ಕೇಳಿರಿ ಕೇಳಿರಿ ನಾಡಿನ ಜನಗಳೆ ಕಪ್ಪತ್ತಗಿರಿಯ ವೈಭವ ಎಷ್ಟು ನೋಡಿದರು ಜನ್ಮ ಸಾಲದು ಶುದ್ಧ ಗಾಳಿಯ ನಿಸರ್ಗವ

ಅಂಚು ಇಂಚಿನಲಿ ಝೇಂಕಾರ ಪಕ್ಷಿ ಸಂಕುಲದ ಇಂಚರ ಕುಂಚದಿಂದಲೂ ಬರೆಯಲಾಗದು ವನ್ಯ ಜೀವಿಗಳ ಆಕಾರ


ಸಂತ ಶರಣರ ತಪ್ಪಸ್ಸಿನ ಸದ್ಗತಿ ಪಂಚಲೋಹಗಳ ಆಕೃತಿ ಮಳೆ ತರುವ ಪ್ರಕೃತಿ ಜನಪದ ಕಲೆಯ ಸಂಸ್ಕೃತಿ

ಆಯುರ್ವೇದದ ಔಷಧಿ ಕಣ ಸಸ್ಯ ಸಂಪತ್ತಿನ ಈ ತಾಣ. ತುಂಗಭದ್ರೆಯ ಹರಿವಿನ ನರ್ತನ ಹಳ್ಳ ಕೊಳ್ಳಗಳ ತೀರ್ಥ ಪಾವನ

ಬಣ್ಣಿಸಲಾಗದು ಕಪ್ಪತ್ತಗಿರಿಯ. ಹತ್ತಿ ನೋಡಬೇಕ ಒಮ್ಯಾದ್ರ. ಕಂದ ಗವಿಶಿದ್ಧಯ್ಯ ಸಾರಿ ಹೇಳತಾಣ. ಗಿಡಗಳ ಬೆಳಿಸಿ ಇನ್ನಾದ್ರ

                         🔆🔆🔆
   ✍️ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ.    ಜನಪದ ಕಲಾವಿದರು,ಜಂತಲಿ ಶಿರೂರು    ತಾ:ಮುಂಡರಗಿ ಜಿ:ಗದಗ