ಪ್ಯಾರಿಸ್ ನಲ್ಲಿ   ಏನೇನು   ನೋಡಬೇಕು ಎನ್ನುವದು ಪ್ಯಾರಿಸ್ ಗೆ ಹೋಗುವ ಎಷ್ಟೋ ಮೊದಲೇ  ನಿರ್ಧಾರವಾಗಿತ್ತು.  ಅದರಲ್ಲಿ ಮೊದಲನೆಯದೇ ಮೋನಾಲಿಸಾ. ಜಗತ್ತಿನ ಇನ್ಯಾವ ಪೇಂಟಿಂಗೂ ಇಷ್ಟು ಜನಪ್ರಿಯವಾ ದದ್ದು ನಾ ಕಾಣೆ. ಇದನ್ನು ನೋಡುವ ಏಕ ಮಾತ್ರ ಉದ್ದೇಶದಿಂದಲೇ ಪ್ಯಾರಿಸ್ ಗೆ ಪಯಣ ಬೆಳೆಸುವವರೂ ಇದ್ದಾರೆ ಎಂದರೆ ನಂಬಲೇಬೇಕು.ಅದರ  ಖ್ಯಾತಿ  ಮತ್ತು ಆಕ ರ್ಷಣೆಯೇ ಅಂಥದ್ದು! ಇಂದಿಗೂ ಜಗತ್ತಿನ ಅತಿಹೆಚ್ಚು  ಬೆಲೆಬಾಳುವ  ಕಲಾಕೃತಿಗಳಲ್ಲಿ ಮೋನಾಲಿಸಾ ಅಗ್ರಸ್ಥಾನದಲ್ಲಿದೆ.
Musee du Louvre (ಲೂವ್ರ) ಎಂಬ ಹೆಸರಿನ ಮ್ಯೂಸಿಯಂ ಫ್ರೆಂಚ್ ಅರಮನೆ ಯೊಂದರಲ್ಲಿ, 1793 ರಲ್ಲಿ ಶುರುವಾಗಿ, ವಿಶ್ವದ ಅತಿ ದೊಡ್ಡ ಆರ್ಟ ಮ್ಯೂಸಿಯಂ ಆಗಿ ಬೆಳೆದು ನಿಂತದ್ದು ಫ್ರೆಂಚರ ಅಪ್ರತಿಮ ಕಲಾಪ್ರೇಮದ  ಶ್ರೇಷ್ಠ  ನಿದರ್ಶನ.  ಐದು ಅಂತಸ್ತುಗಳಲ್ಲಿ 24 ಎಕರೆಗಳಷ್ಟು ವಿಸ್ತಾರ ವಾಗಿರುವ ಸುಮಾರು 3,80,000 ಕಲಾಕೃತಿ ಗಳಿರುವ  ಮ್ಯೂಸಿಯಂ  ಅನ್ನು ಪೂರ್ಣವಾ ಗಿ  ನೋಡಬೇಕೆಂದರೆ,  ಒಂದೊಂದು  ಕಲಾ ಕೃತಿಗೆ 30ಸೆಕೆಂಡುಗಳಷ್ಟೇ ಸಮಯ ಕೊಟ್ಟ ರೂ, ಸುಮಾರು ಐದು ತಿಂಗಳು ಬೇಕಾಗುತ್ತ ದೆ. ಮೊದಲ  ಸಲ  ಲೂವ್ರಕ್ಕೆ   ಹೋದಾಗ ಮೋನಾಲಿಸಾ   ಬಿಟ್ಟು  ಅಲ್ಲಿನ   ಇನ್ನಿತರ ವಿಶ್ವವಿಖ್ಯಾತ  ಕಲಾಕೃತಿಗಳ   ಬಗ್ಗೆ  ದಿವ್ಯ ನಿರ್ಲಕ್ಷ್ಯ  ತಾಳಿದ್ದೆ.  ನೈಕಿ  ಎನ್ನುವ  ರೆಕ್ಕೆಗಳಿ ರುವ  ವಿಕ್ಟರಿ  ದೇವತೆ, (ನೈಕಿ  ಶೂ  ಕಂಪನಿ ಹೆಸರು  ಇದೇ  ದೇವತೆಯಿಂದ   ಬಂದಿದ್ದು) ನೆಪೋಲಿಯನ್ ನ   ಪಟ್ಟಾಭಿಷೇಕ, ಈಜಿ ಪ್ಟಿನ ದ ವೈಸ್ ಕಿಂಗ್ ಎನ್ನುವ  priest ನ ಮಮ್ಮಿ,  ಫ್ರೆಂಚ   ಕ್ರಾಂತಿಯ   ಬೃಹತ್ ಪೇಂಟಿಂಗ್,  ನಿದ್ರಿಸುತ್ತಿರುವ  ಗ್ರೀಕ್ ಅರ್ಧ ನಾರೀಶ್ವರ (ಹರ್ಮಾಫ್ರೋಡೈಟಿ),    ಹಮ್ಮು ರಬಿಯ  ಶಾಸನ,  ಮೈಲೋದ ವೀನಸ್,  ಟಾನಿಸ್ ನ   ಸ್ಪಿಂಕ್ಸ..   ಒಂದೇ  ಎರಡೇ…ನೀವೇನಾದರೂ  ಇತಿಹಾಸ  ಮತ್ತು  ಕಲಾ ಪ್ರಿಯರಾಗಿದ್ದರೆ  ಅಲ್ಲಿನ  ಕಾವಲುಗಾರರು ಸಂಜೆ  ಆರು  ಗಂಟೆಗೆ ನಿಮ್ಮನ್ನು ಹೊರದ ಬ್ಬುವವರೆಗೂ   ನೀವಾಗಿ   ಹೊರಬರುವ ಚಾನ್ಸೇ ಇಲ್ಲ. ನಾನಂತೂ  ಬ್ರಿಟಿಷ್ ಮ್ಯೂಸಿ ಯಂ,  ರೋಮ್ ನ  ವ್ಯಾಟಿಕನ್    ಮ್ಯೂಸಿ ಯಂ ಮತ್ತು ಲೂವ್ರ ಮ್ಯೂಸಿಯಂ ಮೂರು ಅತಿಶ್ರೇಷ್ಠ  ಮ್ಯೂಸಿಯಂಗಳಿಂದಲೂ ಹೊರ ದಬ್ಬಿಸಿಕೊಂಡು  ದಾಖಲೆಯನ್ನೇ   ನಿರ್ಮಿಸಿ ದ್ದೇನೆ.

ಜಗತ್ತಿನ   ಆಭರಣಗಳ   ಖಜಾನೆ     ಎನಿಸಿ ಕೊಂಡು,ಮುತ್ತು ರತ್ನಗಳ ಭಂಡಾರವೇ ಆಗಿ ರುವ    ಜರ್ಮನಿಯ  ಡ್ರೆಸ್ಡನ್ನಿನದ    ಗ್ರೀನ್ ವಾಲ್ಟ್ ಎನ್ನುವ ಮ್ಯೂಸಿಯಂ ಮತ್ತು ಕೊಹಿ ನೂರ್ ಇರುವ  ದ  ಟವರ್ ಆಫ್ ಲಂಡನ್ ನ   ದಿ   ಕ್ರೌನ್   ಜುವೆಲ್ಸಮ್ಯೂಸಿಯಂ ಗಳನ್ನೂ ನೋಡಿ ಲೂಟಿ ಹೊಡೆದಸಂಪತ್ತಿನ ಅಗಾಧತೆಗೆ ದಂಗಾಗಿದ್ದೇನೆ.

ಇದೆಲ್ಲ  ನಂತರದ  ಮಾತಾಯಿತು, ನಾನು ಮೊಟ್ಟಮೊದಲು ಲೂವ್ರಕ್ಕೆ ಹೋದಾಗ,ನನ್ನ ಮನದಲ್ಲಿ ಮೋನಾಲೀಸಾ ಬಿಟ್ಟು ಇನ್ನೇನೂ ನೋಡುವ  ಹಂಬಲವಾಗಲೀ   ತಿಳುವಳಿಕೆ ಯಾಗಲೀ ಇರಲಿಲ್ಲ. ‘ಲಿಯೋನಾರ್ದೋ ದ ವಿಂಚಿ’ ಎನ್ನುವ ಅತಿಶ್ರೇಷ್ಠ ಕಲಾಕಾರನ ಜಗನ್ಮೋಹಿನಿ ಮೋನಾಲಿಸಾ ಎಂದರೇನು ಸಾಮಾನ್ಯವೇ..ಇಡೀ ಗೋಡೆಯನ್ನೂ ಆವ ರಿಸಿಕೊಂಡಿರುವಷ್ಟು   ದೊಡ್ಡದಾಗಿರಬೇಕು, ಆ ಮರಳು ಮಾಡುವ  ನಿಗೂಢವಾದ ನಗು ವನ್ನು  ತದೇಕವಾಗಿ  ನೋಡಿ   ಕಣ್ತುಂಬಿಕೊ ಳ್ಳುವೆ,  ಅದರ  ಜೊತೆಗೆ   ನನ್ನದೊಬ್ಬಳದೇ ಫೋಟೋಬೇಕು ಎಂದು ನನ್ನವರಿಗೆ ಮೊದ ಲೇ  ಸೂಚಿಸಿದ್ದೆ. ಯಾವುದೇ   ಕಾರಣಕ್ಕೂ ಗಡಿಬಿಡಿ ಮಾಡಿ ಮುಂದೆ ಹೋಗುವಂತಿಲ್ಲ, ಮನಃತೃಪ್ತಿಯಾಗಿ ಅವಳ ಸೌಂದರ್ಯವನ್ನ ನೋಡಿ, ಕೂಲಂಕುಶವಾಗಿ ಪರೀಕ್ಷಿಸಿ ಎಲ್ಲಾ ಕೋನಗಳಿಂದಲೂ ಫೋಟೋ ತೆಗೆದು ಬರು ವ  ವಿಶದವಾದ ಕಾರ್ಯಕ್ರಮ ಸಿದ್ಧಪಡಿಸಿ ಕೊಂಡು ಹೃನ್ಮನಗಳಲ್ಲಿ ಲೀಸಾಳನ್ನು ತುಂಬಿ ಕೊಂಡು, ಅಕ್ಷರಶಃ  ಪ್ಯಾರಿಸ್ ನ  ಹೃದಯ ಭಾಗದಲ್ಲಿರುವ    ಲೂವ್ರಕ್ಕೆ   (ಅಲ್ಲಿಂದಲೇ ಪ್ಯಾರಿಸ್ ನ ಆಡಳಿತಾತ್ಮಕ  ವಿಭಾಗಗಳು ಆರಂಭವಾಗುವುದು)ಬಂದುನಿಂತಾಗ ಕಂಡ  ಕ್ಯೂ   ನೋಡಿಯೇ  ಅರ್ಧ   ಸುಸ್ತಾಗಿದ್ದೆ.  ಕನಿಷ್ಠ ಎರಡು ಗಂಟೆಯಷ್ಟು ಕಾದು ಬಸವ ನಹುಳುವಿನಂತೆ ಚಲಿಸಿ,ಮುಂದಿನ  ಗಾಜಿನ  ಪಿರಾಮಿಡ್ ನಟಿಕೆಟ್ ಕೌಂಟರಿನಲ್ಲಿ ಟಿಕೆಟ್ ತೆಗೆದುಕೊಂಡು, (ಅಂದ ಹಾಗೆ ಈ ಲೂವ್ರದ ಮುಂದಿರುವ ಈಗಾಜಿನ ಪಿರಮಿಡ್ ಗಳು ನೆಲಮಾಳಿಗೆಯಲ್ಲಿರುವ  ಶಾಪಿಂಗ್ ಕಾಂಪ್ಲೆ ಕ್ಸಿಗೆ    ಬೆಳಕು    ಬರುವದಕ್ಕಾಗಿ   ಕಟ್ಟಿದವು ಗಳೇ ಹೊರತು ಬೇರೇನೂ ಅಲ್ಲ)ಎಂದರೆ ಡಾ ವಿಂಚಿ ಕೋಡ್   ಅಭಿಮಾನಿಗಳು ಬೈಯ್ಯಲ್ಲ ತಾನೇ?  ಈ  ಪಿರಾಮಿಡ್ ಗಳ ಕೆಳಗೇ  ಆ  ಉಲ್ಟಾ  ಪಿರಮಿಡ್ ಅಂದರೆ inverted  pyramid  of  da  Vinci code ಇರುವದು) ಭವ್ಯ  ಒಳಾಂಗಣವನ್ನು ಹೊಕ್ಕಾಗ  ಅಲ್ಲಿಯ ವೈವಿಧ್ಯಮಯ ಕಲಾ ಸಂಗ್ರಹದ ಮಧ್ಯೆ ಆಟಿಗೆಯಂಗಡಿಯಲ್ಲಿನ ಮಗುವಾಗಿ ಕಳೆದುಹೋಗಿದ್ದೆ.

ಎಲ್ಲೆಲ್ಲೂ  ಸಾಲು  ಸಾಲು    ಬೆಣ್ಣೆಯಲಿ ಕಡೆದಿಟ್ಟಂತ ಅಮೃತ ಶಿಲೆಯ ಪ್ರತಿಮೆಗಳು. ಶಿಲ್ಪಿಯ ನೈಪುಣ್ಯದ ಪರಾಕಾಷ್ಠೆಗೆ ಸಾಕ್ಷಿಯಾ ದಂತೆ  ಒಂದು  ಪ್ರತಿಮೆಯ  ಕಾಲ್ಬೆರಳುಗಳ ನಡುವೆ  ಬೆಳಕು  ದಾಟಿ  ಬಂದು ಹೊಳೆಯು ತ್ತದೆ.

ಅಲ್ಲಿಯೇ ನೋಡುತ್ತ ನಿಂತುಬಿಡುವ ಮನ ದಾಸೆಯನ್ನು  ಕಷ್ಟಪಟ್ಟು  ತಡೆದು  ಕೈಲಿದ್ದ ಮ್ಯಾಪಿನಲ್ಲಿ ಮೋನಾಲೀಸಾಳನ್ನು ಹುಡುಕಿ ಮೊದಲ ಅಂತಸ್ತಿನ ಮಧ್ಯಭಾಗಕ್ಕೆ ಧಾವಿಸಿ ದರೆ ಎಂತಾ ಮೋಸ!

ನನ್ನ ಮುಖತಃ ಭೆಟ್ಟಿಯಾಗಬೇಕಿದ್ದ ಲೀಸಾ, ಕಾಲಿಡಲೂ  ಅಸಾಧ್ಯವಾದ  ಜನಜಂಗುಳಿ ಯ  ಮಧ್ಯೆ  ದೂರದ  ಗೋಡೆಯ  ಮೇಲೆ ಇಷ್ಟೇ ಇಷ್ಟು ಪುಟ್ಟದಾಗಿ ನೇತಾಡುತ್ತಿದ್ದಳು! ನನ್ನ ಮಗಳಂತೂ ಅದೇ ಮೋನಾಲೀಸಾ ಎಂದು ಒಪ್ಪಿಕೊಳ್ಳಲೂ ನಿರಾಕರಿಸಿಬಿಟ್ಟಳು. ಬೇರೆಲ್ಲಾದರೂ ಇರಬಹುದು ಹೋಗೋಣ ಬಾ ಅಂದಳು. ನನ್ನ ಮನವೂ ಅದೇ ಬಯ ಸುತ್ತಿತ್ತು.
ಸುತ್ತಲೂ ಇರುವ ವರ್ಣರಂಜಿತ ಬೃಹತ್ ಕಲಾಕೃತಿಗಳ ನಡುವೆ ನನ್ನ ಕಲೆಯ ಗಂಧ ಗಾಳಿ ಇಲ್ಲದ ಮನಸ್ಸಿಗೆ ನನ್ನ ಲೀಸಾ ಸಪ್ಪೆ ಯಾಗಿ   ಪೇಲವವಾಗಿದ್ದಳು. ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದೇ ಸುತ್ತಲೂ ಗುಂಡು ನಿರೋಧಕ  ಗಾಜು, ಅದರಾಚೆಗೆ  ಸರಪಳಿ ಗಳನ್ನು ಬೇರೆ ಕಟ್ಟಿಕೊಂಡಿದ್ದಳು. ಅಸಂಖ್ಯ ಕ್ಯಾಮರಾಗಳ,  ಫೋನ್ ಗಳ  ಕ್ಲಿಕ್ ಗಳು, ಫ್ಲಾಷ್ ಗಳು, ಜನರ   ಹುಚ್ಚಾಟಗಳಿಗೆ  ಬೆರ ಗಾಗಿ ಒಂದು ಅಚ್ಚರಿಯ,ತುಸು ತಿರಸ್ಕಾರದ, ಸ್ವಲ್ಪವೇ ಸೊಕ್ಕಿನ, ನಿಗೂಢ ನಗು   ಬೀರುತ್ತಿ ದ್ದಳು!ನನ್ನ   ಕಲ್ಪನೆಗಳಲ್ಲಿನ  ಲೀಸಾ   ಅಲ್ಲಿನ ಮೋಸಾ  ಹೊಂದಾಣಿಕೆಯಾಗದೇ  ನನ್ನ ಮುಖದಲ್ಲಿ ಎಂದೂ ಇಲ್ಲದ ಪೆಚ್ಚು ನಗು. ನಮ್ಮವರ ಮುಖದಲ್ಲಿ ಕುಹಕದ ನಗು. ನನ್ನ ಮಗಳ  ಮುಖದ  ಅಪನಂಬಿಕೆಯ  ನಗು, ನನ್ನ ಸುತ್ತಮುತ್ತಲಿನವರ ಸಂಭ್ರಮದ ನಗು ವನ್ನು  ಹಿಂದಿಕ್ಕಿ  ಅದ್ಹೇಗೋ  ಒಂದೆರಡು ಫೋಟೋ  ತೆಗೆದುಕೊಂಡು  ನಮ್ಮ ನಿರಾಶೆ ಯ  ನಗುವನ್ನು  ಮುಚ್ಚಿಟ್ಟು  ಹೊರಬರುವ ಷ್ಟರಲ್ಲಿ ಸಾಕಾಯ್ತು.

ಇಲ್ಲೇನಾದರೂ ದಾರಿ ತಪ್ಪಿದರೆ ತುಂಬ ಕಷ್ಟ. ಮ್ಯಾಪು, ಆಡಿಯೋ ಗೈಡ್ ಎಲ್ಲ ಇದ್ದರೂ ನಾವು   ನೋಡಬೇಕೆಂದದ್ದೆಲ್ಲ   ಸೀಮಿತ ಸಮಯದಲ್ಲಿ    ನೋಡಿ     ಮುಗಿಸುವದು   ಅಸಾಧ್ಯವೇ ಸರಿ. ಎಷ್ಟೇ  ಸರಿ  ಹೋದರೂ ವಾಪಸ್    ಬರುವಾಗ     ಅರ್ಧಂಬರ್ಧ ನೋಡಿದ ಕಸಿವಿಸಿ.

ಮೊದಲ  ಸಲ  ಮೋನಾಲೀಸಾ   ಮೋಸ ಎಂದುಕೊಂಡರೂ ನಂತರದ ದಿನಗಳಲ್ಲಿ ನನ್ನ ಈ ವಿಚಾರಗಳು ಬದಲಾಗಿವೆ. ಕಲಾ ಭಿಮಾನ ನಶಿಸುತ್ತಿರುವ ಈ ಕಾಲದಲ್ಲಿಯೂ ಒಂದು ಪೇಂಟಿಂಗ್ ನೋಡಲು ಇಷ್ಟೊಂದು ಜನರು   ಮುಗಿಬೀಳುತ್ತಾರೆಂದರೆ,  ಅದು ಒಂದು ನಿಜವಾದ ಕಲಾಪ್ರೇಮ ಅಲ್ಲವೆಂದು ಕೊಂಡರೂ,  ಇನ್ನಾವುದೋ   ನಿರರ್ಥಕ ಟ್ರೆಂಡ್ ಗಳಿಗೆ    ಮುಗಿಬೀಳುವದಕ್ಕಿಂತ ಸೃಜನಶೀಲ  ಕಲೆಗೆ   ಜನಾಧರಣೆ   ಸಿಕ್ಕರೆ ತಪ್ಪೇನಿದೆ? ಇದೇ ಕಾರಣಕ್ಕೆ ಲೂವ್ರದವರು ನೂಕು  ನುಗ್ಗಲು  ತಡೆಗಟ್ಟಲು   ಯಾವುದೇ ವಿಶೇಷ ವ್ಯವಸ್ಥೆಯನ್ನು ಮಾಡದಿರುವದು ಎಂದು  ಫ್ರೆಂಚ್ ರ  ಆಲೋಚನಾ   ಕ್ರಮ ಅರಿತವರಿಗೆ ಸ್ಪಷ್ಟವಾಗುತ್ತದೆ.

ಅದೇ ಇಟಲಿಯ ಫ್ಲಾರೆನ್ಸ್ ನಲ್ಲಿರುವ ಖ್ಯಾತ The Last Supper ಕಲಾಕೃತಿ ನೋಡಲು ಹೋದರೆ ಅದು  ಅತಿ ಶಿಸ್ತಿನ   ಬೇರೆಯದೇ ವ್ಯವಸ್ಥೆ. ಅಲ್ಲಿ ನಿಗದಿತ ಸಮಯದವರೆಗೆ, ನಿಗದಿತ ಜನರುಮಾತ್ರವೇ ವೀಕ್ಷಿಸಬಹುದು.  ನನ್ನ ಮಟ್ಟಿಗೆ ಅತಿ ಶಿಸ್ತು ಮತ್ತು ಸೃಜನಶೀಲ ತೆಯ ಸಂಬಂಧ ಯಾವಾಗಲೂ ಅಷ್ಟಕಷ್ಟೇ.

ಅದೇನೇ ಇರಲಿ, ಯಾವುದೇ ಕಲೆ ಅಥವಾ ವಸ್ತುವೇ ಇರಲಿ, ಅದರ ಬ್ರಾಂಡಿಂಗ್ ಹೇಗೆ ಮಾಡಬೇಕು  ಮತ್ತು  ಅದನ್ನು  ಹೇಗೆ ವೈಭ ವೀಕರಿಸಬೇಕು   ಎನ್ನುವದನ್ನು    ನಾವು ಯುರೋಪಿಯನ್ನರಿಂದ   ಕಲಿಯಬೇಕು. ದೆಹಲಿಯಲ್ಲಿರುವ   ನಮ್ಮ   ಹೆಮ್ಮೆಯ ನ್ಯಾಷನಲ್    ಮ್ಯೂಸಿಯಂ    ಸಧ್ಯಕ್ಕೆ ಸ್ಥಳಾಂತರಗೊಳ್ಳುವ    ಅಪಾಯದಿಂದ ಪಾರಾಗಿ ಹೊಸರೂಪ ಪಡೆಯುತ್ತಿದೆ ಎಂಬ ಸುದ್ದಿ  ಕೇಳಿದ್ದೇನೆ. ಕೋಲ್ಕತ್ತಾದ  ಇಂಡಿಯ ನ್ ಮ್ಯೂಸಿಯಂ ನಮ್ಮ ದೇಶದಅತಿದೊಡ್ಡ ಮತ್ತು ಹಳೆಯ ಮ್ಯೂಸಿಯಂ ಆಗಿದ್ದು, ಅಪರೂಪದ ಕಲಾಕೃತಿಗಳನ್ನು ಹೊಂದಿದೆ.

ಈಗ ನಮ್ಮ ಲೂವ್ರ ದ ಕಥೆಗೆ ವಾಪಸ್ ಬರೋಣ.ಮರಳಿ ಬರುವಾಗ ದಾರಿಯಲ್ಲಿ ಸಿಕ್ಕ ಸುಂದರ ಸೇತುವೆಯೊಂದು ನಮ್ಮ ಕಥೆಗೆ ಸುಖಾಂತ್ಯ ಹಾಡಿತು.ಅದೇ ಸೀಯೆನ್ ನದಿಯ  ಮೇಲಿರುವ  ಲವ್ ಲಾಕ್ ಬ್ರಿಡ್ಜ್ ಎಂದೇ   ಪ್ರಸಿದ್ಧವಾಗಿರುವ  ಪಾಂಟ್  ಡಿ ಆರ್ಟ್ಸ. ಪ್ರೀತಿಸುವ  ಜೋಡಿಗಳು  ಒಂದು ಬೀಗದ ಮೇಲೆ  ತಮ್ಮ ಹೆಸರು  ಬರೆದು ಆ ರೋಮ್ಯಾಂಟಿಕ್  ಕಾಲುಸೇತುವೆಗೆ  ಲಾಕ್ ಮಾಡಿ ಕೀಯನ್ನು  ನದಿಗೆ  ಎಸೆದು  ತಮ್ಮ ಪ್ರೀತಿ ಅಮರವಾಗಲೆಂದು ಪ್ರಾರ್ಥಿಸುತ್ತಾರೆ. ನಾವೂ  ಹಾಗೇ  ಮಾಡಿ    ಧನ್ಯರಾದೆವು. ಅಂದಿನಿಂದ ಇಂದಿನವರೆಗೂ ನಾವು ಎಷ್ಟೇ ಭಿನ್ನವಾದ ಅಭಿಪ್ರಾಯಗಳು ಮತ್ತು ಆಸಕ್ತಿ ಗಳನ್ನು  ಹೊಂದಿಯೂ  ನಮ್ಮ ಬಂಧ  ಗಟ್ಟಿ ಯಾಗಿರುವದಕ್ಕೆಆ ಬೀಗವೇ ಕಾರಣವೆಂದು ಬೇರೆ   ಹೇಳಬೇಕಿಲ್ಲ   ಅಲ್ಲವೇ. Tout de suit .. ಟೂ ಡಿ ಶ್ವೀಟ್… ಸೀ ಯೂ ಸೂನ್.

                   🔆🔆🔆
✍️ಸುಚಿತ್ರಾ ಹೆಗಡೆ, ಮೈಸೂರು