ಶ್ರೀಲತಾ ಅರಮನೆ- “ಭಾವನಾತ್ಮಕ ಬದುಕಿನ ಬೆಳಕಿನ ಪದಗಳು”
—-
ಅಂಕೋಲೆಯ ಶ್ರೀಲತಾ ಅರಮನೆ ತಮ್ಮ ನಡುವಯಸ್ಸಿನಿಂದ ಸಾಹಿತ್ಯದಕನಸುಕಂಡು ಸದ್ದು ಗದ್ದಲವಿಲ್ಲದೇ ಯಾರ ಹಂಗಿಲ್ಲದೇ ಬರೆಯುವ ಕಡಲೊಡಲಿನ ತಾಯಿ ಮಮತೆ ಯ ಬರಹಗಾರ್ತಿ. ಬದುಕಿನ ತೀರಾ ಅಗತ್ಯ ತೆಯಂತೆ ಕವಿತೆ ಅವರಿಗೆ ಅನಿವಾರ್ಯ.” “ಜೀವಂತ ಕ್ಯಾನ್ವಾಸ್” ಶ್ರೀಲತಾ ಅವರ ಐದನೇಯ ಕವನ ಸಂಕಲನವಾದರೂ ಇವರು ಸದಾ ಸ್ಥಿತಪ್ರಜ್ಞರು. ಶೈಕ್ಷಣಿಕ, ಸಾಮಾಜಿಕ,ಆರ್ಥಿಕ ಕ್ಷೇತ್ರಗಳಲ್ಲಿ ಈಗಾಗಲೆ ಹೆಸರು ಮಾಡಿದ ‘ಅರಮನೆ’ ಅವರದು.
ಮೊದಲಿನಿಂದಲೂ ಸಾಮಾಜಿಕ ಕಳಕಳಿಯ ಬದುಕು. ಈ ಎಲ್ಲದವುಗಳಿಗಿಂತ ನನ್ನ ಮನ ಶ್ಯಾಂತಿಗೆ ಕವಿತೆಗಳೇ ಬೆಳಕಿನ ದಾರಿ ಎನ್ನುವಾಗ, ಅವರ ಬದುಕಿನ ನೂರುನೂರು ಸಾಲುಗಳ ಹೊಯ್ದಾಟ ಮುಖದಲಿ ಎದ್ದು ಕಾಣುವದು. ಇಲ್ಲಿಯ ಇವರ ಕವನಗಳು ವೈಯಕ್ತಿಕ ಆಘಾತನನ್ನೂ ಮೀರಿನಿಂತದ್ದು, ವೈಯಕ್ತಿಕವು ಸಾರ್ವತ್ರಿಕವಾದ ಬಗೆ ಬೆರಗು ಹುಟ್ಟಿಸುವಂತಹದ್ದು.
ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡ ತಮ್ಮ ಪತಿ ದಿ.ಆರ್.ಎನ್.ನಾಯಕ ರ ನೆನಪಿಗೆ ಅರ್ಪಿಸಿದ ಎಂಬತ್ತು ಪುಟಗಳ ಈ ಕವನ ಸಂಕಲನದಲ್ಲಿ 70 ಸರಳವಾದ ಮತ್ತು ಮಾನವೀಯ ಸಂಬಂಧಗಳಿಂದ
ತುಂಬಿದ ಕವಿತೆಗಳಿದ್ದು, ಹುಬ್ಬಳ್ಳಿಯ ಅಪೂರ್ವ ಪ್ರಕಾಶನದವರು ಈ ಹೊತ್ತಿಗೆ ಯನ್ನು ಪ್ರಕಟಿಸಿರುವರು.
ಗೋರಿಯೇ ಇಲ್ಲದ ನಾಡಲಿ
ಸಾವ ಹುಡುಕಲುಂಟೆ?
ರಾತ್ರಿಯೇ ಇಲ್ಲದ ಜಗದಲಿ
ಕತ್ತಲಿದೆಯೇ ?
ಕಂದೀಲುಗಳ ಹಚ್ಚುವ
ಮಾತು ಮರೆತು
ಆಸೆ- ದುರಾಸೆಯಿಲ್ಲದ ಹಾದಿಯಲಿ
ದಾಪುಗಾಲಿಟ್ಟು ನಡೆದೆ
ಎನ್ನುತ್ತಾ “ಸಾಕ್ಷಾತ್ಕಾರ” ಕವಿತೆಯಲ್ಲಿ ಹುಟ್ಟು, ಬದುಕು, ಸಾವಿನ ಕುರಿತಾಗಿ ಮನ ತುಂಬಾ ನೆನೆದು, ಮನುಷ್ಯನ ಮಾನಸಿಕ ತಲ್ಲಣಗಳನ್ನೂ ವಿವರಿಸುತ್ತಾ,
ರಾತ್ರಿಯೇ ಇಲ್ಲದ ಜಗದಲಿ
ಕತ್ತಲೆಯ ಹುಡುಕುವುದೆಂತು; ಗೋರಿಯೇ ಇಲ್ಲದ ಮೇಲೆ ಸಾವಿನ
ಸುಳಿ ಬಳಿ ಬರುವದಾದರೂ ಹೇಗೆ?
ಎಂಬ ಕಟುಸತ್ಯದ ಮಾತಾಡುತ್ತಾ ಕವಿ ಮನನೊಂದು, ಕತ್ತಲೆಯಲಿ ದೀಪ ಹಚ್ಚುವ ಮಾತನ್ನೇ ಮರೆತು ನಮ್ಮದೇ ಸ್ವಾರ್ಥ,ಆಸೆ, ದುರಾಸೆಯ ಹಾದಿಯಲ್ಲಿ ನಡೆಯುತ್ತಿದ್ದೇವೆ.ಪ್ರೀತಿ, ಸಹನೆಯ ಮಾತಂತೂ ಹೊರಟು ಹೋಗಿದೆ. ನಮಗರಿವಿಲ್ಲದೇ ಸಾವು ಎಂದು ಎರಗುವದೋ ಎಂಬ ಭಯವೂ ಇಲ್ಲದ ನಾವು, ಈಗಲಾದರೂ ಜಗದ ಹಾದಿಯ ತುಂಬ ಕದನ ವಿರಾಮ ಘೋಷಿಸಿ, ಈ ಪುಣ್ಯಭೂಮಿಯಲಿ ಮನುಷ್ಯರಾಗಿಸಂಚರಿ ಸುವಾ ಎಂದು ಪ್ರೀತಿಯ ಸಾಕ್ಷಾತ್ಕಾರಕ್ಕೆ ಕಣ್ಣಾಗಿರುವರು.
“ಸ್ವಸ್ಥಾನಕೆ” ಕವಿತೆಯಲ್ಲಿ,
ಒಬ್ಬರ ತೆಕ್ಕೆಯಲಿ ಇನ್ನೊಬ್ಬರು ಸಂಭ್ರಮವ ಕಣ್ತುಂಬಿಸಿಕೊಳ್ಳುವ ಹೊತ್ತು ಎಲ್ಲಿಂದಲೋ ಹಾರಿ ಬಂತೊಂದು ಗಿಡುಗ, ಕುಕ್ಕಿದ ಹೊಡೆತಕ್ಕೆ ಎಲ್ಲವೂ ಛಿದ್ರ – ಛಿದ್ರ ಸಾಗಿದವು ವಿಭಿನ್ನ ದಿಕ್ಕಿನಲಿ
ಎನ್ನುತ್ತಾ ಮಾನವನ ಅತೀ ಆಶೆಯ ಇತಿ ಮಿತಿ ಇಲ್ಲದ ದುರಾಸೆಯನ್ನು ವಿವರಿಸಿ ಸತ್ಯ ಧರ್ಮದ ಅನ್ವೇಷಣೆಯಲಿ ತೊಡಗಿದಾಗ ಬಂದೆರಗಿದ ದುರಂತಕ್ಕೆ ಕಣ್ಣೀರಾಗುವರು. ಎಲ್ಲರೂ ನಮ್ಮವರೇ.ಸಹೋದರರೇಎಂದು ನಂಬಿ ಖುಷಿಯಲಿ ತೇಲಾಡುವಾಗ ನಮ್ಮ ನಡುವಿನಿಂದಲೇ ಬಂದೊದಗಿದ ಆಪತ್ತಿನಿಂ ದಾಗ ಬದುಕೇ ಛಿದ್ರಗೊಂಡ ಕ್ಷಣ ನೆನೆಯು ತ್ತಾ,ಮನುಷ್ಯ ಹಣದಾಸೆ,ಅಧಿಕಾರ ಲಾಲಸೆ ಗಳೇ ರಕ್ತಪಿಪಾಸುಗಳಾಗಿ ಪರಿವರ್ತನೆಗೊ ಳ್ಳುವ ಬಗ್ಗೆ ಕವಯಿತ್ರಿ ಮರುಗಿರುವರು.
ಹಿರಿಯ ಕವಯತ್ರಿ ಭಾಗಿರತಿಹೆಗಡೆಯವರು ತಮ್ಮಮುನ್ನುಡಿ – ಬೆನ್ನುಡಿಗಳಲ್ಲಿ “ಬೆಳಕಿನ ಕುಂಚ ಹಿಡಿದು ಬಿಡಿಸಿದ ಚಿತ್ರ” ಎನ್ನುತ್ತಾ
ಶ್ರೀಲತಾ ಅವರ ಕವಿತೆಗಳು ವೈಚಾರಿಕವಾಗಿ ಮತ್ತು ಭಾವನಾತ್ಮಕವಾಗಿ ಸಾಕಷ್ಟು ಮೇಲ್ಮ ಟ್ಟದಲ್ಲಿವೆ. ಇವರ ಇನ್ನೊಂದು ಮುಖ್ಯಭಾವ ಬೆಳಕಿನ ಕುರಿತಾದ ತೀವ್ರ ಬೆರಗು. ಇದು ಬಹುತೇಕ ಮನುಷ್ಯರೆಲ್ಲರ ತುಡಿತವೂ ಹೌದು. ಮಾನವ ಕಣ್ಣುಗಳಿಗೆ ಬೆಳಕೆಂದರೆ ಒಂದು ಆಶಾವಾದ. ಬೆಳಕು ಪ್ರಾಣದ ಸಂಕೇತ. ಒಟ್ಟಿನಲ್ಲಿ ಶ್ರೀಲತಾ ಅರಮನೆ ತಮ್ಮ ವೈಯಕ್ತಿಕ ಆಘಾತದ ಸಂಕಟವನ್ನೂ ಮೀರಿ ನಿಂತು, ಕವಿತೆಯಲ್ಲೇ ತನ್ನನ್ನರಸುತ್ತಿ ರುವದು ಶ್ಲಾಘನೀಯ ಸಂಗತಿ. ತಮ್ಮ ನಡುವಯಸ್ಸಿನಲ್ಲಿ ಬರೆಯತೊಡಗಿಸಾಕಷ್ಟು ದೃಢವಾದ ಹೆಜ್ಜೆಯೂರಿ ಮುನ್ನಡೆಯುತ್ತಿ ದ್ದಾರೆ…… ಎಂದಿರುವರು.
ಯುಗ – ಯುಗಗಳ ಹುಡುಕಾಟದಲಿ
ಲಭಿಸಿದ ಅಪೂರ್ವ ರತ್ನ
ನಿಷ್ಕಾಳಜಿಯಲಿ ಆಯಿತು ಕಣ್ಮರೆ
ಭೂ ಒಡಲ ತಂಪಾಗಿಸಲು
ಭೂಮಂಡಲ ಬೆಳಗಲು
ಪೂರ್ಣಚಂದಿರನಾಗಿ ಬಾ
ಎಂದು ” ಚಂದಿರನಾಗಿ ಬಾ ” ಕವಿತೆಯಲ್ಲಿ ಅಗಲಿದ ಪ್ರೀತಿಯ ಜೀವವ ನೆನೆದು ಬದುಕಿ ನ ಭೂತಕಾಲದ ನೋಟವನ್ನು ಮನಸಾ ಬಿಚ್ಚಿಟ್ಟಿರುವರು.
ನನ್ನನ್ನು ಪಂಜರದಲ್ಲಿ ಬಂಧಿಸಿ ನೀನು ಹಕ್ಕಿಯಂತೆ ಹಾರಿ ಹೋದೆ.
ನನಗೇಕೆ ಈ ಜೇಲು ವಾಸ. ನಮ್ಮೆಲ್ಲರ ನಿದ್ದೆಯನ್ನ ನೀ ಕಸಿದು ನೀನುಮಾತ್ರ ಹಾಯಾಗಿ ನಿದ್ರಿಸುತಿರುವಿ. ಏನಿದ್ದರೇನು? ನೀನಿಲ್ಲದ ಬದುಕು ಬದುಕೇ ಅಲ್ಲ; ಎಲ್ಲೆಡೆ ಬರೀ ಶೂನ್ಯ.
ನೀನು ಈ ಜಗತ್ತಿನಿಂದ ದೂರವಾದರೂ ನನ್ನ ಮನದಲಿ, ಹೃದಯದಲಿ ಸದಾ ನೆಲೆಸಿರುವಿ.
ಕೊರೆವ ಈ ಚಳಿಯಲ್ಲೂ ನಿನ್ನ ಅಗಲಿಕೆ
ಎಂದರೆ ಧಗ ಧಗಿಸುವ ಬೆಂಕಿಯ ಬಿಸಿ. ಮತ್ತೆ ನೀನು ಹುಟ್ಟಿ ಬಾ. ನನ್ನ ಬದುಕಿಗೆ ಬೆಳಕಾಗಲು ; ಈ ಭೂಮಂಡಳಕೆ ಪೂರ್ಣ ಚೆಂದಿರನಾಗಿ ಬಂದು ಬೆಳಕುತಾ
ಎಂದು ತನ್ನ ಮನದ ಭಾವನೆಯಲ್ಲಿ ಕರಗಿ ಕಣ್ಣೀರಾಗಿರುವರು.
ಅಮ್ಮನ ಲಗಾಮಿನಲಿ ಅರಳುವದು ಬದುಕು ಎನ್ನುತ್ತಾ,
” ಅಮ್ಮಾ ” ಎಂಬ ಕವಿತೆಯಲ್ಲಿ,
ಪ್ರೀತಿ ಎಂಬ ಬಾಹುಗಳಲಿ ಬಂದಿಸಿದೆನ
ಸಹನೆ ಎಂಬ ಉಸಿರೇ ಸೇವಿಸಿದೆ ನೀ….
ಸ್ಪೂರ್ತಿಯ ಬಳ್ಳಿಯ ಚಿಗುರಿಸಿದೇನೀ….
ಅಮ್ಮಾ ಎಂಬ ಪ್ರೀತಿಯೇ ಕ್ಷಮಯಾ ಧರಿತ್ರಿಯೇ…
ಎಂದು ತಾಯಿ ಪ್ರೀತಿಯನ್ನು ಹಾಡಿ ಹೊಗಳುತ್ತಾ,
ದುಃಖದಲೂ ಕಷ್ಟದಲೂ
ಸಿಹಿಯನೇ ಉಣಿಸಿದೆ.
ಎಂದು ಅಮ್ಮನ ತ್ಯಾಗ ಮಮತೆಯನು ಕೊಂಡಾಡಿರುವರು. ಅಮ್ಮನಿಗೆ ಅಮ್ಮನೇ ಸಾಠಿ ಎಲ್ಲರಂತೆ ಇವರಿಗೂ.
“ಕೈಗೆ ಬಂದ ಪೆನ್ನಿನ ಹಿಂದೆ” ಎಂಬ ತಮ್ಮ ಮಾತಿನಲಿ ಕವಯಿತ್ರಿ ಶ್ರೀಲತಾ ಅರಮನೆ, ತಮ್ಮ ಬರವಣಿಗೆಯ ಹಿಂದುಮುಂದಿನದನ್ನ ಹೇಳುತ್ತಾ,” ಅಗಲಿಕೆಎನ್ನುವದು ಶತ್ರುವಿಗೂ ಸಹ ಬರಬಾರದು. ಅದನ್ನು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲಾಗದು. ಆ ಸಮಯದಲ್ಲಿ ನನ್ನ ಉಳಿಸಿದ್ದು ಎಂದರೆ ಸಾಹಿತ್ಯ ಹಾಗೂ ಈಸಾರಸ್ವತ ಲೋಕದಲ್ಲಿನ ಎಲ್ಲ ಸಾಹಿತಿಗಳು, ಕವಿಗಳು. ಲೌಕಿಕ ಪ್ರಪಂಚವನ್ನೇ ಮರೆಯಬೇಕೆಂದು ಪಣ ತೊಟ್ಟು ಓದಿಗೆ ಶರಣಾದೆ. ಕೈಗೆ ಸಿಕ್ಕಿದ್ದನ್ನು, ಮನಕೆ ತೋಚಿದ್ದನ್ನು,ಅರ್ಧಸಾಹಿತ್ಯ ಅಪೂ ರ್ಣವಾಗಿದ್ದರೂ ಓದುವುದೊಂದೇನಿರಂತರ ಚಲನೆ ಎಂಬಲ್ಲಿಗೆ ಮನಸ್ಸು ದಡ ತಲುಪಿ ಕೈಯಲ್ಲಿ ಹಿಡಿದ ಪೆನ್ನು, ಪೇಪರುಗಳೇ ಸಂಗಾತಿಯಾಗಿ ಕೈಹಿಡಿದು ಮುನ್ನೆಡೆಸಿತು” ಎಂದಿರುವರು.
ತನ್ನ ಗೋರಿಯ ಮೇಲೆ ತಾನು ಕುಳಿತು
ಕನಸು ಕಟ್ಟಲು ಸಾಧ್ಯವೇ ?
ಮಿಂಚಿ ಹೋದುದಕೆ ಚಿಂತಿಸದೇ
ಹೊಸ ಇತಿಹಾಸಕೆ ಮಾರ್ದನಿಸುತ
ಹೊಸೆಯುತ್ತಿದ್ದಾನೆ ಕನಸನು
ಕಲಾವಿದ ಏಕಾಗ್ರತೆಯಲಿ !
“ಕುಂಚದ ಕೈಯಲ್ಲಿ” ಕವಿತೆಯಲ್ಲಿ ಬದುಕಿನ
ವೈರುದ್ಯತೆಯನು ವಿವರಿಸುತ್ತಾ,
ಸಂದು – ಗೊಂದಿ
ಎಲ್ಲವೂ ಇರುಸು – ಮುರುಸು. ಮುಗ್ಗರಿಸಿದರೆ ಕೆಳಗೆ ಪ್ರಪಾತ
ಎಂಬ ಎಚ್ಚರಿಕೆಯನ್ನೂ ನೀಡಿರುವರು.
ಬದುಕಿನಲಿ ಏಕಾಗ್ರತೆ ಬೇಕು, ಇರುವಷ್ಟು ದಿನ ಎಲ್ಲರೊಳಗೆ ಒಂದಾಗಿ ಬಾಳಿ ಬದುಕ ಬೇಕು. ಈ ಬದುಕೇ ಅನಿಶ್ಚಿತತೆಯಿಂದ ಕೂಡಿದೆ. ಅವರದೇ ಗೋರಿಯ ಮೇಲೆ ಕನಸು ಕಟ್ಟುವದು ಅಸಾಧ್ಯ. ಕಳೆದು ಹೋದುದಕೆ ಚಿಂತಿಸದೇ ಕಲಾವಿದನ ಕುಂಚ ದಂತೆ ಹೊಸ ಬದುಕಿನತ್ತ ಮುನ್ನೆಡೆಯುವಾ ಎಂಬ ಆಶಾಭಾವವನೂ ಹೊಂದಿದ ಕವಿ,
ಕವಿತೆ ಎಂದರೆ ಬೇರೆ ಏನೂ ಅಲ್ಲ, ಭಾವನಾತ್ಮಕ ಬದುಕಿನ ಬೆಳಕಿನ
ಪದಗಳೇ ಕವಿತೆ.
ಮನುಷ್ಯ ಸಂಬಂಧಕ್ಕಿಂತ ಮಿಗಿಲಾದದು ಬೇರೇನೂ ಇಲ್ಲ, ಎಂದಿರುವರು.
ಪ್ರಕೃತಿಯ ವಿರುದ್ಧ ನಮ್ಮ ಆಟ ಏನೂ ನಡೆಯುವಂತಿಲ್ಲ.ಅದರ ಆಳ ಅಗಲಗಳ ಲೆಕ್ಕಿಸಲೂ ಅಸಾಧ್ಯ.ಈಗಾಳಿಯೇಬದುಕಿಗೆ ಸಂಗೀತವಿದ್ದಂತೆ. ಈಭೂಮಿಮಾತೆಯಾಗಿ, ಬೆನ್ನಲವಾಗಿ ಕೋಟಿಗಟ್ಟಲೆ ಜನರನ್ನು ಸಾಕಿ ಸಲಹುವಳು. ಈ ಲೋಕದ ತುಂಬೆಲ್ಲ ಮಣ್ಣಿನ ವಾಸನೆಯೇ ಹರಡಿದೆ. ಬದುಕಲಿ ಕಷ್ಟ,ಸುಖ,ದುಃಖಒಂದರಮೇಲೊಂದರಂತೆ. ಮನುಷ್ಯ ಎಂದಿಗೂ ಮನುಷ್ಯತ್ವದಿಂದಲೇ ಬದುಕಬೇಕು ಎಂದು “ಗಾಳಿಸಂಗೀತ ” ದಲ್ಲಿ ಮನಮುಟ್ಟುವಂತೆ ಮಾರ್ದನಿಸಿರುವರು.
ಸದ್ದುಗದ್ದಲವಿಲ್ಲದೇ ಎಲೆ ಮರೆಯ ಕಾಯಾ ಗಿ ಬರೆಯುವ ಶ್ರೀಲತಾರು ತಮ್ಮ ಕವಿತೆಗಳ ಲ್ಲಿ “ಜಗದಗಲ – ಮುಗಿಲಗಲ ಆವರಿಸಿದೆ ಬೆರಗು,” ಎನ್ನುತ್ತಾ ಬೆಳಕಿನಡೆಮುಖ ಮಾಡಿ ಗೋಚರ ಅಗೋಚರಗಳ ನಡುವಿನ ತಾಕ ಲಾಟದಲ್ಲಿ ವೈಚಾರಿಕವಾಗಿ ಮತ್ತು ಭಾವನಾ ತ್ಮಕವಾಗಿ ಒಳಗಣ್ಣಿನಿಂದ ಕಾವ್ಯ ಪಯಣದ
ದಾರಿಯಲಿ ಮುನ್ನೆಡೆಯುತ್ತಿರುವದು ಬೆರಗಿ ನ ಸಂಗತಿಯಾಗಿದೆ. ಬದುಕಿನ ಒಂಟಿತನ
ಸಂಕಲನದುದ್ದಕ್ಕೂ ಕಾಡಿದ ಈ ಕವಿತೆಗಳು ಸರಳತೆ ಮತ್ತು ಮಾನವೀಯತೆಯ ಪದಗ ಳಾಗಿವೆ. ಲತಾರ ಈ ಜೀವಂತ ಕ್ಯಾನ್ವಾಸ್ ಗೆ ಶುಭಕೋರಿ ಅಭಿನಂದಿಸುವೆನು.
🔆🔆🔆
✍️ ಪ್ರಕಾಶ ಕಡಮೆ,ನಾಗಸುಧೆ, ಹುಬ್ಬಳ್ಳಿ.