ. ಊರಿನ ಹೊರಭಾಗದಲ್ಲಿ ಕೆರೆಯ ಹತ್ತಿರ ನೆಲಮಟ್ಟಕಿಂತ ಕೆಳಭಾಗದಲ್ಲಿದ್ದು ಗರ್ಭ ಗುಡಿ, ಸುಖನಾಸಿ, ಹಾಗು ನವರಂಗ ಇದ್ದು ಗರ್ಭಗುಡಿಯಲ್ಲಿ ಮಹಾಲಿಂಗೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಇನ್ನುಗರ್ಭಗುಡಿ ಯ ಬಾಗಿಲುವಾಡದ ಲಲಾಟದಲ್ಲಿ ಗಜ ಲಕ್ಷ್ಮಿ ಕೆತ್ತೆನೆಇದ್ದು ಶೈವದ್ವಾರಪಾಲಕರಿದ್ದಾರೆ. ಇನ್ನು ನವರಂಗದಲ್ಲಿ ಹೊಯ್ಸಳ ನಿರ್ಮಿತ ನಾಲ್ಕು ಕಂಭಗಳಿದ್ದು ಇದರಲ್ಲಿನ ಸೂಕ್ಷ್ಮ ಕೆತ್ತೆನೆಗಳಿ ಗಮನ ಸೆಳೆಯುತ್ತದೆ. ಇನ್ನು ಒಂಬತ್ತು ಅಂಕಣದ ನವರಂಗದ ವಿತಾನ (ಭುವನೇಶ್ವರಿ)ದಲ್ಲಿ ಕಲಾತ್ಮಕ ಕೆತ್ತೆನೆಗಳನ್ನು ನೋಡಬಹುದು.ಶಿವಲಿಂಗದ ಎದುರುನಂದಿ ಇದೆ. ಇನ್ನು ನವರಂಗದಲ್ಲಿ ಎರಡು ಚಿಕ್ಕ ಗುಡಿಯಾಗಿ ಪರಿವರ್ತಿಸಲಾಗಿದ್ದು ಇಲ್ಲಿ ವಿಷ್ಣು ಹಾಗೂ ಬ್ರಹ್ಮನ ಮೂರ್ತಿಗಳಿವೆ. ಇದು ಚಾಲುಕ್ಯರ ತ್ರೈಪುರಷ ದೇವಾಲಯ ವನ್ನು ನೆನಪಿಸುತ್ತದೆ.

ಇನ್ನು ಹೊರಬಿತ್ತಿಯಲ್ಲಿ ಹೊಯ್ಸಳ ದೇವಾ ಲಯಗಳಲ್ಲಿ ಸಾಮಾನ್ಯವಾಗಿ ಇರುವಂತೆ ಕೆತ್ತೆನೆ ಇರದೆ ನಿರಾಂಡಂಭರವಾಗಿದ್ದುಸುಂದ ರವಾದ ಮೂರು ಹಂತದ. ಶಿಖರವನ್ನು ಹೊಂದಿದೆ. ಇಲ್ಲಿನ ಕೀರ್ತಿಮುಖಗಳು, ಉಮಾಮಹೇಶ್ವರ, ತ್ರಿಪುರದಹನ, ತಾಂಡ ವೇಶ್ವರ, ಉಗ್ರನರಸಿಂಹ, ಬೈರವ ಶಿಲ್ಪಗಳು ಸುಂದರವಾಗಿದೆ. ದೀಪಾವಳಿಯ ಅಮವಾ ಸ್ಯೆಯಂದು ಇಲ್ಲಿ ದೀಪೋತ್ಸವ ಜರುಗಲಿದೆ. ದೇವಾಲಯದ ಪಕ್ಕದಲ್ಲಿ ಪಾರ್ವತಿಯ ದೇವಾಲಯವೂ ಇದೆ.
ಶ್ರೀ ವೀರನಾಯಣ ದೇವಾಲಯ :

ಉರಿನ ಮಧ್ಯದಲ್ಲಿರುವ ಎತ್ತರದ ದಿಣ್ಣೆಯ ಮೇಲಿರುವ ಈ ದೇವಾಲಯ ಗರ್ಭಗುಡಿ, ಅಂತರಾಳ,ನವರಂಗ ಹಾಗು ಮುಖಮಂಟ ಪ ಹೊಂದಿದ್ದು ಗರ್ಭಗುಡಿಯಲ್ಲಿ ಸುಂದರ ವಾದ ಸುಮಾರು 7 ಆಡಿ ಎತ್ತರದ ಸುಂದರ ವೀರನಾರಾಯಣನ ಶಿಲ್ಪವಿದೆ. ಮೇಲಿನ ಎರಡೂ ಕೈಗಳಲ್ಲಿ ಗದೆಯನ್ನು ಹಿಡಿದಿರುವ ಮೂರ್ತಿ ಉಳಿದ ಕೈಗಳಲ್ಲಿ ಶಂಖ ಹಾಗೂ ಚಕ್ರ ನೋಡಬಹುದು. ಈ ಮಾದರಿಯ ಅಪುರೂಪದ ಶಿಲ್ಪ. ಈ ಕಾರಣದಿಂದಲೇ ವೀರನಾರಾಯಣ ಎಂಬ ಹೆಸರು ಬಂದಿದೆ. ಶಿಲ್ಪದ ಪ್ರಭಾವಳಿಯಲ್ಲಿ ದಶಾವತಾರಗಳ ಕೆತ್ತೆನೆ ನೋಡಬಹುದು.
ಶ್ರೀ ವೀರಭದ್ರ ದೇವಾಲಯ :

ವಿಜಯನಗರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹಾಗೂ ಮುಖಮಂಟಪವನ್ನು ಹೊಂದಿದೆ.ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ವೀರಭದ್ರ ಹಾಗೂ ಭದ್ರಕಾಳಿಯ ಶಿಲ್ಪ ವಿದೆ. ಸಾಕಷ್ಟು ನವೀಕರಣಗೊಂಡಿರುವ ಈ ದೇವಾಲಯದಲ್ಲಿನ ಮುಖಮಂಟಪದಲ್ಲಿನ ಕಂಭಗಳು ಸುಂದರವಾಗಿದೆ. ದೇವಾಲಯ ದಲ್ಲಿ ನಂದಿಯ ಶಿಲ್ಪವಿದೆ. ಊರಿನ ಹಾಗೂ ರಾಜ್ಯದ ಸಾಕಷ್ಟು ಜನ ಭಕ್ತರು ಇರುವ ಕಾರಣ ಈ ದೇವಾಲಯ ಸಾಕಷ್ಟು ಅಭಿ ವೃದ್ದಿಗೊಂಡಿದೆ.
ಶ್ರೀ ವೀರಾಂಜನೇಯ ದೇವಾಲಯ :

ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯ ಸಹ ಊರ ಮಧ್ಯದಲ್ಲಿ ಇದೆ. ದೇವಾಲಯ ಗರ್ಭಗುಡಿ, ಅಂತರಾಳ ಹಾಗು ಮಂಟಪವನ್ನು ಹೊಂದಿದ್ದು ಗರ್ಭ ಗುಡಿಯಲ್ಲಿ ವೀರಾಂಜನೇಯನ ಶಿಲ್ಪವಿದೆ. ಸುಮಾರು 6 ಆಡಿ ಎತ್ತರದ ಈ ಶಿಲ್ಪ ಪಾರ್ಶ್ವಕ್ಕೆ ಮುಖ ಮಾಡಿದ್ದು ಬಾಲಮಾರುತಿ ಯನ್ನ. ಅರ್ಧವೃತ್ತಾಕಾರದಲ್ಲಿ ಸುತ್ತುವರೆ ದಿದೆ. ಬಲಗೈ ಮೇಲಕ್ಕೆ ಎತ್ತಿ ಅಭಯಮುದ್ರೆ ಯಲ್ಲಿದ್ದು ತಲೆಯ ಮೇಲೆ ಜುಟ್ಟು ಇದ್ದು ವೀರಾಂಜನೇಯ ಸ್ವರೂಪದಲ್ಲಿದೆ.
ತಲುಪವ ಬಗ್ಗೆ : ನಾಗಮಂಗಲ – ಕೆ ಆರ್ ಪೇಟೆ ರಸ್ತೆಯಲ್ಲಿ ಸಂತೇಬಾಚಹಳ್ಳಿ ಕ್ರಾಸ್ ಬಳಿ ತಿರುಗಿ ಸಂತೇಬಾಚಹಳ್ಳಿಯನ್ನ ತಲುಪಬಹುದು.
🔆🔆🔆✍️ಶ್ರೀನಿವಾಸಮೂರ್ತಿ ಎನ್.ಎಸ್.
ವಿಷಯ ವಿಸ್ತಾರ ತುಂಬಾ ಅರ್ಥಪೂರ್ಣವಾಗಿ ಸಂಗ್ರಹಿಸಿದ್ದೀರಿ ಸರ್
ಧನ್ಯವಾದಗಳು
LikeLiked by 1 person
ಇದು ಸಂಗ್ರಹ ಲೇಖನವಲ್ಲ ನಾನೇ ಭೇಟಿ ನೀಡಿ ನಂತರ ಬರೆದ ಲೇಖನ, ಶಾಸನದ ರಿಫೆರೆನ್ಸ್ ಮಾಡಿರುತ್ತೇನೆ. ಆದರೂ ನಿಮ್ಮ ಅನಿಸಿಕೆಗೆ ಧನ್ಯವಾದಗಳು
LikeLike