Sylvia Plath ಅಮೇರಿಕಾ ದೇಶದ  ಕವಯಿತ್ರಿ, ಕಾದಂಬರಿಗಾರ್ತಿ ಹಾಗೂ ಕಥಾ ರಚನೆ ಕೂಡ ಅವಳ ಆಸಕ್ತಿ.

Born: 27 October 1932,  US

Died: 11 February 1963, London,  UK

Poems: Daddy,  Lady Lazarus, Tulips, Mad Girl’s Love Song,  The Applicant ಇತರೆ.

ಅವಳ ಮಿರರ್ ಎಂಬ ಪ್ರಸಿದ್ದ ಕವನದ  ಭಾವನುವಾದ.

                     ಕನ್ನಡಿ                

ನಾ ಬೆಳ್ಳಿಬಣ್ಣ, ನೈಜ, ಯಾವ ಪೂರ್ವಗ್ರಹ ಗಳಿರದೆ
ನೋಡಿದ್ದೆಲ್ಲವ  ಕೂಡಲೇ ನುಂಗಿಬಿಡುವೆ ಯಥಾವತ್ತಾಗಿ, ಪ್ರೇಮ ದ್ವೇಷಗಳ ಮಂಜಿನ ಮುಸುಕಿಲ್ಲದಂತೆ.
ನಾ ಕ್ರೂರಿಯಲ್ಲ, ಬರಿ ಸತ್ಯವಂತನಷ್ಟೆ. ನಾಲ್ಕು ಮೂಲೆಗಳೊಂದಿಗೆ  ಪುಟ್ಟ ದೇವರ ಕಣ್ಣು ನಾನು
ಸದಾ ಎದುರಿನ ಗೋಡೆಯ ನೋಡುತ್ತ ಧ್ಯಾನಿಸುತ್ತಿರುವೆ.
ಕಲೆಗಳಿರುವ ಗುಲಾಬಿ ಗೋಡೆಯ ಎಷ್ಟು ದಿಟ್ಟಿಸಿರುವೆನೆಂದರೆ
ಅದೆನ್ನೆದೆಯ ಭಾಗವಾದಂತಿದೆ.ಮುಖಗಳೂ ಅಂಧಕಾರವೂ
ಬಂದು ನಮ್ಮಿಬ್ಬರ ಮೇಲಿಂದ ಮೇಲೆ ಅಗಲಿಸುವವು.



ನಾನೊಂದು ಸರೋವರವೀಗ. ಸ್ತ್ರ್ರೀಯೊಬ್ಬ ಳು  ಬಾಗಿ
ನನ್ನಾಳದಲಿ  ತನ್ನ ನೈಜ ಅಸ್ತಿತ್ವವಅನ್ವೇಷಿಸಿ ಮೋಂಬತ್ತಿ ಹಾಗೂ  ಚಂದ್ರರಂಥ ಸುಳ್ಳುಗಾ ರರೆಡೆಗೆ ಹೊರಳುವಳು.
ನನ್ನೆಡೆಗವಳು ಬೆನ್ನು ಹಾಕಿದರೂ  ಅದೇ ವಿಶ್ವಾಸದಿ ನಾ ಪ್ರತಿಫಲಿಸುವೆ. ಅಶ್ರುಧಾರೆಯೊಡನೆ ಕೈಗಳಡ್ಡವಾಗಿಟ್ಟು ಪ್ರತಿಭಟಿಸುವುದೆ ಅವಳ ಕಾಣಿಕೆಯೆನಗೆ.



ನಾನೆಂದರವಳಿಗೆ ಬೇಕೇ ಬೇಕು,  ಬಂದು ಹೋಗುವಳವಳು.
ಪ್ರತಿ ಮುಂಜಾನೆಯೂ ಕತ್ತಲ  ದೂರ ಸರಿಸುವದವಳ ಮೊಗವು.
ಎಳೆ ತರುಣಿಯ  ನನ್ನೊಳಗವಳು ಹುದುಗಿಸಿಹಳು, ವೃದ್ಧೆಯೊಬ್ಬಳು  
ಕಾಲ  ಕಳೆದಂತೆ  ಭಯಾನಕ ಮೀನಂತೆ   ಅವಳೆಡೆಗೆ  ಎದ್ದೇಳುವಳು.     

                
                       MIRROR


                     🔆🔆🔆
✍️ಆಂಗ್ಲದಲ್ಲಿ:ಸಿಲ್ವಿಯಾ ಪ್ಲಾಥ್    ಕನ್ನಡಕ್ಕೆ:ಕವಿತಾ ಹೆಗಡೆ ಅಭಯಂ,    ಹುಬ್ಬಳ್ಳಿ